logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇವರ ಪೂಜೆಗೆ ಮಾತ್ರವಲ್ಲ ನಿಮ್ಮ ಜಾತಕದಲ್ಲಿನ ದೋಷ ನಿವಾರಣೆಗೂ ಬೇಕು ಕರ್ಪೂರ; ಇದ್ರಿಂದ ಇನ್ನೂ ಎಷ್ಟೆಲ್ಲಾ ಉಪಯೋಗವಿದೆ ನೋಡಿ

ದೇವರ ಪೂಜೆಗೆ ಮಾತ್ರವಲ್ಲ ನಿಮ್ಮ ಜಾತಕದಲ್ಲಿನ ದೋಷ ನಿವಾರಣೆಗೂ ಬೇಕು ಕರ್ಪೂರ; ಇದ್ರಿಂದ ಇನ್ನೂ ಎಷ್ಟೆಲ್ಲಾ ಉಪಯೋಗವಿದೆ ನೋಡಿ

Rakshitha Sowmya HT Kannada

Jun 06, 2024 11:48 AM IST

google News

ದೇವರ ಪೂಜೆಗೆ ಮಾತ್ರವಲ್ಲ ನಿಮ್ಮ ಜಾತಕದಲ್ಲಿನ ದೋಷ ನಿವಾರಣೆಗೂ ಬೇಕು ಕರ್ಪೂರ; ಇನ್ನೂ ಎಷ್ಟೆಲ್ಲಾ ಉಪಯೋಗವಿದೆ ನೋಡಿ

  • ಪ್ರತಿದಿನ ದೇವರಿಗೆ ಆರತಿ ಬೆಳಗಲು ಕರ್ಪೂರ ಬಳಸುತ್ತೇವೆ. ಆದರೆ ಕರ್ಪೂರವು ದೇವರಿಗೆ ಮಾತ್ರವಲ್ಲ ಜಾತಕದಲ್ಲಿನ ದೋಷ ನಿವಾರಣೆಗೂ ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಕರ್ಪೂರ ಮತ್ತು ಬೇವಿನ ಎಲೆಗಳನ್ನು ಒಟ್ಟಿಗೆ ಸುಡುವುದು ಉದ್ಯೋಗ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ ತರುತ್ತದೆ. 

ದೇವರ ಪೂಜೆಗೆ ಮಾತ್ರವಲ್ಲ ನಿಮ್ಮ ಜಾತಕದಲ್ಲಿನ ದೋಷ ನಿವಾರಣೆಗೂ ಬೇಕು ಕರ್ಪೂರ; ಇನ್ನೂ ಎಷ್ಟೆಲ್ಲಾ ಉಪಯೋಗವಿದೆ ನೋಡಿ
ದೇವರ ಪೂಜೆಗೆ ಮಾತ್ರವಲ್ಲ ನಿಮ್ಮ ಜಾತಕದಲ್ಲಿನ ದೋಷ ನಿವಾರಣೆಗೂ ಬೇಕು ಕರ್ಪೂರ; ಇನ್ನೂ ಎಷ್ಟೆಲ್ಲಾ ಉಪಯೋಗವಿದೆ ನೋಡಿ

ನಮ್ಮ ದೈನಂದಿನ ಜೀವನದಲ್ಲಿ ದೇವರ ಪೂಜೆ, ವಾಸ್ತು ಬಹಳ ಪ್ರಮುಖ ಪಾತ್ರ ವಹಿಸಿದೆ. ಅರಿಶಿನ, ಕುಂಕುಮ, ಗಂಧ, ಅಗರಬತ್ತಿ, ಹೂಗಳು ಸೇರಿದಂತೆ ದೇವರ ಪೂಜೆ ಹಾಗೂ ಅದಕ್ಕಾಗಿ ನಾವು ಬಳಸುವ ವಸ್ತುಗಳು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತವೆ. ಅದರಲ್ಲಿ ಕರ್ಪೂರ ಕೂಡಾ ಒಂದು. ದೇವರ ದೀಪ ಹಚ್ಚಿ, ಅಗರಬತ್ತಿ ಬೆಳಗಿದ ನಂತರ ಕರ್ಪೂರ ಬಳಸಿ ಮಂಗಳಾರತಿ ಮಾಡುತ್ತೇವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM
  • ವಾಸ್ತು ಶಾಸ್ತ್ರದ ಪ್ರಕಾರ, ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಕರ್ಪೂರವನ್ನು ಬಳಸಲಾಗುತ್ತದೆ. ಬಹಳ ದಿನಗಳಿಂದ ನೀವು ಆರಂಭಿಸಿದ ಕೆಲಸಗಳಲ್ಲಿ ಯಾವುದೇ ಅಡೆ ತಡೆ ಬಂದರೆ, ಮನೆಯಲ್ಲಿ ಧನಾತ್ಮಕ ಶಕ್ತಿಗಳನ್ನು ತುಂಬಲು ನೀವು ಕರ್ಪೂರವನ್ನು ಬಳಸಿಕೊಳ್ಳಬಹುದು.
  • ನೀವು ಆರಂಭಿಸಿದ ಕೆಲಸದಲ್ಲಿ ಯಾವುದೇ ವಿಘ್ನ ಇಲ್ಲದೆ ಯಶಸ್ಸನ್ನು ಪಡೆಯಲು, ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ. ನಂತರ ಕರ್ಪೂರವನ್ನು ಹಚ್ಚಿ ದೇವರನ್ನು ಪ್ರಾರ್ಥಿಸಿ. ಇದು ಶೀಘ್ರದಲ್ಲೇ ನಿಮ್ಮ ಕೆಲಸ ಯಶಸ್ವಿಯಾಗಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪುರುಷರು ಯಾವ ಬಣ್ಣದ ವ್ಯಾಲೆಟ್‌ ಬಳಸಿದರೆ ಲಕ್ಷ್ಮೀ ಕಟಾಕ್ಷ ದೊರೆಯಲಿದೆ, ವಾಸ್ತುಶಾಸ್ತ್ರದಲ್ಲಿ ಹೇಳಿರುವುದೇನು?

  • ವಾಸ್ತು ಶಾಸ್ತ್ರದ ಪ್ರಕಾರ, ಕರ್ಪೂರ ಮತ್ತು ಬೇವಿನ ಎಲೆಗಳನ್ನು ಒಟ್ಟಿಗೆ ಸುಡುವುದು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರುತ್ತದೆ.
  • ನೀವು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ಎದುರಿಸುತ್ತಿದ್ದರೆ, ಮಲಗುವಾಗ ದಿಂಬಿನ ಕೆಳಗೆ ಕರ್ಪೂರದ ತುಂಡನ್ನು ಇರಿಸಿ. ಈ ಪರಿಹಾರವನ್ನು ಮಾಡುವುದರಿಂದ ಮಾನಸಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಮನೆಯಲ್ಲಿ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
  • ಕರ್ಪೂರವು ನೀವು ಹಣಕಾಸಿನ ಪರಿಸ್ಥಿತಿಯನ್ನು ಬಲಗೊಳಿಸಲು ಕೂಡಾ ಸಹಕಾರಿಯಾಗಿದೆ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದು ಅದನ್ನು ಅವರು ಕೊಡದೆ ಸತಾಯಿಸುತ್ತಿದ್ದರೆ ಹೀಗೆ ಮಾಡಿ. ಕೆಂಪು ಗುಲಾಬಿ ಹೂವಿನ ಮೇಲೆ ಕರ್ಪೂರವನ್ನು ಇರಿಸಿ ಅದನ್ನು ಬೆಳಗಿಸಿ ನಿಮ್ಮ ಮನಸ್ಸಿನಲ್ಲಿರುವುದನ್ನು ಪ್ರಾರ್ಥಿಸಿ. ಈ ಪರಿಹಾರವನ್ನು ಮಾಡುವುದರಿಂದ ಸಾಲದ ಹಣ ಶೀಘ್ರದಲ್ಲೇ ನಿಮಗೆ ವಾಪಸ್‌ ಬರಲಿದೆ.

ಇದನ್ನೂ ಓದಿ: ರಿಸ್ಕ್‌ ತೆಗೆದುಕೊಳ್ಳುವಲ್ಲಿ ಸದಾ ಮುಂದು, ಕುಟುಂಬಕ್ಕಿಂತ ವೃತ್ತಿ ಜೀವನಕ್ಕೆ ಪ್ರಾಮುಖ್ಯತೆ ಕೊಡುವ ರಾಶಿಗಳಿವು; ನೀವೂ ಹೀಗೇನಾ?

  • ಕುಟುಂಬದಲ್ಲಿ ಕಲಹ, ಯಾವುದೇ ಸಮಸ್ಯೆ ಇದ್ದರೆ ಕರ್ಪೂರವನ್ನು ತುಪ್ಪದಲ್ಲಿ ಅರೆದು ಸುಡಬೇಕು. ಈ ಪರಿಹಾರವನ್ನು ಮಾಡುವುದರಿಂದ ನಿಮಗೆ ಏನೇ ಸಮಸ್ಯೆ ಎದುರಾದರೂ ದೂರವಾಗುತ್ತದೆ ಮತ್ತು ಕುಟುಂಬದಲ್ಲಿ ಉದ್ಭವಿಸುವ ಕಲಹಗಳು ಶೀಘ್ರದಲ್ಲೇ ಪರಿಹಾರವಾಗುತ್ತದೆ.
  • ಕರ್ಪೂರ ಮತ್ತು ಲವಂಗವನ್ನು ಸುಡುವುದರಿಂದ ಮನೆಯಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಅಲ್ಲದೆ, ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ನಡೆಯುವ ಮನಸ್ತಾಪಗಳು ಮರೆಯಾಗುತ್ತದೆ.
  • ಪೂಜೆ ನಂತರ ಮನೆಯಲ್ಲಿ ಕರ್ಪೂರ ಬೆಳಗುವುದರಿಂದ ವೈದಿಕ ಜ್ಯೋತಿಷ್ಯದ ಪ್ರಕಾರ ನಿಮ್ಮ ಜಾತಕದಲ್ಲಿ ಯಾವುದೇ ಗ್ರಹಗಳ ದುರ್ಬಲವಾಗಿದ್ದರೆ ಅದು ಪರಿಹಾರವಾಗುತ್ತದೆ.
  • ಕರ್ಪೂರವನ್ನು ತುಪ್ಪದಲ್ಲಿ ನೆನೆಸಿ ಮನೆಯಲ್ಲಿ ಹಚ್ಚುವುದರಿಂದ ಸಂಬಂಧಗಳ ನಡುವೆ ಸಕಾರಾತ್ಮಕತೆ ಹೆಚ್ಚುತ್ತದೆ. ಮನೆಯಲ್ಲಿ ವಾಸ್ತು ದೋಷಗಳೂ ನಿವಾರಣೆ ಆಗುತ್ತದೆ.

ವೈಜ್ಞಾನಿಕ ದೃಷ್ಟಿಯಿಂದಲೂ ಮನೆಯಲ್ಲಿ ಕರ್ಪೂರ ಹಚ್ಚುವುದು ಬಹಳ ಒಳ್ಳೆಯದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ