logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಯವರೆಲ್ಲಾ ಸಾಹಸಮಯ ಪ್ರವಾಸ ಬಯಸುವವರು; ಯಾವ ರಾಶಿಗೆ ಯಾವ ರೀತಿಯ ಟೂರ್‌ ಇಷ್ಟವಾಗುತ್ತೆ? ಇಲ್ಲಿದೆ ವಿವರ

ಈ ರಾಶಿಯವರೆಲ್ಲಾ ಸಾಹಸಮಯ ಪ್ರವಾಸ ಬಯಸುವವರು; ಯಾವ ರಾಶಿಗೆ ಯಾವ ರೀತಿಯ ಟೂರ್‌ ಇಷ್ಟವಾಗುತ್ತೆ? ಇಲ್ಲಿದೆ ವಿವರ

Rakshitha Sowmya HT Kannada

May 27, 2024 07:39 AM IST

google News

ಈ ರಾಶಿಯವರೆಲ್ಲಾ ಸಾಹಸಮಯ ಪ್ರವಾಸ ಬಯಸುವವರು; ಯಾವ ರಾಶಿಗೆ ಯಾವ ರೀತಿಯ ಟೂರ್‌ ಇಷ್ಟವಾಗುತ್ತೆ? ಇಲ್ಲಿದೆ ವಿವರ

  • ದಿನವಿಡೀ ಕೆಲಸ ಮಾಡಿ ದಣಿಯುವ ದೇಹಕ್ಕೆ ಪ್ರವಾಸ ಉತ್ತಮ ಟಾನಿಕ್‌ ಆಗಿದೆ. ಎಲ್ಲರೂ ಒಂದೇ ರೀತಿಯ ಸ್ಥಳಗಳಿಗೆ ಹೋಗುವುದಕ್ಕೆ ಬಯಸುವುದಿಲ್ಲ. ಒಬ್ಬಬ್ಬರದು ಒಂದೊಂದು ಆಯ್ಕೆಯಾಗಿರುತ್ತದೆ. ಅದರಲ್ಲೂ ಕೆಲವವು ರಾಶಿಯವರು ಸಾಹಸಮಯ ಪ್ರವಾಸ ಬಯಸುತ್ತಾರೆ. ಯಾವ ರಾಶಿಗೆ ಯಾವ ರೀತಿಯ ಟೂರ್‌ ಇಷ್ಟವಾಗುತ್ತೆ? ಇಲ್ಲಿದೆ ಮಾಹಿತಿ.

ಈ ರಾಶಿಯವರೆಲ್ಲಾ ಸಾಹಸಮಯ ಪ್ರವಾಸ ಬಯಸುವವರು; ಯಾವ ರಾಶಿಗೆ ಯಾವ ರೀತಿಯ ಟೂರ್‌ ಇಷ್ಟವಾಗುತ್ತೆ? ಇಲ್ಲಿದೆ ವಿವರ
ಈ ರಾಶಿಯವರೆಲ್ಲಾ ಸಾಹಸಮಯ ಪ್ರವಾಸ ಬಯಸುವವರು; ಯಾವ ರಾಶಿಗೆ ಯಾವ ರೀತಿಯ ಟೂರ್‌ ಇಷ್ಟವಾಗುತ್ತೆ? ಇಲ್ಲಿದೆ ವಿವರ (PC: Pixabay, Unsplash)

ಕೆಲವರು ಸ್ವಭಾವತಃ ಪ್ರವಾಸಪ್ರಿಯರಾಗಿರುತ್ತಾರೆ. ಹೊಸ ಊರುಗಳನ್ನು ಅರಸುತ್ತಾ, ಅಲ್ಲಿನ ಸವಿರುಚಿ ಸವಿಯುತ್ತಾ, ಗಿರಿ ಪರ್ವತಗಳನ್ನೇರುವ ಹವ್ಯಾಸಿಗಳಾಗಿರುತ್ತಾರೆ. ಎಂತಹ ದುರ್ಗಮ ದಾರಿಗಳಿದ್ದರೂ ಸ್ವಲ್ಪವೂ ಕಷ್ಟ ಎಂದುಕೊಳ್ಳದೆ ಖುಷಿಯಿಂದ ಆ ಸ್ಥಳಗಳಿಗೆ ಹೋಗಿ ಬರುತ್ತಾರೆ. ಧೈರ್ಯ, ಸಾಹಸ ಪ್ರವೃತ್ತಿ ಅವರದ್ದಾಗಿರುತ್ತದೆ. ಹಾಗಾಗಿ ಪ್ರವಾಸ ಅವರ ಪಾಲಿಗೆ ಒಂದು ಸುಂದರ ಅವಸ್ಮರಣೀಯ ನೆನಪಾಗಿರುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಪ್ರವಾಸವೇ ಹಾಗೆ ಬಿಡಿ, ಹೊಸ ಊರನ್ನು ತಲುಪುವ ಹಾದಿಯಲ್ಲಿ ಅದೆಷ್ಟೋ ಮರೆಯಲಾಗದ ಅನುಭವಗಳು ಪ್ರವಾಸಿಗಳದ್ದಾಗಿರುತ್ತದೆ. ಬಿಡುವು ಸಿಕ್ಕಾಗಲೆಲ್ಲಾ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವವರನ್ನು ನೋಡಿದಾಗಲೆಲ್ಲಾ ಇವರು ಏಕೆ ಪ್ರವಾಸವನ್ನು ಅಷ್ಟೊಂದು ಇಷ್ಟಪಡುತ್ತಾರೆ ಎಂಬ ಆಲೋಚನೆ ಬರುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರ ಹೇಳುವುದೇನೆಂದರೆ ಕೆಲವು ರಾಶಿಗೆ ಸೇರಿದ ಜನರಿಗೆ ಹುಟ್ಟಿನಿಂದಲೇ ಈ ಗುಣ ಇರುತ್ತದೆ. ಇವರು ಸಾಹಸಮಯ ಪ್ರವಾಸವನ್ನು ಬಹಳಷ್ಟು ಇಷ್ಟಪಡುತ್ತಾರೆ. ಪ್ರಪಂಚದ ಯಾವುದೋ ಮೂಲೆಯಲ್ಲಿರುವ ಸ್ಥಳಕ್ಕೆ ಕಷ್ಟವಾದರೂ ತಲುಪುವ ಧೈರ್ಯ ಅವರಲ್ಲಿರುತ್ತದೆ. ಹಾಗಾದರೆ ಯಾವ ರಾಶಿಗೆ ಸೇರಿದವರು ಯಾವ ರೀತಿಯ ಪ್ರವಾಸವನ್ನು ಇಷ್ಟಪಡುತ್ತಾರೆ ಇಲ್ಲಿದೆ ಓದಿ.

ಮೇಷ ರಾಶಿ

ಮೇಷ ರಾಶಿಯಲ್ಲಿ ಹುಟ್ಟಿದ ಜನರು ಧೈರ್ಯಶಾಲಿಗಳಾಗಿರುತ್ತಾರೆ. ಅವರು ರಿಸ್ಕ್‌ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಹೊಸ ಪ್ರಯತ್ನಗಳನ್ನು ಮಾಡಲು ಸಿದ್ಧರಿರುತ್ತಾರೆ. ಮೇಷ ರಾಶಿಯವರಿಗೆ ಗಿರಿ, ಶಿಖರಗಳಂತಹ ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡುವುದೆಂದರೆ ಎಲ್ಲಿಲ್ಲದ ಆಸಕ್ತಿಯಿರುತ್ತದೆಂತೆ. ಲಡಾಖ್‌, ಹಿಮಾಲಯ ಪರ್ವತ ಶ್ರೇಣಿಗಳು ಅವರನ್ನು ಆಕರ್ಷಿಸುತ್ತವೆ. ಈ ರೀತಿಯ ಸಾಹಸ ಪ್ರವಾಸವನ್ನು ಆನಂದಿಸುವವರಿಗೆ ಜಗತ್ತಿನ ಎತ್ತರದ ಸರೋವರಗಳಲ್ಲೊಂದಾದ ಪಾಂಗಂಗ್‌ ತ್ಸೊ ದಂತಹ ಅದ್ಭುತ ಪ್ರದೇಶಗಳು ಒಳ್ಳೆಯ ಅನುಭವ ನೀಡುತ್ತದೆ. ಅಲ್ಲಿನ ಬೈಕ್ ಸಾಹಸಗಳು, ಅತ್ಯದ್ಭುತ ಪ್ರಕೃತಿ ದೃಶ್ಯಗಳು ಮತ್ತು ದೈಹಿಕ ಶಕ್ತಿಯನ್ನು ಪರೀಕ್ಷಿಸುವ ಹಾದಿಗಳು ಅವರಿಗೆ ಹೇಳಿ ಮಾಡಿಸಿದಂತಿರುತ್ತದೆ.

ವೃಷಭ ರಾಶಿ

ಈ ರಾಶಿಯವರು ಸ್ಥಿರ ಮತ್ತು ನೈಜ ಸ್ವಭಾವದವರಾಗಿರುತ್ತಾರೆ. ಇವರು ಆಹಾರ ಪ್ರಿಯರು. ಹೊಸ ರುಚಿಯನ್ನು ಸವಿಯುವುದನ್ನು ಇವರು ಇಷ್ಟಪಡುತ್ತಾರೆ. ಜಗತ್ತಿನಲ್ಲಿರುವ ವಿಭಿನ್ನ ರುಚಿ, ಆಹಾರಗಳನ್ನು ಸವಿಯಲು ಅಂತಹ ಪ್ರದೇಶಗಳಿಗೆ ಪ್ರವಾಸ ಬೆಳೆಸುತ್ತಾರೆ. ಹಳೆ ದಿಲ್ಲಿ, ಮುಂಬೈಗಳಲ್ಲಿರುವ ಚಾಟ್‌ ಸ್ಟ್ರೀಟ್‌ಗಳಂತಹ ಬೀದಿಗಳು ಇವರಿಗೆ ಪಂಚಪ್ರಾಣ. ಹಾಗಾಗಿ ಚಾಂದನಿ ಚೌಕನಂತಹ ಗಲ್ಲಿಗಳಲ್ಲಿ ಚೊಲೆ ಭಟುರಾ, ಆಲೂ ಚಾಟ್‌, ಬಾಯಲ್ಲಿ ನೀರೂರಿಸುವ ಜಿಲೇಬಿ ಹೀಗೆ ಆಹಾರ ವೈವಿಧ್ಯಗಳನ್ನು ಸವಿಯಬಹುದಾದ ಸ್ಥಳಗಳನ್ನು ಆಯ್ದುಕೊಳ್ಳಬಹುದು.

ಮಿಥುನ ರಾಶಿ

ಕುತೂಹಲ, ವಿಭಿನ್ನ ವಿಷಯಗಳ ತಾಣಗಳಿಗೆ ಭೇಟಿ ನೀಡುವುದನ್ನು ಈ ರಾಶಿಯವರು ಬಹಳ ಆನಂದಿಸುತ್ತಾರೆ. ಧೈರ್ಯ ಸಾಹಸದ ಜೊತೆಗೆ ಹೊಸದನ್ನು ಕಲಿಯಲು ಇವರು ಸಿದ್ಧರಾಗಿರುತ್ತಾರೆ. ಜೈಸಲ್ಮೇರ್‌ನಂತಹ ಮರುಭೂಮಿಯ ಸಾಹಸಮಯ ಸಫಾರಿಗಳು ಅವರಿಗೆ ಸಂತೋಷ ನೀಡುತ್ತದೆ. ಆದ್ದರಿಂದ ಮೆಹ್ರಾನ್‌ಗಢನಂತಹ ಹಳೆಯ ಕೋಟೆಗಳನ್ನು ಜೀಪ್‌ರೈಡಿಂಗ್‌ ಮೂಲಕ ಅನ್ವೇಷಿಸಬಹುದು. ವರ್ಣರಂಜಿತ ಸಾಂಸ್ಕೃತಿಕ ನಗರಗಳಿಗೆ ಪ್ರಯಾಣ ಬೆಳಸಬಹುದು.

ಕಟಕ ರಾಶಿ

ಈ ರಾಶಿಯವರು ಪ್ರಕೃತಿ ಪ್ರೇಮಿಗಳು ಜೊತೆಗೆ ಸ್ನೇಹಮಯಿ ಜೀವಿಗಳು. ಗತಕಾಲದ ಸ್ಥಳಗಳಿಗೆ ಭೇಟಿ ನೀಡಲು ಉತ್ಸುಕರಾಗಿರುತ್ತಾರೆ. ಇವರು ಕಡಲ ತೀರಗಳು, ದ್ವೀಪಗಳು, ದಟ್ಟ ಮಳೆಕಾಡುಗಳನ್ನು, ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡಬಯಸುತ್ತಾರೆ. ಇವರಿಗೆ ಅಂಡಮಾನ್‌ ದ್ವೀಪದ ಸುತ್ತಲಿನ ದೃಶ್ಯಾವಳಿಗಳು ಹೆಚ್ಚು ಆನಂದವನ್ನು ನೀಡುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರು ಉತ್ಸಾಹಭರಿತ, ರೋಚಕ ಸ್ಥಳಗಳನ್ನು ಬಯಸುತ್ತಾರೆ. ಇವರು ಗಮನ ಸೆಳೆಯುವ ಬೀಚ್‌ ಪಾರ್ಟಿಗಳು, ಜೆಟ್‌–ಸ್ಕೀಯಿಂಗ್‌, ಪ್ಯಾರಾಸೈಲಿಂಗ್‌ನಂತಹ ಜಲಕ್ರೀಡೆಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಇವರಿಗೆ ಗೋವಾದಂತಹ ಅದ್ಭುತ ತಾಣಗಳು ಅವರ ಪ್ರವಾಸಕ್ಕೆ ಸೂಕ್ತ ವೇದಿಕೆಯಾಗಿದೆ.

ಕನ್ಯಾ ರಾಶಿ

ಈ ರಾಶಿಯವರು ಸಾಹಸಮಯ ಸ್ಥಳಗಳನ್ನು ಅನ್ವೇಷಿಸುವುದನ್ನು ಬಯಸುವುದರ ಜೊತೆಗೆ ಐತಿಹಾಸಿಕ ತಾಣಗಳು ಮತ್ತು ವಿಭಿನ್ನ ಸಂಸ್ಕೃತಿಗಳಿಗೆ ಭೇಟಿ ನೀಡುವ ಮೂಲಕ ಜ್ಞಾನದ ದಾಹವನ್ನು ತಣಿಸಿಕೊಳ್ಳುತ್ತಾರೆ. ಕುತೂಹಲ ಮನಸ್ಸಿನವರಾದ ಇವರು ಶಿಲ್ಪಕಲೆಗಳನ್ನು ಆನಂದಿಸುತ್ತಾರೆ. ಇವರಿಗೆ ಖಜುರಾಹೊದಂತಹ, ಕರ್ನಾಟಕದ ಬೇಲೂರು, ಹಳೆಬೀಡುಗಳಂತಹ ಪ್ರಾಚೀನ ದೇವಾಲಯಗಳು ಸೂಕ್ತವಾಗಿದೆ.

ತುಲಾ ರಾಶಿ

ತುಲಾ ರಾಶಿಯವರು ನಿಸರ್ಗ ಸೌಂದರ್ಯವನ್ನು ಅರಾಧಿಸುವವರು. ಸಾಂಸ್ಕೃತಿಕ ತಾಣಗಳು, ಪ್ರಕೃತಿಯ ವಿಸ್ಮಯಗಳನ್ನು ಆನಂದಿಸುವವರಾಗಿದ್ದಾರೆ. ಶ್ರೀನಗರದ ಶಾಂತ ನೀರಿನಲ್ಲಿ ಸಾಂಪ್ರದಾಯಿಕ ಹೌಸ್‌ಬೋಟ್‌ಗಳಲ್ಲಿ ವಿಹರಿಸುತ್ತಾ ಅಲ್ಲಿನ ಸುಂದರ ದೃಶ್ಯಗಳನ್ನು ಅನುಭವಿಸಬಹುದು. ಶ್ರೀಮಂತ ಸೂಫಿ ಸಂಸ್ಕೃತಿ, ಪೈನ್‌ ಕಾಡುಗಳ ಚಾರಣ, ವೈಭವದ ಸರೋವರಗಳು ಅವರ ಮನಸ್ಸನ್ನು ಸೂರೆಗೊಳ್ಳುವುದು ಖಂಡಿತ.

ವೃಶ್ಚಿಕ ರಾಶಿ

ಈ ರಾಶಿಯವರು ಭಾವೋದ್ರಿಕ್ತ ಮತ್ತು ನಿಗೂಢ ಪ್ರದೇಶಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ರಹಸ್ಯಗಳನ್ನು ಹುಡುಕುವುದು, ಅಜ್ಞಾತ ಸ್ಥಳಗಳನ್ನು ಅನ್ವೇಷಿಸುವಂತಹ ಸಾಹಸಮಯ ಮನಸ್ಸಿನವರಾಗಿದ್ದಾರೆ. ರಾಜಸ್ಥಾನದ ಭಯಂಕರವಾದ ಭಂಗರ್‌ ಕೋಟೆಯಂತಹ ತಾಣಗಳು ಇವರ ಸಾಹಸಮಯ ಮನೋಭಾವವನ್ನು ತಣಿಸಲು ಬೆಸ್ಟ್‌ ಜಾಗವಾಗಿದೆ.

ಧನು ರಾಶಿ

ಈ ರಾಶಿಯವರು ಥ್ರೀಲ್‌ ನೀಡುವ ಸ್ಥಳಗಳನ್ನು ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ. ಕುತೂಹಲ ಕೆರಳಿಸುವ, ಚಾರಣದ ಹಾದಿಗಳು ಇವರನ್ನು ಸೆಳೆಯುತ್ತವೆ. ಹೆಪ್ಪುಗಟ್ಟಿದ ನದಿಯಲ್ಲಿನ ಚಾರಣದಂತಹ ಸಾಹಸಗಳನ್ನು ಆನಂದಿಸುತ್ತಾರೆ. ಹಾಗಾಗಿ ಧನು ರಾಶಿಯವರರಿಗೆ ಲಡಾಖ್‌ನ ಝನ್ಸ್ಕರ್‌ನಂತಹ ಪ್ರದೇಶಗಳು ಉತ್ತಮ ಆಯ್ಕೆಯಾಗಿದೆ.

ಮಕರ ರಾಶಿ

ಮಕರ ರಾಶಿಯವರು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇವರು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪರೀಕ್ಷಿಸುವ ಸ್ಥಳಗಳನ್ನು ಇಷ್ಟಪಡುತ್ತಾರೆ. ಲಡಾಖನ ಸ್ಟೊಕ್‌ ಕಂಗ್ರಿ ಯಂತಹ ಸ್ಥಳಗಳು ಉತ್ತಮವಾಗಿದೆ. ಪರ್ವತಾರೋಹಣ, ಹಿಮನದಿಗಳನ್ನು ದಾಟುವುದು, ಶಿಖರಗಳನ್ನು ಏರುವುದು ಮುಂತಾದವುಗಳು ಮರೆಯಲಾಗದ ಅನುಭವವನ್ನು ನೀಡುತ್ತದೆ.

ಕುಂಭ ರಾಶಿ

ಇವರು ಜಗತ್ತನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವವರಾಗಿರುತ್ತಾರೆ. ಪಾರಂಪರಿಕ ತಾಣಗಳನ್ನು ಇವರು ಇಷ್ಟಪಡುತ್ತಾರೆ. ಹಳ್ಳಿ, ಹಳೆಯ ಸಾಂಪ್ರದಾಯಿಕ ಮನೆಗಳಂತಹ ಜೀವನದ ಭಾಗವಾಗಿರುವ ರೋಮಾಂಚಕಾರಿ ಸ್ಥಳಗಳನ್ನು ಅನ್ವೇಷಿಸಲು ಬಯಸುತ್ತಾರೆ.

ಮೀನ ರಾಶಿ

ಈ ರಾಶಿಯವರು ಕಲಾತ್ಮಕ, ಆಧ್ಯಾತ್ಮಿಕ ಮತ್ತು ಸೃಜನಾತ್ಮಕ ಪ್ರಜ್ಞೆ ಹೊಂದಿರುವ ವಿಶೇಷ ಮನೋಭಾವದವರು. ಇವರು ಸ್ಪೂರ್ತಿಯನ್ನು ನೀಡುವಂತಹ ಸಾಹವನ್ನು ಹಂಬಲಿಸುತ್ತಾರೆ. ಗಂಗಾ ನದಿಯ ಮೇಲಿರುವ ಹೃಷಿಕೇಶದಂತಹ ಆಧ್ಯಾತ್ಮಿಕ ಸ್ಥಳಗಳು ಇವರಿಗೆ ಉತ್ತಮವಾಗಿದೆ. ಯೋಗ, ಧ್ಯಾನದಂತಹ ಚಟುವಟಿಕೆಗಳನ್ನು ಮಾಡುವುದರಿಂದ ಅಂತಹ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗುವುದರಿಂದ ಅದ್ಭುತ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ