Sun Nakshtra Transit: ಶ್ರವಣ ನಕ್ಷತ್ರದಲ್ಲಿ ಸೂರ್ಯ ಸಂಚಾರ; ಈ ರಾಶಿಯವರಿಗೆ ಭಾರಿ ಧನಲಾಭ
Jan 27, 2024 09:54 PM IST
ಸೂರ್ಯನು ಶ್ರವಣ ನಕ್ಷತ್ರಕ್ಕೆ ಬದಲಾಗುವುದರಿಂದ ಕೆಲವು ರಾಶಿಯವರಿಗೆ ಉತ್ತಮ ಧನಲಾಭಗಳಿವೆ
ಶ್ರವಣ ನಕ್ಷತ್ರದಲ್ಲಿ ಸೂರ್ಯ ಸಂಚಾರದಿಂದ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ. ಕೆಲವು ರಾಶಿವರಿಗೆ ಶ್ರೀಮಂತಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆ ರಾಶಿಯವರು ಯಾರೆಂದು ತಿಳಿಯೋಣ.
ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯನಿಗೆ ವಿಶೇಷ ಸ್ಥಾನವಿದೆ. ಎಲ್ಲಾ ಗ್ರಹಗಳಿಗಿಂತ ಮೊದಲನೆಯ ಗ್ರಹವೂ ಸೂರ್ಯ. ಹೀಗಾಗಿಯೇ ಸೂರ್ಯನನ್ನು ಗ್ರಹಗಳ ರಾಜ ಅಂತ ಕರೆಯಲಾಗುತ್ತದೆ. ಭಗವಾನ್ ಸೂರ್ಯನು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ.
ತಾಜಾ ಫೋಟೊಗಳು
ಜನವರಿ 24 ರಂದು ಸೂರ್ಯನು ಶ್ರವಣ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವಾಗಿ ಬಹುತೇಕ ರಾಶಿಯವರಿಗೆ ಅದೃಷ್ಟವಿದ್ದು, ಹಲವು ಲಾಭಗಳಿವೆ. ಸೂರ್ಯನ ನಕ್ಷತ್ರ ಬದಲಾವಣೆಯು ಮೀನ ರಾಶಿಯಿಂದ ಮೇಷ ರಾಶಿಯವರಿಗೆ ಏನೆಲ್ಲಾ ಪ್ರಯೋಜನಗಳನ್ನು ಹೊಂದಲಿದ್ದಾರೆ ಅನ್ನೋದನ್ನ ಇಲ್ಲಿ ನೀಡಲಾಗಿದೆ.
ಮೇಷ ರಾಶಿ: ಸೂರ್ಯನು ಶ್ರವಣ ನಕ್ಷತ್ರದಲ್ಲಿ ಸಂಚಾರ ಮಾಡುವುದರಿಂದ ಮೇಷ ರಾಶಿಯವರಿಗೆ ಮಿಶ್ರ ಫಲಿತಾಂಶಗಳಿವೆ. ಈ ರಾಶಿಯವರ ಮನಸ್ಸಿಗೆ ಸಂತೋಷವಾದರೂ ನೆಮ್ಮದಿ ಇರುವುದಿಲ್ಲ. ಕೋಪ ಮಾಡಿಕೊಳ್ಳಬೇಡಿ. ಹೆಚ್ಚಿನ ಶ್ರಮ ಹಾಕಬೇಕು. ಯಶಸ್ಸಿನ ಹಾದಿಗಳು ತೆರೆದುಕೊಳ್ಳುತ್ತವೆ.
ವೃಷಭ ರಾಶಿ: ಸೂರ್ಯನ ಸ್ಥಾನ ಬದಲಾವಣೆಯಿಂದ ವೃಷಭ ರಾಶಿಯವರ ಆತ್ಮಸ್ಥೈರ್ಯ ಹೆಚ್ಚುತ್ತದೆ. ಮನಸ್ಸು ಸಂತೋಷದಿಂದ ಉಕ್ಕಿ ಹರಿಯುತ್ತದೆ. ಕೆಲವು ಸಂದರ್ಭಗಳಲ್ಲಿ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ. ಸ್ವಯಂ ನಿಯಂತ್ರಣ ಅತ್ಯಗತ್ಯ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮಗೆ ಸಿಹಿ ಆಹಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ಮಿಥುನ ರಾಶಿ: ಈ ರಾಶಿಯವರು ಹಲವು ಏರಿಳಿತಗಳನ್ನು ಕಾಣುತ್ತಾರೆ. ಮಾನಸಿಕ ಶಾಂತತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಶೈಕ್ಷಣಿಕ ಕಾರ್ಯಗಳು ಉತ್ತಮವಾಗಿ ಸಾಗುತ್ತವೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಸಂಭವವಿದೆ. ವೆಚ್ಚಗಳು ಹೆಚ್ಚಾಗುತ್ತವೆ.
ಸಿಂಹ ರಾಶಿ: ಶಿಕ್ಷಣ ಮತ್ತು ಬೌದ್ಧಿಕ ಅನ್ವೇಷಣೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಅಧಿಕ ಲಾಭವಾಗುತ್ತದೆ. ಸಂಪತ್ತು ಹೆಚ್ಚಾಗುತ್ತದೆ. ಉದ್ಯೋಗ ಬದಲಾಯಿಸುವ ಸಾಧ್ಯತೆ ಇದೆ. ಆದಾಯ ವೃದ್ಧಿಯಾಗುತ್ತದೆ. ಖರ್ಚು ವೆಚ್ಚಗಳು ಹೆಚ್ಚಾಗಲಿವೆ.
ಕನ್ಯಾ ರಾಶಿ: ಕನ್ಯಾ ರಾಶಿಯವರು ಸಂಯಮವನ್ನು ಕಾಪಾಡಿಕೊಳ್ಳಬೇಕು. ಅರ್ಥಹೀನ ಕೋಪವನ್ನು ಬಿಡಿ. ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಶಾಂತವಾಗಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರ ತೃಪ್ತಿ ನೀಡುತ್ತದೆ.
ತುಲಾ ರಾಶಿ: ಸೂರ್ಯ ನಕ್ಷತ್ರದಲ್ಲಿ ಸಂಚಾರ ಮಾಡುವುದರಿಂದ ತುಲಾ ರಾಶಿಯವರಿಗೆ ಮಿಶ್ರ ಫಲಿತಾಂಶಗಳಿವೆ. ಮನಸ್ಸಿನಗೆ ಸಂತೋಷ ಇರಲಿದೆ. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ವ್ಯಾಪಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಂತೋಷವಾಗಿರುತ್ತೀರಿ. ನಿಮ್ಮ ಸಂಪತ್ತು ದ್ವಿಗುಗಣಗೊಳ್ಳುವ ಸಾಧ್ಯತೆಯಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದರೆ ಮನಸ್ಸು ಚಂಚಲವಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚಿನ ಅವಕಾಶಗಳು ಬರಲಿವೆ. ಸ್ನೇಹಿತರೊಂದಿಗೆ ಪ್ರವಾಸ ಹೋಗುವ ಸಾಧ್ಯತೆಗಲಿವೆ.
ಧನು ರಾಶಿ: ನಿಮ್ಮ ಮನಸ್ಸು ಸಂತೋಷವಾಗಿರಲಿದೆ. ಆತ್ಮವಿಶ್ವಾಸದ ಕೊರತೆ ಇರಲಿದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ವ್ಯವಹಾರದಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ತಂದೆಯ ಬೆಂಬಲ ಸಿಗಲಿದೆ.
ಮಕರ ರಾಶಿ: ಸೂರ್ಯ ನಕ್ಷತ್ರದಲ್ಲಿ ಸಂಚರಿಸುವುದರಿಂದ ಮಕರ ರಾಶಿಯವರಿಗೆ ಮಿಶ್ರ ಫಲಗಳಿವೆ. ಆತ್ಮ ವಿಶ್ವಾಸ ಕಡಿಮೆಯಾಗುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವೆಚ್ಚಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ಹೆಚ್ಚಿನ ಅವಕಾಶಗಳು ಒದಗಿಬರಲಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.
ಕುಂಭ ರಾಶಿ: ಕುಂಭ ರಾಶಿಯವರು ತಾಳ್ಮೆಯಿಂದಿರಬೇಕು. ಆತ್ಮವಿಶ್ವಾಸ ಹೆಚ್ಚಾಗಲಿದೆ. ಶೈಕ್ಷಣಿಕ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಗೌರುವ ಸಿಗುತ್ತದೆ. ಸರ್ಕಾರದ ಬೆಂಬಲ ಪಡೆಯುತ್ತೀರಿ. ಆದಾಯ ಹೆಚ್ಚಾಗಲಿದೆ.
ಮೀನ ರಾಶಿ: ನಿಮ್ಮ ಮನಸ್ಸು ಸಂತೋಷವಾಗಿದ್ದರೂ ಮಾನಸಿಕ ಶಾಂತತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಸ್ನೇಹಿತರನ್ನು ಭೇಟಿ ಮಾಡುತ್ತೀರಿ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. (This copy first appeared in Hindustan Times Kannada website. To read more like this please logon to kannada.hindustantime.com).