logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮತ್ತೆ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಗುರು; ಈ ರಾಶಿಯವರಿಗೆ ಕಂಕಣ ಭಾಗ್ಯ ತರುತ್ತಿದ್ದಾನೆ ಬೃಹಸ್ಪತಿ

ಮತ್ತೆ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಗುರು; ಈ ರಾಶಿಯವರಿಗೆ ಕಂಕಣ ಭಾಗ್ಯ ತರುತ್ತಿದ್ದಾನೆ ಬೃಹಸ್ಪತಿ

Rakshitha Sowmya HT Kannada

May 29, 2024 09:24 AM IST

google News

ಮತ್ತೆ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಗುರು; ಈ ರಾಶಿಯವರಿಗೆ ಕಂಕಣ ಭಾಗ್ಯ ತರುತ್ತಿದ್ದಾನೆ ಬೃಹಸ್ಪತಿ

  • ಶುಕ್ರನೊಂದಿಗೆ ವೃಷಭ ರಾಶಿಯಲ್ಲಿ ಅಸ್ತಂಗತನಾಗಿದ್ದ ಬೃಹಸ್ಪತಿಯು ಜೂನ್‌ 4 ರಂದು ಮತ್ತೆ ವೃಷಭ ರಾಶಿಯಲ್ಲಿ ಉದಯಿಸುತ್ತಿದ್ದಾನೆ. ಇದರ ಪರಿಣಾಮ ಮೇಷ ರಾಶಿಯವರಿಗೆ ಗುರು ಕಂಕಣ ಭಾಗ್ಯ ತರುತ್ತಿದ್ದಾನೆ. ವೃಶ್ಚಿಕ ರಾಶಿಯವರು ಬೃಹಸ್ಪತಿ ಆಶೀರ್ವಾದದಿಂದ ಪ್ರೇಮ ವಿವಾಹವಾಗುವ ಸಾಧ್ಯತೆ ಇದೆ. 

ಮತ್ತೆ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಗುರು; ಈ ರಾಶಿಯವರಿಗೆ ಕಂಕಣ ಭಾಗ್ಯ ತರುತ್ತಿದ್ದಾನೆ ಬೃಹಸ್ಪತಿ
ಮತ್ತೆ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಗುರು; ಈ ರಾಶಿಯವರಿಗೆ ಕಂಕಣ ಭಾಗ್ಯ ತರುತ್ತಿದ್ದಾನೆ ಬೃಹಸ್ಪತಿ

ಮೇ 3 ರಂದು ವೃಷಭ ರಾಶಿಯಲ್ಲಿ ಅಸ್ತಗಂತನಾಗಿದ್ದ ಗುರು ಗ್ರಹವು ಜೂನ್‌ 4 ರಂದು ಮತ್ತೆ ಉದಯಿಸಲಿದ್ದಾನೆ. ಇದರಿಂದ ಹಲವು ರಾಶಿಗಳಿಗೆ ಬೃಹತಸ್ಪತಿಯು ವಿವಿಧ ಫಲಗಳನ್ನು ನೀಡಲಿದ್ದಾನೆ. ಗುರುವಿನ ಅಸ್ತಗಂತ ಸಮಯದಲ್ಲಿ ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ನಡೆಸುವುದು ಸೂಕ್ತವಲ್ಲ. ಈಗ ಗುರು ಮತ್ತೆ ಉದಯಿಸುತ್ತಿದ್ದಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಜೂನ್‌ 4, ಗುರು ಉದಯಿಸುತ್ತಿರುವುದರಿಂದ ಶುಭ ಕಾರ್ಯ ಮಾಡಲು ಉತ್ತಮ ಸಮಯವಾಗಿದೆ. ಬೃಹಸ್ಪತಿಯ ಆಶೀರ್ವಾದದಿಂದ 4 ರಾಶಿಚಕ್ರದ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಅವಕಾಶ ಸೃಷ್ಟಿಯಾಗುತ್ತದೆ. ವೃಷಭ ರಾಶಿಯಲ್ಲಿ ಗುರು ಗ್ರಹ ಉದಯಿಸುವುದರಿಂದ ಯಾರಿಗೆ ಯಾವ ರೀತಿಯ ಫಲಗಳನ್ನು ನೀಡಲಿದ್ದಾನೆ ನೋಡೋಣ.

ಮೇಷ ರಾಶಿ

ಗುರುವು ಮೇಷ ರಾಶಿಯ ಎರಡನೇ ಮನೆಯಲ್ಲಿ ಉದಯಿಸುತ್ತಾನೆ. ಇದರಿಂದ ಈ ರಾಶಿಯವರಿಗೆ ಸಂಪತ್ತು ಹರಿದುಬರಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಕೆಲಸದಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಈ ರಾಶಿಯವರು ಪ್ರಾಮಾಣಿಕರಾಗಿರುತ್ತಾರೆ. ಇದೇ ಅವರಿಗೆ ಇನ್ನಷ್ಟು ಒಳಿತು ಮಾಡಲಿದೆ. ಗುರುವಿನ ಆಶೀರ್ವಾದದಿಂದ ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ಆತ್ಮೀಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದ್ದು, ಶೀಘ್ರವೇ ವಿವಾಹವಾಗಲಿದೆ.

ಕಟಕ ರಾಶಿ

ಗುರುವು ಕಟಕ ರಾಶಿಯ 11 ನೇ ಮನೆಯಲ್ಲಿ ಉದಯಿಸಲಿದ್ದಾನೆ. ಇದು ಈ ರಾಶಿಯವರಿಗೆ ಅದೃಷ್ಟವನ್ನು ತರುತ್ತಿದೆ. ಅನಿರೀಕ್ಷಿತವಾಗಿ ಹಣದ ಆಗಮನವಾಗಲಿದೆ. ಎಲ್ಲಾ ವ್ಯವಹಾರದಲ್ಲೂ ಯಶಸ್ಸು ಗಳಿಸಲಿದ್ದೀರಿ. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಕುಟುಂಬದಲ್ಲಿ ಶಾಂತಿ ನೆಲೆಸಿರುತ್ತದೆ. ಮಾನಸಿಕ ಸಂತೋಷ ಇರುತ್ತದೆ. ಒಟ್ಟಾರೆ ಗುರುವಿನ ಉದಯವು ಈ ರಾಶಿಯವರಿಗೆ ಸುಖ, ಸಂತೋಷ ನೀಡಲಿದೆ. ಗಂಭೀರ ಆರೋಗ್ಯ ಸಮಸ್ಯೆಗಳಿಂದ ಹೊರ ಬರುವಿರಿ.

ಸಿಂಹ ರಾಶಿ

ಗುರುವು ಸಿಂಹ ರಾಶಿಯ 5 ಮತ್ತು 8 ನೇ ಮನೆಗಳನ್ನು ಆಳುತ್ತಾನೆ. ಜೂನ್‌ 4ರ ನಂತರ ಗುರುವು ಸಿಂಹ ರಾಶಿಯ 10 ನೇ ಮನೆಯಲ್ಲಿ ಸಾಗುತ್ತಾನೆ. ಈ ಸಮಯದಲ್ಲಿ ಉದ್ಯೋಗ ಬದಲಾವಣೆ ಅಥವಾ ವರ್ಗಾವಣೆ ಸಾಧ್ಯತೆ ಇದೆ. ವೃತ್ತಿಯಲ್ಲಿ ಬೆಳೆಯಲು ಇದೊಂದು ಉತ್ತಮ ಅವಕಾಶ. ದೇವ ಗುರುವಿನ ಅನುಗ್ರಹದಿಂದ ಧನ, ಪಿತ್ರಾರ್ಜಿತ ಆಸ್ತಿ ದೊರೆಯುವ ನಿರೀಕ್ಷೆಯಿದೆ. ಕುಟುಂಬದ ಸದಸ್ಯರು ನಿಮಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಾರೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಸವಾಲುಗಳನ್ನು ಜಯಿಸಲು ಈ ಸಮಯ ಅನುಕೂಲಕರವಾಗಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ 7ನೇ ಮನೆಯಲ್ಲಿ ಗುರು ಉದಯಿಸುವುದರಿಂದ ಕೇಂದ್ರ ತ್ರಿಕೋಣ ರಾಜಯೋಗ ಉಂಟಾಗುತ್ತದೆ. ಈ ಜನರು ಎಲ್ಲಾ ರೀತಿಯ ಅನುಕೂಲಗಳು ದೊರೆಯುತ್ತದೆ. ಗುರು 2 ಮತ್ತು 5 ನೇ ಮನೆಗಳ ಅಧಿಪತಿಯಾಗಿದ್ದಾನೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರದಲ್ಲಿ ಬಹಳ ಪ್ರಗತಿ ಉಂಟಾಗುತ್ತದೆ. ವ್ಯವಹಾರದಲ್ಲಿ ಸಮಸ್ಯೆಗಳಿದ್ದರೆ ಎಲ್ಲವೂ ಪರಿಹಾರವಾಗಲಿದೆ. ಸಂಪತ್ತಿನ ಒಂದು ಭಾಗವನ್ನು ಲಾಭ ಗಳಿಸಲು ಕಂಪನಿಯಲ್ಲಿ ಹೂಡಿಕೆ ಮಾಡುವಿರಿ. ನಿಮ್ಮ ಪ್ರೇಮಿಯೊಂದಿಗೆ ಮದುವೆ ನಿಶ್ಚಯವಾಗುವ ಸಾಧ್ಯತೆ ಇದೆ.

ಪರಿಹಾರಗಳು

ಇತರ ರಾಶಿಗಳ ಜನರು ಗುರುವಿನ ಆಶೀರ್ವಾದ ಪಡೆಯಲು ಈ ಪರಿಹಾರಗಳನ್ನು ಕೈಗೊಳ್ಳಬಹುದು. ಬೃಹಸ್ಪತಿ ಬೀಜ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಬೇಕು. ವಿಷ್ಣುವನ್ನು ಪೂಜಿಸಿ ಮತ್ತು ಹಳದಿ ಸಿಹಿತಿಂಡಿಗಳನ್ನು ನೈವೇದ್ಯವನ್ನಾಗಿ ಅರ್ಪಿಸಿ. ಹಳದಿ ಬಟ್ಟೆಗಳನ್ನು ಹೆಚ್ಚಾಗಿ ಧರಿಸುವುದರಿಂದ ಜಾತಕದಲ್ಲಿ ಗುರುವಿನ ಸ್ಥಾನ ಬಲಗೊಳ್ಳುತ್ತದೆ . ಗುರುವಾರ ಉಪವಾಸ ಮಾಡಬೇಕು. ಮನೆಯಲ್ಲಿ ಗುರು ಯಂತ್ರವನ್ನು ಸ್ಥಾಪಿಸಿ ಪೂಜಿಸುವುದು ಒಳ್ಳೆಯದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ