Trigrahi yoga: ಕುಂಭ ರಾಶಿಯಲ್ಲಿ ಸಂಭವಿಸಲಿದೆ ತ್ರಿಗ್ರಾಹಿ ಯೋಗ: ನಿಮ್ಮ ರಾಶಿಗೆ ಶುಭ-ಅಶುಭ ಫಲ ಹೀಗಿದೆ
Feb 18, 2024 12:37 PM IST
ರಾಶಿಚಕ್ರ
- ಈ ಬಾರಿ ಕುಂಭ ರಾಶಿಯಲ್ಲಿ ಬುಧ, ಶನಿ ಹಾಗೂ ಸೂರ್ಯನ ಸಮ್ಮಿಲನ ಆಗುತ್ತಿದೆ. ಇದರಿಂದ ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ಯಾವ್ಯಾವ ರಾಶಿಯವರು ಶುಭಫಲ ಹಾಗೂ ಅಶುಭ ಫಲಪಡೆಯಲಿದ್ದಾರೆ ನೋಡೋಣ..
ಫೆಬ್ರವರಿ ತಿಂಗಳಲ್ಲಿ ಅನೇಕ ಗ್ರಹಗಳ ಚಲನೆಯಲ್ಲಿ ಏರಿಳಿತಗಳು ಕಂಡುಬರುತ್ತಿದ್ದು ಸಾಕಷ್ಟು ರಾಶಿಯವರ ಬದುಕು ಬದಲಾಗಲಿದೆ. ಮಾಘ ಮಾಸದ ಶುಕ್ಲ ಪಕ್ಷದ ದಶಮಿ ತಿಥಿಯಂದು ಬುಧನು ಶನಿಯ ಮೊದಲ ಮನೆಯಾದ ಮಕರ ರಾಶಿಯಿಂದ ಎರಡನೇ ಮನೆಯಾದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಬುಧನನ್ನು ಬುದ್ಧಿವಂತಿಕೆ, ಜ್ಞಾನ , ಶಕ್ತಿಯ ಅಧಿಪತಿ ಎಂದು ಹೇಳಲಾಗುತ್ತದೆ.
ತಾಜಾ ಫೋಟೊಗಳು
ಶನಿ ಹಾಗೂ ಸೂರ್ಯ ಇಬ್ಬರೂ ಈಗಾಗಲೇ ಕುಂಭ ರಾಶಿಯನ್ನು ಪ್ರವೇಶಿಸಿದ್ದಾರೆ. ತ್ರಿಗ್ರಾಹಿ ಯೋಗವು ಒಂದು ರಾಶಿಯಲ್ಲಿ ಮೂರು ಗ್ರಹಗಳ ಸಂಯೋಜನೆಯಿಂದ ಸಂಭವಿಸುತ್ತದೆ. ಪ್ರತಿಕೋದ್ಯಮ ಕ್ಷೇತ್ರಕ್ಕೆ ಸೇರಿದವರಿಗೆ ತ್ರಿಗ್ರಾಹಿ ಯೋಗದಿಂದ ಲಾಭ ಸಿಗಲಿದೆ. ಹಾಗಾದರೆ ತ್ರಿಗ್ರಾಹಿ ಯೋಗದಿಂದ ಯಾವ ರಾಶಿಯಲ್ಲಿ ಜನಿಸಿದವರಿಗೆ ಯಾವೆಲ್ಲ ರೀತಿಯ ಪ್ರಯೋಜನವಿದೆ ಹಾಗೂ ಅಶುಭ ಫಲವಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ : ಆದಾಯದ ಮೂಲಗಳಲ್ಲಿ ಪ್ರಗತಿ ಕಾಣಲಿದ್ದೀರಿ. ಒಡಹುಟ್ಟಿದವರು ಮತ್ತು ಸ್ನೇಹಿತರಿಂದ ಕೆಲವು ಉದ್ವಿಗ್ನ ಪರಿಸ್ಥಿತಿಗಳು ಉಂಟಾಗಬಹುದು. ಅನಾರೋಗ್ಯದ ಕಾರಣ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ.
ವೃಷಭ ರಾಶಿ : ಈ ರಾಶಿಯಲ್ಲಿ ಜನಿಸಿದವರು ತ್ರಿಗ್ರಾಹಿ ಯೋಗದಿಂದಾಗಿ ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಲಿದ್ದಾರೆ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯಲಿದ್ದೀರಿ. . ಹಣದ ವಿಚಾರದಲ್ಲಿ ಪ್ರಗತಿ ಕಾಣಲಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ. ಕುಟುಂಬದ ಕೆಲಸದಲ್ಲಿ ಆಸಕ್ತಿ ಹೆಚ್ಚಲಿದೆ .
ಮಿಥುನ ರಾಶಿ : ಒಂದೇ ರಾಶಿಯಲ್ಲಿ ಬುಧ,ಶನಿ ಹಾಗೂ ಸೂರ್ಯನ ಸಮ್ಮಿಲಿನವಾಗುವುದರಿಂದ ಮಿಥುನ ರಾಶಿಯಲ್ಲಿ ಜನಿಸಿದವರ ಮಾನಸಿಕ ಸ್ಥೈರ್ಯ ಹೆಚ್ಚಲಿದೆ. ಸಮಾಜದಲ್ಲಿ ನಿಮಗೆ ಅಧಿಕಾರ ಹಾಗೂ ಗೌರವ ಹೆಚ್ಚುತ್ತದೆ. ಕಚೇರಿ ಕೆಲಸದ ಸ್ಥಳದಲ್ಲಿ ಅದೃಷ್ಟ ನಿಮ್ಮದಾಗಲಿದೆ. ಸ್ನೇಹಿತರು ಹಾಗೂ ಒಡಹುಟ್ಟಿದವರಿಂದ ಬೆಂಬಲ ಪಡೆಯಲಿದ್ದೀರಿ.
ಕಟಕ ರಾಶಿ : ತ್ರಿಗ್ರಾಹಿ ಯೋಗದಿಂದಾಗಿ ವ್ಯಾಪಾರ ಮಾಡುವವರು ಶುಭ ಸಂಕೇತವನ್ನು ಪಡೆಯಲಿದ್ದಾರೆ. ಕೌಟುಂಬಿಕ ವಿಚಾರದಲ್ಲಿ ಒತ್ತಡ ಮುಂದುವರಿಯಲಿದೆ. ಆರೋಗ್ಯ ಸಮಸ್ಯೆಗಳಿಗೆ ಹಣ ವ್ಯಯವಾಗಬಹುದು.
ಸಿಂಹ ರಾಶಿ : ಆರ್ಥಿಕವಾಗಿ ಅಭಿವೃದ್ಧಿ ಕಾಣಲಿದ್ದೀರಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ಕೌಟುಂಬಿಕ ಚಟುವಟಿಕೆಗಳು ಸಂತೋಷದಿಂದ ನಡೆಯಲಿದೆ.
ತುಲಾ ರಾಶಿ: ತ್ರಿಗ್ರಾಹಿ ಯೋಗದಿಂದಾಗಿ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಹೊಸ ಆದಾಯ ಮಾರ್ಗಗಳನ್ನು ಹುಡುಕಿಕೊಳ್ಳಲಿದ್ದೀರಿ. ಸಂತಾನ ಭಾಗ್ಯ ಸಿಗಲಿದೆ. ದೂರ ಪ್ರಯಾಣದ ವೆಚ್ಚ ಹೆಚ್ಚಾಗಲಿದೆ.
ಕನ್ಯಾ ರಾಶಿ: ಆತ್ಮಸ್ಥೈರ್ಯದಲ್ಲಿ ಹಠಾತ್ ಕುಸಿತ ಉಂಟಾಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಅಲರ್ಜಿಯ ಕಾರಣದಿಂದಾಗಿ ಒತ್ತಡ ಹೆಚ್ಚಲಿದೆ. ಉದ್ಯೋಗ ವ್ಯವಹಾರದಲ್ಲಿ ಆತ್ಮೀಯ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ : ಮನೆಯಲ್ಲಿ ನೆಮ್ಮದಿ ಹೆಚ್ಚಲಿದೆ. ರಿಯಲ್ ಎಸ್ಟೇಟ್ ವ್ಯವಹಾರವು ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಆದಾಯ ಮಾರ್ಗಗಳು ಹೊರಹೊಮ್ಮುತ್ತವೆ. ವ್ಯಾಪಾರ ಚಟುವಟಿಕೆಗಳು ಸುಗಮವಾಗಿ ಸಾಗಲಿವೆ. ಮನೆಯಲ್ಲಿ ಹಿರಿಯರ ಆರೋಗ್ಯ ಹದಗೆಡುತ್ತದೆ.
ಧನು ರಾಶಿ: ನಿಮ್ಮ ಪ್ರತಿಯೊಂದು ಕಾರ್ಯಗಳಿಗೂ ಸಂಗಾತಿಯ ಸಹಕಾರ ಹೆಚ್ಚಾಗುತ್ತದೆ. ಕೆಲಸದಲ್ಲಿ ಅದೃಷ್ಟ ಒಲಿಯಲಿದೆ. ಕಷ್ಟಪಟ್ಟು ಮಾಡಿದ ಕೆಲಸಗಳಿಗೆ ಫಲಿತಾಂಶ ಸಿಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ದೈನಂದಿನ ಆದಾಯದಲ್ಲಿ ಬೆಳವಣಿಗೆ ಕಂಡುಬರುತ್ತದೆ.
ಮಕರ ರಾಶಿ: ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಸಮಯ ಅನುಕೂಲಕರವಾಗಿದೆ. ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುವುದು. ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳು ತೊಂದರೆಯಾಗಬಹುದು. ಆರ್ಥಿಕ ಲಾಭ ನಿಮ್ಮದಾಗಲಿದೆ. ಮೂತ್ರನಾಳದ ಸೋಂಕು ನಿಮ್ಮನ್ನು ಕಾಡಬಹುದು.
ಕುಂಭ ರಾಶಿ : ಕುಂಭ ರಾಶಿಯಲ್ಲಿಯೇ ತ್ರಿಗ್ರಾಹಿ ಯೋಗ ಸಂಭವಿಸುತ್ತಿದೆ . ಹೀಗಾಗಿ ಈ ರಾಶಿಯು ಮೂರು ಗ್ರಹಗಳಿಂದ ಲಾಭವನ್ನು ಪಡೆಯಲಿದೆ. ಅಧ್ಯಯನದಲ್ಲಿ ಮೇಲುಗೈ ಸಾಧಿಸಲಿದ್ದೀರಿ. ಸಂತಾನದ ಶುಭ ವಾರ್ತೆ ಕೇಳುವಿರಿ. ಆದಾಯ ಹೆಚ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯತೆ ಹೆಚ್ಚಲಿದೆ.
ಮೀನ ರಾಶಿ : ಮನೆ ಮತ್ತು ವಾಹನದ ಖರ್ಚುಗಳ ಜೊತೆಯಲ್ಲಿ ನೀವು ಸಂತೋಷವಾಗಿರಲು ಹೆಚ್ಚು ಖರ್ಚು ಮಾಡುವ ಸಂದರ್ಭಗಳಿವೆ. ಚರ್ಮದ ಸಮಸ್ಯೆಗಳು ನಿಮ್ಮನ್ನು ಒತ್ತಡಕ್ಕೆ ದೂಡಬಹುದು. ಪ್ರೇಮ ಸಂಬಂಧಗಳು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಸಂಗಾತಿಯ ಆರೋಗ್ಯಕ್ಕಾಗಿ ಖರ್ಚು ಮಾಡುವ ಪರಿಸ್ಥಿತಿ ಉದ್ಭವಿಸುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)