Horoscope Today: ಇಂದು ವಿಧಾನಸಭೆ ಚುನಾವಣೆ ಫಲಿತಾಂಶ, ಯಾವ ರಾಶಿಯವರಿಗೆ ಗೆಲುವು ಯಾರಿಗೆ ಸೋಲು; ಒಮ್ಮೆ ರಾಶಿಭವಿಷ್ಯ ನೋಡಿ
May 13, 2023 05:15 AM IST
13 ಮೇ 2023 ರಾಶಿಭವಿಷ್ಯ
- ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ಶನಿವಾರದ ರಾಶಿಫಲ ಹೀಗಿದೆ.
ಇಂದಿನ ಪಂಚಾಂಗ: ಶ್ರೀ ಶೋಭಕೃತ ನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಶನಿವಾರ
ತಾಜಾ ಫೋಟೊಗಳು
ತಿಥಿ: ಅಷ್ಟಮಿ ಬೆಳಗ್ಗೆ08.01 ವರೆಗೆ ಇದ್ದು ನಂತರ ನವಮಿ ಇರುತ್ತದೆ
ನಕ್ಷತ್ರ: ಧನಿಷ್ಠ ನಕ್ಷತ್ರವು 12.51ವರೆಗೆ ಇದ್ದು ನಂತರ ಶತಭಿಷ ಆರಂಭವಾಗುತ್ತದೆ
ಸೂರ್ಯೋದಯ: ಬೆಳಗ್ಗೆ05.55 - ಸೂರ್ಯಾಸ್ತ ಸಂಜೆ 6.36
ರಾಹುಕಾಲ: ಬೆಳಗ್ಗೆ 9.10 ರಿಂದ10.45ವರೆಗೆ
ರಾಶಿ ಫಲಗಳು
ಮೇಷ
ಉದ್ಯೋಗ ನಿಮಿತ್ತ ತಂದೆ ವಿದೇಶಕ್ಕೆ ತೆರಳುವರು. ರಾಜಕೀಯ ಪಟುಗಳ ಮಾತಿಗೆ ಗೌರವ ಲಭಿಸುತ್ತದೆ. ಮಕ್ಕಳಿಗೆ ಉದ್ಯೋಗ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸಿರುತ್ತದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಪರೋಪಕಾರದಲ್ಲಿ ಸದಾ ಕಾಲ ಮಗ್ನರಾಗುವಿರಿ. ರಕ್ತ ಸಂಬಂಧಿಕರಿಂದ ವಿವಾದ ಉಂಟಾಗಲಿದೆ. ಅತಿಯಾದ ಆತ್ಮ ವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಬೇರೆಯವರ ಕೈ ಕೆಳಗೆ ಕೆಲಸ ಮಾಡದೆ, ಸ್ವಂತ ವ್ಯಾಪಾರವನ್ನು ಆರಂಭಿಸಿ ಯಶಸ್ಸನ್ನು ಕಾಣುವಿರಿ.
ಕಪ್ಪು ಬಿಳಿ ಮಿಶ್ರಬಣ್ಣದ ಕಂಬಳಿಯನ್ನು ಧಾರ್ಮಿಕ ಕೇಂದ್ರಕ್ಕೆ ನೀಡಿದ ನಂತರ ನಿಮ್ಮ ಕೆಲಸ ಆರಂಭಿಸಿ.
ವೃಷಭ
ರಾಜಕೀಯ ಕ್ಷೇತ್ರದಲ್ಲಿ ಉನ್ನತಿ ಇರದು. ಬಂಧು ಬಳಗದವರಿಂದ ದೂರವಿರುವಿರಿ. ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸುತ್ತಾರೆ. ತಾಯಿಗೆ ರಕ್ತದ ದೋಷ ಇರುತ್ತದೆ. ದಿನನಿತ್ಯ ಬಳಸುವ ಲೋಹದ ವಸ್ತುವಿನಿಂದ ತೊಂದರೆ ಉಂಟಾಗಬಹುದು. ಬೇರೆಯವರ ಮಾತನ್ನು ನಂಬುವ ಕಾರಣ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ. ಉದ್ಯೋಗದಲ್ಲಿ ತೊಂದರೆ ಇರದು. ಭೂವಿವಾದವೊಂದು ಗಣ್ಯವ್ಯಕ್ತಿಗಳ ಸಹಾಯದಿಂದ ಬಗೆಹರಿಯುವುದು. ಸ್ವಂತ ನಿರ್ಣಯದಿಂದ ಶುಭವಿದೆ. ವ್ಯಾಪಾರ ವ್ಯವಹಾರದಿಂದ ಸಾಧಾರಣ ಆದಾಯ ಇರುತ್ತದೆ.
ತಂದೆಯ ಆಜ್ಞೆಯಂತೆ ನಡೆದಲ್ಲಿ ಯಾವುದೇ ತೊಂದರೆ ಇರದು.
ಮಿಥುನ
ಸೋದರರಿಗೆ ಪರಸ್ಥಳದಲ್ಲಿ ಉದ್ಯೋಗ ದೊರೆಯುತ್ತದೆ. ನೀರಿನ ಜೊತೆಯಲ್ಲಿ ಚೆಲ್ಲಾಟ ಬೇಡ, ವಿವಾಹ ಯೋಗವಿದೆ. ದಂಪತಿಗಳ ನಡುವೆ ಬಿನ್ನಾಭಿಪ್ರಾಯ ಇರುತ್ತದೆ. ರಾಜಕೀಯದಲ್ಲಿ ಶುಭದಾಯಕ ಬದಲಾವಣೆಗಳು ಉಂಟಾಗಲಿವೆ. ಸೋದರ ಅಥವಾ ಸೋದರಿಗೆ ಶುಭ ಫಲಗಳು ದೊರೆಯುತ್ತವೆ. ಭೂ ವಿವಾದವೊಂದು ಬಗೆಹರಿಯದೆ ಉಳಿಯುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶಗಳು ದೊರೆಯುತ್ತವೆ. ರಕ್ತದ ಒತ್ತಡದ ದೋಷವಿರುವವರು ಎಚ್ಚರಿಕೆ ವಹಿಸಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿದೆ. ಲೇವಾ ದೇವಿ ವ್ಯವಹಾರ ಬೇಡ.
ಚಿಕ್ಕ ಮಕ್ಕಳಿಗೆ ಅವರಿಷ್ಟದ ತಿನಿಸು ಕೊಡಿಸಿದ ನಂತರ ದಿನದ ಕೆಲಸವನ್ನು ಆರಂಭಿಸಿ.
ಕಟಕ
ವಿವಾಹದ ವಿಚಾರದಲ್ಲಿ ವಿವಾದವೊಂದು ಎದುರಾಗಲಿದೆ. ಅನುಮಾನದ ಗುಣವನ್ನು ಬಿಟ್ಟುಬಿಡಿ. ಆತ್ಮವಿಶ್ವಾಸದ ಕೊರತೆ ನಿಮ್ಮನ್ನು ಕಾಡುತ್ತದೆ. ಉದ್ಯೋಗದಲ್ಲಿ ವಿಶೇಷತೆ ಇರದು. ವಿದ್ಯಾರ್ಥಿಗಳು ಮನರಂಜನೆಯನ್ನು ತೊರೆದು ವ್ಯಾಸಂಗದಲ್ಲಿ ಮುಂದುವರಿಯಬೇಕು. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಇರುವುದಿಲ್ಲ. ಸೋದರನಿಗೆ ಜಯ ಲಭಿಸುತ್ತದೆ. ರಾಜಕೀಯದಲ್ಲಿ ನಿಶ್ಚಿತ ಫಲಿತಾಂಶ ಬಾರದು. ತಲೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಕೀಳರಿಮೆಯಿಂದ ಹೊರ ಬನ್ನಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭಾಂಶವಿದೆ.
ಪಕ್ಷಿಗಳಿಗೆ ಆಹಾರದ ವ್ಯವಸ್ಥೆ ಮಾಡಿದ ನಂತರ ದಿನದ ಕೆಲಸ ಆರಂಬಿಸಿ.
ಸಿಂಹ
ರಾಜಕೀಯದಲ್ಲಿ ಅದೃಷ್ಟವಿದೆ. ತಾಯಿಯಿಂದ ಕುಟುಂಬದಲ್ಲಿ ಮನಸ್ತಾಪ ಉಂಟಾಗುತ್ತದೆ. ದಂಪತಿಗಳ ನಡುವೆ ನಂಬಿಕೆಯ ಕೊರತೆ ಇರುತ್ತದೆ. ಸೋದರನು ಕಂಟಕದಿಂದ ಪಾರಾಗುತ್ತಾನೆ. ಕಾನೂನಿನ ಮುಖಾಂತರ ಹಣಕಾಸಿನ ವಿವಾದವೂ ಬಗೆಹರಿಯುತ್ತದೆ. ತಲೆಗೆ ಪೆಟ್ಟಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ನಿರೀಕ್ಷಿತ ಮಟ್ಟ ತಲುಪಲಿದ್ದಾರೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಮನ:ಶಾಂತಿಗಾಗಿ ಪರಸ್ಥಳಕ್ಕೆ ತೆರಳುವಿರಿ. ಭೋದನಾ ಕೇಂದ್ರಗಳಿಂದ ಉತ್ತಮ ಆದಾಯ ಇರುತ್ತದೆ. ವಂಶದ ದೊಡ್ಡ ಜವಾಬ್ದಾರಿಯು ನಿಮ್ಮ ಹೆಗಲೇರುತ್ತದೆ.
ನಿಂಬೆ ಹಣ್ಣಿನ ಅನ್ನವನ್ನು ಮಕ್ಕಳಿಗೆ ನೀಡಿದ ನಂತರ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿ
ಕನ್ಯಾ
ರಾಜಕೀಯ ಜೀವದಲ್ಲಿ ಏರು ಪೇರು ಉಂಟಾಗಲಿದೆ. ದುಡುಕುತನದಿಂದ ಹಣಕಾಸಿನ ವಿವಾದವನ್ನು ಎದುರಿಸಬೇಕಿದೆ. ಗಣಕ ಯಂತ್ರದ ದುರಸ್ತಿ ವ್ಯಾಪಾರದಲ್ಲಿ ಅನಿರೀಕ್ಷಿತ ಸಂಪಾದನೆ ಇರುತ್ತದೆ. ಉದ್ಯೋಗದಲ್ಲಿ ಅನಿಶ್ಚಿತ ಪರಿಸ್ಥಿತಿ ಎದುರಾಗುತ್ತದೆ. ಉಸಿರಿನ ತೊಂದರೆ ಇರುವವರು ವೈದ್ಯರ ಸಲಹೆ ಪಾಲಿಸಿ. ದಂಪತಿಗಳ ನಡುವೆ ಒಮ್ಮತ ಇರುವುದಿಲ್ಲ. ಮನಸ್ಸಿನಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಹಣಕಾಸಿನ ಕೊರತೆಯನ್ನು ಕಡಿಮೆಯಾಗಿಸಲು ವ್ಯಾಪಾರವನ್ನು ಆರಂಭಿಸುವಿರಿ. ಸಂಗೀತವಾದ್ಯಗಳ ವ್ಯಾಪಾರದಲ್ಲಿ ಲಾಭವಿದೆ.
ಹೈನು ಪದಾರ್ಥಗಳನ್ನು ದಾನ ಮಾಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.
ತುಲಾ
ತಾಯಿಯವರ ಬುದ್ಧಿವಂತಿಕೆಯ ನಿರ್ಧಾರಗಳು ಕುಟುಂಬವನ್ನು ಸುಕ್ಷಿತವಾಗಿ ಇಡುತ್ತದೆ. ರಾಜಕೀಯದಲ್ಲಿ ಶುಭ ಸುದ್ಧಿಯೊಂದು ದೊರೆಯಲಿದೆ. ಕುಟುಂಬವು ಸ್ತ್ರೀವಿವಾದವೊಂದನ್ನು ಎದುರಿಸಬೇಕಾಗುತ್ತದೆ. ಕೃಷಿ ಕಾರ್ಮಿಕರಿಗೆ ಧನಲಾಭವಿದೆ. ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಮಾಡದ ತಪ್ಪನ್ನು ಒಪ್ಪುವ ಸಂದರ್ಭ ಎದುರಾಗುತ್ತದೆ. ಭೂವ್ಯವಹಾರದಲ್ಲಿ ಹಿನ್ನೆಡೆ ಉಂಟಾಗಲಿವೆ. ಹಣ್ಣು ಅಥವಾ ಹಣ್ಣಿನ ರಸದ ವ್ಯಾಪಾರದಲ್ಲಿ ಲಾಭವಿದೆ. ಸಣ್ಣ ಪ್ರಮಾಣದ ಬಂಡವಾಳದಿಂದ ವ್ಯಾಪಾರವನ್ನು ಆರಂಭಿಸುವಿರಿ. ಆಭರಣಗಳ ವ್ಯವಹಾರದಲ್ಲಿ ಲಾಭವಿದೆ.
ಹೆಣ್ಣು ಮಕ್ಕಳ ಅವಶ್ಯಕತೆಯನ್ನು ಪೂರೈಸಿದ ನಂತರ ದಿನದ ಕೆಲಸವನ್ನು ಆರಂಭಿಸಿ.
ವೃಶ್ಚಿಕ
ರಾಜಕೀಯದಲ್ಲಿ ವೈರತ್ವವಿರುತ್ತದೆ. ಪರಸ್ಥಳದಲ್ಲಿ ಲಾಭವಿದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಜೀವನದಲ್ಲಿ ಮುಂದುವರೆಯುವರು. ಹೊಸ ವ್ಯಾಪಾರ ವ್ಯವಹಾರದಿಂದ ತೊಂದರೆ ಇರುತ್ತದೆ. ವಿದ್ಯೆಗಿಂತಲೂ ಬುದ್ಧಿಯು ವಿಶೇಷವಾಗಿರುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಚರ್ಮದ ವಸ್ತುಗಳ ತಯಾರಿಕೆ ಮತ್ತು ಮಾರಾಟದ ಮಳಿಗೆ ಆರಂಭಿಸುತ್ತಾರೆ. ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ದೊರೆವ ಸಾಧ್ಯತೆಗಳಿವೆ. ಕಷ್ಟ ನಷ್ಟದ ಸಂದರ್ಭದ ವೇಳೆ ತಾಯಿಯವರಿಂದ ಹಣದ ಸಹಾಯ ದೊರೆಯುತ್ತದೆ. ಬ್ಯಾಂಕ್ ವ್ಯವಹಾರದ ಸಮಸ್ಯೆ ನಿವಾರಣೆಯಾಗುತ್ತದೆ.
ಅರಳಿ ಮರಕ್ಕೆ ನೀರನ್ನು ಹಾಕಿ ನಂತರ ದೈನಂದಿನ ಕೆಲಸ ಆರಂಭಿಸಿ.
ಧನಸ್ಸು
ಸ್ವಂತ ಜಮೀನು ಅಥವಾ ಮನೆಯನ್ನು ಕೊಳ್ಳುವ ಸೂಚನೆಯಿದೆ. ರಾಜಕೀಯದಲ್ಲಿ ದೊಡ್ಡ ಅವಕಾಶವೊಂದು ದೊರೆಯಲ್ಲಿದೆ. ಯಾವುದೇ ವಿಶೇಷ ಆಸೆಗಳು ಇರದು. ದೊರೆತ ಅವಕಾಶಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡು ಮುಂದುವರೆಯುವಿರಿ. ಹಣ್ಣಿನ ತೋಟವಿದ್ದಲ್ಲಿ ಹೇರಳ ಲಾಭ ದೊರೆಯುತ್ತದೆ. ಹಣ್ಣನ್ನು ರಫ್ತು ಮಾಡುವ ಕಾಯಕವನ್ನು ಆರಂಭಿಸುವಿರಿ. ಸೋದರಿಯ ವಿವಾಹದ ಮಾತುಕತೆ ನಡೆಯುವುದು. ವಿದ್ಯಾರ್ಥಿಗಳಿಗೆ ಶುಭಫಲಗಳು ದೊರೆಯುತ್ತವೆ. ಹಣಕಾಸಿನ ವ್ಯವಹಾರದಲ್ಲಿ ಹಿನ್ನೆಡೆ ಉಂಟಾಗುವುದು.
ವಾದ ವಿವಾದ ಕಡಿಮೆ ಮಾಡಿ. ಕುಟುಂಬದ ಹಿರಿಯರ ಆಶೀರ್ವಾದ ಪಡೆದ ನಂತರ ಕೆಲಸದಲ್ಲಿ ಮುಂದುವರಿಯಿರಿ.
ಮಕರ
ಕೆಲಸಕಾರ್ಯಗಳಲ್ಲಿ ಆತ್ಮೀಯರಿಂದಲೇ ಅಡ್ಡಿ ಉಂಟಾಗುತ್ತವೆ. ತಾಯಿ ಅಥವಾ ಅಜ್ಜಿಯಿಂದ ಹಣದ ಸಹಾಯ ದೊರೆಯುತ್ತದೆ. ರಾಜಕೀಯದವರು ತಟಸ್ಥ ನಿಲುವು ತಾಳುತ್ತಾರೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಹೋಟೆಲ್ ಆರಂಭಿಸಿ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಉತ್ತಮ ಊಹಾ ಶಕ್ತಿ ಇರುತ್ತದೆ. ಮಹಿಳೆಯರು ಮತ್ತು ಮಕ್ಕಳ ಉಡುಪುಗಳ ವ್ಯಾಪಾರದಲ್ಲಿ ಲಾಭವಿದೆ. ನರ ನಿಶ್ಯಕ್ತಿ ಇರುತ್ತದೆ. ಧಾರ್ಮಿಕತೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಂದ ಧನಲಾಭವಿದೆ.
ಕಪ್ಪು ಬಣ್ಣದ ನಾಯಿಗೆ ಆಹಾರ ನೀಡಿದ ನಂತರ ಕೆಲಸ ಕಾರ್ಯಗಳನ್ನು ಮುಂದುವರಿಸಿ.
ಕುಂಭ
ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆವ ಸಾಧ್ಯತೆ ಕಡಿಮೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ರಾಜಕೀಯ ಮತ್ತು ಸಮಾಜದ ಗಣ್ಯವ್ಯಕ್ತಿಗಳ ಸ್ನೇಹ ದೊರೆಯುತ್ತದೆ. ವಿದ್ಯಾರ್ಥಿಗಳು ಅವಿರಥ ಶ್ರಮದಿಂದ ತಮ್ಮ ಕೆಲಸ ಸಾಧಿಸುತ್ತಾರೆ. ಆಧ್ಯಾತ್ಮಿಕ ವಿಚಾರಗಳ ಅರಿವು ಇರುತ್ತದೆ. ಅನಿರೀಕ್ಷಿತ ಧನಲಾಭವಿರುತ್ತದೆ. ಹೊಸ ವ್ಯಾಪಾರ ವ್ಯವಹಾರವನ್ನು ಆರಂಭಿಸಲು ಇದು ಸಕಾಲವಲ್ಲ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಸಹನೆಯಿಂದ ಬಾಳುವ ಅವಶ್ಯಕತೆ ಇದೆ.
ಸಿಹಿತಿಂದು ನೀರು ಕುಡಿದ ನಂತರ ಕೆಲಸದಲ್ಲಿ ನಿರತರಾದಲ್ಲಿ ಶುಭವಿರುತ್ತದೆ.
ಮೀನ
ವಂಶಕ್ಕೆ ಸೇರಿದ ಆಸ್ತಿಯಲ್ಲಿ ಸಿಂಹಪಾಲು ದೊರೆಯುತ್ತದೆ. ಅನಿರೀಕ್ಷಿತ ಧನಲಾಭವಿದೆ. ರಾಜಕೀಯದಲ್ಲಿ ಒಳ್ಳೆಯ ಸ್ಥಾನ ಮಾನ ದೊರೆಯುತ್ತವೆ. ಆತ್ಮೀಯರಿಂದಲೇ ಅಡ್ಡಿ ಆತಂಕಗಳು ಎದುರಾಗುತ್ತವೆ. ವಾಸಸ್ಥಳ ಬದಲಾಗುವ ಸಾಧ್ಯತೆಗಳಿವೆ. ಚಂಚಲ ಆತುರ ಮತ್ತು ಹಠದ ಗುಣದಿಂದಾಗಿ ಜೀವನದಲ್ಲಿ ಹಿನ್ನೆಡೆ ಉಂಟಾಗುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ಇರುವುದಿಲ್ಲ. ಪುಟ್ಟ ಮಕ್ಕಳ ಆರೋಗ್ಯದಲ್ಲಿ ತೊಂದರೆ ಎದುರಾಗುತ್ತದೆ. ವಿದ್ಯಾರ್ಥಿಗಳು ಮುನ್ನೆಡೆ ಸಾಧಿಸುತ್ತಾರೆ. ರಕ್ತದ ದೋಷವಿರುತ್ತದೆ. ಕೆಲಸ ಕಾರ್ಯಾಗಳಲ್ಲಿ ಸಫಲರಾಗಲು ದಿಟ್ಟ ನಿರ್ಧಾರದ ಅವಶ್ಯಕತೆ ಇರುತ್ತದೆ.
ಹಸುವಿಗೆ ಮೇವನ್ನು ಹಾಕಿದ ನಂತರ ದೈನಂದಿನ ಕೆಲಸವನ್ನು ಆರಂಭಿಸಿ.