logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬೆರಳಿನ ಆಕಾರ ತಿಳಿಸಲಿದೆ ನಿಮ್ಮ ಸ್ವಭಾವ; ನೇರವಾದ ಹೆಬ್ಬೆರಳು ಹೊಂದಿರುವವರ ಗುಣ ಲಕ್ಷಣ ಹೇಗಿರುತ್ತದೆ?

ಬೆರಳಿನ ಆಕಾರ ತಿಳಿಸಲಿದೆ ನಿಮ್ಮ ಸ್ವಭಾವ; ನೇರವಾದ ಹೆಬ್ಬೆರಳು ಹೊಂದಿರುವವರ ಗುಣ ಲಕ್ಷಣ ಹೇಗಿರುತ್ತದೆ?

HT Kannada Desk HT Kannada

Jul 13, 2024 10:45 PM IST

google News

ಬೆರಳಿನ ಆಕಾರ ತಿಳಿಸಲಿದೆ ನಿಮ್ಮ ಸ್ವಭಾವ; ನೇರವಾದ ಹೆಬ್ಬೆರಳು ಹೊಂದಿರುವವರ ಗುಣ ಲಕ್ಷಣ ಹೇಗಿರುತ್ತದೆ? (ಸಾಂದರ್ಭಿಕ ಚಿತ್ರ)

  • ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳುಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಹೆಬ್ಬೆರಳು, ತೋರು ಬೆರಳಿಗೆ ಸಮವಾಗಿರುವಂತೆ ಇರುವವರ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್ ಜ್ಯೋತಿಷಿ)

ಬೆರಳಿನ ಆಕಾರ ತಿಳಿಸಲಿದೆ ನಿಮ್ಮ ಸ್ವಭಾವ; ನೇರವಾದ ಹೆಬ್ಬೆರಳು ಹೊಂದಿರುವವರ ಗುಣ ಲಕ್ಷಣ ಹೇಗಿರುತ್ತದೆ? (ಸಾಂದರ್ಭಿಕ ಚಿತ್ರ)
ಬೆರಳಿನ ಆಕಾರ ತಿಳಿಸಲಿದೆ ನಿಮ್ಮ ಸ್ವಭಾವ; ನೇರವಾದ ಹೆಬ್ಬೆರಳು ಹೊಂದಿರುವವರ ಗುಣ ಲಕ್ಷಣ ಹೇಗಿರುತ್ತದೆ? (ಸಾಂದರ್ಭಿಕ ಚಿತ್ರ) (PC: Freepik)

ಕೆಲವರಿಗೆ ಹೆಬ್ಬೆರಳು ನೇರವಾಗಿರುತ್ತದೆ. ಅಂದರೆ ಹೆಬ್ಬೆರಳು ಹಿಂದೆ ಆಗಲಿ ಮುಂದೆ ಆಗಲಿ ಬಾಗಿರುವುದಿಲ್ಲ. ಕೆಲವರಲ್ಲಿ ಹೆಬ್ಬೆರಳ ಉಗುರಿನ ಭಾಗ ಮಾತ್ರ ಹಿಂದೆ ವಾಲಿದಂತೆ ಇರುತ್ತದೆ. 

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಇಂಥಹ ಜನರು ಅನಾವಶ್ಯಕವಾಗಿ ಶ್ರಮ ಪಡುತ್ತಾರೆ. ಇವರು ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಲು ಮನಸ್ಸು ಮಾಡುವುದಿಲ್ಲ. ಸುಲಭವಾಗಿ ಮಾಡಬಹುದಾದ ಕೆಲಸ ಕಾರ್ಯಗಳು ಗೊಂದಲದ ಗೂಡಾಗುತ್ತದೆ. ಇವರ ಪ್ರಯತ್ನಗಳು ಸರಿಯಾದ ಹಾದಿಯಲ್ಲಿ ಇರುವುದಿಲ್ಲ. ಸಿರಿವಂತಿಕೆಯ ಮನೆಯಲ್ಲಿ ಜನಿಸಿದರೂ ಸಹ ಅದರ ಸವಿಯನ್ನು ಸವಿಯುವುದಿಲ್ಲ.

ಹೊಂದಾಣಿಕೆಯ ಗುಣವಿರುತ್ತದೆ

ಇವರಲ್ಲಿ ಹೊಂದಾಣಿಕೆಯ ಗುಣವಿರುತ್ತದೆ. ಕಷ್ಟಗಳನ್ನು ಲೆಕ್ಕಿಸುವುದಿಲ್ಲ. ಬುದ್ಧಿವಂತಿಕೆಯಿಂದ ಬೇರೆಯವರ ಸ್ನೇಹ ಬೆಳಸಿ ಅವರಿಂದ ಎಲ್ಲಾ ರೀತಿಯ ಅನುಕೂಲತೆಗಳನ್ನು ಪಡೆಯುತ್ತಾರೆ. ದುಡಿದು ಬೇಸರವಾದರೆ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ವಿಶ್ರಾಂತಿಯಿಂದ ಬೇಸರವಾದರೆ ದುಡಿಯಲು ಆರಂಭಿಸುತ್ತಾರೆ. ಆದರೆ ವಿನಾಕಾರಣವಾಗಿ ಸುತ್ತಾಡುವುದು ಇವರಿಗೆ ಇಷ್ಟವಾಗುವುದಿಲ್ಲ. ಇವರಿಗೆ ಸಾಧ್ಯವಾಗದೆ ಹೋದರೂ ದೊಡ್ಡಮಟ್ಟದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಅದನ್ನು ನಿರ್ವಹಿಸಲು ಆತ್ಮೀಯರನ್ನು ಅವಲಂಬಿಸುತ್ತಾರೆ. ಕಡೆಗೆ ಬುದ್ಧಿವಂತಿಕೆಯಿಂದ ಆ ಎಲ್ಲದರ ಪ್ರತಿಫಲವನ್ನು ಇವರು ಪಡೆಯುತ್ತಾರೆ. ಒಟ್ಟಾರೆ ಹೇಳಬೇಕೆಂದರೆ ಇವರು ಯಾವುದೇ ಸಂದರ್ಭ ಎದುರಾದರೂ ಅದನ್ನು ತಮ್ಮ ಸ್ವಾರ್ಥಕ್ಕೆ ಅಥವಾ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಳ್ಳಬಲ್ಲರು.

ಬಾಲ್ಯದಲ್ಲಿ ಇವರ ಜೀವನ ಆನಂದಮಯವಾಗಿರುತ್ತದೆ. ಇದಕ್ಕೆ ಕಾರಣ ಅವರ ಸುತ್ತಮುತ್ತಲಿರುವ ಗೆಳೆಯರ ತಂಡ. ಅತಿಯಾದ ಸ್ನೇಹದಿಂದ ಇವರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಲ್ಲಿ ಸ್ನೇಹಿತರು ಮುಂದಿರುತ್ತಾರೆ. ವಿದ್ಯಾಭ್ಯಾಸದಲ್ಲಿ ಹಿರಿಯರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಕೊಂಚ ಕಷ್ಟ ಎನಿಸಿದರೂ ಗುರುಹಿರಿಯರ ಸಹಾಯದಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ತಮಗೆ ಅವಶ್ಯಕವಾದ ಹಣ ಸಂಪಾದಿಸಿಕೊಳ್ಳುತ್ತಾರೆ. ಮನಸ್ಸಿನಲ್ಲಿ ಇರುವ ವಿಚಾರವನ್ನು ಅರಿಯಲು ಯಾರಿಗೂ ಸಾಧ್ಯವಾಗುವುದಿಲ್ಲ. ತಮ್ಮ ಮನಸ್ಸಿಗೆ ಬಂದ ವಿಚಾರವನ್ನು ಮಾತ್ರ ಬೇರೆಯವರಿಗೆ ತಿಳಿಸುತ್ತಾರೆ.

ಮನರಂಜನೆಗೆ ಹೆಚ್ಚು ಆದ್ಯತೆ ನೀಡುವವರು

ಇವರಲ್ಲಿನ ರಹಸ್ಯದ ಗುಣ ಕೆಲವರ ಮನಸ್ಸನ್ನು ಘಾಸಿಗೊಳಿಸುತ್ತದೆ. ಬೇರೆಯವರಿಗೆ ಬೇಸರ ಉಂಟಾದರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇವರು ನಡೆಯುವ ಹಾದಿಯೇ ಸರಿ ಎಂಬ ಮನಸ್ಸಿರುತ್ತದೆ ತಾವಾಗಿಯೇ ಯಾರಿಗೂ ಸಹಾಯ ಮಾಡುವುದಿಲ್ಲ. ಹಾಗೆಯೇ ಸಹಾಯ ಬಯಸಿ ಬಂದವರಿಗೆ ನಿರಾಸೆ ಉಂಟುಮಾಡುವುದಿಲ್ಲ. ಸಾಮಾನ್ಯವಾಗಿ ಇವರು ತೆಗೆದುಕೊಳ್ಳುವ ತೀರ್ಮಾನಗಳು ಎಲ್ಲರಿಗೂ ಪ್ರಯೋಜನಕಾರಿಯಾಗಿರುತ್ತದೆ. ಪರಸ್ಥಳದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಆಸಕ್ತಿ ಇರುವುದಿಲ್ಲ. ಸದಾ ತಂದೆ ತಾಯಿ ಜೊತೆ ಅಥವಾ ಪೋಷಕರ ಜೊತೆಯಲ್ಲಿ ಇರಲು ಬಯಸುತ್ತಾರೆ. ವಯಸ್ಸಿಗೆ ತಕ್ಕಂತೆ ಇವರು ವರ್ತಿಸುತ್ತಾರೆ.

ಯೋಚನೆಯನ್ನೇ ಮಾಡದೆ ಸಮಾಜ ಒಪ್ಪದ ಕೆಲಸಗಳನ್ನು ಮಾಡುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಇವರ ವಿವಾಹವಾಗುತ್ತದೆ. ಇವರ ಸಂಗಾತಿಯು ಒಳ್ಳೆಯವರೇ ಆದರೂ ಇವರ ನಡವಳಿಕೆಯಿಂದ ಅವರ ಮನಸ್ಸು ಬದಲಾಗುತ್ತದೆ. ಆದರೆ ದಾಂಪತ್ಯ ಜೀವನವು ಸುಖ ಸಮೃದ್ಧಿಯಿಂದ ಕೂಡಿರುತ್ತದೆ. ದಂಪತಿ ನಡುವೆ ಅನ್ಯೋನ್ಯತೆ ಇರುತ್ತದೆ. ಬಿಡುವಿನ ಸಮಯದಲ್ಲಿ ಪ್ರವಾಸ ಮಾಡುವುದು ಇವರ ಒಂದು ಹವ್ಯಾಸ. ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದು ಇವರಿಗೆ ಒಪ್ಪದ ವಿಚಾರ. ಮನರಂಜನೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಅಡ್ಡಿ ಆತಂಕಗಳು ಎದುರಾದರೂ ತಮ್ಮ ರೀತಿ ನೀತಿಗಳನ್ನು ಮರೆಯುವುದಿಲ್ಲ.

ಚರ್ಮದ ದೋಷ ಕಾಡುವುದು

ಇವರಿಗೆ ಚರ್ಮದ ದೋಷ ಸಾಮಾನ್ಯವಾಗಿರುತ್ತದೆ. ತಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು ವಿಫಲರಾಗುತ್ತಾರೆ. ಬೇರೆಯವರಲ್ಲಿ ವಾದ ವಿಧ ವಿವಾದದಲ್ಲಿ ತೊಡಗದೆ ಮಾತುಕತೆಯಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಿರಿ. ಬೇರೆಯವರು ಕಷ್ಟದಲ್ಲಿ ಇರುವುದು ಇವರಿಗೆ ನಿಜವೆನಿಸಿದರೆ ಸಹಾಯ ನೀಡುತ್ತಾರೆ. ತಮ್ಮ ಮಕ್ಕಳ ಮೇಲೆ ಆಗಲಿ ಅಥವಾ ಬೇರೆಯವರ ಮೇಲಾಗಲಿ ಇವರು ಅವಲಂಬಿತವಾಗುವುದಿಲ್ಲ ನಮ್ಮ ಇಳಿವಯಸ್ಸಿನಲ್ಲಿ ಸಂಗಾತಿಯೊಂದಿಗೆ ಸ್ವತಂತ್ಯ್ರವಾದ ತೃಪ್ತಿಯ ಜೀವನವನ್ನು ನಡೆಸುತ್ತಾರೆ ಬಂಧು ಬಳಗದವರಿಂದ ದೂರ ಉಳಿದು ಬಾಳುವ ಮನಸ್ಸು ಇವರಿಗೆ ಇರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ