logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಯೋಧ್ಯೆ ರಾಮಮಂದಿರಕ್ಕೆ ಹರಿದು ಬಂದ ಉಡುಗೊರೆಗಳ ಪೈಕಿ ಅದ್ಭುತ ಎನ್ನಿಸುವ 4 ವಸ್ತುಗಳಿವು

ಅಯೋಧ್ಯೆ ರಾಮಮಂದಿರಕ್ಕೆ ಹರಿದು ಬಂದ ಉಡುಗೊರೆಗಳ ಪೈಕಿ ಅದ್ಭುತ ಎನ್ನಿಸುವ 4 ವಸ್ತುಗಳಿವು

Reshma HT Kannada

Jan 21, 2024 10:09 PM IST

google News

ಅಯೋಧ್ಯೆ ರಾಮಮಂದಿರಕ್ಕೆ ಹರಿದು ಬಂದ ಉಡುಗೊರೆ ಪೈಕಿ ಭಿನ್ನವಾಗಿರುವುದು

    • ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಗೆ ದೇಶದ ನಾನಾ ಭಾಗಗಳಿಂದ ಉಡುಗೊರೆಗಳ ರಾಶಿಯೇ ಬಂದಿವೆ. ಇವುಗಳಲ್ಲಿ ನಾಲ್ಕು ಬಹಳ ಭಿನ್ನ ಎನ್ನಿಸುವ ಅನನ್ಯ ಉಡುಗೊರೆಗಳು ಕೂಡ ಬಂದಿವೆ. ಅವು ಯಾವುವು, ಏನದರ ವಿಶೇಷ ನೋಡಿ.
ಅಯೋಧ್ಯೆ ರಾಮಮಂದಿರಕ್ಕೆ ಹರಿದು ಬಂದ ಉಡುಗೊರೆ ಪೈಕಿ ಭಿನ್ನವಾಗಿರುವುದು
ಅಯೋಧ್ಯೆ ರಾಮಮಂದಿರಕ್ಕೆ ಹರಿದು ಬಂದ ಉಡುಗೊರೆ ಪೈಕಿ ಭಿನ್ನವಾಗಿರುವುದು

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಬಾಲರಾಮನ ಪ್ರಾಣ ಪ್ರತಿಷ್ಠೆಗೂ ಮುನ್ನ ದೇಶದಾದ್ಯಂತ ರಾಮಭಕ್ತರು ಅಯೋಧ್ಯೆಗೆ ಉಡುಗೊರೆ ದೇಣಿಗೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಭಾರತದ ಮಾತ್ರವಲ್ಲದೇ ವಿದೇಶಗಳಿಂದಲೂ ರಾಮಮಂದಿರಕ್ಕೆ ಉಡುಗೊರೆಗಳು ಬಂದಿವೆ. ಭಕ್ತರಿಂದ ಅದ್ಭುತ, ಅನನ್ಯ ಉಡುಗೊರೆ ಬಂದಿದ್ದು, 4 ನಾಲ್ಕು ಭಿನ್ನ ಎನ್ನಿಸುವ ಉಡುಗೊರೆಗಳನ್ನು ವಿಡಿಯೊ ಸಹಿತ ಇಲ್ಲಿ ತೋರಿಸಲಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

108 ಅಡಿ ಉದ್ದದ ಊದಿನಕಡ್ಡಿ

ವಡೋದರಾದಲ್ಲಿ 108 ಅಡಿ ಉದ್ದದ ಊದಿನಕಡ್ಡಿಯನ್ನು ತಯಾರಿಸಲಾಗಿತ್ತು. ಈ ಊದಿನಕಡ್ಡಿಯು ಬರೋಬ್ಬರಿ 3500 ಕೆಜಿ ತೂಕವಿದೆ. ಇದನ್ನು ತಯಾರಿಸಲು 6 ತಿಂಗಳು ಸಮಯ ಬೇಕಾಗಿತ್ತು. ಅದಕ್ಕೆ 5 ಲಕ್ಷ ಖರ್ಚಾಗಿತ್ತು. ರಾಮಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮದ ಮೊದಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಧೂಪವನ್ನು ಬೆಳಗಿಸಿದರು. ಹಸುವಿನ ಸಗಣಿ, ತುಪ್ಪ, ಸಾರ, ಗಿಡಮೂಲಿಕೆಗಳು ಮತ್ತು ಹೂವಿನ ಸಾರಗಳನ್ನು ಬಳಸಿ ಇದನ್ನು ತಯಾರಿಸಲಾಗಿತ್ತು. ಸುಗಂಧವು 50 ಕಿಮೀ ದೂರವನ್ನು ತಲುಪುತ್ತದೆ ಎಂದು ಸಹ ಹೇಳಲಾಗುತ್ತದೆ.

ರಾಮಮಂದಿರ ಪರಿಕಲ್ಪನೆಯ ನೆಕ್ಲೇಸ್‌

ಸೂರತ್‌ನ ಆಭರಣ ವ್ಯಾಪಾರಿಯೊಬ್ಬರು ರಾಮಮಂದಿರ ಪರಿಕಲ್ಪನೆಯ ನೆಕ್ಲೇಸ್‌ವೊಂದನ್ನು ತಯಾರಿಸಿದ್ದಾರೆ. ಇದಕ್ಕೆ 5000 ಅಮೆರಿಕನ್‌ ಡೈಮಂಡ್‌ ಹಾಗೂ 2 ಕೆಜಿ ಬೆಳ್ಳಿಯನ್ನ ಬಳಸಲಾಗಿದೆ. 40 ಕುಶಲಕರ್ಮಿಗಳು 35 ದಿನಗಳಲ್ಲಿ ಈ ನೆಕ್ಲೇಸ್‌ ವಿನ್ಯಾಸವನ್ನು ಪೂರ್ಣಗೊಳಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಸೇಜ್‌ ಜ್ಯುವೆಲ್ಸ್‌ನ ನಿರ್ದೇಶಕ ಕೌಶಿಕ್‌ ಕಾಕಾಡಿಯಾ ಅವರು ಎಎನ್‌ಐಗೆ ನೀಡಿದ ಸಂದರ್ಶನದ ಪ್ರಕಾರ ಈ ಹಾರವನ್ನು ಅವರು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಿಲ್ಲ, ಬದಲಾಗಿ ರಾಮಮಂದಿರಕ್ಕೆ ಉಡುಗೊರೆ ನೀಡುವ ಸಲುವಾಗಿ ತಯಾರಿಸಿದ್ದಾರೆ.

1265 ಕೆಜಿ ಭಾರದ ಲಡ್ಡು

ಹೈದರಾಬಾದ್‌ ಮೂಲದವರೊಬ್ಬರು ಅಯೋಧ್ಯೆ ರಾಮಮಂದಿರಕ್ಕಾಗಿ ವಿಶೇಷವಾದ ಲಡ್ಡುವೊಂದನ್ನು ತಯಾರಿಸಿದ್ದಾರೆ. ಈ ಲಡ್ಡು ತೂಕ ಬರೋಬ್ಬರಿ 1265 ಕೆಜಿ.

ಶ್ರೀರಾಮಮಂದಿರದ ಚಿತ್ತಾರವಿರುವ ರೇಷ್ಮೆ ಹಾಸು

ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷರಾದ ಅಲೋಕ್‌ ಕುಮಾರ್‌ ಅವರು ಶ್ರೀರಾಮ ಮಂದಿರ ಚಿತ್ರವಿರುವ ರೇಷ್ಮೆ ಬೆಡ್‌ಶೀಟ್‌ ರಾಮಮಂದಿರಕ್ಕೆ ನೀಡಿದ್ದಾರೆ. ತಮಿಳುನಾಡಿನ ರೇಷ್ಮೆ ಬಟ್ಟೆ ತಯಾರಕರು ಇದನ್ನು ತಯಾರಿಸಿದ್ದಾರೆ.

ನಾಳೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ದೂರದರ್ಶನ, ಡಿಡಿ ನ್ಯೂಸ್‌ ಹಾಗೂ ಡಿಡಿ ನ್ಯಾಷನಲ್‌ನಲ್ಲಿ ಈ ಕಾರ್ಯಕ್ರಮ ಲೈವ್‌ ನೋಡಬಹುದಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ