logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Solar Eclipse 2024: ವರ್ಷದ ಮೊದಲ ಸೂರ್ಯಗ್ರಹ ಪ್ರಭಾವ; ಮೇಷ, ಮಿಥುನ ಸೇರಿ ಈ 5 ರಾಶಿಯವರಿಗಿದೆ ಭಾರಿ ಲಾಭ

Solar eclipse 2024: ವರ್ಷದ ಮೊದಲ ಸೂರ್ಯಗ್ರಹ ಪ್ರಭಾವ; ಮೇಷ, ಮಿಥುನ ಸೇರಿ ಈ 5 ರಾಶಿಯವರಿಗಿದೆ ಭಾರಿ ಲಾಭ

Raghavendra M Y HT Kannada

Feb 03, 2024 03:51 PM IST

google News

2024ರ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ನಡೆಯಲಿದೆ. ಇದ 5 ರಾಶಿಯವರ ಮೇಲೆ ಪರಿಣಾಮ ಬೀರಲಿದೆ

  • Solar eclipse 2024: ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ಸಂಭವಿಸಲಿದೆ. ಇದು ಪ್ರಮುಖವಾಗಿ 5 ರಾಶಿಯವರ ಮೇಲೆ ಪರಿಣಾಮ ಬೀರಲಿದೆ. ಯಾವ ರಾಶಿಯವರಿಗೆ ಯಾವೆಲ್ಲಾ ಲಾಭಗಳಿವೆ ಅನ್ನೋದನ್ನ ನೋಡೋಣ.

2024ರ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ನಡೆಯಲಿದೆ. ಇದ 5 ರಾಶಿಯವರ ಮೇಲೆ ಪರಿಣಾಮ ಬೀರಲಿದೆ
2024ರ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ನಡೆಯಲಿದೆ. ಇದ 5 ರಾಶಿಯವರ ಮೇಲೆ ಪರಿಣಾಮ ಬೀರಲಿದೆ

2024ರ ವರ್ಷದ ಮೊದಲ ಸೂರ್ಯಗ್ರಹಣದಿಂದ (Solar Eclipse 2024) ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಈ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ನಡೆಯಲಿದೆ. ಚೈತ್ರ ಮಾಸದ ಅಮಾವಾಸ್ಯೆಯಂದು ಗ್ರಹಣ ಸಂಭವಿಸುತ್ತದೆ. ಅಮವಾಸ್ಯೆಯ ದಿನದಂದು ಸಂಭವಿಸುವ ಗ್ರಹಣವನ್ನು ಶಾಸ್ತ್ರದ ಪ್ರಕಾರ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಪೆಸಿಫಿಕ್, ಅಟ್ಲಾಂಟಿಕ್, ಮೆಕ್ಸಿಕೋ, ಉತ್ತರ ಅಮೆರಿಕ, ಕೆನಡಾ, ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಉತ್ತರ ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ. ಆದರೆ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ. ಆದ್ದರಿಂದಲೇ ಗ್ರಹಣ ಕಾಲದಲ್ಲಿ ಸೂತಕ ಕಾಲದ ಪ್ರಭಾವ ಇರುವುದಿಲ್ಲ. ಆದರೆ ಈ ಸೂರ್ಯಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಧನಾತ್ಮಕ ಪರಿಣಾಮಗಳನ್ನು ನೀಡುತ್ತದೆ. ಸೂರ್ಯಗ್ರಹಣದಿಂದ ಪ್ರಮುಖವಾಗಿ 5 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ.

ಮೇಷ ರಾಶಿ (Aries)

2024ರಲ್ಲಿ ಮೊದಲ ಸೂರ್ಯಗ್ರಹಣದಿಂದ ಮೇಷ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವಿದ್ಯಾಭ್ಯಾಸದಲ್ಲಿರುವವರಿಗೆ ಇದು ಶುಭ ಸಮಯ. ಈ ರಾಶಿಯವರು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಶತ್ರುಗಳನ್ನು ಗೆಲ್ಲುತ್ತಾರೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ನೀವು ದೀರ್ಘಕಾಲದವರೆಗೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಸಮಯದಲ್ಲಿ ನೀವು ಅವುಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಸಮಾಜದಲ್ಲಿ ಕೀರ್ತಿ ಹೆಚ್ಚುತ್ತದೆ. ಹಣಕಾಸಿನ ಪರಿಸ್ಥಿತಿ ಬಲಗೊಳ್ಳಲಿದೆ.

ಮಿಥುನ ರಾಶಿ (Gemini)

ಸೂರ್ಯಗ್ರಹಣದ ಪ್ರಭಾವದಿಂದ ಮಿಥುನ ರಾಶಿಯವರಿಗೆ ಈ ಹಿಂದೆ ನಿಲ್ಲಿಸಲಾಗಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ಆದಾಯದ ಮಟ್ಟ ಹೆಚ್ಚಲಿದೆ. ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತೀರಿ. ಸಂಗಾತಿಯೊಂದಿಗೆ ಒಳ್ಳೆಯ ಸಮಯವನ್ನು ಕಳೆಯುತ್ತೀರಿ. ವೈವಾಹಿಕ ಜೀವನವು ರೋಮ್ಯಾಂಟಿಕ್ ಆಗಿ ಇರಲಿದೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಸೂರ್ಯಗ್ರಹಣದಿಂದ ಯಶಸ್ಸು ಸಿಗಲಿದೆ. ಈ ಸಮಯದಲ್ಲಿ ಹೂಡಿಕೆಯು ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ.

ಸಿಂಹ ರಾಶಿ (Leo)

ಸಿಂಹ ರಾಶಿಯವರಿಗೂ ಉತ್ತಮ ಫಲಿತಾಂಶಗಳಿವೆ. ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಅವುಗಳಿಂದ ಲಾಭ ಪಡೆಯಲು ಇದು ಮಂಗಳಕರ ಸಮಯ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಗೌರವ ಸಿಗುತ್ತದೆ. ಎಲ್ಲರಿಂದ ಪ್ರಶಂಸೆ ಪಡೆಯುತ್ತಾರೆ. ಆರ್ಥಿಕವಾಗಿ ಲಾಭವನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ಹೆಚ್ಚಿನ ಆದಾಯ ಪಡೆಯುತ್ತಾರೆ. ಉದ್ಯಮಿಗಳಿಗೆ ಇದು ಸೂಕ್ತ ಸಮಯವಾಗಿದೆ.

ಕನ್ಯಾ ರಾಶಿ (Virgo)

ಈ ವರ್ಷದ ಮೊದಲ ಸೂರ್ಯಗ್ರಹಣವು ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿದೆ. ಹೆಚ್ಚಿನ ಆರ್ಥಿಕ ಲಾಭದ ಸಾಕಷ್ಟು ಅವಕಾಶಗಳಿವೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ಆನಂದದಾಯಕ ಸಮಯವನ್ನು ಕಳೆಯುತ್ತೀರಿ. ಹೊಸ ವಾಹನ ಅಥವಾ ಆಸ್ತಿ ಖರೀದಿಸಲು ಅವಕಾಶವಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವಿದ್ಯಾವಂತರು ಸಿಹಿ ಸುದ್ದಿ ಕೇಳುತ್ತಾರೆ.

ಧನು ರಾಶಿ (Sagittarius)

ಸೂರ್ಯಗ್ರಹಣವು ಧನು ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ದೊಡ್ಡ ಆರ್ಥಿಕ ಲಾಭಗಳ ಸಾಧ್ಯತೆಗಳಿವೆ. ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ನೌಕರರು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ವ್ಯಾಪಾರಸ್ಥರಿಗೆ ಭಾರೀ ಲಾಭವಿದೆ. (This copy first appeared in Hindustan Times Kannada website. To read more like this please logon to kannada.hindustantime.com).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ