logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗುರುವಿನ ಲಕ್ಷಣಗಳೇನು? ಕಾರಣಿಕ, ವಿಹಿತ ಸೇರಿದಂತೆ ಅಷ್ಟವಿಧ ಗುರುಗಳು ಎಂದರೆ ಯಾರು? ಇಲ್ಲಿದೆ ವಿವರ

ಗುರುವಿನ ಲಕ್ಷಣಗಳೇನು? ಕಾರಣಿಕ, ವಿಹಿತ ಸೇರಿದಂತೆ ಅಷ್ಟವಿಧ ಗುರುಗಳು ಎಂದರೆ ಯಾರು? ಇಲ್ಲಿದೆ ವಿವರ

Rakshitha Sowmya HT Kannada

Jun 14, 2024 01:50 PM IST

google News

ಗುರುವಿನ ಲಕ್ಷಣಗಳೇನು? ಕಾರಣಿಕ, ವಿಹಿತ ಸೇರಿದಂತೆ ಅಷ್ಟವಿಧ ಗುರುಗಳು ಎಂದರೆ ಯಾರು? ಇಲ್ಲಿದೆ ವಿವರ

  • ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಯಶಸ್ಸು ನಿಶ್ಚಿತ ಎಂಬ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಗುರುಗಳು ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯ. ಗುರುಗಳಲ್ಲಿ ಕೂಡಾ ಹಲವು ವರ್ಗಗಳಿವೆ. ಶಾಸ್ತ್ರಗಳ ಪ್ರಕಾರ ಎಷ್ಟು ರೀತಿಯ ಗುರುಗಳಿದ್ದಾರೆ? ಅಷ್ಟವಿಧ ಗುರುಗಳು ಎಂದರೆ ಯಾರು? ಜ್ಯೋತಿಷಿ ಚಿಲಕಮರ್ತಿ ಪಭ್ರಾಕರ ಚಕ್ರವರ್ತಿ ಶರ್ಮಾ ಮಾಹಿತಿ ನೀಡಿದ್ದಾರೆ.

ಗುರುವಿನ ಲಕ್ಷಣಗಳೇನು? ಕಾರಣಿಕ, ವಿಹಿತ ಸೇರಿದಂತೆ ಅಷ್ಟವಿಧ ಗುರುಗಳು ಎಂದರೆ ಯಾರು? ಇಲ್ಲಿದೆ ವಿವರ
ಗುರುವಿನ ಲಕ್ಷಣಗಳೇನು? ಕಾರಣಿಕ, ವಿಹಿತ ಸೇರಿದಂತೆ ಅಷ್ಟವಿಧ ಗುರುಗಳು ಎಂದರೆ ಯಾರು? ಇಲ್ಲಿದೆ ವಿವರ

ಮೋಕ್ಷಮಾರ್ಗವನ್ನು ಜಗತ್ತಿಗೆ ತಿಳಿಸಿದ ಶಂಕರಭಗವತ್ಪಾದರು ಅಥವಾ ಆದಿ ಶಂಕರಾಚಾರ್ಯರು ಜಗತ್ತಿಗೆ ಗುರುವಾಗಿದ್ದಾರೆ. ಕೃಷ್ಣಂ ವಂದೇ ಜಗದ್ಗುರುಮ್‌ ಎಂದು ಭಗವದ್ಗೀತೆಯನ್ನು ಬೋಧಿಸುವ ಮೂಲಕ ಶ್ರೀಕೃಷ್ಣನೂ ಜಗದ್ಗುರುವಾಗಿದ್ದಾರೆ. ಸನಾತನ ಧರ್ಮದ ಪ್ರಕಾರ ಪ್ರತಿಯೊಬ್ಬರ ಜೀವನದಲ್ಲೂ ಅಷ್ಟವಿಧ ಗುರುಗಳು ಇದ್ದಾರೆ. ಅದರ ಬಗ್ಗೆ ಚಿಲಕಮರ್ತಿಯವರು ಹೀಗೆ ವಿವರಿಸುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಅಷ್ಟವಿಧ ಗುರುಗಳು ಎಂದರೆ ಯಾರು?

ಅಷ್ಟ ಗುರುಗಳಲ್ಲಿ ಉತ್ತಮ ಗುರುಗಳನ್ನು ಪಡೆದು, ವಿವೇಕದ ಗುರುವನ್ನು ಗ್ರಹಿಸಿ ಅವರಿಂದ ವಿದ್ಯಾಭ್ಯಾಸ ಮಾಡಿ, ಪ್ರಕೃತಿಯ ಭ್ರಮೆಯನ್ನು ತೊಲಗಿಸಿ ಮುಕ್ತಿಯ ಮಾರ್ಗವನ್ನು ಪ್ರವೇಶಿಸಿ ಮೋಕ್ಷವನ್ನು ಪಡೆದವನು ಧನ್ಯ ಎಂದು ಚಿಲಕಮರ್ತಿಯವರು ಹೇಳುತ್ತಾರೆ. ಅಷ್ಟವಿಧ ಗುರುಗಳ ಬಗ್ಗೆ ಇಲ್ಲಿದೆ ವಿವರ.

1. ಬೋಧಕ ಗುರು: ವೇದಾಂತ ಶಾಸ್ತ್ರಗಳ ಪದಗಳನ್ನು ಮಾತ್ರ ಚೆನ್ನಾಗಿ ಕಲಿಸುವ ಶಿಕ್ಷಕರನ್ನು ಬೋಧಕ ಗುರು ಎಂದು ಕರೆಯುತ್ತಾರೆ.

2. ವೇದಕ ಗುರು: ವೇದಾಂತ ಶಾಸ್ತ್ರಗಳ ಪರಿಕಲ್ಪನೆಗಳನ್ನು ಚೆನ್ನಾಗಿ ಕಲಿಸುವ ಮತ್ತು ತತ್ತ್ವಶಾಸ್ತ್ರವನ್ನು ಕಲಿಸುವ ಗುರುವನ್ನು ವೇದಕ ಗುರು ಎನ್ನಲಾಗುತ್ತದೆ.

3. ನಿಷಿದ್ಧ ಗುರು: ಮಾಯೆ, ಮೋಡಿ ಇತ್ಯಾದಿಗಳಿಂದ ಇಹಲೋಕ ಮತ್ತು ಪರಲೋಕದಲ್ಲಿ ಸುಖ ದುಃಖವನ್ನು ಕೊಡುವವನು ನಿಷಿದ್ಧ ಗುರು.

4. ಕಾಮ್ಯಕ ಗುರು: ಪುಣ್ಯಕಾರ್ಯಗಳನ್ನು ಮಾಡುವಂತೆ ಜನರಿಗೆ ತಿಳಿಸುವ ಮತ್ತು ಅವುಗಳನ್ನು ನಿರ್ವಹಿಸುವ ಮತ್ತು ಆ ಮೂಲಕ ಶಿಷ್ಯನಿಗೆ ಇಹಲೋಕ ಮತ್ತು ಪರಲೋಕದಲ್ಲಿ ಸಂತೋಷವನ್ನು ನೀಡುವವನು ಕಾಮ್ಯಕ ಗುರು.

5. ಸೂಚಕ ಗುರು: ವೇದಾಂತ ಶಾಸ್ತ್ರಗಳ ಅರ್ಥವನ್ನು ವಿವರಿಸಿ ಜ್ಞಾನವನ್ನು ನೀಡುತ್ತಾ, ಆ ಮೂಲಕ ಶಮ, ದಮ, ಉಪರತಿ, ತಿತಿಕ್ಷ್ಮ, ಶ್ರಾದ್ಧ, ಸಮಾಧಾನಗಳೆಂಬ ಷಡ್ಗುಣಗಳನ್ನು ಮೇಳೈಸಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸೂಚಿಸುವವನು ಸೂಚಕ ಗುರುವಾಗಿದ್ದಾನೆ.

6. ವಾಚಕ ಗುರು: ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು, ಮನೋಬುದ್ಧಿ, ಚಿತ್ತಾಹಂಕಾರ, ಮತ್ತು ಆಂತರಿಕ ಇಂದ್ರಿಯಗಳಿಂದ ವಿಂಗಡಿಸಿ, ಭೋಗ, ಸಂಕಲ್ಪ, ವಿಕಲ್ಪ, ಚಂಚಲತೆಗಳಿಂದ ಭ್ರಮನಿರಸನಗೊಳ್ಳದಂತೆ ಶಿಷ್ಯನ ಅಂತರಗವು ಇವೆಲ್ಲವನ್ನೂ ಉದಾಸೀನ ಮಾಡುವಂತೆ ಮಾಡುವ ಮಹಾನ್‌ ಓದುಗನ್ನು ವಾಚಕ ಗುರು ಎಂದು ಕರೆಯಲಾಗುತ್ತದೆ.

7. ಕಾರಣಿಕ ಗುರು: ಅಹಂಬ್ರಹ್ಮಾಸ್ಮಿಯಿಂದ ಆರಂಭವಾದ ಪದಗಳನ್ನು ಉಪದೇಶಿಸಿ ಜೀವೇಶ್ವರೈಕ್ಯವನ್ನು ಸ್ಪಷ್ಟವಾಗಿ ವಿವರಿಸಿ ಜೀವನ ಮುಕ್ತಿಯ ಅನುಭವವನ್ನು ನೀಡುವ ಪರಮ ಪುರುಷನು ಕಾರಣಿಕ ಗುರುವಾಗಿದ್ದಾನೆ.

8. ವಿಹಿತ ಗುರು: ಶಿಷ್ಯನ ಎಲ್ಲಾ ಸಂದೇಹಗಳನ್ನು ನಿವಾರಿಸಿ ಶಿಷ್ಯನನ್ನು ಸಂದೇಹದಿಂದ ಮುಕ್ತರನ್ನಾಗಿ ಮಾಡುವವರು ವಿಹಿತ ಗುರುಗಳು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ. ಭಟ್‌

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ