logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೇದಾಸಕ್ತರು ಗಮನಿಸಿ; ಉಚಿತ ವೇದಾಧ್ಯಯನ ಮಾಡುವ ಜೊತೆಗೆ 10 ಲಕ್ಷ ಬಹುಮಾನವನ್ನೂ ಗೆಲ್ಲುವ ವಿಶೇಷ ಅವಕಾಶ ಇಲ್ಲಿದೆ

ವೇದಾಸಕ್ತರು ಗಮನಿಸಿ; ಉಚಿತ ವೇದಾಧ್ಯಯನ ಮಾಡುವ ಜೊತೆಗೆ 10 ಲಕ್ಷ ಬಹುಮಾನವನ್ನೂ ಗೆಲ್ಲುವ ವಿಶೇಷ ಅವಕಾಶ ಇಲ್ಲಿದೆ

Reshma HT Kannada

Apr 11, 2024 02:22 PM IST

google News

ವೇದಪಾಠ

    • ವೇದಾಧ್ಯಯನ ಮಾಡಬೇಕು ಎಂದು ಆಸೆ ನಿಮ್ಮಲ್ಲಿದ್ಯಾ, ವೇದದ ದಶಗ್ರಂಥಗಳನ್ನು ಉಚಿತವಾಗಿ ಅಧ್ಯಯನ ಮಾಡುವ ಜೊತೆಗೆ ನೀವು 10 ಲಕ್ಷ ರೂಪಾಯಿಯನ್ನೂ ಗೆಲ್ಲಬಹುದು. ಕೂಡಲಿ ಶೃಂಗೇರಿ ಮಹಾ ಸಂಸ್ಥಾನ ವೇದಾಸಕ್ತರಿಗಾಗಿ ಈ ವಿಶೇಷ ಆಫರ್‌ ನೀಡಿದೆ. ಈ ಕುರಿತ ವಿವರ ಇಲ್ಲಿದೆ.
ವೇದಪಾಠ
ವೇದಪಾಠ

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾ ಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಕೂಡಲಿ ವತಿಯಿಂದ ಕೂಡಲಿಯಲ್ಲಿ ಗುರುಕುಲ ಪ್ರಾರಂಭಿಸಲಾಗಿದೆ. ಈ ಗುರುಕುಲದಲ್ಲಿ ಪ್ರವೇಶ ಪಡೆದು ಋಗ್ವೇದ ಅಥವಾ ಯಜುರ್ವೇದವನ್ನು ಸಂಪೂರ್ಣ ಅಧ್ಯಯನ ಮಾಡಿ ಪರೀಕ್ಷೆ ಉತ್ತೀರ್ಣವಾದರೆ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಘೋಷಣೆ ಮಾಡಿದ್ದಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಹಾಗೂ ಕಲ್ಪ ಎಂಬ ಆರು ಶಾಸ್ತ್ರಗಗಳಿಗೆ ವೇದಾಂಗ ಅಥವಾ ಷಡಂಗ ಎಂಬ ಹೆಸರಿದೆ.

ಈ ಆರು ವೇದಾಂಗಗಳು ಮಾತ್ರವಲ್ಲದೇ ಪ್ರಾತಿಶಾಖ್ಯ ಎಂಬ ಗ್ರಂಥ ಸೇರಿದರೆ ಏಳು ಗ್ರಂಥಗಳಾಗುತ್ತವೆ. ಇನ್ನು ವೇದದ ಸಂಹಿತೆ, ಬ್ರಾಹ್ಮಣ ಹಾಗೂ ಆರಣ್ಯಕ ಎಂಬ ಮೂರು ಗ್ರಂಥಗಳು ಸೇರಿದರೆ ಒಟ್ಟು ಹತ್ತು ಗ್ರಂಥಗಳು ಆಗುತ್ತವೆ. ಈ ಹತ್ತು ಗ್ರಂಥಗಳಿಗೆ ʼದಶಗ್ರಂಥʼ ಎಂಬ ಹೆಸರು ಪ್ರಸಿದ್ಧ.

ಈ ದಶಗ್ರಂಥಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಪರೀಕ್ಷೆ ಉತ್ತೀರ್ಣವಾದಲ್ಲಿ ಅವರಿಗೆ ದಶಗ್ರಂಥಿ ಎಂಬ ಬಿರುದು, ಪ್ರಮಾಣ ಪತ್ರ ನೀಡಲಾಗುತ್ತದೆ ಹಾಗೂ ಐದು ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ.

ಅದೇ ರೀತಿ, ದಶಗ್ರಂಥಗಳ ನಂತರ ಅಧ್ಯಯನವನ್ನು ಮುಂದುವರೆಸಿ, ಸಲಕ್ಷಣ ಘನಾಂತದವರೆಗೆ ಅಧ್ಯಯನ ಮಾಡಿ, ಪರೀಕ್ಷೆ ಉತ್ತೀರ್ಣವಾದಲ್ಲಿ ʼಸದಶಗ್ರಂಥ, ಸಲಕ್ಷಣ ಘನಪಾಠಿʼ ಎಂಬ ಪ್ರಮಾಣ ಪತ್ರ ನೀಡಲಾಗುತ್ತದೆ ಹಾಗೂ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ ಎಂದು ಗುರುಕುಲದ ಪ್ರಕಟಣೆ ತಿಳಿಸಿದೆ.

ಈ ರೀತಿಯ ಅಧ್ಯಯನಕ್ಕೆ ಹತ್ತು ವರ್ಷಗಳ ಸಮಯ ಬೇಕಾಗುತ್ತದೆ ಹಾಗೂ ಈ ಶಿಕ್ಷಣವು ಸಂಪೂರ್ಣ ಉಚಿತವಾಗಿರುತ್ತದೆ. ಕೆಲ ವಿದ್ಯಾರ್ಥಿಗಳಿಗೆ 12 ವರ್ಷ ಕೂಡ ಬೇಕಾಗಬಹುದು.

ಋಗ್ವೇದ ಹಾಗೂ ಯಜುರ್ವೇದ, ಇವೆರಡೂ ಶಾಖೆಗಳಿಗೆ ಈ ನಿಯಮ ಅನ್ವಯಿಸುತ್ತವೆ.

ಮುಂದಿನ ತಲೆಮಾರಿಗೆ ಉನ್ನತ ಮಟ್ಟದ ವೈದಿಕ ವಿದ್ವಾಂಸರ ನಿರ್ಮಾಣ ಹಾಗೂ ವೇದ ವಿದ್ಯೆಯ ರಕ್ಷಣೆಗೆ ಕೂಡಲಿ ಪೀಠದ 72ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಈ ಯೋಜನೆ ಹಮ್ಮಿಕೊಂಡಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ವಾಟ್ಸಾಪ್ ಮಾಡಿ: 9731731154

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ