logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಚ್ಚೆಫಲ: ದೈಹಿಕ ಸೌಂದರ್ಯದ ಪ್ರತೀಕ ಮಾತ್ರವಲ್ಲ; ನಿಮ್ಮ ಭವಿಷ್ಯವನ್ನೂ ಸೂಚಿಸುತ್ತವೆ ದೇಹದ ಮೇಲಿನ ಮಚ್ಛೆಗಳು

ಮಚ್ಚೆಫಲ: ದೈಹಿಕ ಸೌಂದರ್ಯದ ಪ್ರತೀಕ ಮಾತ್ರವಲ್ಲ; ನಿಮ್ಮ ಭವಿಷ್ಯವನ್ನೂ ಸೂಚಿಸುತ್ತವೆ ದೇಹದ ಮೇಲಿನ ಮಚ್ಛೆಗಳು

Rakshitha Sowmya HT Kannada

Aug 02, 2024 05:30 PM IST

google News

ಮಚ್ಚೆಫಲ: ದೈಹಿಕ ಸೌಂದರ್ಯದ ಪ್ರತೀಕ ಮಾತ್ರವಲ್ಲ; ನಿಮ್ಮ ಭವಿಷ್ಯವನ್ನೂ ಸೂಚಿಸುತ್ತವೆ ದೇಹದ ಮೇಲಿನ ಮಚ್ಛೆಗಳು

  • ದೇಹದ ಮೇಲಿನ ಮಚ್ಚೆ ಕೇವಲ ದೈಹಿಕ ಸೌಂದರ್ಯದ ಸಂಕೇತವಲ್ಲ, ಆದರೆ ಅವುಗಳ ಹಿಂದೆ ಆಳವಾದ ಅರ್ಥ ಮತ್ತು ಸಾಂಕೇತಿಕ ಮಹತ್ವವಿದೆ. ಮಚ್ಚೆ ಇರುವ ಜಾಗ ಸ್ಥಳ, ಗಾತ್ರ ಮತ್ತು ಬಣ್ಣವನ್ನು ಆಧರಿಸಿ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ಅನೇಕ ವಿಷಯಗಳನ್ನು ಹೇಳಬಹುದು.

ಮಚ್ಚೆಫಲ: ದೈಹಿಕ ಸೌಂದರ್ಯದ ಪ್ರತೀಕ ಮಾತ್ರವಲ್ಲ; ನಿಮ್ಮ ಭವಿಷ್ಯವನ್ನೂ ಸೂಚಿಸುತ್ತವೆ ದೇಹದ ಮೇಲಿನ ಮಚ್ಛೆಗಳು
ಮಚ್ಚೆಫಲ: ದೈಹಿಕ ಸೌಂದರ್ಯದ ಪ್ರತೀಕ ಮಾತ್ರವಲ್ಲ; ನಿಮ್ಮ ಭವಿಷ್ಯವನ್ನೂ ಸೂಚಿಸುತ್ತವೆ ದೇಹದ ಮೇಲಿನ ಮಚ್ಛೆಗಳು

ಪ್ರತಿಯೊಬ್ಬರ ದೇಹದ ರಚನೆ ಬೇರೆ ಬೇರೆಯಾಗಿರುತ್ತದೆ. ಕೆಲವರು ಉದ್ದ, ಕೆಲವರು ಗಿಡ್ಡ, ದಪ್ಪ, ಸಣ್ಣ ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ದೇಹ ರಚನೆ ಹೊಂದಿರುತ್ತಾರೆ. ಹಾಗೇ ಕೆಲವರಿಗೆ ದೇಹದ ಮೇಲೆ ಮಚ್ಚೆ ಇರುತ್ತದೆ. ಕಾಲು, ಕೈ, ಮುಖ, ಬೆನ್ನು ಹೀಗೆ ವಿವಿಧ ಕಡೆಗಳಲ್ಲಿ ಹುಟ್ಟು ಮಚ್ಚೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿ ಮಚ್ಚೆ ಇದ್ದರೆ ಏನು ಅರ್ಥ? ಮುಖದ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಏನು ಫಲ ದೊರೆಯಲಿದೆ? ಇಲ್ಲಿದೆ ವಿವರ

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಹಣೆಯ ಮೇಲಿನ ಮಚ್ಚೆ

ಕೆಲವರಿಗೆ ಮುಖದ ಮೇಲೆ, ಅದರಲ್ಲೂ ಹಣೆಯ ಮೇಲೆ ದೊಡ್ಡ ಮಚ್ಚೆ ಇರುತ್ತದೆ. ಈ ರೀತಿ ಇದ್ದರೆ ಇದು ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಪ್ರಗತಿಯ ಸಂಕೇತವಾಗಿದೆ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ನೀವು ಉನ್ನತ ಸ್ಥಾನ ತಲುಪುತ್ತೀರಿ ಮತ್ತು ನಿಮ್ಮ ಪ್ರಯತ್ನಗಳಿಗೆ ಖಂಡಿತವಾಗಿಯೂ ಪ್ರತಿಫಲ ಸಿಗುತ್ತದೆ ಎಂದು ಇದು ಸೂಚಿಸುತ್ತದೆ.

ಹಣೆಯ ಬಲಭಾಗದಲ್ಲಿರುವ ಮಚ್ಚೆ

ಈ ಮಚ್ಚೆಯು ನೀವು ಬುದ್ಧಿವಂತ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಈ ರೀತಿ ಹಣೆಯ ಬಲಭಾಗದಲ್ಲಿ ಮಚ್ಚೆ ಇರುವವರಿಗೆ ಧಾರ್ಮಿಕತೆಯಲ್ಲಿ ಬಹಳ ನಂಬಿಕೆ ಇದೆ ಎಂಬುದನ್ನು ಸೂಚಿಸುತ್ತದೆ. ನೀವು ಜೀವನದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಯನ್ನು ಅನುಸರಿಸುತ್ತೀರಿ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದೀರಿ ಎಂದು ಇದು ಸೂಚಿಸುತ್ತದೆ.

ಹಣೆಯ ಎಡಭಾಗದ ಮಚ್ಚೆ

ಈ ರೀತಿ ಹಣೆಯ ಎಡಭಾಗದಲ್ಲಿ ಮಚ್ಚೆ ಇರುವವರು ಬಹಳ ಮೊಂಡುತನದ ಸ್ವಭಾವದವರಾಗಿರುತ್ತಾರೆ. ಈ ರೀತಿಯ ಸ್ವಭಾವದಿಂದಲೇ ಇವರು ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ.

ಕಣ್ಣುಗಳ ಬಳಿ ಮಚ್ಚೆ

ಕಣ್ಣುಗಳ ಮೂಲೆಯಲ್ಲಿರುವ ಮಚ್ಚೆ ಇರುವವರು ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಇವರಿಗೆ ಕಲೆ ಮತ್ತು ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಈ ರೀತಿಯ ವ್ಯಕ್ತಿಗಳು ಬಹಳ ಸೂಕ್ಷ್ಮ ಹಾಗೂ ರೊಮ್ಯಾಂಟಿಕ್‌ ಆಗಿರುತ್ತಾರೆ.

ಹುಬ್ಬುಗಳ ನಡುವೆ ಮಚ್ಚೆ

ಎರಡು ಹುಬ್ಬುಗಳ ನಡುವೆ ಮಚ್ಚೆ ಇದ್ದರೆ ಅಂತಹ ವ್ಯಕ್ತಿಗಳಿಗೆ ಆಧ್ಯಾತ್ಮದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಇವರು ಹೆಚ್ಚಾಗಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುತ್ತಾರೆ.

ಅಂಗೈ ಮೇಲಿನ ಮಚ್ಚೆ

ನಿಮ್ಮ ಅಂಗೈಯಲ್ಲಿ ಮಚ್ಚೆ ಇದ್ದರೆ, ಅದು ಆರ್ಥಿಕ ಸಮೃದ್ಧಿ ಮತ್ತು ಯಶಸ್ಸಿನ ಸಂಕೇತವಾಗಿದೆ ಎಂದು ಅರ್ಥ. ನೀವು ಉತ್ತಮ ಆರ್ಥಿಕ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿದ್ದೀರಿ ಮತ್ತು ಕಠಿಣ ಪರಿಶ್ರಮದ ಮೂಲಕ ನೀವು ಯಶಸ್ಸನ್ನು ಸಾಧಿಸುವಿರಿ ಎಂಬುದನ್ನು ಸೂಚಿಸುತ್ತದೆ.

ಮಣಿಕಟ್ಟಿನ ಮೇಲೆ ಮಚ್ಚೆ

ಈ ಮಚ್ಚೆಯು ನೀವು ಕಠಿಣ ಪರಿಶ್ರಮಿ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ಸೂಚಿಸುತ್ತದೆ. ನಿಮ್ಮ ಕೆಲಸದಲ್ಲಿ ನೀವು ಸಮರ್ಪಿತ ಮತ್ತು ಶಿಸ್ತು ಮತ್ತು ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

ಎದೆಯ ಬಲಭಾಗದ ಮಚ್ಚೆ

ನೀವು ಶ್ರೀಮಂತ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತೀರಿ ಎಂದು ಇದು ಸೂಚಿಸುತ್ತದೆ. ಸಮೃದ್ದ ಆಸ್ತಿಯನ್ನು ಹೊಂದಿರುತ್ತೀರಿ, ಜೀವನದುದ್ದಕ್ಕೂ ನೀವು ಸಂಪತ್ತು ಮತ್ತು ಸಂತೋಷವನ್ನು ಅನುಭವಿಸಲಿದ್ದೀರಿ.

ಎದೆಯ ಎಡಭಾಗದಲ್ಲಿ ಮಚ್ಚೆ

ನೀವು ಭಾವನಾತ್ಮಕ ಮತ್ತು ಸೂಕ್ಷ್ಮ ವ್ಯಕ್ತಿ ಎಂದು ಇದು ಸೂಚಿಸುತ್ತದೆ. ನೀವು ಇಷ್ಟಪಟ್ಟವರ ಬಗ್ಗೆ ಎಷ್ಟು ಭಾವನಾತ್ಮಕ ಬಾಂಧವ್ಯ ಮತ್ತು ಪ್ರೀತಿ ಹೊಂದಿರುವ ನಿಮ್ಮ ಸ್ವಭಾವವನ್ನು ಇದು ಸೂಚಿಸುತ್ತದೆ.

ಬೆನ್ನಿನ ಮೇಲ್ಭಾಗದಲ್ಲಿನ ಮಚ್ಚೆ

ಈ ರೀತಿಯ ವ್ಯಕ್ತಿಗಳು ನಾಯಕತ್ವ-ಆಧಾರಿತ ಮತ್ತು ಮಹತ್ವಾಕಾಂಕ್ಷೆಯ ವ್ಯಕ್ತಿಗಳಾಗಿರುತ್ತಾರೆ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಸ್ಥಾನವನ್ನು ಹೊಂದಿರುತ್ತಾರೆ. ಈ ರೀತಿ ಬೆನ್ನಿನ ಮೇಲ್ಬಾಗ ಮಚ್ಚೆ ಇರುವವರು ಯಾವುದೇ ಕಂಪನಿಯ ನಾಯಕತ್ವ ಹೊಂದಿದ್ದಲ್ಲಿ ಆ ಸಂಸ್ಥೆ ಉನ್ನತ ಯಶಸ್ಸು ಸಾಧಿಸಲಿದೆ ಎಂದು ಅರ್ಥ.

ಮಚ್ಚೆಗಳ ಬಣ್ಣ ಏನನ್ನು ಸೂಚಿಸುತ್ತದೆ

ಗಾಢ ಬಣ್ಣದ ಮಚ್ಚೆಗಳು ನಿಮ್ಮ ಮುಂದಿನ ಜೀವನದಲ್ಲಿ ಪ್ರಮುಖ ಮತ್ತು ಶಾಶ್ವತವಾದ ಬದಲಾವಣೆಗಳು ಸಂಭವಿಸಬಹುದು ಎಂದು ಸೂಚಿಸುತ್ತದೆ. ತಿಳಿ ಬಣ್ಣದ ಮಚ್ಚೆಯು ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಈ ಮಚ್ಚೆಯು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂದು ಸೂಚಿಸುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ