ರತ್ನದ ಕಲ್ಲಿನ ಉಂಗುರ ಧರಿಸುವಾಗ ಅಪ್ಪಿತಪ್ಪಿಯೂ ಈ 7 ತಪ್ಪುಗಳನ್ನ ಮಾಡಬೇಡಿ
Jan 11, 2024 12:55 PM IST
ವಿವಿಧ ಬಣ್ಣಗಳಿಂದ ಕೂಡಿದ ರತ್ನದ ಕಲ್ಲಿನ ಉಂಗುರಗಳು
ಬೆಲೆಬಾಳುವ ಕಲ್ಲಿನ ಉಂಗುರ ಧರಿಸುವುದರಿಂದ ಭಾರಿ ಲಾಭಗಳಿವೆ ಎಂಬ ನಂಬಿಕೆ ಇದೆ. ಅದರಲ್ಲೂ ರತ್ನದ ಕಲ್ಲಿನ ಉಂಗುರ ಧರಿಸುವಾಗ ಈ 7 ತಪ್ಪುಗಳನ್ನು ಮಾಡಬೇಡಿ.
ಬೆಂಗಳೂರು: ಅದೃಷ್ಟ, ಲಾಭ-ನಷ್ಟಗಳು ಲೆಕ್ಕಾಚಾರವನ್ನು ಹಾಕಿಕೊಳ್ಳುವ ಕೆಲವರಿಗೆ ಇದೇ ಬಣ್ಣದ, ಇದೇ ರೀತಿಯ ಕಲ್ಲಿನ ಉಂಗುರ ಧರಿಸಬೇಕೆಂಬ ಆಸೆ ಇರುತ್ತದೆ. ತಲೆಮಾರುಗಳಿಂದ ಜನರು ತಮ್ಮ ಸೌಂದರ್ಯದ ಜೊತೆಗೆ ಆಧ್ಯಾತ್ಮಿಕ ಗುಣಗಳಿಗಾಗಿ ರತ್ನದ ಕಲ್ಲುಗಳನ್ನು ಇಷ್ಟಪಡುತ್ತಾರೆ. ವಜ್ರದ ಉಂಗುರ ಧರಿಸಿದರೆ ನಮ್ಮ ಅದೃಷ್ಟ ಮತ್ತು ಯೋಗಕ್ಷೇಮದ ಮೇಲೆ ಪರಿಹಾಣ ಬೀರುತ್ತದೆ ಎಂಬ ನಂಬಿಕೆಯೂ ಇರುತ್ತದೆ.
ತಾಜಾ ಫೋಟೊಗಳು
ಆದರೆ ರತ್ನದ ಕಲ್ಲುಗಳಿಂದ ಕೂಡಿದ ಉಂಗುರ ಅಥವಾ ಇತರೆ ಆಭರಣ ಧರಿಸುವಾಗ ಕೆಲವರು ಗೊತ್ತಿದ್ದರೂ ಇಲ್ವವೇ ಗೊತ್ತಿಲ್ಲದಂತೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅದೃಷ್ಟಕ್ಕಾಗಿ ರತ್ನದ ಉಂಗುರ ಧರಿಸುವಾಗ ಮಾಡುವಂತ 7 ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಒಂದು ವೇಳೆ ನೀವೇನಾದರೂ ಈ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ತ್ಯಜಿಸಿ ಆನಂತರ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳನ್ನು ನೋಡಿ.
1. ರತ್ನದ ಕಲ್ಲಿನ ಆಭರಣ ಆಗಾಗ ತೆಗೆಯುವುದು
ನೀವು ಮಲಗುವಾಗ, ಸ್ನಾನ ಮಾಡುವಾಗ ಅಥವಾ ಇತರೆ ನಿರ್ದಿಷ್ಟ ಕೆಲಸಗಳ ಸಮಯದಲ್ಲಿ ರತ್ನದ ಕಲ್ಲಿನ ಉಂಗುರವನ್ನು ತೆಗೆದರೆ ಅದು ಉತ್ಪಾದಿಸುವ ಶಕ್ತಿಯ ಹರಿವಿಗೆ ಅಡ್ಡಿಯಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಆಭರಗಳನ್ನು ತೆಗೆಯಬಾರದು. ನಿಯಮಿತವಾಗಿ ಧರಿಸುವುದರಿಂದ ಅದರ ಶಕ್ತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.
2. ಸ್ವಚ್ಛವಾಗಿ ಇಟ್ಟುಕೊಳ್ಳದಿರುವುದು
ಸಾಮಾನ್ಯವಾಗಿ ಕೆಲವರು ಒಮ್ಮೆ ರತ್ನದ ಕಲ್ಲಿನ ಉಂಗುರ ಖರೀದಿಸಿ ಬೆರಳಿಗೆ ಧರಿಸಿದ ನಂತರ ಅದರ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ರತ್ನದ ಕಲ್ಲುಗಳು ಒಳ್ಳೆಯ ಮತ್ತು ಕೆಟ್ಟ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ದಿನ ಕಳೆದಂತೆ ಕಲ್ಲಿನಲ್ಲಿರುವ ಕಂಪನದ ಗುಣಗಳನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ನಿಯಮಿತವಾಗಿ ಆಭರಣವನ್ನು ಸ್ವಚ್ಛಗೊಳಿಸಿದರೆ ಅವುಗಳ ಕ್ರಿಯಾತ್ಮಕತೆ ಎಂದಿನಂತೆ ಇರುತ್ತದೆ.
3. ಯಾವ ಉದ್ದೇಶಕ್ಕೆ ಬಳಕೆ ಎಂಬುದನ್ನ ತಿಳಿಯದಿರುವುದು
ರತ್ನದ ಕಲ್ಲುಗಳನ್ನು ಸ್ಪಷ್ಟ ಗುರಿ ಹಾಗೂ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ನಿಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಲು ರತ್ನವನ್ನು ಧರಿಸುವ ಅಥವಾ ಬಳಸುವ ಮೊದಲು ನಿಮ್ಮ ಉದ್ದೇಶಗಳ ಮೇಲೆ ಕೇಂದ್ರೀಕರಿಸುವ ಬಗ್ಗೆ ತಿಳಿಯಿರಿ.
4. ಎಲ್ಲಿ ಇಡಬೇಕೆಂದು ತಿಳಿಯದಿರುವುದು
ರತ್ನದ ಕಲ್ಲಿನ ಆಭರಣಗಳನ್ನು ವ್ಯಕ್ತಿ ಎಲ್ಲಿ ಇಟ್ಟುಕೊಂಡಿದ್ದಾನೆ ಎಂಬುದರ ಮೇಲೆಯೂ ಪರಿಣಾಮ ಬೀರುತ್ತದೆ. ರತ್ನವನ್ನು ಪೆಂಡೆಂಟ್ ಆಗಿ ಧರಿಸಲಾಗುತ್ತದೆ. ಕತ್ತಿನಲ್ಲಿ ಧರಿಸಿ ಆ ಪೆಂಡೆಂಟ್ ಹೃದಯ ಪಕ್ಕದಲ್ಲೇ ನೇತಾಡುವಂತೆ ಇಟ್ಟುಕೊಳ್ಳುತ್ತಾರೆ. ಇದು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸುತ್ತದೆ. ರತ್ನವನ್ನು ಎಲ್ಲಿ ಇಡಬೇಕೆಂದು ತಿಳಿಯುವ ಮೂಲಕ ನಿಮ್ಮ ಜೀವನದ ಮೇಲೆ ರತ್ನದ ಪ್ರಭಾವವನ್ನು ಹೆಚ್ಚಿಸಿಕೊಳ್ಳಬಹುದು.
5. ಅರ್ಹ ಜ್ಯೋತಿಷಿಗಳನ್ನು ಸಂಪರ್ಕಿಸದಿರುವುದು
ರತ್ನದ ಕಲ್ಲಿನ ಉಂಗುರ ಅಥವಾ ಇತರೆ ಚಿನ್ನಾಭರಣಗಳನ್ನು ಧರಿಸುವ ಮುನ್ನ ಜ್ಯೋಷಿಯೊಂದಿಗೆ ಸಮಾಲೋಚಿಸಬೇಕು. ನಿಮಗೆ ಯಾವ ರತ್ನ ಉತ್ತಮ ಎಂಬುದನ್ನು ಜಾತಕದಿಂದ ತಿಳಿದುಕೊಳ್ಳಬಹುದು. ಈ ರತ್ನದ ಆಭರಣವನ್ನ ಧರಿಸುವ ವಿಚಾರದಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಉತ್ತಮ ಮಾರ್ಗದರ್ಶನ ಪಡೆಯಿರಿ.
6. ರತ್ನಗಳನ್ನ ಇತರರೊಂದಿಗೆ ಹಂಚಿಕೊಳ್ಳುವುದು
ನಿಮ್ಮ ರತ್ನದ ಆಭರಣಗಳನ್ನು ಬೇರೆಯವರೊಂದಿಗೆ ಹಂಚಿಕೊಂಡರೆ, ಬೇರೆಯವರು ನಿಮ್ಮ ರತ್ನದ ಆಭರಣ ಧರಿಸಿದರೆ, ಇದರಿಂದ ನಿಮಗೆ ಆಗಬೇಕಾಗ ಪ್ರಯೋಜನಗಳು ಕಡಿಮೆಯಾಗುತ್ತವೆ. ನಿಮ್ಮೊಂದಿಗೆ ಅವರ ಸಂಬಂಧ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ರತ್ನದ ಕಲ್ಲಿನ ಆಭರಣಗಳನ್ನು ಬೇರೆಯವರಿಗೆ ಬಾಡಿಗೆ ಅಥವಾ ಒಂದು ದಿನ, ಎರಡು ದಿನದ ಮಟ್ಟಿಗೆ ಕೊಡುವುದನ್ನು ತಪ್ಪಿಸಿ. ವಾಪಸ್ ಕೊಟ್ಟ ನಂತರ ಅವುಗಳನ್ನು ಸ್ವಚ್ಛಗೊಳಿಸಿದ ನಂತರ ನೀವು ಬಳಸಿ.
7. ಹಲವಾರು ರತ್ನಗಳನ್ನ ಒಟ್ಟಿಗೆ ಧರಿಸುವುದು
ಹಲವಾರು ರತ್ನದ ಕಲ್ಲಿನ ಆಭರಣಗಳನ್ನು ಒಟ್ಟಿಗೆ ಧರಿಸುವುದರಿಂದ ಆಕರ್ಷಕವಾಗಿರುತ್ತದೆ ಎಂದು ಪ್ರತಿಯೊಬ್ಬರು ಇದನ್ನು ಪ್ರಯತ್ನಿಸುತ್ತಾರೆ. ಏಕಕಾಲದಲ್ಲಿ ಹಲವಾರು ರತ್ನದ ಕಲ್ಲಿನ ಆಭರಣ ಧರಿಸುವುದು ಘರ್ಷಣೆಗೆ ಕಾರಣವಾಗುತ್ತದೆ. ಒಂದು ಅಥವಾ ಎರಡು ಧರಿಸುವುದು ಉತ್ತಮ ಎಂದು ಪರಿಣಿತ ಜ್ಯೋತಿಷ್ಯರು ಹೇಳುತ್ತಾರೆ.