logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಂಡಾಸರ್‌ ಜೈನ ದೇವಸ್ಥಾನ ಕಟ್ಟಲು 40 ಸಾವಿರ ಕಿಲೋ ತುಪ್ಪ ಬಳಕೆ; 5ನೇ ತೀರ್ಥಂಕರ ಸುಮತಿನಾಥನಿಗೆ ಸಮರ್ಪಿತವಾಗಿರುವ ದೇವಾಲಯವಿದು

ಭಂಡಾಸರ್‌ ಜೈನ ದೇವಸ್ಥಾನ ಕಟ್ಟಲು 40 ಸಾವಿರ ಕಿಲೋ ತುಪ್ಪ ಬಳಕೆ; 5ನೇ ತೀರ್ಥಂಕರ ಸುಮತಿನಾಥನಿಗೆ ಸಮರ್ಪಿತವಾಗಿರುವ ದೇವಾಲಯವಿದು

Rakshitha Sowmya HT Kannada

May 07, 2024 10:23 AM IST

google News

ಭಂಡಾಸರ್‌ ಜೈನ ದೇವಸ್ಥಾನ ಕಟ್ಟಲು 40 ಸಾವಿರ ಕಿಲೋ ತುಪ್ಪ ಬಳಕೆ

  • Indian Temple: ಭಾರತದಲ್ಲಿ ಕೆಲವೊಂದು ದೇವಾಲಯಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ರಾಜಸ್ಥಾನದ ಭಂಡಾಸರ್‌ ಜೈನ ದೇವಸ್ಥಾನ ಕಟ್ಟಲು 40 ಸಾವಿರ ಕಿಲೋ ತುಪ್ಪ ಬಳಸಲಾಗಿದೆ. ಈ ದೇವಸ್ಥಾನವು 5ನೇ ತೀರ್ಥಂಕರ ಸುಮತಿನಾಥನಿಗೆ ಸಮರ್ಪಿತವಾಗಿದೆ. 

ಭಂಡಾಸರ್‌ ಜೈನ ದೇವಸ್ಥಾನ ಕಟ್ಟಲು 40 ಸಾವಿರ ಕಿಲೋ ತುಪ್ಪ ಬಳಕೆ
ಭಂಡಾಸರ್‌ ಜೈನ ದೇವಸ್ಥಾನ ಕಟ್ಟಲು 40 ಸಾವಿರ ಕಿಲೋ ತುಪ್ಪ ಬಳಕೆ (PC: Surendra Chaudhary @surendrapa, İ Love My Bharat Facebooklsin3)

ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ, ಶಾಂತಿ, ನೆಮ್ಮದಿಯನ್ನು ಅರಸಿ ದೇವಾಲಯಕ್ಕೆ ಹೋಗಿ ಬರುತ್ತಾರೆ. ಆ ಸ್ಥಳದಲ್ಲಿ ದೊರೆಯುವ ಧನಾತ್ಮಕತೆ, ಶಾಂತ ವಾತಾವಣ ಮನಸ್ಸಿಗೆ ಖುಷಿ ನೀಡುತ್ತದೆ. ಭಾರತದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಾಲಯ ಒಂದೊಂದು ವೈಶಿಷ್ಯ ಹೊಂದಿದೆ. ಇಲ್ಲೊಂದು ದೇವಾಲಯದಲ್ಲಿ ಬೇಸಿಗೆ ಸಮಯದಲ್ಲಿ ತುಪ್ಪ ಸ್ರವಿಸುತ್ತದೆ ಎಂದರೆ ನೀವು ನಂಬುತ್ತೀರಾ?

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ರಾಜಸ್ಥಾನದ ಭಂಡಾಸರ್‌ ಜೈನ ದೇವಾಲಯವನ್ನು ಕಟ್ಟುವಾಗ ಸುಮಾರು 40 ಸಾವಿರ ಕಿಲೋ ತುಪ್ಪ ಬಳಸಲಾಗಿದೆಯಂತೆ. ರಾಜಸ್ಥಾನದ ಬಿಕಾನೇರ್‌ನ ಹೃದಯಭಾಗದಲ್ಲಿರುವ ಭಂಡಾಸರ್ ಜೈನ ದೇವಾಲಯವು ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ವೈಭವದ ಸಂಕೇತವಾಗಿದೆ. 5ನೇ ತೀರ್ಥಂಕರ ಸುಮತಿನಾಥನಿಗೆ ಸಮರ್ಪಿತವಾಗಿರುವ ದೇವಾಲಯ ಇದು.

ಜೈನ ವ್ಯಾಪಾರಿ ನಿರ್ಮಿಸಿದ ದೇವಸ್ಥಾನ

ಈ ದೇವಾಲಯವು ಕೇವಲ ಆರಾಧನೆಯ ಸ್ಥಳವಲ್ಲ. ದೇವಸ್ಥಾನವು ತನ್ನ ವಿಶಿಷ್ಟ ಕಲೆಗಾರಿಕೆ ಮತ್ತು ಸಾಂಸ್ಕೃತಿಕ ಪರಂಪರೆಯ ಪುರಾವೆಯಾಗಿದೆ. ಸುಮಾರು 12 ನೇ ಶತಮಾನದಲ್ಲಿ ಶ್ರೀಮಂತ ಜೈನ ವ್ಯಾಪಾರಿ ಭಂಡಾಸಾ ಓಸ್ವಾಲ್ ಎಂಬುವವರು ನಿರ್ಮಿಸಿದ ದೇವಸ್ಥಾನ ಇದು. ಅಷ್ಟಕ್ಕೂ ಈ ದೇವಸ್ಥಾನ ಕಟ್ಟುವಾಗ ತುಪ್ಪ ಬಳಸಿದ್ದರ ಹಿಂದೆ ಒಂದು ಕಥೆ ಇದೆ.

ಒಂದು ಸಮಯದಲ್ಲಿ ರಾಜಸ್ಥಾನ ಭೀಕರ ಬರಗಾಲದಿಂದ ನಲುಗುತ್ತಿತ್ತು. ಇದರ ಪರಿಣಾಮವಾಗಿ ತೀವ್ರ ನೀರಿನ ಕೊರತೆ ಉಂಟಾಗಿತ್ತು. ಜನರು ಕುಡಿಯುವ ನೀರಿಗಾಗಿ ಬಹಳ ಕಷ್ಟಪಡುತ್ತಿದ್ದರು. ಆದರೆ ಬರಗಾಲ ಆರಂಭವಾಗುವ ಮುನ್ನ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ದೇವಸ್ಥಾನ ಕಟ್ಟಲು ನೀರಿನ ಕೊರತೆ ಇತ್ತು, ಹಾಗೇ ಕಾಮಗಾರಿ ಕೆಲವನ್ನು ನಿಲ್ಲಿಸುವಂತಿರಲಿಲ್ಲ. ಆದ್ದರಿಂದ ಶ್ರೀಮಂತ ಉದ್ಯಮಿಯಾಗಿದ್ದ ಭಂಡಾಸಾ ಓಸ್ವಾಲ್‌, ನೀರಿನ ಬದಲಿಗೆ ತುಪ್ಪವನ್ನೇ ಬಳಸಲು ನಿರ್ಧರಿಸಿದರು. ಆದ್ದರಿಂದ ಅಡಿಪಾಯ ಕಟ್ಟಲು ನೀರಿನ ಬದಲಿಗೆ ಸುಮಾರು 40 ಸಾವಿರ ಕಿಲೋ ತುಪ್ಪ‌ ಬಳಸಲಾಯಿತು. ಇಂದಿಗೂ ಬಿಸಿಲು ಹೆಚ್ಚಾಗಿರುವ ಸಮಯದಲ್ಲಿ ಈ ದೇವಸ್ಥಾನದ ನೆಲದಿಂದ ತುಪ್ಪ ಸ್ರವಿಸುತ್ತದೆ ಎಂದು ಭಕ್ತರು ಹೇಳುತ್ತಾರೆ.

ಧಾರ್ಮಿಕ, ಆಧ್ಯಾತ್ಮಕ ಕೇಂದ್ರವಾಗಿ ಹೆಸರುವಾಸಿ

ದೇವಾಲಯವು 3 ಮಹಡಿಗಳನ್ನು ಹೊಂದಿದ್ದು ಗೋಡೆಗಳು, ಕಂಬಗಳು ಮತ್ತು ಮಂಟಪಗಳನ್ನು ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಗರ್ಭಗುಡಿಯು ಪಂಚರಥದ ರೂಪದಲ್ಲಿ ಇದ್ದು ಅಗ್ರಸ್ಥಾನದಲ್ಲಿ ಕರ್ಣ ಅಮಲಕಗಳನ್ನು ಹೊಂದಿದೆ. ದೇವಾಲಯದ ಗೋಡೆಗಳ ಮೇಲೆ ಸುಂದರವಾದ ಭಿತ್ತಿ ಚಿತ್ರಗಳು, 24 ತೀರ್ಥಂಕರರ ಜೀವನವನ್ನು ಚಿತ್ರಿಸುವ ಅಲಂಕಾರಿಕ ಕನ್ನಡಿ ಕೆಲಸದ ಕೆತ್ತನೆ ಮಾಡಲಾಗಿದೆ. ರಾಜಸ್ಥಾನದ ಈ ಭಂಡಾಸರ್ ಜೈನ ದೇವಾಲಯವು ಧಾರ್ಮಿಕ ಸ್ಥಳವಾಗಿ ಮಾತ್ರವಲ್ಲದೆ ಸಾಂಸ್ಕೃತಿಕ ಕೇಂದ್ರವಾಗಿ ಕೂಡಾ ಹೆಸರುವಾಸಿಯಾಗಿದೆ.

ಭಂಡಾಸರ್‌ ಜೈನ ದೇವಾಲಯವನ್ನು ಭಾರತದ ಪುರಾತತ್ವ ಇಲಾಖೆ ಸಂರಕ್ಷಿಸಿದೆ. ದೇವಾಲಯದ ಕಲಾಕೃತಿಗಳು ಮತ್ತು ವಾಸ್ತುಶಿಲ್ಪವು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ದೇವಾಲಯದ ನಿರ್ಮಾಣದಲ್ಲಿ ತುಪ್ಪದ ಬಳಕೆಯು ಅಂದಿನ ಇಂಜಿನಿಯರ್‌ಗಳ ಶ್ರದ್ಧೆ ಮತ್ತು ಪರಿಶ್ರಮವನ್ನು ಸೂಚಿಸುತ್ತದೆ. ನೀವು ರಾಜಸ್ಥಾನಕ್ಕೆ ಹೋಗುತ್ತಿದ್ದಲ್ಲಿ ಒಮ್ಮೆ ಈ ತುಪ್ಪದ ದೇವಸ್ಥಾನಕ್ಕೆ ಭೇಟಿ ನೀಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ