ಈ ದಿನಾಂಕದಲ್ಲಿ ಜನಿಸಿದ ವ್ಯಕ್ತಿಗಳಿಗೆ ಫೆಬ್ರವರಿ ತಂದ ಶುಭ ಫಲ; ಸಂಖ್ಯಾಶಾಸ್ತ್ರದಲ್ಲೂ ಭವಿಷ್ಯ ತಿಳಿಯಿರಿ
Feb 01, 2024 07:49 PM IST
ಸಂಖ್ಯಾಶಾಸ್ತ್ರದ ಮೂಲಕ ಫೆಬ್ರವರಿ ತಿಂಗಳ ನಿಮ್ಮ ಭವಿಷ್ಯವನ್ನು ತಿಳಿಯಿರಿ
ಸಂಖ್ಯಾಶಾಸ್ತ್ರದ ಪ್ರಕಾರ ಯಾವ ದಿನಾಂಕದಲ್ಲಿ ಜನಿಸಿದವರಿಗೆ ಹೆಚ್ಚಿನ ಲಾಭಗಳಿವೆ. ಫೆಬ್ರವರಿ ತಿಂಗಳು ಯಾರಿಗೆ ಉತ್ತಮ ಫಲಗಳನ್ನು ನೀಡುತ್ತಿದೆ ಅನ್ನೋದನ್ನು ತಿಳಿಯೋಣ
ಜ್ಯೋತಿಷ್ಯದಂತೆ ಸಂಖ್ಯಾಶಾಸ್ತ್ರವು ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ತಿಳಿಸುತ್ತದೆ. ಪ್ರತಿ ಹೆಸರಿಗೆ ರಾಶಿಚಕ್ರಗಳು ಇರುವಂತೆಯೇ ಸಂಖ್ಯಾಶಾಸ್ತ್ರದಲ್ಲಿ ಪ್ರತಿ ಸಂಖ್ಯೆಯ ಅನುಗುಣವಾಗಿ ಭವಿಷ್ಯವನ್ನು ಹೇಳಲಾಗುತ್ತದೆ.
ತಾಜಾ ಫೋಟೊಗಳು
ನಿಮ್ಮ ಸಂಖ್ಯೆಯನ್ನು ಕಂಡು ಹಿಡಿಯಲು ನಿಮ್ಮ ಜನ್ಮ ದಿನಾಂಕ, ತಿಂಗಳು ಹಾಗೂ ವರ್ಷವನ್ನು ಯೂನಿಟ್ ಅಂಕೆಗೆ ಸೇರಿಸಿ ಆ ನಂತರ ಬರುವ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆ. ಉದಾಹರಣೆಗೆ 8ನೇ ತಾರೀಖು, 6ನೇ ತಿಂಗಳು ಮತ್ತು 1990 ನೇ ಇಸವಿಯಲ್ಲಿ ಜನಿಸಿದವರ ರಾಡಿಕ್ಸ್ 6 ಆಗಿರುತ್ತದೆ. (8+6+1+9+9+0= 33 ನಂತರ 3+3=6)
ಇದನ್ನೂ ಓದಿ: ಗಜಲಕ್ಷ್ಮಿ ರಾಜಯೋಗದಿಂದ ಈ 3 ರಾಶಿಯವರಿಗೆ ಭಾರಿ ಧನಲಾಭ
ಫೆಬ್ರವರಿ ತಿಂಗಳು ಯಾರಿಗೆ ಹೆಚ್ಚು ಶುಭ ಫಲಗಳಿವೆ?
ಪದಾಂಕ (Radix) - 3
3 ಸಂಖ್ಯೆಯನ್ನು ಹೊಂದಿದವರಿಗೆ ಫೆಬ್ರವರಿಯಲ್ಲಿ ಗೌರವ ಮತ್ತು ಸ್ಥಾನ ಮಾನ ಹೆಚ್ಚಾಗುತ್ತದೆ. ನಿಮ್ಮ ಸಾಂಗತಿಯೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಕೆಲಸದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿವೆ. ಅದೃಷ್ಟ ನಿಮ್ಮ ಕಡೆಗೆ ಇರುತ್ತದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಉತ್ತಮ ಸಮಯವಾಗಿದೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ
ಪದಾಂಕ (Radix) - 4
ಉದ್ಯೋಗ ಹುಡುಕುತ್ತಿರುವವರು ಸಿಹಿ ಸುದ್ದಿ ಕೇಳುತ್ತೀರಿ. ಈಗಾಗಲೇ ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಯಾವುದೇ ಹೊಸ ಕೆಲಸ ಆರಂಭಿಸಲು ಈ ತಿಂಗಳು ಉತ್ತಮವಾಗಿರುತ್ತದೆ. ಉದ್ಯೋಗ, ವ್ಯವಹಾರಕ್ಕೆ ಫೆಬ್ರವರಿ ಉತ್ತಮ ತಿಂಗಳಾಗಿದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಪದಾಂಕ (Radix) - 6
ರಾಡಿಕ್ಸ್ 6 ಬರುವವರಿಗೆ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ಸಾಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೂಡಿಕೆಯಿಂದ ಲಾಭ ಗಳಿಸುತ್ತೀರಿ. ಉದ್ಯೋಗ ಹುಡುಕಾಟದಲ್ಲಿರುವವರಿಗೆ ಶೀಘ್ರ ಉದ್ಯೋಗ ದೊರಕಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಹಣಕಾಸಿನ ಲಾಭ ಹೆಚ್ಚಿರುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. (This copy first appeared in Hindustan Times Kannada website. To read more like this please logon to kannada.hindustantime.com).