logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಬಂಧದಲ್ಲಿ ಈ ರಾಶಿಯವರು ಶಿವ ಪಾರ್ವತಿಯಂತೆ ಜೀವಿಸುತ್ತಾರೆ; ಯಾರಿಗೆ ಯಾವ ರಾಶಿಚಿಹ್ನೆಗಳು ಹೊಂದಾಣಿಕೆಯಾಗಿವೆ ನೋಡಿ

ಸಂಬಂಧದಲ್ಲಿ ಈ ರಾಶಿಯವರು ಶಿವ ಪಾರ್ವತಿಯಂತೆ ಜೀವಿಸುತ್ತಾರೆ; ಯಾರಿಗೆ ಯಾವ ರಾಶಿಚಿಹ್ನೆಗಳು ಹೊಂದಾಣಿಕೆಯಾಗಿವೆ ನೋಡಿ

Raghavendra M Y HT Kannada

Sep 18, 2024 08:23 AM IST

google News

ಯಾವ ರಾಶಿಯವರು ಶಿವ ಪಾರ್ವತಿಯಂತೆ ಜೀವಿಸುತ್ತಾರೆ ಅನ್ನೋದನ್ನು ಇಲ್ಲಿ ನೀಡಲಾಗಿದೆ.

    • ಕೆಲವೊಂದು ರಾಶಿಯವರು ಸಂಬಂಧದಲ್ಲಿ ತುಂಬಾ ಬಲವಾಗಿರುತ್ತಾರೆ. ಏನೇ ಸಮಸ್ಯೆಗಳು ಬಂದರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಾರೆ. ದೈವಿಕ ಸಂಬಂಧದಲ್ಲಿ ಶಿವ ಪಾರ್ವತಿಯಂತೆ ಜೀವಿಸುತ್ತಾರೆ. ಆ ರಾಶಿಯವರು ಯಾರು? ಯಾರಿಗೆ ಯಾವ ರಾಶಿಯವರ ಹೊಂದಾಣಿಕೆ ಚೆನ್ನಾಗಿದೆ ಅನ್ನೋದನ್ನು ಇಲ್ಲಿ ನೀಡಲಾಗಿದೆ.
ಯಾವ ರಾಶಿಯವರು ಶಿವ ಪಾರ್ವತಿಯಂತೆ ಜೀವಿಸುತ್ತಾರೆ ಅನ್ನೋದನ್ನು ಇಲ್ಲಿ ನೀಡಲಾಗಿದೆ.
ಯಾವ ರಾಶಿಯವರು ಶಿವ ಪಾರ್ವತಿಯಂತೆ ಜೀವಿಸುತ್ತಾರೆ ಅನ್ನೋದನ್ನು ಇಲ್ಲಿ ನೀಡಲಾಗಿದೆ.

ಹಿಂದೂ ಪುರಾಣಗಳಲ್ಲಿ ಶಿವ ಮತ್ತು ಪಾರ್ವತಿ ದೇವಿಯ ನಡುವಿನ ಸಂಬಂಧಕ್ಕೆ ತುಂಬಾ ಗೌರವವಿದೆ. ಮಾದರಿಯಾಗಿಯೂ ಇದ್ದಾರೆ. ಪ್ರೀತಿ, ಭಕ್ತಿ ಮತ್ತತು ಪೂರಕ ಶಕ್ತಿಗಳು ಇವರನ್ನು ಉತ್ತಮ ಜೋಡಿಯನ್ನಾಗಿ ಮಾಡಿವೆ. ಆದರೆ ಕೆಲವು ರಾಶಿಯವರು ಕೂಡ ಶಿವ-ಪಾರ್ವತಿಯಂತೆಯೇ ಜೀವಿಸುತ್ತಾರೆ. ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟುಕೊಡುವುದೇ ಇಲ್ಲ. ಸಮತೋಲನವನ್ನು ಸಾಧಿಸಿ ಎಲ್ಲರಿಂದ ಮೆಚ್ಚುಗೆಯನ್ನು ಪಡೆದಿರುತ್ತಾರೆ. ಯಾವ ರಾಶಿಯವರ ಯಾರು ಹೊಂದಾಣಿಕೆಯಾಗಿ ಸಂಸಾರವನ್ನು ಖುಷಿಯನ್ನು ನಡೆಸುತ್ತಿದ್ದಾರೆ ಎಂಬುದನ್ನು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ವೃಶ್ಚಿಕ ಮತ್ತು ಕಟಕ ರಾಶಿಯವರ ಸಂಬಂಧ ಹೇಗಿರುತ್ತೆ?

ವೃಶ್ಚಿಕ ರಾಶಿಯವನ್ನು ಮಂಗಳನು ಆಳುತ್ತಾನೆ. ಈ ರಾಶಿಯವರು ಶಿವನ ಪರಿವರ್ತಕ ಶಕ್ತಿಯೊಂದಿಗೆ ಪ್ರತಿಧ್ವನಿಸುತ್ತಾರೆ. ಇವರ ಆಳವಾದ ಸಂಬಂಧವನ್ನು ಹೊಂದಿರುತ್ತಾರೆ. ವೃಶ್ಚಿಕ ರಾಶಿಯ ಕೆಲವು ಪುರುಷರನ್ನು ತಪ್ಪಾಗಿ ಭಾವಿಸಲಾಗುತ್ತದೆ. ಆದರೆ ಇವರು ಶಿವನಂತೆ ಬುದ್ಧಿವಂತಿಕೆ, ಅಚಲವಾದ ಸ್ವಯಂ ಪ್ರಜ್ಞೆಯನ್ನು ಹೊಂದಿದ್ದು, ಎಲ್ಲವನ್ನು ತಾಳ್ಮೆಯಿಂದ ಜಯಿಸುತ್ತಾರೆ.
ಮತ್ತೊಂದೆಡೆ ಚಂದ್ರನು ಆಳುತ್ತಿರುವ ಕಟಕ ರಾಶಿಯ ಕೆಲ ಮಹಿಳೆಯರಲ್ಲಿ ಹೊಂದಾಣಿಕೆ ಮತ್ತು ಪೋಷಣೆಯ ಗುಣ ಅಧಿಕವಾಗಿರುತ್ತದೆ. ಸಹಾನುಭೂತಿ ಮತ್ತು ಭಾವನಾತ್ಮಕ ಗುಣಗಳು ಇವರಲ್ಲಿ ಹೆಚ್ಚಿರುತ್ತವೆ. ಹೀಗಾಗಿ ಸಂಬಂಧದಲ್ಲಿ ಎಲ್ಲಕ್ಕೂ ಹೊಂದಾಣಿಕೆಯಾಗುತ್ತಾರೆ. ತಮ್ಮ ಗುಣಗಳಿಂದಲೇ ಇವರು ಪಾರ್ವತಿಯಂತೆ ಅಚಲವಾದ ಪ್ರೀತಿ ಮತ್ತು ತಾಳ್ಮೆಯನ್ನು ಪ್ರತಿಧ್ವನಿಸುತ್ತಾರೆ.

ಶಿವ-ಪಾರ್ವತಿಯಂತೆ ಇರುತ್ತೆ ಕನ್ಯಾ-ಮಕರ ರಾಶಿ ದಂಪತಿಯ ಜೀವನ

ಶಿವ ಮತ್ತು ಪಾರ್ವತಿಯಂತೆ ಇರುವ ಮತ್ತೊಂದು ರಾಶಿಯವರೆಂದರೆ ಕನ್ಯಾ ಮತ್ತು ಮಕರ ರಾಶಿಯವರು. ಇವರು ಶುದ್ಧತೆ ಮತ್ತು ಭಕ್ತಿಗೆ ತುಂಬಾ ಹೆಸರುವಾಗಿಯಾಗಿದ್ದಾರೆ. ಯಾರನ್ನೂ ನೋಯಿಸುವುದಿಲ್ಲ. ತಮ್ಮ ಕೆಲಸವನ್ನು ಮಾಡಿಕೊಂಡು ಇರುತ್ತಾರೆ. ಪತಿ-ಪತ್ನಿಯ ನಡುವೆ ಪರಸ್ಪರ ಗೌರವ ಮತ್ತು ಭಕ್ತಿಯ ಭಾವ ಅಧಿಕವಾಗಿರುತ್ತದೆ. ಎಲ್ಲಾ ವಿಚಾರದಲ್ಲೂ ತಾಳ್ಮೆಯಿಂದ ಇರುತ್ತಾರೆ. ಪ್ರೀತಿಯ ಭಾವದಿಂದ ಕಾಣುತ್ತಾರೆ. ಶಿವ ಮತ್ತು ಪಾರ್ವತಿಯಂತೆಯೇ ಉತ್ಸಾಹ ಮತ್ತು ಕಾಳಜಿಯ ತೋರಿಸುತ್ತಾರೆ. ಮತ್ತೊಂದು ಮುಖ್ಯವಾದ ವಿಚಾರವೆಂದರೆ ಕನ್ಯಾ ರಾಶಿಯ ಪುರುಷರು ಮತ್ತು ಮಕರ ರಾಶಿಯ ಮಹಿಳಾ ದಂಪತಿ ಸೂಕ್ಷ್ಮ ಮತ್ತು ಶಿಸ್ತಿನ ಸ್ವಭಾವಕ್ಕೆ ಕನ್ನಡಿ ಹಿಡಿದಂತೆ ಇರುತ್ತಾರೆ.

ಮೇಷ ಮತ್ತು ತುಲಾ ರಾಶಿ ದಂಪತಿ ಜೀವನವೂ ಸೂಪರ್

ಶಿವ ಮತ್ತು ಪಾರ್ವತಿಯಂತೆ ಜೀವಿಸುವ ಮತ್ತೊಂದು ದಂಪತಿ ರಾಶಿಯವರೆಂದರೆ ಅದು ಮೇಷ ಮತ್ತು ತುಲಾ ರಾಶಿಯವರು. ಮೇಷ ರಾಶಿಯನ್ನು ಮಂಗಳನು ಆಳುತ್ತಾನೆ. ಈ ರಾಶಿಯ ಪುರುಷರು ಶಿವನ ಯೋಧ ಚೈತನ್ಯವನ್ನು ಸಾಕಾರಗೊಳಿಸುತ್ತಾರೆ. ಯಾವಾಗಲೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾರೆ. ಸದಾ ಸತ್ಯದ ಪರ ನಿಲ್ಲುತ್ತಾರೆ. ಮತ್ತೊಂದೆಡೆ ಶುಕ್ರನಿಂದ ಆಳಲ್ಪಡುವ ತುಲಾ ರಾಶಿಯ ಮಹಿಳೆಯರು ಸಂಬಂಧಕ್ಕೆ ತುಂಬಾ ಗೌರವ ನೀಡುತ್ತಾರೆ. ಸೌಂದರ್ಯ ಮತ್ತು ಸಾಮರಸ್ಯಕ್ಕೆ ಇವರು ಹೆಸರುವಾಸಿಯಾಗಿದ್ದಾರೆ. ಮೇಷ ರಾಶಿಯ ಪುರುಷರು ಮತ್ತು ತುಲಾ ರಾಶಿಯ ಮಹಿಳಾ ದಂಪತಿಯಲ್ಲಿ ತುಂಬಾ ಹೊಂದಾಣಿಕೆ ಇರುತ್ತದೆ. ತುಲಾ ರಾಶಿಯ ಮಹಿಳೆಯರಿಗೆ ಪಾರ್ವತಿಯಂತೆ ಶಾಂತ ಮನಸ್ಥಿತಿ ಇರುತ್ತದೆ. ಇದೇ ಕಾರಣಕ್ಕೆ ಈ ದಂಪತಿ ಸಂತೋಷದಿಂದ ಜೀವನವನ್ನು ಸಾಗಿಸುತ್ತಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ