logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Taurus Astrology: ನಿಧಾನವಾದ್ರೂ ಅದೃಷ್ಟ ಕೈ ಹಿಡಿಯತ್ತೆ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ: 2024ರಲ್ಲಿ ಹೇಗಿರಲಿದೆ ವೃಷಭ ರಾಶಿಯ ಭವಿಷ್ಯ

Taurus Astrology: ನಿಧಾನವಾದ್ರೂ ಅದೃಷ್ಟ ಕೈ ಹಿಡಿಯತ್ತೆ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ: 2024ರಲ್ಲಿ ಹೇಗಿರಲಿದೆ ವೃಷಭ ರಾಶಿಯ ಭವಿಷ್ಯ

HT Kannada Desk HT Kannada

Dec 20, 2023 02:55 PM IST

google News

ವೃಷಭ ರಾಶಿಯ ವರ್ಷ ಭವಿಷ್ಯ

    • Taurus Horoscope in 2024: ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ? 2024ರ ಮೇಷ ರಾಶಿಯ ವರ್ಷ ಭವಿಷ್ಯ ಹೀಗಿದೆ.
ವೃಷಭ ರಾಶಿಯ ವರ್ಷ ಭವಿಷ್ಯ
ವೃಷಭ ರಾಶಿಯ ವರ್ಷ ಭವಿಷ್ಯ

2024ರ ವೃಷಭ ರಾಶಿ ವರ್ಷ ಭವಿಷ್ಯ: ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕ್ಷಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ತಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. 2024 ವರ್ಷ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರಸ್ತುತಪಡಿಸುತ್ತಿದ್ದಾರೆ. ಮೇಷ ರಾಶಿಯವರ ವರ್ಷ ಭವಿಷ್ಯ ಹೀಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ವೃಷಭ ರಾಶಿಯವರ ಮನಸ್ಸನ್ನು ಬದಲಿಸಲು ಸಾಧ್ಯವಾಗದು. ಉಪಯುಕ್ತ ವಿಚಾರಗಳಿಗೆ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆದಾಯದಲ್ಲಿ ತೊಂದರೆ ಕಾಣದು. ಆದರೆ ಉತ್ತಮ ಆದಾಯವಿದ್ದ ವೇಳೆ ಹಣವನ್ನು ಉಳಿಸಲು ಪ್ರಯತ್ನಿಸಬೇಕು. ಕುಟುಂಬದಲ್ಲಿನ ಮಂಗಳ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುವ ಕಾರಣ ಯಾವುದೇ ತೊಂದರೆಗಳು ಎದುರಾಗದು.

ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ಸಿನ ಸರಮಾಲೆಯೇ ದೊರೆಯುತ್ತದೆ. ಜೀವನದಲ್ಲಿ ಸತತವಾದ ಬದಲಾವಣೆಗಳು ಕಂಡುಬರುತ್ತದೆ. ಕೆಲಸ ಕಾರ್ಯಗಳಲ್ಲಿ ನಿಧಾನಗತಿ ಕಂಡು ಬರುತ್ತದೆ. ಆದರೆ ಅದೃಷ್ಟ ಎಂಬುದು ಸದಾ ಕಾಲ ನಿಮ್ಮಲ್ಲಿರುತ್ತದೆ. ಮನದಲ್ಲಿ ಸ್ವಾರ್ಥದ ಬುದ್ಧಿಯು ಕೆಲವೊಮ್ಮೆ ಕೆಲಸ ನಿರ್ವಹಿಸುತ್ತದೆ. ನಷ್ಟಕ್ಕೆ ಒಳಗಾಗದೆ ಸುಖದಿಂದ ಜೀವನ ನಡೆಸಲು ಬಯಸುವಿರಿ. ವೃಷಭ ರಾಶಿಯ ವಿಶೇಷ ಎಂದರೆ ಪ್ರತಿ ತಿಂಗಳು ಬದಲಾವಣೆಗಳು ಉಂಟಾಗುತ್ತವೆ. ಪ್ರತಿಯೊಂದು ಬದಲಾವಣೆಗಳು ನಿಮ್ಮಲ್ಲಿರುವ ಬುದ್ಧಿಶಕ್ತಿ ಮತ್ತು ನಿರ್ಣಯವನ್ನು ಅವಲಂಬಿಸುತ್ತದೆ. ಆಗಲೇಬೇಕಾದ ಕೆಲಸ ಕಾರ್ಯಗಳಲ್ಲಿ ಸ್ನೇಹಿತರ ಸ್ನೇಹಿತರ ಸಹಾಯ ಸಹಕಾರವನ್ನು ಪಡೆದುಕೊಳ್ಳಿ. ಏಕಾಂಗಿಯಾಗಿ ಕೆಲಸ ಕಾರ್ಯದಲ್ಲಿ ತೊಡಗುವ ನಿರ್ಧಾರ ಮಾಡಿದರೆ ಸಾಧ್ಯವಾಗುವುದಿಲ್ಲ.

ಉದ್ಯೋಗದಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತವೆ. ತಡವಾದರೂ ಅನುಕೂಲಕರ ವಾತಾವರಣದಲ್ಲಿ ಇರುವಿರಿ. ವಿದೇಶದಲ್ಲಿ ಉದ್ಯೋಗ ಗಳಿಸುವ ಸಾಧ್ಯತೆಗಳು ಏಪ್ರಿಲ್ ನಂತರ ಉಂಟಾಗಲಿವೆ. ಮಾನಸಿಕ ಒತ್ತಡವಿದ್ದರೂ ಕೆಲಸ ಕಾರ್ಯಗಳಲ್ಲಿ ಹಿಂದುಳಿಯುವುದಿಲ್ಲ. ನಿಗದಿತ ವೇಳೆಯಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟ ಕೆಲಸವನ್ನು ಸಹ ಮಾಡುವಿರಿ. ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ಉತ್ತಮ ಸ್ಥಾನಮಾನ ಗಳಿಸುವಿರಿ.

ಒಮ್ಮೆ ಆಡಿದ ಮಾತುಗಳನ್ನು ಅನಾವಶ್ಯಕವಾಗಿ ಬದಲಿಸದಿರಿ. ಸಾಧ್ಯವಾದಷ್ಟು ಮಾತಿನಿಂದ ಜನರ ಮನಸ್ಸನ್ನು ಮೊದಲು ಗೆಲ್ಲಲು ಪ್ರಯತ್ನಿಸಿ. ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಮಾಡಬೇಕಾದ ಪ್ರಯತ್ನ ಉತ್ತಮ ಮಟ್ಟದಲ್ಲಿ ಇರಬೇಕು. ಸೋಲನ್ನು ಒಪ್ಪದೇ ಗೆಲುವಿಗಾಗಿ ಹೋರಾಡುವಿರಿ. ತಾಯಿಯ ವಿಚಾರದಲ್ಲಿ ವಿಶೇಷ ಪ್ರೀತಿ ಮತ್ತು ಕಾಳಜಿ ತೋರುವಿರಿ. ಉಪಯೋಗವಾಗುವ ವೇಳೆಯಲ್ಲಿ ಮಾತ್ರ ಬೇರೆಯವರ ಸಲಹೆಯನ್ನು ಪಾಲಿಸುವಿರಿ. ಐಷಾರಾಮಿ ಜೀವನ ಇಷ್ಟಪಡುವ ಕಾರಣ ಮಿತಿಮೀರಿದ ಖರ್ಚು ವೆಚ್ಚಗಳು ಇರುತ್ತವೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಗುರು ಹಿರಿಯರ ಪ್ರೀತಿ ವಿಶ್ವಾಸ ಗಳಿಸಿ ಮುಂದುವರೆಯರಲ್ಲಿ ಯಾವುದೇ ತೊಂದರೆ ಎದುರಾಗದು.

ಆರೋಗ್ಯ ವಿಚಾರದಲ್ಲಿ ಭಯಪಡುವ ಅಗತ್ಯತೆ ಇಲ್ಲ. ದೀರ್ಘಕಾಲದಿಂದ ಇರುವ ಅನಾರೋಗ್ಯದ ತೊಂದರೆ ಏಪ್ರಿಲ್ ನಂತರ ಪರಿಹಾರಗೊಳ್ಳಲಿದೆ. ಸಾಧ್ಯವಾದಷ್ಟು ಕುಳಿತಲ್ಲಿಯೇ ಕೂಡದೆ ಕೆಲಸ ಕಾರ್ಯಗಳನ್ನು ನಿರ್ವಹಿಸಿ. ಬಹು ಮುಖ್ಯ ವಿಚಾರವೆಂದರೆ ಎಲ್ಲರೊಂದಿಗೆ ಮಾತನಾಡಿದರೆ ಮಾತ್ರ ಜೀವನದಲ್ಲಿ ಸಂತಸದ ನೆಲೆಸುತ್ತದೆ. ಅವಿವಾಹಿತರು ಹಿರಿಯರ ಅಣತಿಯಂತೆ ವಿವಾಹವಾಗುವುದು ಒಳ್ಳೆಯದು. ಪಾಲುಗಾರಿಕೆಯ ವ್ಯಾಪಾರದಲ್ಲಿ ಅನಿರೀಕ್ಷಿತ ತಿರುಗುಗಳು ಎದುರಾಗುತ್ತದೆ. ಬೇಡದ ವಿಚಾರಗಳಿಗೆ ಅನ್ಯರನ್ನು ಅವಲಂಬಿಸುವುದು ಒಳ್ಳೆಯದಲ್ಲ.

ವಾಹನಾಪಘಾತ, ಜಾರಿ ಬೀಳುವುದು ಮುಂತಾದ ಯಾವುದೇ ಅವಘಡಗಳು ಸಂಭವಿಸುವುದಿಲ್ಲ. ಆದರೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲಸ ಕಾರ್ಯಗಳಲ್ಲಿ ತಪ್ಪನ್ನು ಮಾಡಿದರು ಮನ್ನಿಸುವ ದೊಡ್ಡತನ ನಿಮ್ಮ ಅಧಿಕಾರಿಗಳಿಗೆ ಇರುತ್ತದೆ. ಆದರೂ ಕೆಲಸ ಕಾರ್ಯಗಳ ಮೇಲೆ ಹೆಚ್ಚಿನ ಆಸಕ್ತಿ ತೋರಬೇಕು. ಇಚ್ಛೆಯಿದ್ದಲ್ಲಿ ಉದ್ಯೋಗವನ್ನು ಬದಲಾಯಿಸಬಹುದು.

ನಿಗೂಢವಾದ ವಿದ್ಯೆಯೊಂದು ಒಲಿಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳಲ್ಲಿ ಬೇರೆಯವರಿಗೆ ಕಷ್ಟವೆನಿಸಿದಾಗ ನಿಮ್ಮನ್ನು ಆಶಯಿಸುವ ಸಾಧ್ಯತೆ ಇದೆ. ಆದಾಯದಲ್ಲಿ ತೊಂದರೆ ಬಾರದು. ಹೆಚ್ಚಿನ ಪ್ರಯತ್ನದಿಂದ ಹೆಚ್ಚಿನ ಆದಾಯ ದೊರೆಯುತ್ತದೆ. ಹಿರಿಯ ಸೋದರ ಅಥವಾ ಹಿರಿಯ ಸೋದರಿಯಜೊತೆ ಇದ್ದ ಭಿನ್ನಾಭಿಪ್ರಾಯವು ದೂರವಾಗುತ್ತದೆ. ತಂದೆಯವರ ಉದ್ಯೋಗದಲ್ಲಿ ಯಾವುದೇ ಅಡಚಣೆಗಳು ಇದ್ದರೂ ಬಗೆಹರಿಯಲಿವೆ. ಹಣವಿದ್ದಾಗ ಅನಾವಶ್ಯಕವಾಗಿ ಖರ್ಚು ಮಾಡಿ ನಂತರ ಯೋಚನೆಗೆ ಒಳಗಾಗುವಿರಿ. ಒಟ್ಟಾರೆ ಈ ವರ್ಷ ದೊರೆಯುವ ಫಲಾಫಲಗಳು ಸಂಪೂರ್ಣ ನಿಮ್ಮನ್ನು ಅವಲಂಬಿಸಿರುತ್ತದೆ.

------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Note: ಇಂದು ಸಂಜೆ ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಮಿಥುನ ರಾಶಿಯ 2024ರ ವರ್ಷ ಭವಿಷ್ಯ ಪ್ರಕಟವಾಗಲಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ