logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Love Astrology: ದಾಂಪತ್ಯದಲ್ಲಿ ಪ್ರೀತಿ ಹೆಚ್ಚಲಿದೆ; ಅವಿವಾಹಿತರಿಗೆ ಪ್ರೇಮವಿವಾಹ ಸಾಧ್ಯತೆ; 2024ರ ಕುಂಭ, ಮೀನ ರಾಶಿಯ ಪ್ರಣಯ ಭವಿಷ್ಯ

Love Astrology: ದಾಂಪತ್ಯದಲ್ಲಿ ಪ್ರೀತಿ ಹೆಚ್ಚಲಿದೆ; ಅವಿವಾಹಿತರಿಗೆ ಪ್ರೇಮವಿವಾಹ ಸಾಧ್ಯತೆ; 2024ರ ಕುಂಭ, ಮೀನ ರಾಶಿಯ ಪ್ರಣಯ ಭವಿಷ್ಯ

HT Kannada Desk HT Kannada

Jan 08, 2024 02:17 PM IST

google News

ಕುಂಭ ಹಾಗೂ ಮೀನ ರಾಶಿಯ ಪ್ರಯಣ ಭವಿಷ್ಯ

    • Love Astrology: ಪತಿ ಪತ್ನಿಯ ನಡುವೆ ಕಲಹ ಇದ್ದೇ ಇರುತ್ತದೆ. ಆದರೆ ಅದು ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇಬ್ಬರಲ್ಲಿ ಒಬ್ಬರು ಸೋತರೆ ಅಥವಾ ಇಬ್ಬರೂ ಅನುಸರಿಕೊಂಡು ಹೋದರೆ ಜೀವನ ಹಾಲು ಜೇನಿನಂತೆ ಇರುತ್ತದೆ. ಹೊಸ ವರ್ಷದಲ್ಲಿ ಯಾವ ಯಾವ ರಾಶಿಯವರ ದಾಂಪತ್ಯ ಜೀವನ ಹೇಗಿರಲಿದೆ ನೋಡೋಣ.
ಕುಂಭ ಹಾಗೂ ಮೀನ ರಾಶಿಯ ಪ್ರಯಣ ಭವಿಷ್ಯ
ಕುಂಭ ಹಾಗೂ ಮೀನ ರಾಶಿಯ ಪ್ರಯಣ ಭವಿಷ್ಯ

Love Astrology: 2024 ಹೊಸ ವರ್ಷಕ್ಕೆ ಅಡಿ ಇಟ್ಟಿದ್ದೇವೆ. ಈ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಲು ಎಲ್ಲರೂ ಕಾತರರಾಗಿರುತ್ತಾರೆ. ಹಾಗಾದರೆ ಇಂದಿನ ಲೇಖನದಲ್ಲಿ ಕುಂಭ ಹಾಗೂ ಮೀನ ರಾಶಿಯವರ ಪ್ರಣಯ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕುಂಭ

ಸರಿಪಡಿಸಲು ಸಾಧ್ಯವಾಗದಂತಹ ಸಮಸ್ಯೆಯೊಂದು ಕುಟುಂಬದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾರಣಗಳಿಂದ ದಂಪತಿಗಳಲ್ಲಿ ನೆಮ್ಮದಿಯ ಕೊರತೆ ಇರುತ್ತದೆ. ಆದರೆ ಪರಸ್ಪರರ ಪ್ರೀತಿ ವಿಶ್ವಾಸ ದ್ವಿಗುಣಗೊಳ್ಳುತ್ತದೆ. ಕುಟುಂಬದ ಆಂತರಿಕ ವಿಚಾರಗಳಲ್ಲಿ ಭಾಗಿಯಾಗದೆ ಹೋದಲ್ಲಿ ಸಂತೃಪ್ತಿಯ ದಾಂಪತ್ಯ ಜೀವನ ಇರುತ್ತದೆ. ವಾದ ವಿವಾದಗಳು ಆರಂಭವಾದರೂ, ಕ್ಷಣ ಮಾತ್ರದಲ್ಲಿ ಮರೆಯಾಗುತ್ತದೆ. ನಿಮ್ಮಲ್ಲಿರುವ ಸಹನೆಯ ಗುಣ ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಏಪ್ರಿಲ್ ತಿಂಗಳ ಅಂತ್ಯದವರೆಗೂ ಪರಸ್ಪರ ವಿಶ್ವಾಸದ ಕೊರತೆ ಇರುತ್ತದೆ ಪರಸ್ಪರ ಇರುವ ತಪ್ಪು ತಿಳುವಳಿಕೆಯನ್ನು ಕಡಿಮೆ ಮಾಡಿಕೊಳ್ಳಿ. ಒಳ್ಳೆಯ ಮಾತುಕತೆ ಅಂತರವನ್ನು ಕಮ್ಮಿ ಮಾಡುತ್ತದೆ. ಒಟ್ಟಾರೆ ಈ ಅವಧಿಯಲ್ಲಿ ದಾಂಪತ್ಯ ಜೀವನದಲ್ಲಿ ತೊಂದರೆ ಕಾಣುವುದಿಲ್ಲ. ಏಪ್ರಿಲ್ ನಂತರ ಮಾನಸಿಕ ಒತ್ತಡವಿದ್ದರೂ ಸುಖ ಜೀವನಕ್ಕೆ ತೊಂದರೆ ಇರುವುದಿಲ್ಲ. ಕುಟುಂಬದಲ್ಲಿ ಎದುರಾದ ತೊಂದರೆಗಳಿಗೆ ಸದಸ್ಯರು ಪರಿಹಾರವನ್ನು ಸೂಚಿಸುತ್ತಾರೆ. ಆತ್ಮವಿಶ್ವಾಸ ಹೆಚ್ಚುವುದಲ್ಲದೆ ಕೋಪವು ಕಡಿಮೆಯಾಗುತ್ತದೆ. ಹೆಚ್ಚಿನ ಜವಾಬ್ದಾರಿ ಇದ್ದರೂ ಸ್ವಂತ ವಿಚಾರಗಳಿಗೆ ಬೆಲೆ ನೀಡುವಿರಿ ಕ್ರಮೇಣವಾಗಿ ದಂಪತಿಗಳ ನಡುವೆ ಪ್ರೀತಿ ವಾತ್ಸಲ್ಯ ಇಮ್ಮಡಿಯಾಗುತ್ತದೆ.

ಇದನ್ನೂ ಓದಿ: Love Astrology: ಮಾಡುವ ತಪ್ಪನ್ನು ಟೀಕಿಸದೆ ಸರಿಪಡಿಸಿದರೆ ಮನಸ್ತಾಪದ ಮಾತೇ ಇಲ್ಲ; 2024ರ ಧನು, ಮಕರ ರಾಶಿಯ ಪ್ರಣಯ ಭವಿಷ್ಯ

ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಮಾತಿನ ಮೇಲೆ ಹಿಡಿತವಿರಬೇಕು. ಇಲ್ಲವಾದರೆ ದಂಪತಿಗಳಲ್ಲಿ ಪರಸ್ಪರ ಅವಿಶ್ವಾಸ ಮನೆ ಮಾಡಿರುತ್ತದೆ. ಕ್ರಮೇಣ ಶಾಂತಿ ಸಂಯಮದಿಂದ ಜೀವನ ನಡೆಸುವಿರಿ. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಬೆಳೆಯುತ್ತದೆ. ಆದರೆ ಯಾವುದೇ ಕಾರಣಕ್ಕೂ ಬೇರೆಯವರ ಮಾತನ್ನು ನಂಬಬಾರದು. ದಂಪತಿಗಳ ನಡುವೆ ಬಿರುಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಾರೆ. ಮನೆಯ ಹಿರಿಯರ ಮಾರ್ಗದರ್ಶನವನ್ನು ಪಾಲಿಸುವುದು ಉತ್ತಮ.

ಅಕ್ಟೋಬರ್ ತಿಂಗಳಿನಿಂದ ಕುಟುಂಬದಲ್ಲಿನ ಒತ್ತಡ ಮರೆಯಾಗುತ್ತದೆ. ಇದರಿಂದಾಗಿ ಕ್ರಮೇಣ ದಾಂಪತ್ಯ ಜೀವನ ಸರಿದಾರಿಗೆ ಮರಳುತ್ತದೆ. ಪರಸ್ಪರ ಒಬ್ಬರ ತಪ್ಪನ್ನು ಮತ್ತೊಬ್ಬರು ಕ್ಷಮಿಸುವ ಕಾರಣ ಯಾವುದೇ ವಿವಾದ ಇರುವುದಿಲ್ಲ.

ಮೀನ

ವರ್ಷದ ಆರಂಭದಿಂದಲೂ ದಾಂಪತ್ಯವೂ ಸುಖಮಯವಾಗಿರುತ್ತದೆ. ಮನದಲ್ಲಿರುವ ಒತ್ತಡವನ್ನು ಮರೆತು ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸದಿಂದ ಜೀವನ ಸಾಧಿಸುವಿರಿ. ಅವಿವಾಹಿತರಿಗೆ ಪರಿಚಯ ಇರುವವರ ಜೊತೆಯಲ್ಲಿ ವಿವಾಹ ನಿಶ್ಚಯವಾಗಬಹುದು. ಪರಸ್ಪರ ಇರುವ ವಿಶ್ವಾಸ ಸುಖಜೀವನಕ್ಕೆ ನಾಂದಿಯಾಗುತ್ತದೆ. ಒಳ್ಳೆಯ ಮಾತಿನಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುವ ಕಾರಣ ಕುಟುಂಬದಲ್ಲಿ ಉತ್ತಮ ಅನ್ಯೋನ್ಯತೆ ಇರುತ್ತದೆ. ಸಂತಾನ ಯೋಗವಿದೆ. ಪತ್ನಿಯ ಒಳ್ಳೆಯತನಕ್ಕೆ ಮನ ಸೋಲುವ ಕಾರಣ ದಾಂಪತ್ಯದಲ್ಲಿನ ಸುಖ ಸಂತೋಷ ಮನೆ ಮಾಡಿರುತ್ತದೆ. ಸಂತೋಷದ ಸವಿಗಾಗಿ ದಂಪತಿಗಳು ದೂರದ ಊರಿಗೆ ಪ್ರವಾಸ ಬೆಳೆಸುತ್ತಾರೆ.

ಇದನ್ನೂ ಓದಿ: Love Astrology: ದಾಂಪತ್ಯದಲ್ಲಿ ಒಲುಮೆ ಹೆಚ್ಚಲಿದೆ, ಪ್ರೀತಿಯೇ ಸರ್ವಕ್ಕೂ ಮದ್ದು; 2024ರ ತುಲಾ, ವೃಶ್ಚಿಕ ರಾಶಿಯ ಪ್ರಣಯ ಭವಿಷ್ಯ

ಏಪ್ರಿಲ್ ತಿಂಗಳ ನಂತರ ಪ್ರಯುಕ್ತಪೂರ್ವಕವಾಗಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಿರಿ. ಈ ಅವಧಿಯಲ್ಲಿ ಯಾವುದೇ ಕಷ್ಟ ನಷ್ಟಗಳು ಎದುರಾಗದು. ಈ ಅವಧಿಯಲ್ಲಿ ಸಂಗಾತಿಗೆ ಇಷ್ಟವೆನಿಸುವ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಇದರಿಂದ ಪ್ರೀತಿ ವಿಶ್ವಾಸಗಳು ಪರಸ್ಪರ ಹೆಚ್ಚುತ್ತವೆ. ಯಾರೊಬ್ಬರ ಮಾತಿಗೂ ಸೊಪ್ಪು ಹಾಕದೆ ಸಂಗಾತಿಯ ಮಾತನ್ನು ಗೌರವಿಸುವಿರಿ. ಇದರಿಂದ ಸಂತೃಪ್ತಿಯ ಜೀವನವನ್ನು ಸಂಗಾತಿಯೊಂದಿಗೆ ನಡೆಸುವಿರಿ.

ಕುಟುಂಬದಲ್ಲಿನ ಯಾವುದೇ ಸಮಸ್ಯೆಗಳು ಎದುರಾದರು ಸ್ವಂತ ನಿರ್ಧಾರಗಳಿಗೆ ಬದ್ದರಾಗುವಿರಿ. ಸಂಗಾತಿಯಲ್ಲಿನ ಲೋಪ ದೋಷಗಳನ್ನು ಮರೆತು ವಿಶ್ವಾಸದಿಂದ ಕಾಣುವಿರಿ. ಇದರಿಂದ ದಾಂಪತ್ಯ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ದೊರೆಯಲಿವೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಆಗಸ್ಟ್ ತಿಂಗಳಿನಲ್ಲಿ ದಾಂಪತ್ಯ ಜೀವನದಲ್ಲಿ ಬಹು ಮುಖ್ಯ ಬದಲಾವಣೆಗಳು ಕಂಡು ಬರಲಿವೆ. ಇದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಆದ್ದರಿಂದ ಸಂಗಾತಿಯೊಂದಿನ ಸಂಬಂಧವು ಗಟ್ಟಿಗೊಳ್ಳುತ್ತದೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಾತ್ರ ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಇದರಿಂದಾಗಿ ಅನಾವಶ್ಯಕ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ದಿನ ಕಳೆದಂತೆ ಸಹಜತೆ ಮರಳಿ ದಂಪತಿಗಳು ಸಂತೋಷದಿಂದ ಬಾಳುತ್ತಾರೆ. ಒಟ್ಟಾರೆ ಈ ಅವಧಿಯಲ್ಲಿ ಸಹನೆ ಮತ್ತು ಪರಸ್ಪರ ಪ್ರೀತಿ ಮುಖ್ಯವೆನಿಸುತ್ತದೆ. ಹೊಸ ನಿರೀಕ್ಷೆಗಳು ದಂಪತಿಗಳಲ್ಲಿ ಸಂಭ್ರಮವನ್ನು ಉಂಟುಮಾಡುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ