Personality Test: ನಿಮ್ಮ ಮೂಗು ಆಕಾರದಲ್ಲಿ ಮೊಟಕಾಗಿದ್ರೆ ನೀವೇ ಅದೃಷ್ಟವಂತರು ಕಣ್ರೀ; ಇಷ್ಟೊಂದು ಲಾಭಗಳಿವೆ ನೋಡಿ
Sep 01, 2024 07:08 AM IST
ಆಕಾರದಲ್ಲಿ ಮೂಗು ಮೊಟಕಾಗಿದ್ದರೆ ಏನೆಲ್ಲಾ ಪ್ರಯೋಜನಗಳಿವೆ, ಅವರ ವ್ಯಕ್ತಿತ್ವ ಎಂತಹುದು ಎಂಬುದನ್ನು ತಿಳಿಯಬಹುದು.
- Personality Test: ಎಲ್ಲರ ಮೂಗಿನ ಆಕಾರ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಸ್ವಲ್ಪ ಉದ್ದ ಇದ್ದರೆ, ಮತ್ತೊಬ್ಬರಿಗೆ ಅಗಲ, ಮೋಟು ಹೀಗೆಲ್ಲಾ ಇರುತ್ತೆ. ಮೂಗಿನ ಆಕಾರದ ಮೂಲಕವೂ ನಮ್ಮ ವ್ಯಕ್ತಿತ್ವ ತಿಳಿಯಬಹುದು. ಮೂಗು ಆಕಾರದಲ್ಲಿ ಮೊಟಕಾಗಿದ್ರೆ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ತಿಳಿಯಿರಿ. (ಬರಹ: ಜ್ಯೋತಿಷಿ ಎಚ್. ಸತೀಶ್)
Personality Test: ಮನುಷ್ಯನ ಕಣ್ಣು, ಕಿವಿ, ಮೂಗು, ನಾಲಿಗೆ, ಅಂಗೈ, ಕೈ ಬೆರಳುಗಳು, ಕಾಲಿನ ಬೆರಳುಗಳು ಹಾಗೂ ನೆತ್ತಿಯ ಮೂಲಕ ವ್ಯಕ್ತಿತ್ವನ್ನು ತಿಳಿಯಬಹುದು. ಅದರಲ್ಲೂ ಮೂಗು ಯಾವ ಆಕಾರದಲ್ಲಿ ಇದ್ದರೆ ಅವರ ವ್ಯಕ್ತಿತ್ವ ಹೇಗಿರುತ್ತದೆ ಅನ್ನೋದು ತಿಳಿದುಕೊಳ್ಳಬಹುದು. ಕೆಲವರ ಮೂಗು ಮೊಟಕಾಗಿದ್ದರೂ ನೋಡಲು ಆಕರ್ಷಕವಾಗಿರುತ್ತದೆ. ಇವರ ಮೂಗಿನ ತುದಿಯಲ್ಲಿ ಕಪ್ಪು ಮಚ್ಚೆ ಇದ್ದಲ್ಲಿ ಮಿಶ್ರ ಫಲಗಳನ್ನು ಪಡೆಯುತ್ತಾರೆ. ಆದರೆ ಹೊಸ ನಿರೀಕ್ಷೆಗಳಿಂದ ಬಾಳುವುದು ಇವರ ಗುಣ. ಇವರು ಜನಪ್ರಿಯತೆಯ ಆಸೆಯಲ್ಲಿ ಬಾಳುತ್ತಾರೆ. ಸಭೆ ಸಮಾರಂಭಗಳಲ್ಲಿ ಜನರ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಇವರಿಗೆ ಸಾಮಾನ್ಯವಾಗಿ ಸ್ಥಿರವಾದ ಮನಸ್ಸಿರುವುದಿಲ್ಲ. ಯಾವುದಾದರೂ ಒಂದು ವಿಚಾರಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಅನಾವಶ್ಯಕವಾಗಿ ಸದಾಕಾಲ ಹಣಕಾಸಿನ ಬಗ್ಗೆ ಯೋಚನೆ ಮಾಡುವುದು ಇವರ ಹವ್ಯಾಸ. ತಾವು ತಪ್ಪು ಮಾಡಿದರು ಅದನ್ನು ಮುಚ್ಚಿಟ್ಟು ಬೇರೆಯವರಿಗೆ ಬುದ್ಧಿವಾದ ಹೇಳುವಲ್ಲಿ ಸಮರ್ಥರು. ತಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲು ಬೇರೆಯವರ ಸಹಾಯವನ್ನು ತೆಗೆದುಕೊಳ್ಳುತ್ತಾರೆ.
ತಾಜಾ ಫೋಟೊಗಳು
ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ, ರುಚಿಯಾದ ಆಹಾರ ತಿನ್ನೋದು ಇವರ ಹವ್ಯಾಸ
ಕುಟುಂಬದ ಲೋಪ ದೋಷಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ. ಎಲ್ಲರಿಂದಲೂ ಸದಾಕಾಲ ಗೌರವವನ್ನು ನಿರೀಕ್ಷಿಸುತ್ತಾರೆ. ದಿನಕಳೆದಂತೆ ಅಥವಾ ಮಧ್ಯವಯಸ್ಸಿನ ನಂತರ ನಿರೀಕ್ಷೆಗೂ ಮೀರಿ ದಪ್ಪವಾಗುತ್ತಾರೆ. ಆರೋಗ್ಯದ ಬಗ್ಗೆ ಇವರಿಗೆ ಗಮನವಿರುವುದಿಲ್ಲ. ರುಚಿಕರವಾದ ತಿಂಡಿ ತಿನಿಸನ್ನು ಸೇವಿಸುವುದು ಇವರಿಗೆ ಹವ್ಯಾಸವಾಗುತ್ತದೆ. ತನ್ನ ಸಂಗಾತಿ ಮತ್ತು ಮಕ್ಕಳು ತನ್ನ ಅಧೀನದಲ್ಲಿ ಇರಬೇಕೆಂಬ ಕನಸನ್ನು ಕಾಣುತ್ತಾರೆ. ಆದರೆ ಇವರ ರೀತಿ ನೀತಿಗಳಿಗೆ ಕುಟುಂಬದವರು ಬೇಸರ ವ್ಯಕ್ತಪಡಿಸುತ್ತಾರೆ. ಬಂಧು ಬಳಗದವರಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾಗುತ್ತದೆ. ಕೆಲಸ ಮಾಡುವುದೆಂದರೆ ಇವರಿಗೆ ಆಗದ ವಿಚಾರ. ಸಾಧ್ಯವಾದಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಇವರಿಗೆ ಸಂತಸದ ವಿಚಾರ.
ಇವರಿಗೆ ಹೆಚ್ಚು ತಂದೆ-ತಾಯಿ ಪ್ರೀತಿ ಸಿಗುತ್ತೆ, ಹಣದ ತೊಂದರೆ ಇರಲ್ಲ
ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಗಳ ಮುದ್ದಿನಲ್ಲಿ ಇವರು ಬೆಳೆಯುತ್ತಾರೆ. ಇವರಿಗೆ ಇಷ್ಟವಾದ ವಿಚಾರಗಳು ಅಥವಾ ವಸ್ತುಗಳನ್ನು ಸಂಗ್ರಹಿಸುವುದು ಇವರಿಗೆ ಕಷ್ಟದ ವಿಚಾರವಲ್ಲ. ಇವರಿಗೆ ಹಣದ ತೊಂದರೆ ಎಂದಿಗೂ ಉಂಟಾಗುವುದಿಲ್ಲ. ಸಣ್ಣಪುಟ್ಟ ಕೆಲಸ ಕಾರ್ಯಗಳಿಂದ ಚಿಕ್ಕ ವಯಸ್ಸಿನಲ್ಲಿ ಹಣವನ್ನು ಸಂಪಾದಿಸುತ್ತಾರೆ. ವಿದ್ಯಾಭ್ಯಾಸದಲ್ಲಿ ಇವರಿಗೆ ಸರಿ ಸಮಾನವಾದ ಸ್ಪರ್ದಿ ಸಿಗುವುದೇ ಇಲ್ಲ. ಬೇರೆಯವರಿಗೆ ಕಷ್ಟ ಎನಿಸುವ ವಿಚಾರಗಳನ್ನು ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಹಣ ಸಂಪಾದಿಸುವ ಕಲೆ ಇವರಿಗೆ ತಿಳಿದಿರುತ್ತದೆ. ಹಣವನ್ನು ಸಂಗ್ರಹಿಸುವ ಆಸೆ ಇದ್ದರೂ ಅದು ಸಾಧ್ಯವಾಗುವುದಿಲ್ಲ.
ವಿದ್ಯಾಭ್ಯಾಸವು ಕಡಿಮೆ ಇದ್ದರೂ ಇವರ ಬುದ್ಧಿವಂತಿಕೆಗೆ ಮಿತಿ ಇರುವುದಿಲ್ಲ. ಮನಸ್ಸಿಗೆ ಮುದ ನೀಡುವ ಸಂಗೀತ ನಾಟ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಹಿರಿಯರಾಗಲಿ ಪುರುಷರಾಗಲಿ ಸಂಗೀತ ಮತ್ತು ಸಂಗೀತ ವಾದ್ಯಗಳಲ್ಲಿ ವಿಶೇಷವಾದ ಪರಿಣತಿಯನ್ನು ಗಳಿಸುತ್ತಾರೆ. ಗುರು ಹಿರಿಯರಲ್ಲಿ ಗೌರವ ತೋರಿಸುವ ಇವರು ತಮ್ಮ ವಯಸ್ಸಿನವರಿಗೆ ಮಾದರಿಯಾಗುತ್ತಾರೆ. ಕತೆ ಕಾದಂಬರಿಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡರೆ ಜನಪ್ರಿಯತೆಯು ಸುಲಭವಾಗಿ ದಕ್ಕುತ್ತದೆ. ಸಾಮಾನ್ಯವಾಗಿ ಇವರನ್ನು ರಕ್ತದ ಒತ್ತಡ ಅಥವಾ ಅಜೀರ್ಣವು ಸದಾ ಕಾಡುತ್ತದೆ.
ವಿವಾಹದ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಸಂಗಾತಿಯೊಂದಿಗೆ ಹೊಂದಿಕೊಂಡು ನಡೆಯಲೇಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇವರ ಮಕ್ಕಳು ಇವರ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಇವರ ಕಾಲದಲ್ಲಿ ಸ್ವಂತ ಮನೆಯ ಕನಸು ಕನಸಾಗಿಯೇ ಉಳಿಯುತ್ತದೆ. ಆದರೆ ಮಕ್ಕಳು ಇವರ ಇಚ್ಚಿಗೆ ಅನುಗುಣವಾಗಿ ಸ್ವಂತ ಮನೆಯನ್ನು ಕೊಳ್ಳುತ್ತಾರೆ ಅಥವಾ ಕಟ್ಟಿಸುತ್ತಾರೆ. ವಿವಾಹದ ನಂತರ ಅನಾವಶ್ಯಕ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಮಧ್ಯವಯಸ್ಸಿನ ನಂತರ ಸಂಗಾತಿ ಮತ್ತು ಮಕ್ಕಳ ನಡುವೆ ಅನಾವಶ್ಯಕವಾದ ವಿವಾದಗಳು ಎದುರಾಗುತ್ತವೆ. ವಯಸ್ಸಾದನಂತರ ಮಕ್ಕಳ ಆಸರೆಯಲ್ಲಿ ಬಾಳುತ್ತಾರೆ. ಇಳಿವಯಸ್ಸಿನಲ್ಲಿ ಮನಸ್ಸಿಗೆ ಬೇಸರ ಉಂಟಾದರೂ ಹೊಂದಾಣಿಕೆಯ ಅನಿವಾರ್ಯತೆ ಎದುರಾಗುತ್ತದೆ. ಕೂಡಿಟ್ಟ ಹಣವನ್ನು ಒಳ್ಳೆಯ ಕೆಲಸಗಳಿಗೆ ಬಳಸುತ್ತಾರೆ. ಅನಾಥಾಶ್ರಮದಂತಹ ಸಾರ್ವಜನಿಕ ಸಂಸ್ಥೆಯ ನಿರ್ವಹಣೆಯಲ್ಲಿ ಸಂತಸ ಕಾಣುವರು. ಇವರಿಗೆ ಬಂಧು ಬಳಗದವರ ಪ್ರೀತಿ ವಿಶ್ವಾಸದ ಅವಶ್ಯಕತೆ ಇರುತ್ತದೆ.