ಆಶ್ಲೇಷ ನಕ್ಷತ್ರದಲ್ಲಿ ಶುಕ್ರ ಸಂಚಾರ; ಧನು ರಾಶಿ ಸೇರಿ ಈ 3 ರಾಶಿಯವರಿಗೆ ಲಕ್ಷ್ಮಿದೇವಿಯ ಅನುಗ್ರಹ, ಆರ್ಥಿಕ ಸಮಸ್ಯೆ ನಿವಾರಣೆ
Jul 14, 2024 04:18 PM IST
ಆಶ್ಲೇಷ ನಕ್ಷತ್ರದಲ್ಲಿ ಶುಕ್ರ ಸಂಚಾರ; ಧನು ರಾಶಿ ಸೇರಿ ಈ 3 ರಾಶಿಯವರಿಗೆ ಲಕ್ಷ್ಮಿದೇವಿಯ ಅನುಗ್ರಹ, ಆರ್ಥಿಕ ಸಮಸ್ಯೆ ನಿವಾರಣೆ
- Venus Nakshtra Transit: ಸಂಪತ್ತು ನೀಡುವ ಶುಕ್ರ ಜುಲೈ 20 ರಂದು ಆಶ್ಲೇಷಾ ನಕ್ಷತ್ರದಲ್ಲಿ ಸಾಗಲಿದ್ದಾನೆ. ಈ ಕಾರಣದಿಂದಾಗಿ ಧನು ರಾಶಿ ಸೇರಿದಂತೆ ಕೆಲವು ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳಿವೆ. ಆ ರಾಶಿಗಳು ಯಾವುವು ಮತ್ತು ಏನೆಲ್ಲಾ ಫಲಿತಾಮಂಶಗಳಿವೆ ಅನ್ನೋದನ್ನು ತಿಳಿಯೋಣ.
Venus Nakshtra Transit: ಧನ ಕೊಡುವ ಶುಕ್ರನು ಪ್ರಸ್ತುತ ಕಟಕ ರಾಶಿಯಲ್ಲಿದ್ದಾನೆ. 2024ರ ಜುಲೈ 31 ರವರೆಗೆ ಇದೇ ರಾಶಿಯಲ್ಲಿರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನನ್ನು ಸಂಪತ್ತು, ಸಂತೋಷ, ಖ್ಯಾತಿ ಹಾಗೂ ಸಂತೋಷದ ವೈವಾಹಿಕ ಜೀವನದ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನ ಸ್ಥಾನವು ಬಲವಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ ಮತ್ತು ಆರಾಮವಾಗಿ ಬದುಕುತ್ತಾನೆ ಎಂದು ನಂಬಲಾಗಿದೆ. ಶುಕ್ರನ ಶುಭ ಸ್ಥಾನವು ಲಕ್ಷ್ಮಿ ದೇವಿಯ ಕೃಪೆಯನ್ನು ನೀಡುತ್ತದೆ. ಅದೇ ಸಮಯದಲ್ಲಿ ದುರ್ಬಲಗೊಂಡ ಶುಕ್ರನ ಕಾರಣದಿಂದಾಗಿ ವ್ಯಕ್ತಿಯ ಜೀವನವು ಸಮಸ್ಯೆಗಳಿಂದ ಸುತ್ತುವರಿಯುತ್ತದೆ. ದೃಕ್ ಪಂಚಾಂಗದ ಪ್ರಕಾರ, ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ಶುಕ್ರನು ಪುಷ್ಯ ನಕ್ಷತ್ರವನ್ನು ತೊರೆದು 2024ರ ಜುಲೈ 20 ರಂದು ಸಂಜೆ 6:10 ಗಂಟೆಗೆ ಆಶ್ಲೇಷ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ.
ತಾಜಾ ಫೋಟೊಗಳು
ಆಶ್ಲೇಷ ನಕ್ಷತ್ರಕ್ಕೆ ಶುಕ್ರನ ಸಂಚಾರವು ಕೆಲವು ರಾಶಿಗಳಿಗೆ ಲಾಭದಾಯಕವಾಗಿದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಕೆಲವು ರಾಶಿಯ ಜನರು ಶುಕ್ರನ ನಕ್ಷತ್ರವು ಬದಲಾದ ತಕ್ಷಣ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರೆ. ಪ್ರತಿಯೊಂದು ಕೆಲಸವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತದೆ. ಶುಕ್ರ ಸಂಕ್ರಮಣದಿಂದ ಯಾವ ರಾಶಿಯವರು ತಮ್ಮ ಅದೃಷ್ಟವನ್ನು ಬದಲಾಯಿಸುತ್ತಾರೆ ಎಂಬುದನ್ನು ಕಂಡುಹಿಡಿಯೋಣ.
ಕನ್ಯಾರಾಶಿ
ಶುಕ್ರನ ನಕ್ಷತ್ರ ಬದಲಾವಣೆಯಿಂದಾಗಿ ಕನ್ಯಾ ರಾಶಿಯವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಈ ಸಮಯದಲ್ಲಿ ಜೀವನದ ಎಲ್ಲಾ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾರೆ. ವ್ಯಾಪಾರ ಪರಿಸ್ಥಿತಿಗಳು ಪ್ರಬಲವಾಗಿವೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಸಂಬಂಧದ ಸಮಸ್ಯೆಗಳು ದೂರವಾಗುತ್ತವೆ. ಧಾರ್ಮಿಕ ಕ್ಷೇತ್ರಕ್ಕೆ ಹೋಗುವ ಸಂಭವವಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತೀರಿ.
ಧನು ರಾಶಿ
ಆಶ್ಲೇಷ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಧನು ರಾಶಿಯವರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತದೆ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ವಸ್ತು ಸೌಕರ್ಯಗಳು ಹೆಚ್ಚಾಗುತ್ತವೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಆಕರ್ಷಣೆಯ ಕೇಂದ್ರವಾಗಿ ಉಳಿಯುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ. ಹೊಸ ಆದಾಯದ ಮೂಲಗಳಿಂದ ಹಣ ಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖವಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಶುಕ್ರ ಸಂಕ್ರಮಣ ಲಾಭದಾಯಕವಾಗಿದೆ. ಈ ಅವಧಿಯಲ್ಲಿ ನೀವು ಅನಿರೀಕ್ಷಿತ ಹಣದ ಲಾಭವನ್ನು ಪಡೆಯಬಹುದು. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯವಿರುತ್ತದೆ. ಸಹೋದರ ಸಹೋದರಿಯರೊಂದಿಗಿನ ಸಂಬಂಧಗಳು ಉತ್ತಮಗೊಳ್ಳುತ್ತವೆ. ಪೂರ್ವಿಕರ ಆಸ್ತಿ ಸಿಗುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ವಿವಾದಗಳಿಂದ ನೀವು ಮುಕ್ತರಾಗುತ್ತೀರಿ. ಆರೋಗ್ಯವೂ ಸುಧಾರಿಸುತ್ತದೆ. ವೆಚ್ಚ ನಿಯಂತ್ರಣದಲ್ಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳು ಉತ್ತಮವಾಗಿರುತ್ತವೆ. ಲಕ್ಷ್ಮಿ ದೇವಿಯ ಕೃಪೆಯಿಂದ ಹಣದ ಕೊರತೆ ಇರುವುದಿಲ್ಲ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)