logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನ ರಾಶಿಗೆ ಸೂರ್ಯ ಸಂಕ್ರಮಣ: ಉದ್ಯೋಗ, ದಾಂಪತ್ಯ, ಶಿಕ್ಷಣದ ಮೇಲೆ ಪರಿಣಾಮ; ಇಲ್ಲಿದೆ ಫಲಗಳ ವಿಸ್ತೃತ ವಿವರ -Sun Transit To Gemini

ಮಿಥುನ ರಾಶಿಗೆ ಸೂರ್ಯ ಸಂಕ್ರಮಣ: ಉದ್ಯೋಗ, ದಾಂಪತ್ಯ, ಶಿಕ್ಷಣದ ಮೇಲೆ ಪರಿಣಾಮ; ಇಲ್ಲಿದೆ ಫಲಗಳ ವಿಸ್ತೃತ ವಿವರ -Sun Transit to Gemini

Raghavendra M Y HT Kannada

Jun 14, 2024 02:58 PM IST

google News

ನವಗ್ರಹಗಳ ಅಧಿಪತಿಯಾದ ಸೂರ್ಯ ಮಿಥುನ ರಾಶಿಯಲ್ಲಿ ಸಂಕ್ರಮಣ. ಉದ್ಯೋಗ, ದಾಂಪತ್ಯ, ಶಿಕ್ಷಣದ ಮೇಲೆ ಪರಿಣಾಮ

    • Sun Transit to Gemini: ಸೂರ್ಯನು ವೃಷಭ ರಾಶಿಯಿಂದ ಮಿಥುನ ರಾಶಿಗೆ ಸಂಚರಿಸುತ್ತಾನೆ. ಅಹಂಕಾರ, ಆತ್ಮವಿಶ್ವಾಸ, ಕುಟುಂಬ ಹಾಗೂ ನಿರ್ಣಯಗಳ ಮೇಲೆ ಇದು ಹೇಗೆ ಪರಿಣಾಮ ಅನ್ನೋದರ ವಿವರ ಇಲ್ಲಿದೆ.
ನವಗ್ರಹಗಳ ಅಧಿಪತಿಯಾದ ಸೂರ್ಯ ಮಿಥುನ ರಾಶಿಯಲ್ಲಿ ಸಂಕ್ರಮಣ. ಉದ್ಯೋಗ, ದಾಂಪತ್ಯ, ಶಿಕ್ಷಣದ ಮೇಲೆ ಪರಿಣಾಮ
ನವಗ್ರಹಗಳ ಅಧಿಪತಿಯಾದ ಸೂರ್ಯ ಮಿಥುನ ರಾಶಿಯಲ್ಲಿ ಸಂಕ್ರಮಣ. ಉದ್ಯೋಗ, ದಾಂಪತ್ಯ, ಶಿಕ್ಷಣದ ಮೇಲೆ ಪರಿಣಾಮ

Sun Transit to Gemini: 2024ರ ಜೂನ್ 15ರ ಶನಿವಾರ ಬೆಳಗ್ಗೆ 12.37ಕ್ಕೆ ಸೂರ್ಯನು ವೃಷಭ ರಾಶಿಯಿಂದ ಮಿಥುನ ರಾಶಿ ಪ್ರವೇಶಿಸಲಿದ್ದಾನೆ. ಈ ಬದಲಾವಣೆ ಪ್ರತಿ ವರ್ಷಕ್ಕೊಮ್ಮೆ ನಡೆಯುತ್ತದೆ. ಜನರ ಜೀವನದ ಪ್ರತಿಯೊಂದು ವಿಷಯದ ಮೇಲೆ ಇದು ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅಹಂಕಾರ, ಆತ್ಮವಿಶ್ವಾಸ, ನಿರ್ಯಣ, ಕುಟುಂಬ ಹಾಗೂ ಶಕ್ತಿಯ ಮೇಲೆ ಹೇಗೆ ಇದು ಪರಿಣಾಮ ಬೀರುತ್ತೆ ಅನ್ನೋದನ್ನು ಇಲ್ಲಿ ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮಿಥುನ ರಾಶಿಯ ಬುಧ ಗ್ರಹದಿಂದ ನಿಯಂತ್ರಿಸಲ್ಪಡುತ್ತದೆ. ಇದು ಸಂವಹನ, ಕುತೂಹಲ, ಬುದ್ಧಿವಂತಿಕೆ, ಸಾಮಾಜಿಕ ಹಾಗೂ ಹೊಂದಾಣಿಕೆಯಂತಹ ಗುಣಲಕ್ಷಣಗಳೊಂದಿಗೆ ಸಂಬಂಧವನ್ನು ಹೊಂದಿದೆ. ಸೂರ್ಯ ಮಿಥುನ ರಾಶಿಗೆ ಪ್ರವೇಶದ ಫಲವಾಗಿ ಹೆಚ್ಚಿನ ಮಾನಸಿಕ ಚಟುವಟಿಕೆ, ಮಾತುಗಾರಿಕೆ, ಜ್ಞಾನಯ ಬಯಕೆ ಮತ್ತು ಇತರರೊಂದಿಗೆ ಸಂವಹವನ್ನು ಹೆಚ್ಚಾಗುತ್ತದೆ.

ಸೂರ್ಯ ಸಂಕ್ರಮಣದಿಂದ ವೃತ್ತಿಜೀವನದ ಮೇಲೆ ಪರಿಣಾಮ

ಈ ಅವಧಿಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಸಿಗಲಿವೆ. ಅವಕಾಶಗಳು ಹೆಚ್ಚಾಗುತ್ತವೆ. ಬಹುಮುಖ, ಬಹು-ಕುಶಲ ತಂತ್ರವನ್ನು ಅಳವಡಿಸಿಕೊಳ್ಳುತ್ತೀರಿ. ಸಂವಹನ ಉತ್ತಮ ಪಡಿಸಿಕೂಳ್ಳುತ್ತೀರಿ. ತ್ವರಿತವಾಗಿ ಕಲಿಯುವುದು, ಬಹುಕಾರ್ಯ ಹಾಗೂ ವೈವಿಧ್ಯತೆಯನ್ನು ನಿರ್ವಹಿಸುವ ಕೌಶಲ್ಯಗಳಿಗೆ ವಿಶೇಷವಾಗಿ ಒತ್ತು ನೀಡುತ್ತೀರಿ. ಈಗಾಗಲೇ ಉದ್ಯೋದಲ್ಲಿರುವವರಿಗೆ ಹೊಸ ಜವಾಬ್ದಾರಿಗಳು ಅಥವಾ ನೀವು ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತದೆ. ಉದ್ಯೋಗ ಸಂಬಂಧಿತ ಹೊಸ ಕಲಿಕೆ, ಅಸ್ವಿತ್ವದಲ್ಲಿರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸಲು ಮುಂದಾಗುತ್ತೀರಿ.

ಸೂರ್ಯ ಸಂಕ್ರಮಣದಿಂದ ಹಣಕಾಸು ಮತು ಹೂಡಿಕೆ ಫಲಗಳು

ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರದಿಂದ ಹೂಡಿಕೆ, ಹಣಕಾಸು ನಿರ್ವಹಣೆ ಅಥವಾ ಪ್ರಮುಖ ವಸ್ತುಗಳನ್ನು ಖರೀದಿಗಳ ಮೇಲೆ ಪರಿಣಾಮ ಬೀರುತ್ತದೆ. ಮೊದಲು ಸಾಧ್ಯವಾದಷ್ಟು ವಿಶ್ವಾಸಾರ್ಹ ಮೂಲಗಳನ್ನು ಸಂಪರ್ಕಿಸಲು ಪ್ರೋತ್ಸಾಹಿಸುತ್ತದೆ. ಆರ್ಥಿಕ ವೃತ್ತಿಪರರೊಂದಿಗೆ ಚರ್ಚೆ ನಡೆಸುತ್ತೀರಿ. ಪ್ರಸ್ತುತ ಹಣಕಾಸಿನ ಪರಿಸ್ಥಿತಿಗಳನ್ನು ವಿಮರ್ಶೆ ಮಾಡುತ್ತೀರಿ. ವಿಭಿನ್ನ ಲೆಕ್ಕಾಚಾರಗಳನ್ನು ಪ್ರಯತ್ನಿಸಲು ಈ ಬಗ್ಗೆ ತಿಳಿದುಕೊಳ್ಳುತ್ತೀರಿ. ರಿಯಲ್ ಎಸ್ಟೇಟ್ ಕಾರುಗಳು, ಷೇರುಗಳನ್ನು ಖರೀದಿಸುವುದು ಅಥವಾ ವಿವಿಧ ಹೂಡಿಕೆ ಅವಕಾಶಗಳ ಯೋಜನೆಗಳನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತೀರಿ.

ಸೂರ್ಯ ಸಂಕ್ರಮಣದಿಂದ ಜೀವನದ ಕುರಿತ ಫಲಗಳು

ಒಂಟಿಯಾಗಿರುವವರಿಗೆ ಅಥವಾ ಸಂಗಾತಿಯನ್ನು ಹುಡುಕುತ್ತಿರುವರಿಗೆ ಶುಭ ಸುದ್ದಿ ಇರಲಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಹೊಸ ಡೇಟಿಂಗ್ ನಿರೀಕ್ಷೆ ಈಡೇರುವ ಸಾಧ್ಯತೆ ಇದೆ. ಪುಸ್ತಕ ಕ್ಲಬ್‌ಗಳು, ಬೇರೆಯವನ್ನು ಭೇಟಿ ಮಾಡುವುದು, ಉಪನ್ಯಾಸಗಳಂತಹ ಚರ್ಚೆಗಳು, ವಿಚಾರಗಳನ್ನು ಹಂಚಿಕೊಳ್ಳುತ್ತೀರಿ. ನಿಮ್ಮ ಸಂಭಾವ್ಯ ಸಂಗಾತಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇದು ನಿಮ್ಮ ಖುಷಿಯನ್ನು ಹೆಚ್ಚಿಸಲಿದೆ. ಹೊರಗಡೆ ಹೋಗಲು, ಹೊಸ ಜನರನ್ನು ಭೇಟಿ ಮಾಡಲು ಜೂನ್ 24, ಜುಲೈ 2 ಮತ್ತು ಜುಲೈ 10 ಮಂಗಳಕರವಾಗಿದೆ. ಹಳದಿ ಬಟ್ಟೆ ಧನಾತ್ಮಕ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.

ಸೂರ್ಯ ಸಂಕ್ರಮಣ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಮಿಥುನ ರಾಶಿಯಲ್ಲಿ ಸೂರ್ಯ ಸಂಕ್ರಮಣವು ಚೈನತ್ಯದ ಸಂಕೇತ. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಚರ್ಚೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಸ್ನೇಹಿತರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ನಿಮ್ಮಲ್ಲಿ ದೋಷವನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತವೆ. ಆದರೆ ಇದರಲ್ಲಿ ಸಫಲವಾಗುವುದಿಲ್ಲ. ಒಡಹುಟ್ಟಿದವರೊಂದಿಗೆ ಸಂಬಂಧಗಳು ಸುಧಾರಿಸಲು ಇದು ಉತ್ತಮ ಸಮಯವಾಗಿದೆ. ಮಕ್ಕಳು ಬೆಳೆಯುತ್ತಿರುವ ವೇಗವನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು.

ಪರಿಹಾರ ಮತ್ತು ಸಲಹೆಗಳು

ಮಿಥುನ ರಾಶಿಯಲ್ಲಿ ಸೂರ್ಯ ಸಂಕ್ರಮಣ ನಿಮ್ಮ ಮೇಲೆ ಸಕಾರಾತ್ಮಕ ಪರಿಣಾಮಗಳು ಬೀರುತ್ತವೆ. ಆದರೆ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಲು ಕೆಲವು ಅಭ್ಯಾಸಗಳನ್ನು ಮಾಡಿಕೊಳ್ಳಬೇಕು. ಹಳದಿ ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ, ಮನೆಯಲ್ಲಿ ಹೆಚ್ಚಿನ ಬೆಳಕು ಇರುವಂತೆ ನೋಡಿಕೊಳ್ಳಿ. ಸಾಧ್ಯವಾದರೆ ಸಣ್ಣದಾಗಿ ರಂಜಿಯಂತೆ ನೀರಿನ ವೈಶಿಷ್ಟ್ಯವನ್ನು ಅಳವಡಿಸಿಕೊಳ್ಳಿ.

ಗಮನಿಸಿ: ಜನಪ್ರಿಯ ನಂಬಿಕೆಗಳು ಮತ್ತು ಶಾಸ್ತ್ರದ ಆಧಾರದ ಮೇಲೆ ಈ ಬರಹವನ್ನು ಪ್ರಕಟಿಸಲಾಗಿದೆ. ಈ ಬರಹವು ಓದುಗರಿಗೆ ಮಾಹಿತಿ ನೀಡುವ ಉದ್ದೇಶವನ್ನು ಮಾತ್ರ ಹೊಂದಿದೆ. ಅನುಸರಿಸುವ ಮೊದಲು ವಿಷಯತಜ್ಞರ ಸಲಹೆ ಪಡೆಯುವುದು ಒಳ್ಳೆಯದು

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ