logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮದುವೆಯ ಬಂಧನಕ್ಕೆ ನಾಡಿ ದೋಷ ಅಡ್ಡಿಯೇ? ವೈವಾಹಿಕ ಜೀವನಕ್ಕೆ ಯಾವ ರೀತಿ ವಿಘ್ನಗಳು ಎದುರಾಗಲಿದೆ? ಪರಿಹಾರಗಳೇನು?

ಮದುವೆಯ ಬಂಧನಕ್ಕೆ ನಾಡಿ ದೋಷ ಅಡ್ಡಿಯೇ? ವೈವಾಹಿಕ ಜೀವನಕ್ಕೆ ಯಾವ ರೀತಿ ವಿಘ್ನಗಳು ಎದುರಾಗಲಿದೆ? ಪರಿಹಾರಗಳೇನು?

Rakshitha Sowmya HT Kannada

Jun 01, 2024 04:57 PM IST

google News

ಮದುವೆಯ ಬಂಧನಕ್ಕೆ ನಾಡಿ ದೋಷ ಅಡ್ಡಿಯೇ? ವೈವಾಹಿಕ ಜೀವನಕ್ಕೆ ಯಾವ ರೀತಿ ವಿಘ್ನಗಳು ಎದುರಾಗಲಿದೆ? ಪರಿಹಾರಗಳೇನು?

  • Nadi Dosha And Solution: ಮದುವೆಯ ಸಮಯದಲ್ಲಿ ವಧು ವರರ ಜಾತವನ್ನು ಹೊಂದಿಸುವಾಗ ಎಂಟು ಅಂಶಗಳನ್ನು ಪರಿಗಣಿಸಲಾಗುತ್ತದೆ. ಅದರಲ್ಲಿ ನಾಡಿಯೂ ಒಂದು. ಇದು ಆರೋಗ್ಯ ಸಮಸ್ಯೆ, ಮನೋಧರ್ಮ, ಆರ್ಥಿಕ ಸವಾಲು ಮತ್ತು ವೃತಿ ಜೀವನದ ಮೇಲೆ ಅಡೆತಡೆಗಳನ್ನುಂಟು ಮಾಡಬಹುದು. ನಾಡಿ ದೋಷ ನಿವಾರಣೆಗೆ ಏನು ಮಾಡಬೇಕು ಇಲ್ಲಿದೆ ಓದಿ.

ಮದುವೆಯ ಬಂಧನಕ್ಕೆ ನಾಡಿ ದೋಷ ಅಡ್ಡಿಯೇ? ವೈವಾಹಿಕ ಜೀವನಕ್ಕೆ ಯಾವ ರೀತಿ ವಿಘ್ನಗಳು ಎದುರಾಗಲಿದೆ? ಪರಿಹಾರಗಳೇನು?
ಮದುವೆಯ ಬಂಧನಕ್ಕೆ ನಾಡಿ ದೋಷ ಅಡ್ಡಿಯೇ? ವೈವಾಹಿಕ ಜೀವನಕ್ಕೆ ಯಾವ ರೀತಿ ವಿಘ್ನಗಳು ಎದುರಾಗಲಿದೆ? ಪರಿಹಾರಗಳೇನು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕವು ವ್ಯಕ್ತಿಯ ಗುಣಲಕ್ಷಣ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಸುತ್ತದೆ. ಹಿಂದೂ ಧರ್ಮದಲ್ಲಿ ಮದುವೆಯ ಬಂಧವನ್ನು ಬೆಸೆಯುವ ಮೊದಲು ವಧು ಮತ್ತು ವರನ ಜಾತಕವನ್ನು ಹೋಲಿಸಿ ನೋಡಲಾಗುತ್ತದೆ. ನಿರ್ಧಾರ ಕೈಗೊಳ್ಳುವ ಮೊದಲು ಅಷ್ಟಗುಣಗಳ ಮಿಲನ ವಿಧಾನದ ಮೂಲಕ ಪರೀಕ್ಷಿಸಲಾಗುತ್ತದೆ. ಅದರ ಮೂಲಕ ದಾಂಪತ್ಯ ಜೀವನವು ಹೇಗೆ ಸಾಗುತ್ತದೆ ಎಂದು ಅರ್ಥೈಸಲಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಅಷ್ಟಗುಣ ಮಿಲನದಲ್ಲಿ ನಾಡಿ ಗುಣವು ಒಂದು. ಇದು ಅತ್ಯಂತ ಮಹತ್ವದ್ದಾಗಿದೆ. ಜಾತಕದಲ್ಲಿ ನಾಡಿ ದೋಷ ಕಂಡುಬಂದರೆ ಅದನ್ನು ಅಶುಭ ಎಂದು ಪರಿಗಣಿಸಲಾಗಿದೆ. ಇದು ಸಂಗಾತಿಗಳಿಬ್ಬರಿಗೂ ಆರೋಗ್ಯ, ಮನೋಧರ್ಮ, ಆರ್ಥಿಕ ಸವಾಲು, ವೃತ್ತಿ ಜೀವನ ಮತ್ತು ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂಬ ನಂಬಿಕೆ ಜ್ಯೋತಿಷ್ಯಶಾಸ್ತ್ರದಲ್ಲಿದೆ. ಜಾತಕ ಹೊಂದಾಣಿಕೆಯಲ್ಲಿ ನಾಡಿಯು ಅತಿ ಹೆಚ್ಚು ಅಂಕಗಳನ್ನು ಹೊಂದಿದೆ. ಒಟ್ಟು 36 ಅಂಕಗಳಲ್ಲಿ 8 ಅಂಕವನ್ನು ನಾಡಿ ಹೊಂದಿದೆ. ನಾಡಿಯು ದೇಹದಲ್ಲಿನ ಶಕ್ತಿಯನ್ನು ಪ್ರತಿನಿಧಿಸುತ್ತದೆ. ನಾಡಿಯಲ್ಲಿ ಮೂರು ವಿಧಗಳಿವೆ. ಆದಿ ನಾಡಿ, ಮಧ್ಯ ನಾಡಿ ಮತ್ತು ಅಂತ್ಯ ನಾಡಿ. ಸಂಗಾತಿಗಳಾಗಲು ಬಯಸುವವರು ಏಕನಾಡಿ ಆಗಿದ್ದರೆ ಅದನ್ನು ನಾಡಿ ದೋಷ ಎಂದು ಕರೆಯಲಾಗುತ್ತದೆ. ವಧು ವರರ ಜಾತಕದಲ್ಲಿ ಅಷ್ಟಗುಣಗಳ ಪೈಕಿ ಎಲ್ಲವೂ ಹೊಂದಾಣಿಕೆಯಾಗಿ ನಾಡಿ ದೋಷವಿದ್ದರೆ ಅದು ಅವರ ವೈವಾಹಿಕ ಜೀವನಕ್ಕೆ ಸಮಸ್ಯೆ ಆಗಬಹುದು ಎಂದು ಪರಿಗಣಿಸಲಾಗುತ್ತದೆ.

ನಾಡಿ ದೋಷದಿಂದಾಗುವ ಪರಿಣಾಮಗಳು

* ಆರೋಗ್ಯ ಸಮಸ್ಯೆ

ನಾಡಿ ದೋಷಕ್ಕೆ ಸಂಬಂಧಿಸಿದಂತೆ ಮೊದಲ ದುಷ್ಪರಿಣಾಮವೆಂದರೆ ಸಂತತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ. ನಾಡಿ ದೋಷವಿರುವ ದಂಪತಿಗಳು ಆರೋಗ್ಯವಂತ ಮಕ್ಕಳನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅನುವಂಶೀಯ ಕಾಯಿಲೆಗಳಿಗೆ ಗುರಿಯಾಗಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದಲ್ಲದೇ ನಾಡಿ ದೋಷವಿರುವ ಸಂಗಾತಿಗಳಲ್ಲಿ ದೀರ್ಘಕಾಲದ ಗಂಭೀರ ಆರೋಗ್ಯ ಸಮಸ್ಯೆಗಳ ಸಾಧ್ಯತೆಯನ್ನು ಹೇಳುತ್ತದೆ.

* ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ

ವೈವಾಹಿಕ ಜೀವನ ಸಾಮರಸ್ಯದಿಂದ ಕೂಡಿದ್ದಾಗ ಮಾತ್ರ ಅದು ಸುಂದರ ಬದುಕಾಗುತ್ತದೆ. ಆದರೆ ನಾಡಿ ದೋಷವು ಸಾಮಾನ್ಯವಾಗಿ ಸಂಗಾತಿಗಳ ಮನೋಧರ್ಮ ಮತ್ತು ವ್ಯಕ್ತಿತ್ವದಲ್ಲಿ ಹೊಂದಾಣಿಕೆಯಾಗದಿರುವುದನ್ನು ಸೂಚಿಸುತ್ತದೆ. ವೈವಾಹಿಕ ಸಂಬಂಧದಲ್ಲಿ ತಪ್ಪು ತಿಳುವಳಿಕೆ, ವಾದ, ವಿವಾದಗಳಂತಹ ಅಹಿತಕರ ಸಂಗತಿಗಳಿಗೆ ಕಾರಣವಾಗಬಹುದು.

* ಹಣಕಾಸಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ

ಕೆಲವು ಜ್ಯೋತಿಷಿಗಳ ಪ್ರಕಾರ ನಾಡಿ ದೋಷವಿರುವವರು ಮದುವೆಯಾದರೆ ಭವಿಷ್ಯದಲ್ಲಿ ಹಣಕಾಸಿನ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಸೂಚಿಸುತ್ತಾರೆ. ದಂಪತಿಗಳು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.

* ವೃತ್ತಿ ಜೀವನದಲ್ಲಿ ಅಡೆತಡೆಗಳು

ನಾಡಿ ದೋಷವು ವೈಯಕ್ತಿಕ ಜೀವನದ ಜೊತೆಗೆ ವೃತಿ ಜೀವನದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಭಾವಿಸಲಾಗಿದೆ. ಈ ದೋಷವಿರುವ ದಂಪತಿಗಳು ಅವರ ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳನ್ನು, ಅಡೆತಡೆಗಳನ್ನು ಅನುಭವಿಸಬಹುದು. ಯಶಸ್ಸು, ಕೀರ್ತಿ ಅವರಿಂದ ದೂರವಾಗಬಹುದು.

ಪರಿಹಾರಗಳು

ಜ್ಯೋತಿಷ್ಯ ಶಾಸ್ತ್ರದಲ್ಲಿ ದೋಷಗಳ ಬಗ್ಗೆ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೇಳಿದಂತೆ ಅದಕ್ಕೆ ಪರಿಹಾರವನ್ನೂ ಸಹ ಸೂಚಿಸಲಾಗಿದೆ. ನಾಡಿ ದೋಷವೆಂಬುದು ಜನನದಿಂದಲೇ ಬಂದಿರುವ ದೋಷವಲ್ಲ. ಅದು ವಿವಾಹದ ಸಮಯದಲ್ಲಿ ವಧು ಮತ್ತು ವರ ಇಬ್ಬರ ಜಾತಕವನ್ನು ಹೊಂದಿಸಿದಾಗ ಕಂಡು ಬರುವ ದೋಷವಾಗಿದೆ. ಹಾಗಾಗಿ ಅದರ ಪರಿಣಾಮವನ್ನು ಕೆಲವು ವಿಭಿನ್ನ ಅಂಶಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಲಾಗಿದೆ.

* ಸಂಗಾತಿಗಳಾಗಲು ಬಯಸುವ ಇಬ್ಬರ ಚಂದ್ರ ರಾಶಿಯ ಅಧಿಪತಿ ಅಥವಾ ರಾಶಿಯ ಅಧಿಪತಿ ಒಂದೇ ಆಗಿರಬೇಕು. ಅಥವಾ ಇಬ್ಬರ ರಾಶಿಯೂ ಸ್ನೇಹಪರವಾಗಿರಬೇಕು.

* ಇಬ್ಬರ ಜನ್ಮ ನಕ್ಷತ್ರವು ಒಂದೇ ಆಗಿರಬೇಕು ಮತ್ತು ಪರಸ್ಪರ ಸ್ನೇಹಪರವಾಗಿರಬೇಕು.

* ದೋಷದ ದುಷ್ಪರಿಣಾಮ ಹೋಗಲಾಡಿಸಲು ನಾಡಿ ದೋಷ ನಿವಾರಣಾ ಪೂಜೆಯನ್ನು ಮಾಡಿಸಬೇಕು.

* ಇಬ್ಬರ ಜಾತಕದಲ್ಲಿ ಯಾವುದೇ ಭಕೂಟ ದೋಷ ಇರಬಾರದು.

* ಜನ್ಮ ನಕ್ಷತ್ರ ಅಥವಾ ತೊಂದರೆ ನೀಡುವ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದಲೂ ದೋಷದ ದುಷ್ಪರಿಣಾಮದಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ