logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗಜಲಕ್ಷ್ಮಿ ರಾಜಯೋಗ; ಈ 3 ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ಸುಖ, ಕುಟುಂಬದಲ್ಲಿ ಸಂತೋಷ ಸೇರಿ ಭಾರಿ ಧನಲಾಭ

ಗಜಲಕ್ಷ್ಮಿ ರಾಜಯೋಗ; ಈ 3 ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ಸುಖ, ಕುಟುಂಬದಲ್ಲಿ ಸಂತೋಷ ಸೇರಿ ಭಾರಿ ಧನಲಾಭ

Raghavendra M Y HT Kannada

Feb 01, 2024 05:37 PM IST

google News

ಗಜಲಕ್ಷ್ಮಿ ರಾಜಯೋಗದಿಂದ 3 ರಾಶಿಯವರಿಗೆ ಭಾರಿ ಲಾಭಗಳಿವೆ

  • 12 ವರ್ಷಗಳ ಬಳಿಕ ಗುರು ಮತ್ತು ಶುಕ್ರ ಮೇಷ ರಾಶಿಯಲ್ಲಿ ಸಂಚಾರದಿಂದ ಗಜಲಕ್ಷ್ಮಿ ರಾಜಯೋಗ ಉಂಟಾಗಿದೆ. ಇದರಿಂದ ಪ್ರಮುಖವಾಗಿ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ.

ಗಜಲಕ್ಷ್ಮಿ ರಾಜಯೋಗದಿಂದ 3 ರಾಶಿಯವರಿಗೆ ಭಾರಿ ಲಾಭಗಳಿವೆ
ಗಜಲಕ್ಷ್ಮಿ ರಾಜಯೋಗದಿಂದ 3 ರಾಶಿಯವರಿಗೆ ಭಾರಿ ಲಾಭಗಳಿವೆ

ದೇವತೆಗಳಿಗೆ ಅಧಿಪತಿಯಾಗಿರುವ ಗುರು ಮತ್ತು ಶುಭದ ಸಂಕೇತವಾಗಿರುವ ಶುಕ್ರ ಒಂದೇ ರಾಶಿಯಲ್ಲಿ ಭೇಟಿಯಾಗುತ್ತಿದ್ದಾರೆ. ಗುರು ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಸಂಪತ್ತು ದ್ವಿಗುಣವಾಗುತ್ತದೆ. ಈ ಎರಡು ಶುಭ ಗ್ರಹಗಳ ಸಂಯೋಗದ ಫಲವಾಗಿ ಗಜಲಕ್ಷ್ಮಿ ರಾಜಯೋಗ ಉಂಟಾಗಲಿದೆ. ಫೆಬ್ರವರಿ ತಿಂಗಳಲ್ಲಿ ಬರುವ ರಾಜಯೋಗವು ಕೆಲವು ರಾಶಿಯವರಿಗೆ ವಿಶೇಷ ಲಾಭಗಳನ್ನು ತರಲಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಜ್ಯೋತಿಷ್ಯ ಶಾಸ್ತ್ರದಲ್ಲಿ ಗಜಲಕ್ಷ್ಮಿ ರಾಜಯೋಗವನ್ನುಅತ್ಯಂತ ಪವಿತ್ರ ಹಾಗೂ ಮಂಗಳಕರವೆಂದು ಪರಿಗಣಿಸಲಾಗಿದೆ. ಗಜ ಎಂದರೆ ಆನೆ. ಅಂದ್ರೆ ಲಕ್ಷ್ಮಿ ದೇವಿಯುವ ಮೂರು ರಾಶಿಯ ರಿಗೆ ಹಣದ ಮಳೆಯನ್ನೇ ಸುರಿಸಲಿದ್ದಾಳೆ. ಶುಕ್ರನು ಶ್ರೀಮಂತಿಕೆ ಮತ್ತು ಅದೃಷ್ಟನ್ನು ನೀಡುತ್ತಾನೆ. ಆದರೆ ಗುರು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾನೆ. ಈ ಎರಡು ಗ್ರಹಗಳ ಸಂಯೋಜನೆಯೊಂದಿಗೆ ಪ್ರಮುಖವಾಗಿ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಸುಮಾರು 12 ವರ್ಷಗಳ ನಂತರ ಶುಕ್ರ ಮತ್ತು ಗುರು ಗ್ರಹಗಳ ಮೇಷ ರಾಶಿಯಲ್ಲಿ ಭೇಟಿಯಾಗುತ್ತಿವೆ.

ಗುರುವಿಗೆ ಮೇಷ ಸ್ವಂತ ರಾಶಿ. ತನ್ನ ಸ್ವಂತ ರಾಶಿಯಲ್ಲಿ ಗುರು ಇದ್ದಾಗ, ಏಪ್ರಿಲ್ 24 ರಂದು ಶುಕ್ರನು ಇದೇ ರಾಶಿಯಲ್ಲಿ ಸಾಗುತ್ತಾನೆ. ಹೀಗೆ ಈ ಎರಡು ಗ್ರಹಗಳ ಸಂಯೋಜನೆಯಿಂದ ಗಜಲಕ್ಷ್ಮಿ ರಾಜಯೋಗ ರೂಪಗೊಳ್ಳುತ್ತಿದೆ. ಈ ರಾಜಯೋಗದಿಂದ ಮೂರ ರಾಶಿಯವರ ದಾಂಪತ್ಯ ಜೀವನ, ಕುಟುಂಬದಲ್ಲಿ ಸಂತೋಷ ಹಾಗೂ ಆಕಸ್ಮಿಕ ಧನಲಾಭಗಳಿವೆ. ಯಾವುವು ಆ ರಾಶಿಗಳು ಅನ್ನೋದನ್ನ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯಲ್ಲಿ ಗುರು ಮತ್ತು ಶುಕ್ರರ ಸಂಯೋಜನೆ ಸಂಭವಿಸುತ್ತಿರುವುದರಿಂದ ಮೇಷ ರಾಶಿಯವರಿಗೆ ಅನೇಕ ಶುಭ ಫಲಗಳಿವೆ. ಇವರಿಗೆ ಒಳ್ಳೆಯ ದಿನಗಳು ಆರಂಭವಾಗುತ್ತವೆ. ಇವರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯಾಪಾರ ಮಾಡುವವರಿಗೆ ಅನಿರೀಕ್ಷಿತ ಲಾಭಗಳು ದೊರೆಯುತ್ತವೆ. ವೃತ್ತಿಜೀವನದಲ್ಲಿ ಪ್ರಗತಿ ಕಾರಣುತ್ತಾರೆ. ನಿಮ್ಮ ಕಾರ್ಯಕ್ಷಮತೆ ಸುಧಾರಿಸುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಹಠಾತ್ ಆರ್ಥಿಕ ಲಾಭವನ್ನು ಸಹ ಪಡೆಯುತ್ತೀರಿ.

ಮಿಥುನ ರಾಶಿ

ಗುರು ಮತ್ತು ಶುಕ್ರನ ಸಮಾಗಮದಿಂದ ಮಿಥುನ ರಾಶಿಯವರಿಗೆ ಹಲವು ಪ್ರಯೋಜನಗಳಿವೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. ವೃತ್ತಿ ಜೀವನದಲ್ಲಿ ಅನಿರೀಕ್ಷಿತ ಯಶಸ್ಸು ಕಾಣಲಿದ್ದೀರಿ. ಅಡೆತಡೆಗಳಿಂದಾಗಿ ಬಹುಕಾಳದಿಂದ ಸ್ಥಗಿತವಾಗಿದ್ದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕೆಲಸದಲ್ಲಿ ಗಮನ ಹೆಚ್ಚಾಗುತ್ತದೆ. ನಿಮ್ಮ ಶ್ರಮ ಮತ್ತು ಉತ್ಸಾಹವನ್ನು ನೋಡಿ ಮೇಲಾಧಿಕಾರಿಗಳು ನಿಮಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆಗಳಿವೆ. ನಿಮ್ಮ ಪ್ರೀತಿಯ ಜೀವನ ಅದ್ಭುತವಾಗಿರುತ್ತದೆ. ಕುಟುಂಬದೊಂದಿಗೆ ಸಂತೋಷವಾಗಿ ಸಮಯ ಕಳೆಯುತ್ತೀರಿ.

ಕರ್ಕಾಟಕ ರಾಶಿ

ಗಜಲಕ್ಷ್ಮಿ ರಾಜಯೋಗದಿಂದ ಕರ್ಕಾಟಕ ರಾಶಿಯವರ ಅದೃಷ್ಟ ಹೆಚ್ಚಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಈ ರಾಶಿಯವರು ಯಶಸ್ಸು ಕಾಣುತ್ತಾರೆ. ವ್ಯಾಪಾರ ಮಾಡುವವರಿಗೆ ಉತ್ತಮ ಸಮಯವಾಗಿದೆ. ಹೊಸದಾಗಿ ವ್ಯಾಪಾರ ಮಾಡುವವರಿಗೆ ಒಳ್ಳೆಯ ಸಮಯ. ವೈವಾಹಿಕ ಜೀವನದಲ್ಲಿ ನಿಮ್ಮ ಪ್ರೀತಿ ಬಲಗೊಳ್ಳುತ್ತದೆ. ಸಂಗಾತಿಯೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯುತ್ತೀರಿ. ಕೆಲಸದಲ್ಲಿ ನೀವು ತೋರುವ ಆಸಕ್ತಿ ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. (This copy first appeared in Hindustan Times Kannada website. To read more like this please logon to kannada.hindustantime.com).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ