logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Love Astrology: 2024ರಲ್ಲಿ ಮೇಷ, ವೃಷಭ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತದೆ ?

Love Astrology: 2024ರಲ್ಲಿ ಮೇಷ, ವೃಷಭ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತದೆ ?

HT Kannada Desk HT Kannada

Jan 03, 2024 06:00 AM IST

google News

2024 ಮೇಷ, ವೃಷಭ ರಾಶಿಯವರ ಭವಿಷ್ಯ

  • Love Astrology: ಎಲ್ಲಾ ಪತಿ ಪತ್ನಿ ನಡುವೆ ಕಲಹ ಇದ್ದೇ ಇರುತ್ತದೆ. ಆದರೆ ಅದು ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇಬ್ಬರಲ್ಲಿ ಒಬ್ಬರು ಸೋತರೆ ಅಥವಾ ಇಬ್ಬರೂ ಅನುಸರಿಕೊಂಡು ಹೋದರೆ ಜೀವನ ಹಾಲು ಜೇನಿನಂತೆ ಇರುತ್ತದೆ. ಹೊಸ ವರ್ಷದಲ್ಲಿ ಯಾವ ಯಾವ ರಾಶಿಯವರ ದಾಂಪತ್ಯ ಜೀವನ ಹೇಗಿರಲಿದೆ ನೋಡೋಣ.

2024 ಮೇಷ, ವೃಷಭ ರಾಶಿಯವರ ಭವಿಷ್ಯ
2024 ಮೇಷ, ವೃಷಭ ರಾಶಿಯವರ ಭವಿಷ್ಯ

Love Astrology: 2024 ಹೊಸ ವರ್ಷಕ್ಕೆ ಅಡಿ ಇಟ್ಟಿದ್ದೇವೆ. ಈ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಲು ಎಲ್ಲರೂ ಕಾತರರಾಗಿರುತ್ತಾರೆ. ಹಾಗಾದರೆ ಇಂದಿನ ಲೇಖನದಲ್ಲಿ ಮೇಷ ಹಾಗೂ ವೃಷಭ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮೇಷ

ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದೆ ಹೋದಲ್ಲಿ ತೊಂದರೆಗಳು ಎದುರಾಗಬಹುದು. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಪರಸ್ಪರ ಆಕರ್ಷಣೆಯು ಇರುತ್ತದೆ. ಆಗೊಮ್ಮೆ ಈಗೊಮ್ಮೆ ಜಗಳವೂ ಇರುತ್ತದೆ. ಆದರೆ ಇವೆಲ್ಲವೂ ಕ್ಷಣಿಕ. ವಿಶೇಷವೆಂದರೆ ಇಬ್ಬರಲ್ಲಿಯೂ ತಾಳ್ಮೆ ಇರುವುದಿಲ್ಲ. ಬೇರೆಯವರು ಬುದ್ದಿವಾದ ಹೇಳಿ ಸರಿದಾರಿಗೆ ತರುವ ಮೊದಲೇ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಿರುತ್ತಾರೆ. ಒಟ್ಟಾರೆ ಸುಖ ಸಂತೋಷದಿಂದ ಜೀವನ ಮಾಡುತ್ತಾರೆ. ಕೆಲಸದ ವಿಚಾರದಲ್ಲಿ ದಂಪತಿ ನಡುವೆ ಮನಸ್ತಾಪ ಉಂಟಾಗುತ್ತದೆ. ಆದರೆ ಪರಸ್ಪರ ಮಾತನಾಡಿ ಸರಿದಾರಿಗೆ ಮರಳುತ್ತಾರೆ. ಸಹಜವಾಗಿ ಆರಂಭದಲ್ಲಿ ಪತಿಯ ರೀತಿ, ನೀತಿ, ತೀರ್ಮಾನಗಳು ಬಹು ಮುಖ್ಯವಾಗುತ್ತವೆ. ಆದರೆ ಆದರೆ ಅಂತಿಮವಾಗಿ ಪತ್ನಿಯು ಜಯ ಗಳಿಸುತ್ತಾರೆ. ಬೇರೆಯವರ ಅರ್ಥವಿಲ್ಲದ ಮಾತುಕತೆ ಕುಟುಂಬದಲ್ಲಿ ಬೇಸರವನ್ನು ಉಂಟುಮಾಡಬಹುದು.

ಮೊದಲ 3 ತಿಂಗಳಲ್ಲಿ ಮನಸ್ಸಿನ ಭಾವನೆಗಳಿಗೆ ಪುಷ್ಠಿ ದೊರೆಯುವ ವಾತಾವರಣ ನಿರ್ಮಿತವಾಗುತ್ತದೆ. ಪರಸ್ಪರ ಒಬ್ಬರನ್ನೊಬ್ಬರಲ್ಲಿ ಒಬ್ಬರನ್ನೊಬ್ಬರು ಕ್ಷಮಿಸುವ ಗುಣ ಇರುತ್ತದೆ. ಈ ಅವಧಿಯಲ್ಲಿ ಪತ್ನಿಯು ಸೂಕ್ತ ಮಾರ್ಗದರ್ಶನ ಮಾಡಬಲ್ಲರು. ನವ ದಂಪತಿಗಳು ಸಂತೋಷದ ಜೀವನವನ್ನು ನಡೆಸುತ್ತಾರೆ. ಪರಸ್ಪರ ಒಬ್ಬರ ಮನಸ್ಸನ್ನು ಒಬ್ಬರು ಅರಿತುಕೊಂಡು ಬಾಳುವಿರಿ. ಅವಿವಾಹಿತರಿಗೆ ಪರಿಚಯ ಇರುವವರ ಜೊತೆ ವಿವಾಹವಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ದಂಪತಿಗಳಲ್ಲಿ ಆತ್ಮವಿಶ್ವಾಸವು ಹೆಚ್ಚುತ್ತದೆ. ಈ ಅವಧಿಯಲ್ಲಿ ಯಾರ ಮಾತನ್ನು ಕೇಳಲಾಗದ ಪರಿಸ್ಥಿತಿಗೆ ತಲುಪುವಿರಿ. ಇದರಿಂದಾಗಿ ಪರಸ್ಪರ ಅವಿಶ್ವಾಸ ತುಂಬುತ್ತದೆ. ಕೆಲವು ಬಾರಿ ಕಹಿ ಘಟನೆಗಳು ಸಹ ನಡೆಯಬಹುದು. ವಿಚಿತ್ರವೆಂದರೆ ವಿವಾದಗಳು ತಾರಕಕ್ಕೆ ಏರಿದರೂ ಕ್ಷಣ ಮಾತ್ರದಲ್ಲಿ ಒಬ್ಬರನ್ನೊಬ್ಬರು ಕ್ಷಮಿಸಿ ಪ್ರೀತಿಯಿಂದ ಇರಲು ಪ್ರಾರಂಭಿಸುವಿರಿ. ಆರೋಗ್ಯದಲ್ಲಿ ತೊಂದರೆ ಕಂಡು ಬರಬಹುದು. ಸಮಯ ದೊರೆತಾಗಲೆಲ್ಲಾ ದಂಪತಿಗಳು ಸಂತೋಷದಿಂದ ಕಾಲ ಕಳೆಯಲು ಕಿರು ಪ್ರವಾಸಗಳನ್ನು ಕೈಗೊಳ್ಳುತ್ತಾರೆ. ಪತಿಗೆ ಹಣ ಖರ್ಚು ಮಾಡುವ ಹವ್ಯಾಸ. ಪತ್ನಿಗೆ ಹಣ ಉಳಿಸುವ ಹವ್ಯಾಸ. ಇದರಿಂದಾಗಿ ಬೇಸರವೆಂಬುದು ಬೆನ್ನಿಗೆ ಅಂಟಿದಂತೆ ಇರುತ್ತದೆ.

ದಿನ ಕಳೆಯುದ್ದಂತೆ ದಂಪತಿಗಳಲ್ಲಿ ಅನ್ಯೋನ್ಯತೆ ಬೆಳೆಯುತ್ತದೆ ಎಲ್ಲರೂ ಬೆರಗಾಗುವಂತೆ ಸಂತೋಷದಿಂದ ಜೀವನ ನಡೆಸುವಿರಿ. ಆತ್ಮವಿಶ್ವಾಸದ ಹೊರತು ಇಬ್ಬರಲ್ಲಿಯೂ ಸ್ವಾರ್ಥದ ಭಾವನೆ ಕಾಣುವುದಿಲ್ಲ. ಒಬ್ಬರ ತಪ್ಪನ್ನು ಒಬ್ಬರು ಮನ್ನಿಸಿ ಸಂತೋಷದಿಂದ ಬಾಳುತ್ತಾರೆ. ಆದರೆ ಯಾವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬಾರದು.

ವೃಷಭ

ಪತ್ನಿಯ ಆಸೆ ಆಕಾಂಕ್ಷೆಗಳು ಸುಲಭವಾಗಿ ನೆರವೇರುವುದಿಲ್ಲ. ಈ ಕಾರಣದಿಂದಾಗಿ ದಂಪತಿ ನಡುವೆ ಬೇಸರದ ಸನ್ನಿವೇಶ ಎದುರಾಗುತ್ತದೆ. ಸಾಧ್ಯವಾದಷ್ಟು ಬೇರೆಯವರು ಆಡುವ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬಾರದು. ಇಲ್ಲದೆ ಹೋದಲ್ಲಿ ಚಿಕ್ಕಪುಟ್ಟ ವಿಚಾರಗಳಿಗೂ ಉದ್ವೇಗದಿಂದ ವರ್ತಿಸಬೇಕಾಗುತ್ತದೆ. ಆದರೆ ಕ್ರಮೇಣವಾಗಿ ಇಬ್ಬರಲ್ಲಿಯೂ ಆತ್ಮೀಯತೆ ಉಂಟಾಗುತ್ತದೆ. ದಂಪತಿ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ವಂಶದ ಹಿರಿಯರೊಬ್ಬರ ಮಧ್ಯಸ್ಥಿಕೆಯಿಂದ ಸಂಸಾರದಲ್ಲಿ ಧನಾತ್ಮಕ ಪ್ರತಿಕ್ರಿಯೆ ಉಂಟಾಗುತ್ತದೆ. ಏಪ್ರಿಲ್ ತಿಂಗಳ ನಂತರ ದೂರದ ಸಂಬಂಧಿಕರು ಅಥವಾ ಆತ್ಮೀಯರೊಬ್ಬರು ದಂಪತಿ ನಡುವೆ ಸಮಾನ ಭಾವನೆ ಉಂಟಾಗಲು ಕಾರಣವಾಗುತ್ತಾರೆ. ಸಂಗಾತಿಯ ಆಸೆ ಆಕಾಂಕ್ಷೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಪ್ರಯತ್ನಿಸುತ್ತಾರೆ. ದಾಂಪತ್ಯದಲ್ಲಿನ ಪ್ರತಿಯೊಂದು ಸಮಸ್ಯೆಯನ್ನು ಪ್ರೀತಿಯ ಮಾತಿನಿಂದ ಸರಿ ಮಾಡಿಕೊಳ್ಳಬಹುದು ಎಂಬ ನಿಜವನ್ನು ಅರಿಯುತ್ತಾರೆ.

ಜೂನ್ ತಿಂಗಳ ಆರಂಭದಲ್ಲಿ ತೊಂದರೆಗಳಿಂದ ಪಾರಾಗಿ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತವೆ. ಯಾವುದೇ ಮಾತನ್ನು ಆಡುವ ಮೊದಲು ಯೋಚಿಸುವ ಅಗತ್ಯತೆ ಇದೆ. ನಿಮ್ಮ ಸುಖ ದಾಂಪತ್ಯ ನೋಡಿದ ಕೆಲವರು ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಲು ಪ್ರಯತ್ನಿಸುತ್ತಾರೆ. ವಿವಾಹಕ್ಕೆ ಎದುರಾಗಿದ್ದ ಅಡ್ಡಿ ಆತಂಕಗಳು ದೂರವಾಗಿ ವಿವಾಹ ಯಶಸ್ವಿಯಾಗಿ ನಡೆಯುತ್ತವೆ. ಆಗಸ್ಟ್ ತಿಂಗಳ ನಂತರ ನಿಮ್ಮ ದಾಂಪತ್ಯ ಇನ್ನಷ್ಟು ಉತ್ತಮವಾಗಿರಲಿದೆ. ಪತಿಯು ಪತ್ನಿಯ ಬಹುತೇಕ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತಾರೆ. ಈ ರೀತಿಯಲ್ಲಿ ದಾಂಪತ್ಯ ಜೀವನವು ಸುಖ ಸಂತೋಷಗಳಿಂದ ಕೂಡಿರುತ್ತದೆ. ಅದಕ್ಕೆ ಹಣಕಾಸಿನ ವಿಚಾರದಲ್ಲಿ ಪತಿಯು ಸಹಭಾಗಿತ್ಯವನ್ನು ಪಡೆಯುತ್ತಾರೆ. ಪತಿಗೆ ಅಗತ್ಯ ವಿದ್ದಾಗ ಪತ್ನಿಯಿಂದ ಹಣದ ಸಹಾಯ ದೊರೆಯುತ್ತದೆ. ಈ ರೀತಿ ದಂಪತಿಗಳು ಒಬ್ಬರನ್ನೊಬ್ಬರು ಅರಿತುಕೊಂಡು ಜೀವನ ನಡೆಸುತ್ತಾರೆ. ಪತ್ನಿಯ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು, ಎಚ್ಚರಿಕೆಯಿಂದ ಇರಬೇಕು. ವರ್ಷದ ಕಡೆಯ ದಿನಗಳಲ್ಲಿ ದಂಪತಿ ದೂರದೂರಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ