Horoscope Today: ಭೂವಿವಾದದಲ್ಲಿ ಹೆಚ್ಚಿನ ಆತಂಕ, ಕಾನೂನು ಹೋರಾಟಕ್ಕಿಂತ ಮಾತುಕತೆಯಿಂದ ಪರಿಹಾರ ಸಾಧ್ಯ; ಭಾನುವಾರದ ರಾಶಿಫಲ
Dec 24, 2023 05:10 AM IST
24 ಡಿಸೆಂಬರ್, ಭಾನುವಾರದ ರಾಶಿ ಭವಿಷ್ಯ
24 ಡಿಸೆಂಬರ್, ಭಾನುವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (24th December 2023 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(24th December 2023 Daily Horoscope).
ತಾಜಾ ಫೋಟೊಗಳು
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ-ದಕ್ಷಿಣಾಯನ_ಹೇಮಂತ ಋತು-ಮಾರ್ಗಶಿರ ಮಾಸ-ಶುಕ್ಲಪಕ್ಷ-ಭಾನುವಾರ
ತಿಥಿ : ತ್ರಯೋದಶಿ ಬೆಳಗ್ಗೆ 05.27 ರವರೆಗೆ ಇರಲಿದ್ದು ನಂತರ ಚತುರ್ದಶಿ ಆರಂಭವಾಗುತ್ತದೆ.
ನಕ್ಷತ್ರ : ಕೃತ್ತಿಕಾ ನಕ್ಷತ್ರವು ರಾತ್ರಿ 09.38 ವರೆಗೂ ಇರುತ್ತದೆ ನಂತರ ರೋಹಿಣಿ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 06.38
ಸೂರ್ಯಾಸ್ತ: ಸಂಜೆ 05.59
ರಾಹುಕಾಲ: ಸಂಜೆ 04.30 ರಿಂದ 06.00
ಧನಸ್ಸು
ಭೂ ವಿವಾದವೊಂದು ಕುಟುಂಬದಲ್ಲಿ ಆತಂಕವನ್ನು ಉಂಟುಮಾಡುತ್ತದೆ. ಹೋರಾಟಕ್ಕಿಂತ ಮಾತುಕತೆ ಒಳ್ಳೆಯದು. ಉದ್ಯೋಗದಲ್ಲಿ ನೆಮ್ಮದಿಯ ಪರಿಸರ ಇರುವುದಿಲ್ಲ. ಅಪೂರ್ಣಗೊಂಡ ಕೆಲಸ ಕಾರ್ಯಗಳನ್ನು ಪೂರೈಸಲು ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ. ಸಹೋದ್ಯೋಗಿಗಳ ಸಹಾಯ ಪಡೆಯುವುದು ಒಳ್ಳೆಯದು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುತ್ತದೆ. ವಿದ್ಯಾರ್ಥಿಗಳು ಆತಂಕದ ಕ್ಷಣಗಳನ್ನು ಎದುರಿಸಿದರೂ ಕಲಿಕೆಯಲ್ಲಿ ಯಶಸ್ಸು ಗಳಿಸುತ್ತಾರೆ. ಅನಗತ್ಯ ಖರ್ಚು ವೆಚ್ಚಗಳಿಗಾಗಿ ಹಣ ವಿನಿಯೋಗಿಸಬೇಕಾಗುತ್ತದೆ. ಪಾಲುದಾರಿಕೆಯ ವ್ಯಾಪಾರವಿದ್ದಲ್ಲಿ ಉತ್ತಮ ಆದಾಯ ಗಳಿಸುವಿರಿ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಲು ಪ್ರಯತ್ನಿಸಿ. ಅನಾವಶ್ಯಕವಾಗಿ ಯಾರ ಮೇಲೂ ಸಂದೇಹ ಪಡಬೇಡಿ.
ಪರಿಹಾರ : ಬಾಲಕಿಯರಿಗೆ ಕುಡಿಯಲು ಹಣ್ಣಿನ ರಸವನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ನೇರಳೆ
ಮಕರ
ಕುಟುಂಬದಲ್ಲಿ ಕೊಂಚ ಒತ್ತಡವಿದ್ದರೂ ತಡವಾಗಿ ನಿರೀಕ್ಷಿತ ಯಶಸ್ಸನ್ನು ಗಳಿಸುವಿರಿ. ಉದ್ಯೋಗದಲ್ಲಿ ಆತುರದ ನಿರ್ಧಾರ ತಾಳದಿರಿ. ಉತ್ತಮ ಅವಕಾಶಗಳಿದ್ದು ಉದ್ಯೋಗವನ್ನು ಬದಲಿಸುವ ನಿರ್ಧಾರ ಮಾಡುವಿರಿ. ಸ್ವಂತ ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ಗಳಿಸುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಪೋಷಕರ ಮತ್ತು ಶಿಕ್ಷಕರ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಒಲ್ಲದ ಮನಸ್ಸಿನಿಂದ ದೊಡ್ಡ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮಾನಸಿಕ ಒತ್ತಡದಿಂದ ಹೊರ ಬರಲು ಯೋಗ, ಧ್ಯಾನವನ್ನು ಅನುಸರಿಸುವಿರಿ. ಅವಶ್ಯವಿದ್ದಲ್ಲಿ ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ.
ಪರಿಹಾರ : ತಂದೆಯವರಿಗೆ ಕುಡಿಯಲು ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು ಪಶ್ಚಿಮ
ಅದೃಷ್ಟದ ಬಣ್ಣ: ಗುಲಾಬಿ
ಕುಂಭ
ನಿಮ್ಮ ಮಾತಿಗೆ ಕುಟುಂಬದಲ್ಲಿ ಸಂಪೂರ್ಣ ಗೌರವ ದೊರೆಯುತ್ತದೆ. ಉತ್ತಮ ಮಾತುಕತೆಯಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಉದ್ಯೋಗದಲ್ಲಿ ಪ್ರಯತ್ನ ಪಟ್ಟಷ್ಟು ಉತ್ತಮ ಫಲಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳದಿರಿ. ವಿದ್ಯಾರ್ಥಿಗಳಿಗೆ ಬೇರೆಯವರ ಸಹಾಯ ಅಗತ್ಯವಿರುತ್ತದೆ. ಆರೋಗ್ಯ ಸ್ಥಿರವಾಗಿ ಇರಿಸಲು ದೈಹಿಕ ವ್ಯಾಯಾಮವನ್ನು ಅವಲಂಬಿಸುವಿರಿ. ಸಂಬಂಧಿಕರಿಗೆ ನೀಡಿದ್ದ ಹಣ ಮರಳಿ ಕೈ ಸೇರುತ್ತದೆ. ಸಮಯ ಕಳೆದಂತೆ ಹಣ ಕೈ ಸೇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಸ್ಥರಾಗಿದ್ದಲ್ಲಿ ಅನಿರೀಕ್ಷಿತ ಫಲಗಳನ್ನು ಪಡೆಯಬಹುದು.
ಪರಿಹಾರ : ಕೆಂಪು ಬಟ್ಟೆ ಧರಿಸಿ ದಿನದ ಕೆಲಸವನ್ನು ಆರಂಭಿಸುವುದು ಒಳ್ಳೆಯದು.
ಅದೃಷ್ಟದ ಸಂಖ್ಯೆ :12
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ :ಬೂದು
ಮೀನ
ಒತ್ತಡದ ಸನ್ನಿವೇಶದಲ್ಲೂ ಬುದ್ಧಿವಂತಿಕೆಯ ತೀರ್ಮಾನಗಳನ್ನು ಕೈಗೊಳ್ಳುವಿರಿ. ಸ್ವಂತ ಕೆಲಸಗಳಿಗೆ ಮೊದಲ ಆದ್ಯತೆ ನೀಡುವಿರಿ. ಕುಟುಂಬದಲ್ಲಿ ಹೊಸ ನಿರೀಕ್ಷೆಗಳಿಂದಾಗಿ ವಾಸ ಸ್ಥಳ ಬದಲಾಯಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ವರಮಾನಕ್ಕೆ ಕೊರತೆ ಇರುವುದಿಲ್ಲ. ವಿದ್ಯಾರ್ಥಿಗಳು ಹಾದಿ ತಪ್ಪದೇ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಕಷ್ಟದಲ್ಲಿ ಇದ್ದವರಿಗೆ ಸಹಾಯಮಾಡುವ ಗುಣದಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಉನ್ನತ ಜ್ಞಾನ ಗಳಿಸಲು ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ವಾಹನ ಚಾಲನೆ ಮಾಡುವ ವೇಳೆ ಅಥವಾ ಈಜುವ ವೇಳೆ ಎಚ್ಚರಿಕೆಯಿಂದ ಇರಬೇಕು. ಹೊಸ ವರ್ಷಕ್ಕೆ ವಿನೂತನ ಯೋಜನೆಯೊಂದನ್ನು ರೂಪಿಸುವಿರಿ.
ಪರಿಹಾರ : ಬೇವಿನ ಗಿಡಕ್ಕೆ ನೀರೆರೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಗುಲಾಬಿ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).