logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು; ದೇವೇಂದ್ರನ ವರದಿಂದ ಅರ್ಜುನನಿಗೆ ಜನ್ಮ ನೀಡಿದ ಕುಂತಿ; ಅಶ್ವಿನಿ ದೇವತೆಗಳಿಂದ ನಕುಲ-ಸಹದೇವರನ್ನು ಪಡೆದ ಮಾದ್ರಿ

ಮಹಾಭಾರತ ಕಥೆಗಳು; ದೇವೇಂದ್ರನ ವರದಿಂದ ಅರ್ಜುನನಿಗೆ ಜನ್ಮ ನೀಡಿದ ಕುಂತಿ; ಅಶ್ವಿನಿ ದೇವತೆಗಳಿಂದ ನಕುಲ-ಸಹದೇವರನ್ನು ಪಡೆದ ಮಾದ್ರಿ

Rakshitha Sowmya HT Kannada

Sep 27, 2024 03:48 PM IST

google News

ಮಹಾಭಾರತ ಕಥೆಗಳು; ದೇವೇಂದ್ರನ ವರದಿಂದ ಅರ್ಜುನನಿಗೆ ಜನ್ಮ ನೀಡಿದ ಕುಂತಿ; ಅಶ್ವಿನಿ ದೇವತೆಗಳಿಂದ ನಕುಲ-ಸಹದೇವರನ್ನು ಪಡೆದ ಮಾದ್ರಿ

  • ಕುಂತಿಗೆ ದೇವತೆಗಳ ವರದಿಂದ ಧರ್ಮರಾಯ, ಭೀಮ, ಅರ್ಜುನರು ಜನಿಸುತ್ತಾರೆ. ತನಗೆ ಮಕ್ಕಳು ಇಲ್ಲವೆಂದು ಕೊರಗುವ ತಂಗಿ ಮಾದ್ರಿಗೆ ಕುಂತಿ ಕೊನೆಯ ಮಂತ್ರವನ್ನು ಹೇಳಿಕೊಡುತ್ತಾಳೆ. ಅದರ ಸಹಾಯದಿಂದ ಮಾದ್ರಿ ನಕುಲ ಸಹದೇವರಿಗೆ ಜನ್ಮ ನೀಡುತ್ತಾಳೆ.  (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಹಾಭಾರತ ಕಥೆಗಳು; ದೇವೇಂದ್ರನ ವರದಿಂದ ಅರ್ಜುನನಿಗೆ ಜನ್ಮ ನೀಡಿದ ಕುಂತಿ; ಅಶ್ವಿನಿ ದೇವತೆಗಳಿಂದ ನಕುಲ-ಸಹದೇವರನ್ನು ಪಡೆದ ಮಾದ್ರಿ
ಮಹಾಭಾರತ ಕಥೆಗಳು; ದೇವೇಂದ್ರನ ವರದಿಂದ ಅರ್ಜುನನಿಗೆ ಜನ್ಮ ನೀಡಿದ ಕುಂತಿ; ಅಶ್ವಿನಿ ದೇವತೆಗಳಿಂದ ನಕುಲ-ಸಹದೇವರನ್ನು ಪಡೆದ ಮಾದ್ರಿ

ದೂರ್ವಾಸ ಮುನಿಗಳ ವರದಿಂದ ಕುಂತಿ ಹಾಗೂ ಪಾಂಡು ಮಹಾರಾಜ ಧರ್ಮರಾಯ, ಭೀಮನನ್ನು ಪಡೆಯುತ್ತಾರೆ. ಒಮ್ಮೆ ಕುಂತಿ ಭೀಮ ಮಗುವಾಗಿರುವಾಗ ಹುಲಿಯೊಂದು ಅವನ ಬಳಿ ಬರುತ್ತದೆ. ಆಗ ಒಂದು ಜೋರು ಶಬ್ಧವಾಗುತ್ತದೆ. ಆ ಸದ್ದಿಗೆ ಹುಲಿ ಹೆದರಿ ಓಡಿ ಹೋಗುತ್ತದೆ. ಆಗ ಅಲ್ಲಿಗೆ ಪಾಂಡು ರಾಜ ಮತ್ತು ಕುಂತಿ ಓಡೋಡಿ ಬರುತ್ತಾರೆ. ಆದರೆ ಭೀಮನು ಕೈಕಾಲು ಬಡಿಯುತ್ತಾ ಕಿಲಕಿಲನೆ ನಗುತ್ತಾ ಮಲಗಿರುತ್ತಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಮಧ್ಯಮ ಪಾಂಡವ ಅರ್ಜುನನ ಜನನ

ಭೀಮನು ಪುಟ್ಟ ಮಗುವಾಗಿದ್ದಾಗಲೇ ತನ್ನಲ್ಲಿರುವ ಅಮೋಘ ಶಕ್ತಿಯ ಪರಿಚಯ ಮಾಡಿಸುತ್ತಾನೆ. ಇಷ್ಟಾದರೂ ಭೀಮನ ಶಕ್ತಿಯ ಅರಿವು ಪಾಂಡು ಮತ್ತು ಕುಂತಿಗೆ ಆಗುವುದೇ ಇಲ್ಲ. ಅವರು ಭಯದಿಂದ ಇನ್ನೇನು ಪ್ರಮಾದವಾಗುವುದೊ ಎಂದು ಋಷಿ ಮುನಿಗಳಿಂದ ಯಂತ್ರವನ್ನು ಕಟ್ಟಿಸುತ್ತಾರೆ. ಕುಂತಿಗೆ ಭೀಮನು ಜನಿಸಿದರೆ, ಅದೇ ರಾತ್ರಿ ಗಾಂಧಾರಿಗೆ ಭೀಮನಿಗೆ ಧೈರ್ಯ ಸಾಹಸಗಳಲ್ಲಿ ಸರಿ ಸಮಾನವಾದ ದುರ್ಯೋಧನನು ಜನಿಸಿರುತ್ತಾನೆ.

ಪಾಂಡು ರಾಜನಿಗೆ ಕುಂತಿಯಿಂದ ಇನ್ನೊಬ್ಬ ಮಗನನ್ನು ಪಡೆಯುವ ಆಸೆಯಾಗುತ್ತದೆ. ಪತಿಯ ಆಸೆಯಂತೆ ಕುಂತಿಯು ಸ್ವರ್ಗದ ಒಡೆಯನಾದ ಇಂದ್ರನನ್ನು ಕುರಿತು ಮುನಿಗಳು ಹೇಳಿಕೊಟ್ಟ ಮಂತ್ರಗಳನ್ನು ಜಪಿಸಿ ಪೂಜೆ ಮಾಡುತ್ತಾಳೆ. ಮಂತ್ರವನ್ನು ಪಠಿಸಿದ ತಕ್ಷಣ ದೇವೇಂದ್ರನು ಪ್ರತ್ಯಕ್ಷನಾಗುತ್ತಾನೆ. ಪ್ರಪಂಚದಲ್ಲೇ ಮಹಾಪುರುಷನಾದ ಮತ್ತು ಶಸ್ತ್ರ ವಿದ್ಯೆಯಲ್ಲಿ ಅತಿರಥ ಮಹಾರಥನಾದ ಮಗನನ್ನು ದೇವೇಂದ್ರನು ದಯಪಾಲಿಸುತ್ತಾನೆ. ಇವನು ಫಾಲ್ಗುಣ ಮಾಸದ ಪಲ್ಗುಣಿ ನಕ್ಷತ್ರದಲ್ಲಿ ಜನಿಸುತ್ತಾನೆ. ಆದ್ದರಿಂದ ಭೂಮಿಯ ಮೇಲೆ ಜನಿಸಿ ಫಲ್ಗುಣ ಎಂಬ ಹೆಸರಿನಿಂದ ಖ್ಯಾತಿ ಹೊಂದುತ್ತಾನೆ. ಅವನೇ ವೀರರಲ್ಲಿ ವೀರನಾದ ಅರ್ಜುನ ಸಾರ್ವಭೌಮ. ಅರ್ಜುನನು ಜನಿಸಿದ ವೇಳೆಯಲ್ಲಿ ಆಕಾಶದಲ್ಲಿ ಪುಷ್ಪವೃಷ್ಟಿಯಾಯಿತು. ಒಣಗಿದ್ದ ಗಿಡಗಳು ಚಿಗುರಲು ಆರಂಭಿಸಿದವು. ನದಿಗಳಲ್ಲಿ ನೀರು ಭೋರ್ಗರೆಯಲು ಆರಂಭಿಸುತ್ತದೆ.

ಕುಂತಿಯ ಸಹಾಯದಿಂದ ನಕುಲ ಸಹದೇವರಿಗೆ ಜನ್ಮ ನೀಡಿದ ಮಾದ್ರಿ

ಕುಂತಿಯು ತನಗಿದ್ದ ವರದ ಬಲದಿಂದ ಮೂರೂ ಲೋಕದಲ್ಲೂ ಖ್ಯಾತ ಗಳಿಸುವ ಮಕ್ಕಳನ್ನು ಪಡೆಯಲು ಯಶಸ್ವಿಯಾಗುತ್ತಾಳೆ. ಇದನ್ನು ಕಂಡು ಮಾದ್ರಿಗೆ ಮತ್ಸರ ಉಂಟಾಗುತ್ತದೆ. ಪಾಂಡುವಿಗೆ ಮುನಿಗಳ ಶಾಪವಿದ್ದರೂ ವರಗಳ ಬಲದಿಂದ ಕುಂತಿಯು ಸಂತಾನ ಪಡೆದಳು, ಆದರೆ ತನ್ನ ಪಾಡೇನು ಎಂಬ ಯೋಚನೆ ಮಾದ್ರಿಯಲ್ಲಿ ಮೂಡುತ್ತದೆ. ಪಾಂಡು ರಾಜನಲ್ಲಿ ಮಾದ್ರಿಯು ತನ್ನ ಮನಸ್ಸಿನಲ್ಲಿರುವ ಯೋಚನೆಯನ್ನು ತಿಳಿಸುತ್ತಾಳೆ. ಒಂದು ಕ್ಷಣ ಪಾಂಡುರಾಜನು ಚಿಂತೆಗೀತಾಡುತ್ತಾನೆ. ಬೇರೆ ದಾರಿ ಇಲ್ಲದೆ ತನಗೆ ಎದುರಾಗಿರುವ ಸಂಧಿಗ್ಧ ಪರಿಸ್ಥಿತಿಯನ್ನು ಕುಂತಿಯಲ್ಲಿ ಹೇಳಿಕೊಳ್ಳುತ್ತಾನೆ. ಕುಂತಿಯು ಪಾಂಡು ರಾಜ ಮತ್ತು ಮಾದ್ರಿಯನ್ನು ಸಮಾಧಾನಪಡಿಸಿ ಒಂದು ನಿರ್ಧಾರಕ್ಕೆ ಬರುತ್ತಾಳೆ. ತನ್ನ ಬಳಿ ಉಳಿದಿದ್ದ ಒಂದೇ ಒಂದು ಮಂತ್ರವನ್ನು ಮಾದ್ರಿಗೆ ಹೇಳಿಕೊಡುತ್ತಾಳೆ.

ಮಾದ್ರಿಯು , ಅಕ್ಕ ಕುಂತಿ ಹೇಳಿಕೊಟ್ಟ ಮಂತ್ರದ ಸಹಾಯದಿಂದ ಅಶ್ವಿನಿ ದೇವತೆಗಳನ್ನು ಆಮಂತ್ರಿಸುತ್ತಾಳೆ. ಆಗ ಅಶ್ವಿನಿ ದೇವತೆಗಳು ಮಾದ್ರಿಯ ಎದುರು ಪ್ರತ್ಯಕ್ಷವಾಗುತ್ತಾರೆ. ಅಶ್ವಿನಿ ದೇವತೆಗಳು ಮಾದ್ರಿಗೆ ಅವಳಿ ಮಕ್ಕಳನ್ನು ದಯ ಪಾಲಿಸುತ್ತಾರೆ. ಅವರಲ್ಲಿ ಸೌಂದರ್ಯದಲ್ಲಿ ಸಾಟಿ ಇರದಂತಹ, ಯಾರಿಗೂ ಹೋಲಿಕೆ ಮಾಡಲಾಗದಂತಹ ಮಗು ಇರುತ್ತದೆ. ಅವನೇ ನಕುಲ. ಭವಿಷ್ಯವನ್ನು ಕರಾರುವಕ್ಕಾಗಿ ನುಡಿಯುವ, ಊಹಿಸಲು ಅಸಾಧ್ಯವಾದಷ್ಟು ಜ್ಞಾನವನ್ನು ಪಡೆದಿರುವ ಎರಡನೆಯ ಮಗುವೇ ಸಹದೇವ. ಈ ಇಬ್ಬರು ವೈಶಾಖ ಮಾಸದ ಬಹುಳ ಚತುರ್ದಶಿಯ ಶುಕ್ರವಾರದಂದು ಜನಿಸುತ್ತಾರೆ. ಇವರು ಜನಿಸಿದ ಸಮಯದಲ್ಲೂ ಶುಭ ಸೂಚನೆಗಳು ಉಂಟಾಗುತ್ತದೆ. ಐವರೂ ಮಕ್ಕಳ ಜೊತೆ ಪಾಂಡುರಾಜನು ಕಾಡಿನಲ್ಲಿ ತನ್ನ ಪತ್ನಿಯರ ಜೊತೆ ಜೀವನ ನಡೆಸುತ್ತಿರುತ್ತಾನೆ. ಆ ಖುಷಿಯಲ್ಲಿ ಅವರಿಗೆ ಹಸ್ತಿನಾಪುರದ ನೆನಪೇ ಆಗುವುದಿಲ್ಲ. ವಸುದೇವನು ಕಶ್ಯಪನ ಮೂಲಕ ಸೋದರಿ ಕುಂತಿಗೆ ಕಾಣಿಕೆಯನ್ನು ಕಳುಹಿಸಿ ಕೊಡುತ್ತಾನೆ. ಕಶ್ಯಪರ ಸಲಹೆಯಂತೆ, ಅವರ ಜವಾಬ್ದಾರಿಯಲ್ಲಿ ಪಾಂಡುವಿನ ಮಕ್ಕಳಿಗೆ ಚೌಲ, ನಾಮಕರಣ ಮತ್ತು ಉಪನಯನ ಮಾಡಲಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ