Mercury Transit: 2024 ರಲ್ಲಿ ಬುಧ 16 ಬಾರಿ ಪಥ ಬದಲಾವಣೆ; ಈ 3 ರಾಶಿಯವರಿಗೆ ಹೆಚ್ಚು ಲಾಭಗಳು
Dec 20, 2023 01:32 PM IST
2024ರಲ್ಲಿ ಬುಧನು 16 ಬಾರಿ ಪಥ ಬದಲಾವಣೆ ಮಾಡಲಿದ್ದಾನೆ. ಇದರಿಂದ 3 ರಾಶಿಯವರಿಗೆ ಭಾರಿ ಲಾಭಗಳಿವೆ.
2024ರಲ್ಲಿ ಬುಧ 16 ಬಾರಿ ರಾಶಿಗಳನ್ನು ಬದಲಾಯಿಸುತ್ತಾನೆ. ಇದರಿಂದ ಕೆಲ ರಾಶಿಯವರಿಗೆ ಭಾರಿ ಲಾಭಗಳಿದ್ದು, ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಲಿದ್ದಾರೆ.
ಗ್ರಹಗಳ ರಾಜ ಸೂರ್ಯನಾದರೆ ಬುಧ ಗ್ರಹಗಳಿಗೆ ರಾಜಕುಮಾರ. ಹೊಸ ವರ್ಷ ಅಂದರೆ 2024ರಲ್ಲಿ ಬುಧನು ಒಂದಲ್ಲ, ಎರಡಲ್ಲ ಬರೋಬ್ಬರಿ 16 ಬಾರಿ ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ. ಚಂದ್ರನ ನಂತರ ಅತ್ಯಂತ ಚಿಕ್ಕದಾದ ಹಾಗೂ ವೇಗವಾಗಿ ಚಲಿಸುವ ಗ್ರಹವೆಂದರೆ ಅದು ಬುಧ. ಗ್ರಹಗಳ ಬದಲಾವಣೆ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಒಬ್ಬರಿಗೆ ಒಳ್ಳೆಯ ಫಲಿತಾಂಶಗಳು ಇದ್ದರೆ ಮತ್ತೊಬ್ಬರಿ ನಕಾರಾತ್ಮಕ ಫಲಿತಾಂಶಗಳು ಇರುತ್ತವೆ.
ತಾಜಾ ಫೋಟೊಗಳು
ಬುಧ ಸಂಕ್ರಮಣವು 12 ರಾಶಿಯವರ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಈ ಗ್ರಹವು ಮಿಥುನ ಮತ್ತು ಕನ್ಯಾರಾಶಿಯ ಅಧಿಪತಿಯಾಗಿದೆ. ಬುಧ ಗ್ರಹ ಬುದ್ಧಿವಂತಿಕೆ, ಶಿಕ್ಷಣ, ವ್ಯವಹಾರದ, ವ್ಯಾಪಾರದ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಹೊಸ ವರ್ಷದಲ್ಲಿ ಬುಧವು 16 ಬಾರಿ ಸ್ಥಾನವನ್ನು ಬದಲಾಯಿಸಲಿದೆ. ಜನವರಿ 7 ರಂದು ಅವರು ಬುಧ ಧನು ರಾಶಿಗೆ ಪ್ರವೇಶಿಸುತ್ತಾನೆ. ಫೆಬ್ರವರಿ 1 ರಂದು ಮಕರ ರಾಶಿಗೆ ಹೋಗುತ್ತಾನೆ. ಫೆಬ್ರವರಿ 20 ರಂದು ಕುಂಭ ರಾಶಿಗೆ ಬರುತ್ತಾನೆ. ಮಾರ್ಚ್ 7 ರಂದು ಮೀನ ರಾಶಿಗೆ, ಮಾರ್ಚ್ 26 ರಂದು ಮೇಷ ರಾಶಿಗೆ ಹೀಗೆ 16 ಬಾರಿ ಪಥವನ್ನು ಬದಲಾಯಿಸುತ್ತಾನೆ.
ಏಪ್ರಿಲ್ 2 ರಂದು ಹಿಮ್ಮುಖವಾಗಿ ಬುಧ ಚಲಿಸುತ್ತಾನೆ. ಏಪ್ರಿಲ್ 9 ರಂದು ಮತ್ತೆ ಮೀನ ರಾಶಿಗೆ ಚಲಿಸುತ್ತಾನೆ, ಏಪ್ರಿಲ್ 25 ರಂದು ಮತ್ತೆ ಮುಂದೆ ಸಾಗುತ್ತಾನೆ. ಮೇ 10 ರಂದು ಮೇಷ ರಾಶಿಗೆ, ಮೇ 31 ರಂದು ವೃಷಭ ರಾಶಿಗೆ, ಜೂನ್ 14 ರಂದು ಮಿಥುನ ರಾಶಿಗೆ, ಜೂನ್ 29 ರಂದು ಕರ್ಕಾಟಕ ರಾಶಿಗೆ ಹೋಗುತ್ತಾನೆ. ಜುಲೈ 19 ರಂದು ಬುಧ ಗ್ರಹ ಸಿಂಹ ರಾಶಿಗೆ ಬರುತ್ತದೆ. ಆಗಸ್ಟ್ 5 ರಂದು ಹಿಮ್ಮುಖವಾಗಿ ಚಲಿಸುತ್ತಾನೆ. ಇದು ಪ್ರಗತಿಪರವಾಗಿ ಬದಲಾಗುತ್ತದೆ.
2024ರ ಆಗಸ್ಟ್ 22 ರಂದು ಕರ್ಕಾಟಕ್ಕೆ ಹೋಗುತ್ತಾನೆ. ಸೆಪ್ಟೆಂಬರ್ 4 ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಸೆಪ್ಟೆಂಬರ್ 23 ರಂದು ಕನ್ಯಾರಾಶಿಗೆ ಆಗಮಿಸುತ್ತಾನೆ. ಅಕ್ಟೋಬರ್ 10 ರಂದು ತಲಾ ರಾಶಿಗೆ, 20 ರಂದು ವೃಶ್ಚಿಕರಾಶಿಗೆ ಬರುತ್ತಾನೆ. ನವೆಂಬರ್ 26 ರಂದು ಮತ್ತೆ ಹಿಮ್ಮುಖವಾಗಿ ಚಲಿಸಿ ಡಿಸೆಂಬರ್ 16 ರಿಂದ ಮತ್ತೆ ಅದೇ ಹಾದಿಯಲ್ಲಿ ಸಾಗಲು ಆರಂಭಿಸುತ್ತಾನೆ. ಬುಧ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುವಾಗ ಈ ಕೆಳಗೆ ನೀಡಿರುವ 3 ರಾಶಿಯವರು ಜೀವನದಲ್ಲಿ ಬಾರಿ ಬದಲಾವಣೆಗಳನ್ನು ಕಾಣಲಿದ್ದಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ. ಇದು ವರ್ಷದುದ್ದಕ್ಕೂ ಅನೇಕ ಚಿಹ್ನೆಗಳ ಮೂಲಕ ಹಾದುಹೋಗುತ್ತಾನೆ. ಆದರೆ ಕನ್ಯಾ ರಾಶಿಯ ಮೇಲೆ ಬುಧನ ಕರುಣೆ ಯಾವಾಗಲೂ ಮಂಗಳಕರವಾಗಿರುತ್ತದೆ. ಬುಧ ಸಂಚಾರದಿಂದ ಕನ್ಯಾ ರಾಶಿಯವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲಿದ್ದಾರೆ. ಆರೋಗ್ಯಕರವಾಗಿರುತ್ತಾರೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳಲಿದ್ದಾರೆ.
ವೃಶ್ಚಿಕ ರಾಶಿ
ಬುಧ ಸಂಕ್ರಮಣದಿಂದ ವೃಶ್ಚಿಕ ರಾಶಿಯವರಿಗೆ ಭಾರಿ ಲಾಭವಿದೆ. ವ್ಯಾಪಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಬಂದ ಲಾಭದಲ್ಲಿ ಒಂದಷ್ಟು ಖರ್ಚು ಮಾಡುತ್ತೀರಿ. ಬುಧನ ಅನುಗ್ರಹದಲ್ಲಿ ಕೆಲವು ವಿಷಯಗಳು ಮುನ್ನೆಲೆಗೆ ಬರುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಅವಕಾಶ ಹೆಚ್ಚಿದೆ. ಇದ್ದಕ್ಕಿದ್ದಂತೆ ಆರ್ಥಿಕ ಲಾಭ ಹೆಚ್ಚಾಗುತ್ತದೆ.
ಮಕರ ರಾಶಿ
ಈ ರಾಶಿಯವರ ಮೇಲೂ ಬುಧನ ಆಶೀರ್ವಾದವು ಹೆಚ್ಚಾಗಿದ್ದು, ಅದು ಮಂಗಳಕರವಾಗಿರುತ್ತದೆ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆದಾಯದಲ್ಲಿ ಹೆಚ್ಚಳ ಕಾರಣುವಿರಿ.