logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರುಗಳಿಗೂ ಇದೆ ಪ್ರಾಮುಖ್ಯತೆ; ನಿಮ್ಮ ಸ್ವಭಾವವನ್ನು ತಿಳಿಸುವ ಉಗುರಿನ ಆಕಾರ

ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರುಗಳಿಗೂ ಇದೆ ಪ್ರಾಮುಖ್ಯತೆ; ನಿಮ್ಮ ಸ್ವಭಾವವನ್ನು ತಿಳಿಸುವ ಉಗುರಿನ ಆಕಾರ

Rakshitha Sowmya HT Kannada

Jun 10, 2024 07:00 AM IST

google News

ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರುಗಳಿಗೂ ಇದೆ ಪ್ರಾಮುಖ್ಯತೆ; ನಿಮ್ಮ ಸ್ವಭಾವವನ್ನು ತಿಳಿಸುವ ಉಗುರಿನ ಆಕಾರ

  • ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರಿಗೂ ಬಹಳ ಪ್ರಾಮುಖ್ಯತೆ ಇದೆ. ಶನಿಯನ್ನು ಉಗುರಿನ ಅಧಿಪತಿ ಎಂದು ಪರಿಗಣಿಸಲಾಗಿದೆ. ಹಾಗೇ ಉಗುರುಗಳು ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಶುಕ್ರ, ಸೌಂದರ್ಯದ ದೇವತೆಯಾಗಿದ್ದಾನೆ. ಉಗುರಿನ ಆಕಾರ ನೋಡಿ ಆ ವ್ಯಕ್ತಿಗಳ ಸ್ವಭಾವ ಹೇಗೆ ಎಂದು ಗುರುತಿಸಿಬಹುದು. 

ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರುಗಳಿಗೂ ಇದೆ ಪ್ರಾಮುಖ್ಯತೆ; ನಿಮ್ಮ ಸ್ವಭಾವವನ್ನು ತಿಳಿಸುವ ಉಗುರಿನ ಆಕಾರ
ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರುಗಳಿಗೂ ಇದೆ ಪ್ರಾಮುಖ್ಯತೆ; ನಿಮ್ಮ ಸ್ವಭಾವವನ್ನು ತಿಳಿಸುವ ಉಗುರಿನ ಆಕಾರ (PC: Unsplash)

ಊಟ ಮಾಡುವಾಗ ಕೈ ಶುದ್ಧವಾಗಿರಬೇಕು ಎಂಬ ಕಾರಣಕ್ಕೆ ಕೈ ತೊಳೆದುಕೊಳ್ಳುತ್ತೇವೆ. ಫ್ಯಾಷನ್‌ಗಾಗಿ ಉಗುರುಗಳನ್ನು ಬೆಳೆಸಬೇಕು ಎಂಬ ಆಸೆ ಆದರೂ ಆರೋಗ್ಯದ ದೃಷ್ಟಿಯಿಂದ ಬಹಳ ಜನರು ಉದ್ದ ಉಗುರು ಬಿಡುವುದಿಲ್ಲ. ಉಗುರುಗಳ ನಡುವೆ ಕುಳಿತ ಕೊಳೆ, ಆಹಾರದ ಮೂಲಕ ದೇಹ ಸೇರಿ ಅದರಿಂದ ಸಮಸ್ಯೆ ಆಗುತ್ತದೆ, ನಮ್ಮ ಚರ್ಮಕ್ಕೆ ಅದರಿಂದ ಹಾನಿಯಾಗಬಹುದು ಅನ್ನೋದು ಇದಕ್ಕೆ ಕಾರಣ. ಆದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಕೂಡಾ ಉಗುರುಗಳಿಗೆ ಬಹಳ ಪ್ರಾಮುಖ್ಯತೆ ಇದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಉಗುರುಗಳ ಅಧಿಪತಿ ಶನಿ

ಹಿರಣ್ಯಕಶಿಪುವಿನ ಅಂತ್ಯವೂ ಹೇಗಾಯಿತು ಎಂದು ಎಲ್ಲರಿಗೂ ತಿಳಿದಿದೆ. ಬ್ರಹ್ಮನಿಂದ ವರ ಪಡೆದ ಹಿರಣ್ಯಕಶಿಪು ನೈಜವಾದ ಸಾವಿನಿಂದ ದೂರವಾಗುತ್ತಾನೆ. ಆದರೆ ಪ್ರಹ್ಲಾದನ ಭಕ್ತಿಗೆ ಒಲಿದ ಭಗವಾನ್ ವಿಷ್ಣುವು ನರಸಿಂಹ ಸ್ವಾಮಿಯ ರೂಪದಲ್ಲಿ ಒಲಿಯುತ್ತಾನೆ. ಯಾವುದೇ ಆಯುಧವನ್ನು ಬಳಸದ ಶ್ರೀನರಸಿಂಹ ಸ್ವಾಮಿಯು ತನ್ನ ಉಗುರಿನಿಂದ ಅವನ ಅವಸಾನಕ್ಕೆ ಕಾರಣನಾಗುತ್ತಾನೆ. ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ಆಯುಧ ಎಂದರೆ ಕಬ್ಬಿಣ ಅಥವಾ ಇತರ ಲೋಹಗಳನ್ನು ಪರಿಗಣಿಸುತ್ತೇವೆ. ಆದ್ದರಿಂದ ಉಗುರುಗಳ ಅಧಿಪತಿಯಾಗಿ ಶನಿ ಎಂದು ಪರಿಗಣಿಸಬಹುದು.

ನಮ್ಮ ನಿತ್ಯಜೀವನದಲ್ಲಿ ಉಗುರುಗಳನ್ನು ಸ್ವಚ್ಛಗೊಳಿಸುವುದು ಅತಿ ಮುಖ್ಯವಾಗುತ್ತದೆ. ಇದು ಸಹ ಒಂದು ರೀತಿಯ ಶನಿ ಶಾಂತಿ ಎಂದು ಹೇಳಬಹುದು. ನಮ್ಮ ಉಗುರುಗಳು ಸೌಂದರ್ಯವನ್ನೂ ಸೂಚಿಸುತ್ತದೆ. ಸೌಂದರ್ಯಕ್ಕೆ ಅಧಿಪತಿ ಶುಕ್ರನಾಗುತ್ತಾನೆ. ಆದ್ದರಿಂದ ಶನಿಗ್ರಹದ ಜೊತೆಯಲ್ಲಿ ಶುಕ್ರ ಗ್ರಹವನ್ನೂ ಸಹ ಉಗುರುಗಳ ವಿಚಾರದಲ್ಲಿ ಪರಿಗಣಿಸಬೇಕು. ಜನ್ಮಕುಂಡಲಿಯಲ್ಲಿ ಶುಕ್ರ ಮತ್ತು ಶನಿಗ್ರಹಗಳು ಸಶಕ್ತರಾದಲ್ಲಿ ಉಗುರುಗಳು ಅಂದವಾಗಿರುತ್ತವೆ. ಈ ಕಾರಣಗಳಿಂದಾಗಿ ನಮ್ಮ ನಿತ್ಯ ಜೀವನದಲ್ಲಿ ನಮ್ಮ ಕೈ ಅಥವಾ ಕಾಲಿನ ಉಗುರುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉಗುರುಗಳು ಉದ್ದವಾಗಿ ಮತ್ತು ಅಗಲವಾಗಿ ಇದ್ದರೆ ಕುಂಡಲಿಯಲ್ಲಿ ಶನಿ ಮತ್ತು ಚಂದ್ರರು ಸುಸ್ಥಿತಿಯಲ್ಲಿ ಇರುತ್ತಾರೆ. ಇಂತಹವರು ಸಾಮಾನ್ಯವಾಗಿ ತಮ್ಮ ಮನಸ್ಸಿಗೆ ಇಷ್ಟವೆನಿಸುವ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುತ್ತಾರೆ. ಬೇರೆಯವರಿಂದ ಯಾವುದೇ ನಿರೀಕ್ಷೆ ಇರುವುದಿಲ್ಲ. ಆದರೆ ಇವರಿಗೆ ದಿಢೀರನೆ ಜನಪ್ರಿಯತೆ ಗಳಿಸುವ ಆಸೆ ಇರುತ್ತದೆ. ಸಣ್ಣಪುಟ್ಟ ಕೆಲಸ ಮಾಡಿದರೂ ಹೆಚ್ಚು ಹೊತ್ತು ವಿಶ್ರಾಂತಿ ಪಡೆಯುವ ಜನರಾಗಿರುತ್ತಾರೆ.

ಯಾವುದೇ ಕೆಲಸ ಒಪ್ಪಿದ್ದರೂ ಬುದ್ಧಿವಂತಿಕೆಯಿಂದ ಸಾಧಿಸುತ್ತಾರೆ

ಆಹಾರ ಸೇವನೆಯಲ್ಲಿ ಇತಿಮಿತಿ ಇಲ್ಲದೆ ಹೋದಲ್ಲಿ ಮತ್ತು ದೈಹಿಕ ವ್ಯಾಯಾಮ ಇಲ್ಲದೆ ಹೋದಲ್ಲಿ ದೇಹ ಭಾರವೆನಿಸುತ್ತದೆ. ಸಾಮಾನ್ಯವಾಗಿ ಇವರಿಗೆ ತಲೆನೋವು ಇರುತ್ತದೆ. ಯಾವುದೇ ವಿಚಾರಗಳಾದರೂ ಅದರ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡುತ್ತಾರೆ. ಆರಂಭದಿಂದಲೇ ಆಸಕ್ತಿಯಿಂದ ಕೆಲಸ ಆರಂಭಿಸುವ ಕಾರಣ ಯಶಸ್ಸಿಗೆ ಕೊರತೆ ಇರುವುದಿಲ್ಲ. ಕಷ್ಟವೆನಿಸಿದರೂ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಬುದ್ಧಿವಂತಿಕೆಯಿಂದ ಯಾವುದೇ ಸಂದರ್ಭವನ್ನು ಬಳಸಿಕೊಂಡು ತಮ್ಮ ಕೆಲಸಗಳನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ತಮ್ಮ ಕಾರ್ಯ ಸಾಧನೆಗಾಗಿ ಬೇರೆಯವರಿಗೆ ತೊಂದರೆ ನೀಡುವುದಿಲ್ಲ. ಇವರ ಕಾದು ನೋಡುವ ಬುದ್ಧಿ ವರವಾಗಿ ಪರಿಣಮಿಸುತ್ತದೆ. ಯಾರೊಂದಿಗೂ ವೈರತ್ವ ಸಾಧಿಸದೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವರು.

ಉಗುರುಗಳು ಉದ್ದವಾಗಿದ್ದರೂ ಸಣ್ಣ ಪ್ರಮಾಣದಲ್ಲಿ ಇರುತ್ತವೆ. ಅಂದರೆ ಉಗುರುಗಳು ಅಕ್ಕಪಕ್ಕ ಚರ್ಮಗಳಿಗೆ ಅಂಟಿಕೊಂಡಂತೆ ಇರುತ್ತವೆ. ಅವರ ಜಾತಕದಲ್ಲಿ ಲಗ್ನಾಧಿಪತಿ ಮತ್ತು ಚಂದ್ರ ಗ್ರಹಗಳು ಉತ್ತಮ ಸ್ಥಾನದಲ್ಲಿ ಇರುತ್ತವೆ. ಗುರುವು ಸಹ ಶುಭನಾಗಿರುತ್ತಾನೆ. ಸಾಮಾನ್ಯವಾಗಿ ಇವರುಗಳು ಯಾರನ್ನೂ ನಂಬುವುದಿಲ್ಲ. ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬಲ್ಲರು. ಆತುರದ ಸ್ವಭಾವವಿಲ್ಲದ ಕಾರಣ ಸರಿಯಾದ ಹಾದಿಯಲ್ಲಿ ನಡೆಯುತ್ತಾರೆ. ಕುಟುಂಬದ ಸದಸ್ಯರ ಬಗ್ಗೆ ಉತ್ತಮ ಒಲವು ತುಂಬಿರುತ್ತದೆ. ಬೇರೆಯವರು ಮಾಡುವ ತಪ್ಪುಗಳನ್ನು ಮರೆತು ಸ್ನೇಹ ಪ್ರೀತಿ ಯೊಂದಿಗೆ ಬಾಳುತ್ತಾರೆ. ಇವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಬೇರೊಬ್ಬರ ವಿಚಾರಗಳಲ್ಲಿ ತಲೆ ಹಾಕದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬ ಹಾದಿಯಲ್ಲಿ ನಡೆಯುತ್ತಾರೆ.

ನಂಬಿದವರನ್ನು ಕೈ ಬಿಡುವುದಿಲ್ಲ

ತಾವಾಗಿಯೇ ಯಾರಿಗೂ ಸಹಾಯ ಮಾಡುವುದಿಲ್ಲ. ಆದರೆ ಇವರನ್ನು ನಂಬಿ ಬಂದವರಿಗೆ ಮೋಸ ಮಾಡುವುದಿಲ್ಲ. ಜನರಿಗೆ ಅನುಕೂಲವಾಗುವಂತಹ ಸಂಘ ಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಮುಖ್ಯವಾಗಿ ವಯೋವೃದ್ದರ ಕಷ್ಟಗಳಿಗೆ ಇವರು ಪರಿಹಾರ ಕಂಡುಹಿಡಿಯುತ್ತಾರೆ. ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ಇರುತ್ತದೆ. ತಮ್ಮ ಮಕ್ಕಳನ್ನು ಸಹ ಸಮಾಜಕ್ಕೆ ಸಹಾಯ ಮಾಡುವ ರೀತಿಯಲ್ಲಿ ಬೆಳೆಸುತ್ತಾರೆ. ತಮ್ಮ ಬಳಿ ಎಷ್ಟೇ ಹಣವಿದ್ದರೂ ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ