Luxurious Zodiac Signs: ಈ ರಾಶಿಯಲ್ಲಿ ಜನಿಸಿದವರಿಗೆ ಐಷಾರಾಮಿ ಜೀವನವೇ ಇಷ್ಟ; ಸರಳ ಜೀವನ ಕಷ್ಟ ಕಷ್ಟ
Jan 29, 2024 08:00 AM IST
ರಾಶಿಚಕ್ರ
ನೀವು ಯಾವ ರಾಶಿ - ನಕ್ಷತ್ರದಲ್ಲಿ ಜನಿಸುತ್ತೀರೋ ಅದು ನಿಮ್ಮ ವ್ಯಕ್ತಿತ್ವವನ್ನು ಆಳುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನೀವು ಸರಳ ಜೀವನವನ್ನು ಇಷ್ಟಪಡುತ್ತೀರೋ ಅಥವಾ ಐಷಾರಾಮಿ ಜೀವನವನ್ನು ಬಯಸುತ್ತೀರೋ ಎಂಬುದೂ ಸಹ ನಿಮ್ಮ ರಾಶಿ ಚಕ್ರವೇ ನಿರ್ಧರಿಸುತ್ತದೆ. ಹಾಗಾದರೆ ಯಾವೆಲ್ಲ ರಾಶಿಗಳಿಗೆ ಐಷಾರಾಮಿ ಜೀವನ ಇಷ್ಟವೆನ್ನುವುದನ್ನು ತಿಳಿದುಕೊಳ್ಳೋಣ
ನಾವು ಯಾವ ರಾಶಿ - ನಕ್ಷತ್ರದಲ್ಲಿ ಜನಿಸುತ್ತೇವೆ ಎನ್ನುವುದು ನಮ್ಮ ಜೀವನವನ್ನೇ ನಿರ್ಧರಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಮ್ಮ ಜ್ಯೋತಿಷ್ಯವು ನಮ್ಮ ಗುಣಲಕ್ಷಣಗಳು. ವ್ಯಕ್ತಿತ್ವ, ಸಾಮರ್ಥ್ಯ, ನಮ್ಮ ಆಸೆ ಆಕಾಂಕ್ಷೆಗಳು ಇವೆಲ್ಲವನ್ನೂ ಹೇಳುತ್ತದೆ. ಅದೇ ರೀತಿ ನಮ್ಮ ಜ್ಯೋತಿಷ್ಯವು ನಮ್ಮ ಐಷಾರಾಮಿ ಜೀವನ ಹೇಗಿರುತ್ತದೆ..? ಯಾವ ರಾಶಿಯಲ್ಲಿ ಜನಿಸಿದವರಿಗೆ ಐಷಾರಾಮಿ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ..? ಇವೆಲ್ಲವನ್ನೂ ತಿಳಿಸುತ್ತದೆ. ಕೆಲವು ರಾಶಿಗಳು ಐಷಾರಾಮಿ ಜೀವನ್ನು ಹೆಚ್ಚು ಆಕರ್ಷಿಸುತ್ತದೆ. ಹೀಗಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ಐಷಾರಾಮಿ ಜೀವನದ ಬಗ್ಗೆ ಮೋಹ ಹೆಚ್ಚಿರುತ್ತದೆ. ಹಾಗಾದರೆ ಐಷಾರಾಮಿ ಜೀವನವನ್ನು ಇಷ್ಟಪಡುವ ಆ ರಾಶಿಚಕ್ರಗಳು ಯಾವುದು..? ಎಂಬುದನ್ನು ತಿಳಿದುಕೊಳ್ಳೋಣ .
ತಾಜಾ ಫೋಟೊಗಳು
ಮಕರ : ಮಕರ ರಾಶಿಯವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅದರ ಜೊತೆಯಲ್ಲಿ ಇವರಿಗೆ ಪಾರ್ಟಿ ಮಾಡುವುದು ಎಂದರೆ ತುಂಬಾನೇ ಇಷ್ಟ. ಇವರು ಮಹಾತ್ವಾಕಾಂಕ್ಷೆಗಳನ್ನು ಹೊಂದಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರಿಗೆ ಐಷಾರಾಮಿ ಜೀವನ ಹೆಚ್ಚು ಇಷ್ಟ. ಜೀವನದಲ್ಲಿ ಸಿಗುವ ಯಶಸ್ಸು ಹಾಗೂ ಸಮಾಜದಲ್ಲಿ ಸಿಗುವ ಸ್ಥಾನಮಾನ ಇವರಿಗೆ ತುಂಬಾ ಪ್ರಿಯವೆನಿಸುವ ವಿಷಯಗಳು. ಇವರು ಇನ್ನೊಬ್ಬರಿಂದ ಉಡುಗೊರೆಗಳನ್ನು ಸ್ವೀಕರಿಸುವುದನ್ನು ಇಷ್ಟಪಡುತ್ತಾರೆ. ಇವರು ದುಬಾರಿ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ.
ಸಿಂಹ : ಸಿಂಹ ರಾಶಿಯವರು ಸೂರ್ಯನ ಅಂಶವನ್ನು ಹೊಂದಿರುತ್ತಾರೆ. ಇವರಿಗೆ ಐಷಾರಾಮಿ ಜೀವನದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ . ಇವರಿಗೆ ಸುದ್ದಿಯಲ್ಲಿ ಇರುವುದು ತುಂಬಾನೇ ಇಷ್ಟ. ಎಲ್ಲರ ಬಾಯಲ್ಲಿ ಇವರ ಹೆಸರು ಬರುತ್ತಿದ್ದರೆ ಇವರಿಗದು ತುಂಬಾನೇ ಇಷ್ಟವೆನಿಸುತ್ತದೆ. ಪ್ರವಾಸದಲ್ಲಿ, ಮನರಂಜನೆಯಲ್ಲಿ , ಫ್ಯಾಶನ್ ಹೀಗೆ ಪ್ರತಿಯೊಂದರಲ್ಲಿಯೂ ಇವರಿಗೆ ಐಷಾರಾಮಿಯೇ ಬೇಕು. ತಮ್ಮ ಸುತ್ತಮತ್ತಲೂ ಎಲ್ಲವೂ ಐಷಾರಾಮಿಯೇ ಇರಬೇಕು ಎಂದು ಬಯಸುತ್ತಾರೆ.
ತುಲಾ : ಶುಕ್ರನಿಂದ ಆಳ್ವಿಕೆಯನ್ನು ಹೊಂದಿರುವವರು ತುಲಾ ರಾಶಿಯವರು. ಈ ಗ್ರಹವು ಪ್ರೀತಿ ಹಾಗೂ ಸೌಂದರ್ಯವನ್ನು ತುಂಬಿರುತ್ತದೆ. ತುಲಾ ರಾಶಿಯವರು ನೈಸರ್ಗಿಕ ಸೌಂದರ್ಯವನ್ನು ಹೆಚ್ಚು ಇಷ್ಟಪಡುತ್ತಾರೆ. ಕಲಾತ್ಮಕ ಕೆಲಸಗಳನ್ನು ಇವರು ಆಸಕ್ತಿಯಿಂದ ಮಾಡುತ್ತಾರೆ . ಇವರು ತಮ್ಮ ಮನೆಯನ್ನು ಐಷಾರಾಮಿಯನ್ನು ನಿರ್ವಹಿಸುವುದರಿಂದ ಹಿಡಿದು ಸಾಮಾಜಿಕ ಕಾರ್ಯಕ್ರಮಗಳವರೆಗೆ ಎಲ್ಲದರಲ್ಲೂ ಇವರು ಐಷಾರಾಮಿಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಸಣ್ಣ ಸಂತೋಷಕ್ಕೂ ಇವರು ದೊಡ್ಡ ಕಾರ್ಯಕ್ರಮ ಮಾಡಲು ಇಚ್ಛಿಸುತ್ತಾರೆ.
ವೃಷಭ : ಈ ರಾಶಿ ಕೂಡ ಶುಕ್ರನಿಂದಲೇ ಆಳಲ್ಪಡುತ್ತದೆ. ಈ ರಾಶಿಯವರು ಹಣವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಐಷಾರಾಮಿ ಸೌಕರ್ಯಗಳ ಮೂಲಕ ಅಚ್ಚುಕಟ್ಟಾಗಿ ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ಇವರು ಜೀವನದಲ್ಲಿ ಗುಣಮಟ್ಟದ ವಿಷಯಗಳಿಗೆ ಮಾತ್ರ ಬೆಲೆ ನೀಡುತ್ತಾರೆ. ಸೌಂದರ್ಯ ವರ್ಧಕಗಳಿಗೆ ಇವರು ಹೆಚ್ಚು ಖರ್ಚು ಮಾಡುತ್ತಾರೆ.
ಮೀನ : ಮೀನ ರಾಶಿಯಲ್ಲಿ ಜನಿಸಿದವರು ಐಷಾರಾಮಿ ಪರಿಸರವನ್ನೇ ಇಷ್ಟಪಡುತ್ತಾರೆ. ಇವರು ಕಲ್ಪನಾ ಲೋಕದಲ್ಲಿ ಬದುಕಲು ಹೆಚ್ಚು ಇಷ್ಟಪಡುತ್ತಾರೆ. ಸದಾ ಕಲ್ಪನೆಯಲ್ಲಿಯೇ ಇರುತ್ತಾರೆ. ವಾಸ್ತವದಲ್ಲಿ ಇರಲು ಇವರು ಇಷ್ಟಪಡುವುದಿಲ್ಲ . ಹೊಸ ಹೊಸ ಸ್ಥಳಗಳಿಗೆ ಪ್ರಯಾಣಿಸುವುದು ಇವರಿಗೆ ಕಷ್ಟ. ಸಾಮಾನ್ಯ ಜೀವನ ಇವರಿಗೆ ಇಷ್ಟವಾಗುವುದಿಲ್ಲ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.