Surya Shukra Yuti: ಸೂರ್ಯ-ಶುಕ್ರನ ಸಮಾಗಮ: ಈ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟವೋ ಅದೃಷ್ಟ
Jan 18, 2024 08:00 AM IST
ಸೂರ್ಯ-ಶುಕ್ರನ ಸಮಾಗಮ (ಪ್ರಾತಿನಿಧಿಕ ಚಿತ್ರ)
- Sun-Venus Conjunction: ಇನ್ನೇನು ಕೆಲವೇ ದಿನಗಳಲ್ಲಿ ಶುಕ್ರ ಹಾಗೂ ಸೂರ್ಯ ಸಮಾಗಮಗೊಳ್ಳಲಿದೆ. ಈ ಸಮಾಗಮವು ಕೆಲವು ರಾಶಿಯಲ್ಲಿ ಜನಿಸಿದವರ ಭಾಗ್ಯವನ್ನೇ ಬದಲಾಯಿಸಲಿದೆ. ಕೆಲವರಿಗೆ ಆರ್ಥಿಕ ಲಾಭ ಪ್ರಾಪ್ತಿಯಾದರೆ ಇನ್ನೂ ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ..
ನಮ್ಮ ಗ್ರಹಗತಿಗಳಲ್ಲಿ ಉಂಟಾಗುವ ಬದಲಾವಣೆಯು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ, ಒಂದು ಗ್ರಹವು ಒಂದು ನಿರ್ದಿಷ್ಟ ಸಮಯದ ಬಳಿಕ ಸ್ಥಾನಪಲ್ಲಟ ಮಾಡುತ್ತದೆ. ವಿವಿಧ ಗ್ರಹಗಳು ತಮ್ಮ ರಾಶಿಗೆ ತಕ್ಕಂತೆ ಸ್ಥಾನವನ್ನು ಬದಲಾಯಿಸುತ್ತಾ ಹೋಗುತ್ತವೆ. ಈ ಸಂದರ್ಭದಲ್ಲಿ ಕೆಲವು ರಾಶಿಗಳಿಗೆ ಗ್ರಹಗಳ ಸ್ಥಾನಪಲ್ಲಟವು ಶುಭ ಎನಿಸಿದರೆ ಇನ್ನೂ ಕೆಲವು ರಾಶಿಗಳಿಗೆ ಅಶುಭ ಪರಿಣಾಮವನ್ನುಂಟು ಮಾಡುತ್ತವೆ. ಶುಕ್ರ ಹಾಗೂ ಸೂರ್ಯನ ಸಂಯೋಜನೆಯನ್ನು ಪಡೆಯುವ ರಾಶಿಗಳು ಶುಭಲಾಭವನ್ನು ಪಡೆಯಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ.
ತಾಜಾ ಫೋಟೊಗಳು
ಇನ್ನೇನು ಕೆಲವೇ ದಿನಗಳಲ್ಲಿ ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ . ಇದಕ್ಕೂ ಮೊದಲೇ ಕುಂಭ ರಾಶಿಯನ್ನು ಸೂರ್ಯ ಪ್ರವೇಶಿಸಿರುತ್ತಾನೆ. ಸೂರ್ಯ ಹಾಗೂ ಶುಕ್ರನ ಸಂಯೋಗದಿಂದಾಗಿ ಕೆಲವು ರಾಶಿ ಚಕ್ರದವರಿಗೆ ಅದೃಷ್ಟ ಒಲಿದು ಬರಲಿದೆ
ಕುಂಭ : ಶುಕ್ರ ಹಾಗೂ ಸೂರ್ಯನ ಸಂಯೋಜನೆಯು ಈ ರಾಶಿಯಲ್ಲಿ ಜನಿಸಿದವರಿಗೆ ದೊಡ್ಡ ಮಟ್ಟದ ಪ್ರಯೋಜನವನ್ನು ನೀಡಲಿದೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ವ್ಯಕ್ತಿತ್ವ ಪ್ರಕಾಶಮಾನವಾಗಿ ಹೊಳೆಯಲಿದೆ. ನೀವು ಸಮಾಜದಲ್ಲಿ ಗೌರವವನ್ನು ಪಡೆಯಲಿದ್ದೀರಿ. ಹಣ ಸಂಪಾದಿಸುವ ಮಾರ್ಗವು ನಿಮಗೆ ಸುಲಭವಾಗಿ ದೊರಕಲಿದೆ. ವೈವಾಹಿಕ ಜೀವನದಲ್ಲಿ ಮೊದಲಿಗಿಂತಲೂ ಹೆಚ್ಚು ಉತ್ತಮವಾಗಿ ಇರಲಿದೆ.
ಮೇಷ : ಶುಕ್ರ ಹಾಗೂ ಸೂರ್ಯನ ಸಂಯೋಜನೆಯು ನಿಮಗೆ ದೊಡ್ಡ ಮಟ್ಟದಲ್ಲಿ ಧನಲಾಭವನ್ನು ತಂದುಕೊಡಲಿದೆ. ಹೊಸ ಆದಾಯದ ಮಾರ್ಗಗಳು ನಿಮ್ಮೆದುರು ತೆರೆದುಕೊಳ್ಳಲಿವೆ. ಆರ್ಥಿಕ ಸ್ಥಿತಿಯು ಹಿಂದೆಗಿಂತಲೂ ಉತ್ತಮವಾಗಿ ಇರಲಿದೆ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳಲಿದ್ದೀರಿ. ಹಣವನ್ನು ಹೂಡಿಕೆ ಮಾಡುವ ಮೂಲಕ ಅಧಿಕ ಲಾಭ ಗಳಿಸಲಿದ್ದೀರಿ.
ವೃಷಭ : ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸುಧಾರಣೆಯನ್ನು ಕಾಣಲಿದ್ದೀರಿ. ನಿಮ್ಮ ವೃತ್ತಿ ಜೀವನದಲ್ಲಿ ನಿಮಗೆ ಉತ್ತಮ ಪ್ರಗತಿ ಸಿಗಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಪ್ರಾಬಲ್ಯವನ್ನು ಪಡೆದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ದೊಡ್ಡ ಜವಾಬ್ದಾರಿಯೊಂದು ನಿಮ್ಮ ಹೆಗಲೇರಬಹುದು. ಉದ್ಯೋಗದಲ್ಲಿ ಬಡ್ತಿ ಕೂಡ ಸಿಗಲಿದೆ. ವಿದ್ಯಾರ್ಥಿಗಳಿಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.