logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪುರಿ ಜಗನ್ನಾಥ ಮಂದಿರದ 22 ಮೆಟ್ಟಿಲುಗಳಲ್ಲಿ ಆ ಒಂದು ಮೆಟ್ಟಿಲು ತುಳಿದರೆ ಮಾಡಿದ ಪುಣ್ಯಗಳೆಲ್ಲಾ ಕಳೆದು ನರಕಕ್ಕೆ ಹೋಗುವುದು ಖಚಿತ

ಪುರಿ ಜಗನ್ನಾಥ ಮಂದಿರದ 22 ಮೆಟ್ಟಿಲುಗಳಲ್ಲಿ ಆ ಒಂದು ಮೆಟ್ಟಿಲು ತುಳಿದರೆ ಮಾಡಿದ ಪುಣ್ಯಗಳೆಲ್ಲಾ ಕಳೆದು ನರಕಕ್ಕೆ ಹೋಗುವುದು ಖಚಿತ

Rakshitha Sowmya HT Kannada

Jun 29, 2024 09:47 AM IST

google News

ಪುರಿ ಜಗನ್ನಾಥ ಮಂದಿರದ 22 ಮೆಟ್ಟಿಲುಗಳಲ್ಲಿ ಆ ಒಂದು ಮೆಟ್ಟಿಲು ತುಳಿದರೆ ಮಾಡಿದ ಪುಣ್ಯಗಳೆಲ್ಲಾ ಕಳೆದು ನರಕಕ್ಕೆ ಹೋಗುವುದು ಖಚಿತ

  • Puri Jagannath Temple: ಒಡಿಶಾದ ಪುರಿ ಜಗನ್ನಾಥ ದೇವಾಲಯದ ಪ್ರವೇಶ ದ್ವಾರದಲ್ಲಿ 22 ಮೆಟ್ಟಿಲುಗಳಿವೆ. ಇದರಲ್ಲಿ ಮೂರನೇ ಮೆಟ್ಟಿಲಿಗೆ ಯಮಶಿಲೆ ಎಂದು ಕರೆಯಲಾಗುತ್ತದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಈ ಮೆಟ್ಟಿಲನ್ನು ತುಳಿದರೆ ಜೀವನದಲ್ಲಿ ಅವರು ಮಾಡಿದ ಪುಣ್ಯಗಳು ನಾಶವಾಗಿ ನರಕಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ. 

ಪುರಿ ಜಗನ್ನಾಥ ಮಂದಿರದ 22 ಮೆಟ್ಟಿಲುಗಳಲ್ಲಿ ಆ ಒಂದು ಮೆಟ್ಟಿಲು ತುಳಿದರೆ ಮಾಡಿದ ಪುಣ್ಯಗಳೆಲ್ಲಾ ಕಳೆದು ನರಕಕ್ಕೆ ಹೋಗುವುದು ಖಚಿತ
ಪುರಿ ಜಗನ್ನಾಥ ಮಂದಿರದ 22 ಮೆಟ್ಟಿಲುಗಳಲ್ಲಿ ಆ ಒಂದು ಮೆಟ್ಟಿಲು ತುಳಿದರೆ ಮಾಡಿದ ಪುಣ್ಯಗಳೆಲ್ಲಾ ಕಳೆದು ನರಕಕ್ಕೆ ಹೋಗುವುದು ಖಚಿತ (PC: Shree Jagannatha Temple Office, Puri @SJTA_Puri Itishree @Itishree001)

ದೇವಸ್ಥಾನಕ್ಕೆ ಹೋದರೆ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಪಾಸಿಟಿವ್‌ ವೈಬ್ಸ್‌ ಉಂಟಾಗುತ್ತದೆ. ದೊಡ್ಡ ದೇವಸ್ಥಾನಗಳ ಕಲ್ಯಾಣಿ, ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದರೆ ಮಾಡಿದ ಪಾಪಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ. ಮರಣಾ ನಂತರ ಮೋಕ್ಷ ದೊರೆಯುತ್ತದೆ ಎಂದು ನಂಬಲಾಗಿದೆ. ಆದರೆ ಪುರಿ ಜಗನ್ನಾಥ ದೇವಸ್ಥಾನದ ಒಂದು ಮೆಟ್ಟಿಲು ಏರಿದರೆ ಮಾಡಿದ ಪುಣ್ಯಗಳೂ ನಾಶವಾಗಿ, ನರಕಕ್ಕೆ ಹೋಗುತ್ತಾರೆ ಎಂಬ ಮಾತು ಮನೆ ಮಾಡಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಪುರಿ ಜಗನ್ನಾಥ ದೇವಾಲಯ ಎಷ್ಟು ಪ್ರಸಿದ್ಧವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಈ ದೇವಾಲಯವು ನಿಗೂಢತೆಗೂ ಸಾಕ್ಷಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪುರಿ ಜಗನ್ನಾಥ ರಥಯಾತ್ರೆ ಕೂಡಾ ಆರಂಭವಾಗಲಿದೆ. ಈ ದೇವಾಲಯವು ನಿರಂತರವಾಗಿ ಭಜನೆಗಳಿಂದ ಪ್ರತಿಧ್ವನಿಸುತ್ತಿದೆ. ಜುಲೈ 7 ರಿಂದ ಜಗನ್ನಾಥ ರಥಯಾತ್ರೆ ಆರಂಭವಾಗಲಿದೆ. ಈ ದೇವಾಲಯವನ್ನು ಪ್ರವೇಶಿಸಲು ನಾಲ್ಕು ದ್ವಾರಗಳಿವೆ. ದೇವಾಲಯದಲ್ಲಿ ಜಗನ್ನಾಥನನ್ನು ಸಮೀಪಿಸಲು ಭಕ್ತರು 22 ಮೆಟ್ಟಿಲುಗಳನ್ನು ಹತ್ತಬೇಕು. ಆದರೆ ಈ ಮೆಟ್ಟಿಲುಗಳಲ್ಲಿ 3ನೇ ಮೆಟ್ಟಿಲು ಹತ್ತಿದರೆ ಮನುಷ್ಯ ಮಾಡಿದ ಪುಣ್ಯವೆಲ್ಲಾ ತೊಲಗುತ್ತದೆ. ಮರಣಾ ನಂತರ ನರಕಕ್ಕೆ ಹೋಗುತ್ತಾನೆ ಎಂಬ ನಂಬಿಕೆ ಇದೆ. ಇದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ.

ಜಗನ್ನಾಥನಿಗೆ ಮನವಿ ಮಾಡಿದ ಯಮ

ಒಂದು ದಿನ ಯಮ ಧರ್ಮರಾಜನು ಶ್ರೀಕೃಷ್ಣನ ಬಳಿಗೆ ಬರುತ್ತಾನೆ. ಭಕ್ತರು ತಮ್ಮ ಪಾಪಗಳನ್ನು ಕಳೆದುಕೊಳ್ಳಲು ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದರಿಂದ ಅವರೆಲ್ಲಾ ಸ್ವರ್ಗಕ್ಕೆ ಹೋಗುತ್ತಿದ್ದಾರೆ. ಯಮಲೋಕಕ್ಕೆ ಯಾರೂ ಬರುತ್ತಿಲ್ಲ ಎನ್ನುತ್ತಾನೆ. ಜನರ ಪಾಪಗಳನ್ನು ಮತ್ತು ಕೆಟ್ಟ ಕರ್ಮಗಳನ್ನು ಅಳಿಸದಂತೆ ಯಮಧರ್ಮರಾಜನು ಜಗನ್ನಾಥನನ್ನೂ ಬೇಡಿಕೊಳ್ಳುತ್ತಾನೆ. ಅದರಂತೆ ಜಗನ್ನಾಥನು ಯಮ ಧರ್ಮರಾಜನಿಗೆ ಆ ದೇವಾಲಯದ ಮೂರನೇ ಮೆಟ್ಟಿಲಲ್ಲಿ ವಾಸಿಸುವಂತೆ ಸೂಚಿಸುತ್ತಾನೆ. ಜಗನ್ನಾಥನ ಸೂಚನೆಯಂತೆ ಯಮನು 22 ಮೆಟ್ಟಿಲುಗಳಲ್ಲಿ ಮೂರನೇ ಮೆಟ್ಟಿಲಲ್ಲಿ ನೆಲೆಸುತ್ತಾನೆ. ಇದಕ್ಕೆ ಯಮಶಿಲೆ ಎನ್ನುತ್ತಾರೆ. ಇದು ಇತರ ಮೆಟ್ಟಿಲುಗಳಿಗಿಂತ ಭಿನ್ನವಾಗಿ ಕಾಣುವ ಕಪ್ಪು ಕಲ್ಲು. ದೇವಸ್ಥಾನಕ್ಕೆ ಹೋದಾಗ ಯಾರಾದರೂ ಯಮಶಿಲೆಯನ್ನು ತುಳಿದರೆ ಇದುವರೆಗೂ ಅವರು ಮಾಡಿರುವ ಪುಣ್ಯವೆಲ್ಲಾ ನಶಿಸುತ್ತದೆ. ಮರಣಾ ನಂತರ ಅವರು ಯಮಲೋಕಕ್ಕೆ ಹೋಗುತ್ತಾರೆ ಎಂಬ ಕಥೆ ಜನಜನಿತವಾಗಿದೆ.

ಮತ್ತೊಂದು ಸ್ವಾರಸ್ಯಕರ ಕಥೆ

ಯಮಶಿಲೆಯ ಕುರಿತಾಗಿ ಇನ್ನೊಂದು ಕಥೆಯೂ ಜನಪ್ರಿಯವಾಗಿದೆ. ಭಗವಾನ್ ಜಗನ್ನಾಥನ ದರ್ಶನ ಮಾಡಲು ಹೋಗುವಾಗ ಭಕ್ತರು ಯಮಶಿಲೆ ಎಂದು ನಂಬಲಾದ ಮೂರನೇ ಮೆಟ್ಟಿಲು ಹತ್ತಿದರೆ, ಅವರ ಎಲ್ಲಾ ಪಾಪಗಳು ಮತ್ತು ಕೆಟ್ಟ ಕರ್ಮಗಳು ದೂರವಾಗುತ್ತವೆ, ಯಮನ ದೃಷ್ಟಿ ತೊಲಗುತ್ತದೆ, ಭಕ್ತರು ಶುದ್ಧ ಹೃದಯದಿಂದ ಜಗನ್ನಾಥನನ್ನು ಸಮೀಪಿಸುತ್ತಾರೆ. ಆದರೆ ದೇವಸ್ಥಾನದಿಂದ ಹಿಂತಿರುಗುವಾಗ ಯಮ ಶಿಲೆಯ ಮೇಲೆ ಹೆಜ್ಜೆ ಹಾಕುವವರು, ತಮ್ಮ ಜೀವನದಲ್ಲಿ ಮಾಡಿದ ಪುಣ್ಯ, ಜಗನ್ನಾಥನ ದರ್ಶನದ ಸಮಯದಲ್ಲಿ ಪಡೆದ ಪುಣ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ದೇವಾಲಯದ ಪ್ರವೇಶ ದ್ವಾರವಾಗಿರುವ ಸಿಂಹದ ಬಾಗಿಲಿನ ಮೂಲಕ ಭಕ್ತರು ಪ್ರವೇಶಿಸಬೇಕು. ಆದರೆ ವಾಪಸ್‌ ಬರುವಾಗ ಯಮಶಿಲೆ ಇರುವ ಮೆಟ್ಟಿಲುಗಳ ಬದಲಿಗೆ ಬೇರೆ ದಾರಿಯ ಮೂಲಕ ಹೊರ ಹೋಗುತ್ತಾರೆ. ಹಾಗೆ ಮಾಡುವುದರಿಂದ ಯಮಶಿಲೆಯನ್ನು ದಾಟುವ ಅಗತ್ಯವಿಲ್ಲ. ಹೀಗೆ, ಈ ಮೂರನೇ ಮೆಟ್ಟಿನ ಬಗ್ಗೆ ಅನೇಕ ಸ್ವಾರಸ್ಯಕರ ಕಥೆಗಳಿವೆ.

ಈ ಸಮಯದಲ್ಲಿ ಭಕ್ತರಿಗೆ ಪ್ರವೇಶವಿಲ್ಲ

ಭಕ್ತರು ವರ್ಷವಿಡೀ ಜಗನ್ನಾಥನ ದರ್ಶನ ಪಡೆಯಬಹುದು. ಆದರೆ ರಥಯಾತ್ರೆಗೂ ಮುನ್ನ ಭಕ್ತರಿಗೆ ದೇವರ ದರ್ಶನವನ್ನು ನಿಷೇಧಿಸಲಾಗಿದೆ. ಈ ಯಾತ್ರೆ ಪ್ರಾರಂಭವಾಗುವ ಮೊದಲು ಜಗನ್ನಾಥ ದೇವರು ಪ್ರತಿ ವರ್ಷ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎಂದು ನಂಬಲಾಗಿದೆ. ಮೊದಲ ಹುಣ್ಣಿಮೆಯ ದಿನ, ಜಗನ್ನಾಥ ದೇವರಿಗೆ 100 ಕಳಸ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಈ ಸಮಯದಲ್ಲಿ ಭಕ್ತಾದಿಗಳ ದರ್ಶನಕ್ಕೆ ಅವಕಾಶವಿರುವುದಿಲ್ಲ. ಹಾಗೇ ಇದೇ ವೇಳೆ ಜಗನ್ನಾಥ ಸ್ವಾಮಿಗೆ ಗಿಡಮೂಲಿಕೆ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಸಮಯದಲ್ಲಿ ಭಗವಂತ ವಿಶ್ರಾಂತಿ ಪಡೆದ ನಂತರ ರಥಯಾತ್ರೆಗೆ ಸಿದ್ಧನಾಗುತ್ತಾನೆ ಎಂಬುದು ಭಕ್ತರ ನಂಬಿಕೆ. ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ರಥವನ್ನು ಎಳೆಯಲು ಬಯಸುತ್ತಾರೆ. ಹೀಗೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ