logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಹುಡುಕೋಣ; ಆಹಾರ ಹೇಗೆ ಸೇವಿಸಬೇಕು, ಮನೆಯಲ್ಲಿ ಯಾವ ರೀತಿ ಗಿಡ ಬೆಳೆಸಬೇಕು? ಇಲ್ಲಿದೆ ವಾಸ್ತು ಟಿಪ್ಸ್‌

ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಹುಡುಕೋಣ; ಆಹಾರ ಹೇಗೆ ಸೇವಿಸಬೇಕು, ಮನೆಯಲ್ಲಿ ಯಾವ ರೀತಿ ಗಿಡ ಬೆಳೆಸಬೇಕು? ಇಲ್ಲಿದೆ ವಾಸ್ತು ಟಿಪ್ಸ್‌

Rakshitha Sowmya HT Kannada

Jun 08, 2024 03:03 PM IST

google News

ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಹುಡುಕೋಣ; ಆಹಾರ ಹೇಗೆ ಸೇವಿಸಬೇಕು, ಮನೆಯಲ್ಲಿ ಯಾವ ರೀತಿ ಗಿಡ ಬೆಳೆಸಬೇಕು? ಇಲ್ಲಿದೆ ವಾಸ್ತು ಟಿಪ್ಸ್‌

  • ತಿಳಿದೋ ತಿಳಿಯದೆಯೋ ನಾವು ಅನೇಕ ತಪ್ಪುಗಳನ್ನು ಮಾಡುತ್ತೇವೆ. ಆದರೆ ಅದರಿಂದಾಗುವ ತೊಂದರೆಗಳನ್ನು ಕೂಡಾ ನಾವೇ ಅನುಭವಿಸಬೇಕು. ಆದರೆ ಆದಷ್ಟು ತಪ್ಪುಗಳನ್ನು ಮಾಡದಿರುವುದು ಅಥವಾ ಆ ತಪ್ಪಿನಿಂದಾಗಿ ಉಂಟಾದ ಸಮಸ್ಯೆಗೆ ಪರಿಹಾರ ಹುಡುಕುವುದು ಕೂಡಾ ನಮ್ಮ ಕೈಯಲ್ಲೇ ಇದೆ. ಈ ಲೇಖನದಲ್ಲಿ ಎಲ್ಲರೂ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಎಂಬ ವಿವರವಿದೆ.

ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಹುಡುಕೋಣ; ಆಹಾರ ಹೇಗೆ ಸೇವಿಸಬೇಕು, ಮನೆಯಲ್ಲಿ ಯಾವ ರೀತಿ ಗಿಡ ಬೆಳೆಸಬೇಕು? ಇಲ್ಲಿದೆ ವಾಸ್ತು ಟಿಪ್ಸ್‌
ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಹುಡುಕೋಣ; ಆಹಾರ ಹೇಗೆ ಸೇವಿಸಬೇಕು, ಮನೆಯಲ್ಲಿ ಯಾವ ರೀತಿ ಗಿಡ ಬೆಳೆಸಬೇಕು? ಇಲ್ಲಿದೆ ವಾಸ್ತು ಟಿಪ್ಸ್‌

ಶೌಚಾಲಯದ ಪಕ್ಕದಲ್ಲಿ ಅಥವಾ ಶೌಚಾಲಯದ ಮುಂಭಾಗ ಮಂಚವನ್ನು ಹಾಕಬಾರದು. ಈ ಸ್ಥಳಗಳಲ್ಲಿ ಮಲಗಲೂಬಾರದು. ದೇವರ ಮನೆಗೆ ಎದುರಾಗಿ ಮಲಗುವ ಕೋಣೆಯ ಬಾಗಿಲನ್ನು ಇರಿಸಬಾರದು. ಮಲಗುವ ಕೋಣೆಯಲ್ಲಿ ನೀಲಿ ದೀಪವನ್ನು ಹಾಕಬೇಕು. ಯಾವುದೇ ಕಾರಣಕ್ಕೂ ಕೆಂಪು ಬಣ್ಣಸೂಸುವ ಬಲ್ಪ್ ಗಳನ್ನು ಬಳಸಲೇ ಬಾರದು. ಇಲ್ಲವಾದಲ್ಲಿ ದಾಂಪತ್ಯ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಇರುವುದಿಲ್ಲ. ದಂಪತಿಗಳು ಬೇರ್ಪಡುವ ಪರಿಸ್ಥಿಯೂ ಉಂಟಾಗಬಹುದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಇತರ ಬಾಗಿಲುಗಳಿಗಿಂತ ಮುಖ್ಯದ್ವಾರ ದೊಡ್ಡದಾಗಿರಬೇಕು

ಮುಖ್ಯದ್ವಾರವು ಮನೆಯ ಉಳಿದ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಮನೆಯಲ್ಲಿರುವ ನಲ್ಲಿಯೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಬೇಕು. ಮನೆಯ ನಲ್ಲಿಯಿಂದ ನೀರು ಸೋರಬಾರದು. ಅಡಿಗೆ ಮನೆಯಲ್ಲಿ ಉಪಯೋಗಿಸುವ ನಲ್ಲಿಯಿಂದ ನೀರು ವ್ಯರ್ಥವಾಗುತ್ತಿದ್ದಲ್ಲಿ ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುವುದಿಲ್ಲ. ಶೌಚಾಲಯದಲ್ಲಿ ನೀರು ವ್ಯರ್ಥವಾಗುತ್ತಿದ್ದಲ್ಲಿ ಅನಾರೋಗ್ಯವಿರುತ್ತದೆ. ಅಲ್ಲದೆ ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗುತ್ತವೆ. ಮನೆಯ ಹೊರ ಭಾಗದಲ್ಲಿರುವ ನಲ್ಲಿಯ ನೀರು ವ್ಯರ್ಥವಾಗುತ್ತಿದ್ದಲ್ಲಿಆ ಮನೆಯ ಮೇಲೆ ಹೊರಗಿನ ಜನರ ಪ್ರಭಾವ ಹೆಚ್ಚಾಗಿರುತ್ತದೆ. ನೆರೆಹೊರೆಯವರ ಜೊತೆ ಅನಾವಶ್ಯಕವಾದ ವಾದ ವಿವಾದ ನಡೆಯುತ್ತಿರುತ್ತವೆ. ಉತ್ತಮ ಆದಾಯವಿದ್ದರೂ ನಿತ್ಯ ಜೀವನಕ್ಕೆ ಸಾಕಾಗದು. ಅಡುಗೆ ಮನೆಯ ನಲ್ಲಿ ಮತ್ತು ಒಲೆಗಳು ಅಕ್ಕಪಕ್ಕದಲ್ಲಿ ಇರಬಾರದು. ಪ್ರತಿದಿನ ಕೆಲಸ ಆರಂಭಿಸುವ ಮುನ್ನ ಒಲೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಇದರಿಂದ ಆರೋಗ್ಯದಲ್ಲಿ ಯಾವುದೇ ತೊಂದರೆ ಕಾಣದು.

ಮರದಿಂದ ಮಾಡಿದ ಕಪಾಟುಗಳನ್ನು ಸದಾ ಮುಚ್ಚಿರಬೇಕು. ಅವುಗಳಿಗೆ ಪಾರದರ್ಶಕವಾದ ಗಾಜನ್ನು ಹೊಂದಿಸಿರಬಾರದು. ಹಾಗೆಯೇ ಸದಾ ಕಾಲ ಬೀರು ಅಥವಾ ಯಾವುದೇ ಕಪಾಟುಗಳನ್ನಾಗಲಿ ತೆರೆದಿಡಬಾರದು. ಕಪಾಟುಗಳ ಒಳಗೆ ಧೂಳು ಇರದಂತೆ ನೋಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಮನೆಯ ಒಳಗೆ ಗಿಡಗಳನ್ನು ಇಡುವುದು ಅಭ್ಯಾಸವಾಗಿದೆ. ಒಣಗಿದ ಅಥವಾ ಹಸಿರು ಬಣ್ಣವಲ್ಲದ ಗಿಡಗಳನ್ನು ಮನೆಯ ಒಳಗೆ ಇಡಬಾರದು. ಮನೆಯ ಹೊರಗಿರುವ ಬಳ್ಳಿಯ ಗಿಡವು ಮನೆಯ ಒಳಗೆ ಬರಬಾರದು. ಹಾಗೆ ಮನೆಗೆ ಒಳಗೆ ಇರುವ ಬಳ್ಳಿಯು ಮನೆಯ ಹೊರಭಾಗಕ್ಕೆ ಹೋಗಬಾರದು. ಮುಳ್ಳುಗಳು ಇರುವ ಗಿಡಗಳನ್ನು ಮನೆಯ ಒಳಗೆ ಬೆಳೆಸಬಾರದು.

ಅಡುಗೆ ಮನೆ ಸದಾ ಶುಚಿಯಾಗಿರಬೇಕು

ಮನೆಯ ಅಂಗಳದಲ್ಲಿ ಕುಳಿತುಕೊಳ್ಳಲು ಪೀಠೋಪಕರಣಗಳನ್ನು ರಸ್ತೆಬದಿಗೆ ಮುಖ ಮಾಡುವಂತೆ ಇರಬೇಕು. ಯಾವುದೇ ಕಾರಣಕ್ಕೂ ಮನೆಯ ಹೊರಗೆ ಕುಳಿತು ಮನೆಯ ಒಳಗಿರುವ ದೂರದರ್ಶನವನ್ನು ನೋಡುವುದು ಅಥವಾ ಇನ್ನಾವುದೇ ಕೆಲಸವನ್ನು ಮಾಡಬಾರದು. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಮುಂಭಾಗದ ಹೊರತಾಗಿ ಎಲ್ಲಿಯೂ ಹೊಸಿಲುಗಳು ಇರುವುದಿಲ್ಲ. ಉದಾಹರಣೆಗೆ ಅಡುಗೆ ಮನೆಗೆ ಹೊಸಿಲು ಇರುವುದಿಲ್ಲ.ಆಗ ಹೊಸಿಲು ಇರಬಹುದಾದ ಜಾಗದ ಮೇಲೆ ಕುಳಿತುಕೊಳ್ಳುವುದು ಅಥವಾ ನಿಲ್ಲುವುದನ್ನು ಮಾಡಬಾರದು. ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಂತು ಅಡುಗೆ ಮಾಡಬಾರದು. ಅಡುಗೆ ತಯಾರಿಸಲು ಬೇಕಾದ ಪದಾರ್ಥಗಳನ್ನು ಪಶ್ಚಿಮ ದಿಕ್ಕಿನಲ್ಲಿ ಜೋಡಿಸಬಹುದು. ಆದರೆ ಪೂರ್ವ ಅಥವಾ ದಕ್ಷಿಣ ದಿಕ್ಕುಗಳು ಸಾಧ್ಯವಾದಷ್ಟು ತೂಕ ರಹಿತವಾಗಿರಬೇಕು. ಅಡುಗೆ ಮನೆ ಸದಾ ಕಾಲ ಶುಚಿಯಾಗಿದ್ದಲ್ಲಿ ಹಣಕಾಸಿನ ತೊಂದರೆ ಎದುರಾಗುವುದಿಲ್ಲ.

ಅಂಗಳದ ಮಧ್ಯಭಾಗದಲ್ಲಿ ಸೋಫಾ ಅಥವಾ ಕುರ್ಚಿಗಳನ್ನು ಹಾಕುವುದು ಕೆಲವರಿಗೆ ಅಭ್ಯಾಸ. ಇಂತಹ ಸಂದರ್ಭದಲ್ಲಿ ದೇವರ ಕೋಣೆಗೆ ಅಥವಾ ಅಡುಗೆ ಮನೆಗೆ ಬೆನ್ನು ಹಾಕಿ ಕುಳಿತುಕೊಳ್ಳಬಾರದು. ಇಲ್ಲವಾದಲ್ಲಿ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕೈಯಲ್ಲಿ ಅಥವಾ ತೊಡೆಯ ಮೇಲೆ ತಟ್ಟೆ ಹಿಡಿದು ಆಹಾರ ಸೇವಿಸಬಾರದು. ಹಾಗೆಯೇ ಪಾದರಕ್ಷೆ ಧರಿಸಿ ಆಹಾರ ಸೇವಿಸಬಾರದು. ಒಂದು ವೇಳೆ ಹೀಗೆ ಮಾಡಿದರೆ ಸಾಕ್ಷಾತ್ ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಿದಂತೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಮನೆಯ ಹೊರಗೆ ನಿಂತವರಿಗೆ ಹೊಸಿಲಿನಿಂದ ಒಳಗೆ ನಿಂತು ಯಾವುದೇ ವಸ್ತುವನ್ನು ನೀಡಬಾರದು. ಒಂದು ವೇಳೆ ನೀಡಿದರೆ ಆ ಕುಟುಂಬದಲ್ಲಿ ದಾರಿದ್ರ್ಯ ಮನೆ ಮಾಡುತ್ತದೆ. ಇದೇ ಇದೇ ಕ್ರಮವನ್ನು ಮನೆಯ ಒಳಗೂ ಅನುಸರಿಸಬೇಕು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ