logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತನ್ನ ವಂಶೋದ್ಧಾರಕನನ್ನೇ ಕೊಲ್ಲುವ ಇವಳೆಂತಹ ತಾಯಿ ಎಂಬ ಕೋಪವು ಶಂತನುವಿಗೆ ಬರುತ್ತೆ; ಮಹಾಭಾರತದ ಕಥೆ ಓದಿ

ತನ್ನ ವಂಶೋದ್ಧಾರಕನನ್ನೇ ಕೊಲ್ಲುವ ಇವಳೆಂತಹ ತಾಯಿ ಎಂಬ ಕೋಪವು ಶಂತನುವಿಗೆ ಬರುತ್ತೆ; ಮಹಾಭಾರತದ ಕಥೆ ಓದಿ

Raghavendra M Y HT Kannada

Sep 15, 2024 11:27 AM IST

google News

Mahabharata Story: ಮಹಾಭಾರತದ ಸ್ಟೋರಿ ತಿಳಿಯಿರಿ

    • Mahabharata Story: ತನ್ನ ವಂಶೋದ್ಧಾರಕನನ್ನೇ ಕೊಲ್ಲುವ ಇವಳೆಂತಹ ತಾಯಿ ಎಂಬ ಕೋಪವು ಶಂತನಿಗೆ ಬರುತ್ತದೆ. ತನ್ನ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಸಂತನು ಕೊಟ್ಟ ಭಾಷೆಗೆ ಕಟ್ಟು ಬಿದ್ದು ಮತ್ತೊಮ್ಮೆ ಸುಮ್ಮನಾಗುತ್ತಾನೆ. ಮಹಾಭಾರತದ ಕಥೆಯಲ್ಲಿ ಆಸಕ್ತಿಕರ ವಿಚಾರಗಳನ್ನು ತಿಳಿಯಿರಿ.
Mahabharata Story: ಮಹಾಭಾರತದ ಸ್ಟೋರಿ ತಿಳಿಯಿರಿ
Mahabharata Story: ಮಹಾಭಾರತದ ಸ್ಟೋರಿ ತಿಳಿಯಿರಿ

Mahabharata Story: ಮಹಾಭಾರತದಲ್ಲಿನ ಮುಂದುವರಿದ ಭಾಗದಲ್ಲಿ ಗಂಗೆಯ ನಿರ್ಬಂಧಕ್ಕೆ ಒಪ್ಪಿದ ಶಂತನು ಆಕೆಯೊಂದಿಗೆ ಅರಮನೆಗೆ ಮರಳುತ್ತಾನೆ. ಅರಮನೆಯಲ್ಲಿ ಸಂತಸವು ಮೂಡುತ್ತದೆ. ಆದರೆ ಮಹಾರಾಜನ ಸಂತೋಷವು ಬಹುಕಾಲ ಉಳಿಯುವುದಿಲ್ಲ. ಕಾರಣ ಅವರಿಗೆ ಮೊದಲ ಗಂಡು ಸಂತಾನವಾಗುತ್ತದೆ. ಈ ಸಂತಸದ ನಡುವೆ ಗಂಗೆಯು ಆ ಮಗುವನ್ನು ಗಂಗಾ ನದಿಯಲ್ಲಿ ತೇಲಿ ಬಿಡುತ್ತಾಳೆ. ಇದನ್ನು ಕಂಡು ದುಃಖ ಭರಿತನಾದರೂ ಶಂತನು ಕೊಟ್ಟ ಮಾತಿನಂತೆ ಗಂಗೆಯನ್ನು ಪ್ರಶ್ನಿಸುವುದೇ ಇಲ್ಲ. ನೋವನ್ನು ನುಂಗಿ ಮೌನಕ್ಕೆ ಶರಣಾಗುತ್ತಾನೆ. ಈ ನಡುವೆ ದಂಪತಿಗಳಿಗೆ ಎರಡನೆಯ ಮಗುವಿನ ಜನನವಾಗುತ್ತದೆ. ಹಳೆಯ ವಿಚಾರವನ್ನು ಮರೆತ ಶಂತನು ಸಂತಸದಿಂದ ಇರುತ್ತಾನೆ. ಆದರೆ ಗಂಗೆಯು ಮತ್ತೊಮ್ಮೆ ಆ ಮಗುವನ್ನು ಗಂಗಾ ನದಿಯಲ್ಲಿ ತೇಲಿ ಬಿಡುತ್ತಾಳೆ. ತನ್ನ ವಂಶೋದ್ಧಾರಕನನ್ನೇ ಕೊಲ್ಲುವ ಇವಳೆಂತಹ ತಾಯಿ ಎಂಬ ಕೋಪವು ಶಂತನಿಗೆ ಬರುತ್ತದೆ. ತನ್ನ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಸಂತನು ಕೊಟ್ಟ ಭಾಷೆಗೆ ಕಟ್ಟು ಬಿದ್ದು ಮತ್ತೊಮ್ಮೆ ಸುಮ್ಮನಾಗುತ್ತಾನೆ. ಇದೇ ರೀತಿ ಸತತವಾಗಿ ತನ್ನ ಗರ್ಭದಲ್ಲಿ ಜನಿಸಿದ ಏಳು ಮಕ್ಕಳನ್ನು ನೀರು ಪಾಲು ಮಾಡುತ್ತಾಳೆ. ಸಹನೆ ಕಳೆದುಕೊಂಡ ಶಂತನು ಮುಂದಿನ ಬಾರಿ ಇದೇ ರೀತಿಯ ಪ್ರಸಂಗ ಎದುರಾದರೆ ಆಕೆಯನ್ನು ಪ್ರಶ್ನಿಸಲೇಬೇಕೆಂದು ತೀರ್ಮಾನಿಸುತ್ತಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಮತ್ತೊಮ್ಮೆ ರಾಣಿಯು ದೈವಾನುಗ್ರಹದಿಂದ ಗರ್ಭವತಿಯಾಗುತ್ತಾಳೆ. ಇದು ಅವಳ ಎಂಟನೇ ಸಂತಾನವಾಗಿರುತ್ತದೆ. ಶುಭದಿನ ಒಂದರಲ್ಲಿ ಮುದ್ದಾದ ಗಂಡು ಮಗುವಿಗೆ ಜನನ ನೀಡುತ್ತಾಳೆ. ಆ ಮಗುವಿನ ಮುಖವು ಸೂರ್ಯನಷ್ಟೇ ಕಾಂತಿಯುಳ್ಳವನಾಗಿ ಮುಗುಳ್ನಗೆಯಿಂದ ಕೂಡಿರುತ್ತದೆ. ಆದರೆ ಎಂದಿನ ಚಾಳಿಯಂತೆ ಗಂಗೆಯು ತನ್ನ ಎಂಟನೇ ಮಗುವನ್ನು ಸಹ ನದಿಗೆ ಸಮರ್ಪಿಸುವ ಸಲುವಾಗಿ ಹೊರಡುತ್ತಾಳೆ. ಇದನ್ನು ಕಂಡ ಕ್ಷಣ ಶಂತನು ತನ್ನ ಸಲಹೆಯನ್ನು ಕಳೆದುಕೊಳ್ಳುತ್ತಾನೆ.

ತಕ್ಷಣವೇ ಅವಳನ್ನು ಅಡ್ಡಗಟ್ಟಿ ಓರ್ವ ಹೆಣ್ಣಾಗಿ ನೀನೇ ಹಡಿದ ಮಕ್ಕಳನ್ನು ನದಿಗೆ ಸಮರ್ಪಿಸುವುದು ನಿನಗೆ ನ್ಯಾಯವೇ ಎಂದು ಕೇಳುತ್ತಾನೆ. ಅವಳು ಮಾತನ್ನು ಆಡಲು ಆಸ್ಪದ ನೀಡದೆ ಈ ಮಗುವಿನ ಪೋಷಣೆಯು ನಿನ್ನ ಹಕ್ಕು ಮತ್ತು ಕರ್ತವ್ಯವಾಗುತ್ತದೆ ಎಂದು ಸಿಡುಕಿನ ಮಾತುಗಳಿಂದ ತಿಳಿಸುತ್ತಾನೆ. ಎಂದೋ ನಾನು ನಿನಗೆ ನೀಡಿದ ಭಾಷೆಗೆ ಕಟ್ಟು ಬಿದ್ದು ಸುಮ್ಮನಿದ್ದೇನೆ. ಕಾಡು ಮೃಗಗಳು ಸಹ ತನ್ನ ಮಕ್ಕಳನ್ನು ಪೋಷಿಸುತ್ತವೆ. ಈ ಭೂಮಿಯಲ್ಲಿ ಕೆಟ್ಟ ಮಕ್ಕಳು ಹುಟ್ಟು ಬಹುದೇ ಹೊರತು ನಿನ್ನಂತಹ ಕೆಟ್ಟ ಮನಸ್ಸಿನ ತಾಯಿ ಎಂದಿಗೂ ಹುಟ್ಟುವುದಿಲ್ಲ. ಕನಿಷ್ಠಪಕ್ಷ ಪ್ರಾಣಿ ಪಕ್ಷಿಗಳನ್ನಾದರೂ ನೋಡಿ ನಿನ್ನ ಮನಸ್ಸನ್ನು ಬದಲಿಸಿಕೊಳ್ಳಲು ಪ್ರಯತ್ನಿಸು ಎಂದು ಹೇಳುತ್ತಾನೆ.

ಈತನ ಮಾತಿಗೆ ರಾಣಿಗೆ ಬೇಸರ ಉಂಟಾಗುವುದಿಲ್ಲ. ಹಾಗೆಯೇ ಕೋಪಕ್ಕೆ ಒಳಗಾಗುವುದು ಇಲ್ಲ. ಬದಲಾಗಿ ಯಾವುದೇ ಕೆಟ್ಟ ವಿಚಾರ ನಡೆದಿಲ್ಲವೆಂಬಂತೆ ಮುಗುಳ್ನಗುತ್ತಾಳೆ. ಮಹಾರಾಜನೆ ನಿನ್ನ ಮನದಲ್ಲಿ ಇರುವಂತೆ ನಾನು ಆಮಟ್ಟದ ಕ್ರೂರಿ ಅಲ್ಲ. ಜೀವನದಲ್ಲಿ ಪ್ರತಿಯೊಬ್ಬರು ವಿಧಿಯ ಕೈಗೊಂಬೆಯಾಗಿರುತ್ತಾರೆ. ಕೆಲವೊಮ್ಮೆ ನಾವು ಅದೃಷ್ಟಕ್ಕೆ ಹೊಂದಿಕೊಂಡು ಬಾಳಬೇಕಾಗುತ್ತದೆ. ಇವೆಲ್ಲದರ ಕಾರಣ ಜೀವನದಲ್ಲಿ ಗತಿಸಿದ ಕೆಲವೊಂದು ಘಟನೆಗಳು ಆಗಿರಬಹುದು.

ನನ್ನ ಈ ಕೃತ್ಯಗಳಿಗೆ ಕಾರಣವನ್ನು ನೀನು ತಿಳಿದರೆ ಶಾಂತವಾಗುವೆ. ವಶಿಷ್ಠರಿಂದ ಪಾಪಕ್ಕೆ ಒಳಗಾದ.ಅಷ್ಟವಸುಗಳು ಈಗ ನಮ್ಮ ಮಕ್ಕಳಾಗಿದ್ದಾರೆ. ಈಎಂಟನೆಯಗಂಡು ಮಗುವಿನ ಹೆಸರು ಅಪ.ಇವನು ಸಹ ಅಷ್ಟವಸುವಿನಲ್ಲಿ ಒಬ್ಬನಾಗಿದ್ದಾನೆ. ಇವನುಭೂಮಿಯಲ್ಲಿಯೇ ವಿಶೇಷವಾದ ಹೆಸರನ್ನು ಗಳಿಸುತ್ತಾನೆ. ಎಂದೋ ನಡೆದ ಕೆಲವೊಂದು ದುರ್ಘಟನೆಗಳ ಫಲದಿಂದಾಗಿ ಇಂದು ನಾವು ಈ ಕಷ್ಟಗಳನ್ನುಅನುಭವಿಸಬೇಕಾಯಿತು. ಈ ಮಗುವನ್ನುನನಗೆ ಹಸ್ತಾಂತರಿಸಿ. ನಮ್ಮೆಲ್ಲರಿಗೂ ಶಾಪ ವಿಮೋಚನೆ ಆಗುವ ಕಾಲ ಬಂದಾಗಿದೆ. ಹೀಗೆ ಹೇಳಿಮಗುವಿನ ಸಹಿತವಾಗಿ ಗಂಗಾ ನದಿಯಲ್ಲಿ ಲೀನವಾಗುತ್ತಾಳೆ.

ನಿಜವನ್ನು ಅರಿಯದೆ ಕೈಹಿಡಿದ ಪತ್ನಿಯನ್ನುದೂಷಣೆ ಮಾಡಿದ ಕಾರಣ ಶಂತನು ತನ್ನನ್ನು ತಾನೇ ಶಪಿಸಿಕೊಳ್ಳುತ್ತಾನೆ. ಮತ್ತೊಮ್ಮೆ ತಾನು ಏಕಾಂಗಿಯಾಗಿ ಜೀವನ ನಡೆಸಬೇಕೆಂಬ ನಿಜವನ್ನು ಅರಿತುಬೇಸರಕ್ಕೆ ಒಳಗಾಗುತ್ತಾನೆ. ತಾನಾಗಿಯೇ ಅವನ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಎಂಟನೇ ಮಗುವೆ ದೇವವ್ರತ. ಕೊಂಚ ಕಾಯಬೇಕಾದರುಜಗತ್ತೇ ಬೆರೆಗಾಗುವಂತಹ ಮಗನು ತನ್ನವನೆಂಬ ಹೆಮ್ಮೆಯಿಂದ ಶಂತನು ಸಮಾದಾನ ಚಿತ್ತದಿಂದ ಅರಮನೆಗೆ ಮರಳುತ್ತಾನೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ