logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Love Astrology: ಮಾಡುವ ತಪ್ಪನ್ನು ಟೀಕಿಸದೆ ಸರಿಪಡಿಸಿದರೆ ಮನಸ್ತಾಪದ ಮಾತೇ ಇಲ್ಲ; 2024ರ ಧನು, ಮಕರ ರಾಶಿಯ ಪ್ರಣಯ ಭವಿಷ್ಯ

Love Astrology: ಮಾಡುವ ತಪ್ಪನ್ನು ಟೀಕಿಸದೆ ಸರಿಪಡಿಸಿದರೆ ಮನಸ್ತಾಪದ ಮಾತೇ ಇಲ್ಲ; 2024ರ ಧನು, ಮಕರ ರಾಶಿಯ ಪ್ರಣಯ ಭವಿಷ್ಯ

HT Kannada Desk HT Kannada

Jan 07, 2024 08:40 PM IST

google News

ಪ್ರಣಯ ಭವಿಷ್ಯ 2024

    • Love Astrology 2024: ಪತಿ ಪತ್ನಿಯ ನಡುವೆ ಕಲಹ ಇದ್ದೇ ಇರುತ್ತದೆ. ಆದರೆ ಅದು ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇಬ್ಬರಲ್ಲಿ ಒಬ್ಬರು ಸೋತರೆ ಅಥವಾ ಇಬ್ಬರೂ ಅನುಸರಿಕೊಂಡು ಹೋದರೆ ಜೀವನ ಹಾಲು ಜೇನಿನಂತೆ ಇರುತ್ತದೆ. ಹೊಸ ವರ್ಷದಲ್ಲಿ ಯಾವ ಯಾವ ರಾಶಿಯವರ ದಾಂಪತ್ಯ ಜೀವನ ಹೇಗಿರಲಿದೆ ನೋಡೋಣ.
ಪ್ರಣಯ ಭವಿಷ್ಯ 2024
ಪ್ರಣಯ ಭವಿಷ್ಯ 2024

Love Astrology: 2024 ಹೊಸ ವರ್ಷಕ್ಕೆ ಅಡಿ ಇಟ್ಟಿದ್ದೇವೆ. ಈ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಲು ಎಲ್ಲರೂ ಕಾತರರಾಗಿರುತ್ತಾರೆ. ಹಾಗಾದರೆ ಇಂದಿನ ಲೇಖನದಲ್ಲಿ ಧನಸ್ಸು ಮತ್ತು ಮಕರ ರಾಶಿಯವರ ಪ್ರಣಯ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಧನಸ್ಸು /ಧನು

ಪತಿ ಪತ್ನಿಯರಲ್ಲಿ ಪರಸ್ಪರ ಉತ್ತಮ ಭಾವನೆ, ಪ್ರೀತಿ, ವಿಶ್ವಾಸವಿರುತ್ತದೆ. ಆದರೆ ಕುಟುಂಬದಲ್ಲಿ ಅನಾವಶ್ಯಕ ಒತ್ತಡದ ವಾತಾವರಣ ಉಂಟಾಗುತ್ತದೆ. ಆದ್ದರಿಂದ ಪರಸ್ಪರ ಪ್ರೀತಿ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಆರಂಭದಲ್ಲಿ ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ಸಮೃದ್ಧಿಯಾಗಿ ಇರುತ್ತದೆ. ಅತಿಯಾದ ವಾದ ವಿವಾದಗಳು ಎದುರಾದರೂ ಪತ್ನಿಯಲ್ಲಿರುವ ಕ್ಷಮಾಗುಣಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ಉಂಟುಮಾಡುತ್ತದೆ. ಏಪ್ರಿಲ್ ತಿಂಗಳ ಕೊನೆಯವರೆಗೆ ಉತ್ತಮ ಮಾತುಕತೆಯಿಂದ ಜೀವನದಲ್ಲಿ ಧನಾತ್ಮಕ ಫಲಗಳು ದೊರೆಯುತ್ತವೆ. ಆದರೆ ಮಕ್ಕಳ ಕಾರಣದಿಂದ ಅಲ್ಪ ಮಟ್ಟಿಗೆ ಮಾನಸಿಕ ಒತ್ತಡವು ಉಂಟಾಗಬಹುದು. ಬೇಸರ ಕಳೆಯಲು ಈ ಅವಧಿಯಲ್ಲಿ ದೀರ್ಘಕಾಲದ ಪ್ರವಾಸ ಆಯೋಜಿಸುವಿರಿ

ಮೇ ತಿಂಗಳು ಆರಂಭವಾದ ದಿನದಿಂದ ಪತಿಯ ಮಾತಿಗೆ ಮೊದಲ ಪ್ರಶಸ್ತ ನೀಡಲೇಬೇಕಾಗುತ್ತದೆ. ತಾಳ್ಮೆಯಿಂದ ಇದನ್ನು ಎದುರಿಸಿದರು ಕೆಲವೊಮ್ಮೆ ವಾದ ವಿವಾದ ಉಂಟಾಗುತ್ತದೆ. ಆತ್ಮೀಯರನ್ನು ಸಲಹಲೆಂದು ಅನ್ಯರಿದ ಹಣ ಪಡೆಯಬೇಕಾಗುತ್ತದೆ. ಇದರಿಂದ ಅನಗತ್ಯ ಮನಸ್ತಾಪ ತಲೆದೋರುತ್ತದೆ. ಒಟ್ಟಾರೆ ಮೇ ಮತ್ತು ಜೂನ್ ತಿಂಗಳಲ್ಲಿ ಮೌನ ಮತ್ತು ಸಹನೆ ಉತ್ತಮ ಪರಿಹಾರ ನೀಡುತ್ತದೆ. ಆದರೆ ಯಾವುದೇ ಸಮಸ್ಯೆ ಎದುರಾದರೂ ದಂಪತಿಗಳ ನಡುವಿನ ವಿಶ್ವಾಸವು ಕಡಿಮೆಯಾಗುವುದಿಲ್ಲ.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳು ಹೊಸ ಆಶಾಭಾವನೆಯನ್ನು ಉಂಟುಮಾಡುತ್ತದೆ. ಯಾರ ಮಾತನ್ನು ನಂಬದೇ ಸ್ವಂತ ಬುದ್ಧಿಯಿಂದ ಮುಂದುವರೆಯುವ ಕಾರಣ ದಂಪತಿಗಳಲ್ಲಿ ಪ್ರೀತಿ ವಿಶ್ವಾಸ ಮರುಕಳಿಸುತ್ತದೆ. ಅನಿರೀಕ್ಷಿತವಾಗಿ ಎದುರಾಗುವ ಮನಸ್ತಾಪವು ಕುಟುಂಬದ ಹಿರಿಯರ ಮಧ್ಯಸ್ಥಿಕೆಯಿಂದ ಶಾಂತ ಸ್ವರೂಪ ತಳೆಯುತ್ತದೆ. ಬಂಧು-ಬಳಗದವರ ಆಗಮನ ಅಧಿಕ ಖರ್ಚು ಮತ್ತು ಚರ್ಚೆಗೆ ಗ್ರಾಸವಾಗುತ್ತದೆ. ಆದರೆ ಯಾವುದೇ ತೊಂದರೆ ಕಂಡು ಬರದು.

ಅಕ್ಟೋಬರ್ ತಿಂಗಳಿನಿಂದ ಕುಟುಂಬದಲ್ಲಿ ಹೊಸತನ ಮೂಡುತ್ತದೆ. ಎದುರಾದ ಎಲ್ಲಾ ಸಮಸ್ಯೆಗಳು ಬಗೆಹರಿದು ದಂಪತಿಗಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಮಕ್ಕಳ ಸಾಧನೆಯು ಸಹ ಕಾರಣವಾಗಬಹುದು. ಒಟ್ಟಾರೆ ಸಂಬಂಧಗಳ ಮೌಲ್ಯ ಮತ್ತು ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುತ್ತದೆ. ಸಿಡುಕುವುದರ ಬದಲು ಕಾದು ನೋಡಿದರೆ ಎಲ್ಲಕ್ಕೂ ಮದ್ದಿದೆ ಎಂಬ ಮಾತು ಸತ್ಯ.

ಮಕರ

ಅತಿಯಾದ ಜಾಣ್ಮೆಯಿಂದ ಜೀವನವನ್ನು ನಡೆಸುವಿರಿ. ದಂಪತಿಗಳಲ್ಲಿ ಪರಸ್ಪರ ಹೊಂದಾಣಿಕೆಯ ಗುಣ ಕಂಡುಬರುತ್ತದೆ. ಮಾಡುವ ತಪ್ಪನ್ನು ಟೀಕಿಸದೆ ಸರಿಪಡಿಸುವ ಕಾರಣ ಮನಸ್ತಾಪದ ಮಾತೇ ಇಲ್ಲ. ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳುವುದರಿಂದ ಸುಖ ಸಂಸಾರ ಇರುತ್ತದೆ. ಏಪ್ರಿಲ್ ತಿಂಗಳವರೆಗೂ ಕುಟುಂಬದಲ್ಲಿ ಪ್ರೀತಿ ವಿಶ್ವಾಸ ನೆಮ್ಮದಿಗೆ ಮೊದಲ ಆದ್ಯತೆ ನೀಡುವಿರಿ. ತಾಯಿಯವರ ಅಥವಾ ಅತ್ತೆಯವರ ಮಧ್ಯಸ್ಥಿಕೆಯಿಂದ ಎದುರಾಗುವ ಸಣ್ಣ ಪುಟ್ಟ ವಿವಾದಗಳು ದೂರವಾಗುತ್ತವೆ. ಈ ಅವಧಿಯಲ್ಲಿ ದಂಪತಿಗಳು ಯಾತ್ರಾಸ್ಥಳಕ್ಕೆ ಭೇಟಿ ನೀಡುತ್ತಾರೆ. ದುಡುಕಿನ ನಿರ್ಧಾರ ತೆಗೆದುಕೊಳ್ಳದೆ ನಾಜೂಕಿನಿಂದ ವರ್ತಿಸುವ ಕಾರಣ ಸಂಗಾತಿಯ ಪ್ರೀತಿ ಮತ್ತು ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.

ಜೂನ್ ತಿಂಗಳ ನಂತರ ಪತ್ನಿಯ ಕೆಲಸ ಕಾರ್ಯಗಳಲ್ಲಿ ಪತಿಯ ಸಹಭಾಗಿತ್ವ ಇರುತ್ತದೆ. ಇದರಿಂದಾಗಿ ತಪ್ಪನ್ನು ಒಪ್ಪದೇ ಹೋದರು ಮನ್ನಿಸುವ ಗುಣ ತೋರುತ್ತಾನೆ. ಆದ್ದರಿಂದ ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ಸದಾ ಕಾಲ ನೆಲೆಸಿರುತ್ತದೆ. ಪತ್ನಿಯ ಒಳ್ಳೆಯ ಮನೋಭಾವನೆ ಎದುರಾಗುವ ಕೌಟುಂಬಿಕ ಸಮಸ್ಯೆಯನ್ನು ಮರೆಮಾಚುತ್ತದೆ. ಮಕ್ಕಳ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾದರೂ ಕೆಲ ದಿನಗಳಲ್ಲಿ ಸಹಜ ಸ್ಥಿತಿಗೆ ಮರಳುತ್ತದೆ. ಈ ವೇಳೆಯಲ್ಲಿ ಪರಸ್ಪರ ಸೌಹಾರ್ದತೆ ಮೆರೆಯುತ್ತದೆ.

ಕಷ್ಟ ನಷ್ಟದ ಸಂದರ್ಭದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಆಸರೆಯಾಗುವಿರಿ. ಈ ಕಾರಣವೆಂದಾಗಿ ಸಪ್ಟೆಂಬರ್ ನಂತರದ ದಿನಗಳಲ್ಲಿ ಪರಸ್ಪರ ವ್ಯಾಮೋಹ ಹೆಚ್ಚಾಗುತ್ತದೆ. ಯಾರ ಮಾತನ್ನು ಗಂಭೀರವಾಗಿ ಬರಿ ಪರಿಗಣಿಸದೆ ಸ್ವಂತ ನಿರ್ಧಾರಗಳಿಗೆ ಬದ್ಧರಾಗುವಿರಿ. ಇದರಿಂದ ಆತ್ಮವಿಶ್ವಾಸವು ಹೆಚ್ಚಾಗಿ ಪರಸ್ಪರ ಪ್ರೀತಿ ವಿಶ್ವಾಸವು ನೆಲೆಗೊಳ್ಳುತ್ತದೆ. ವರ್ಷದ ಈ ದಿನಗಳು ಅತ್ಯಂತ ಸಂತಸದಾಯಕವಾಗುತ್ತದೆ. ಜವಾಬ್ದಾರಿಯುತ ಕೆಲಸ ಕಾರ್ಯಗಳಲ್ಲಿ ಇಬ್ಬರು ತನ್ಮಯರಾಗಿ ವರ್ತಿಸುವಿರಿ. ಆದರೆ ಸ್ವಾರ್ಥವನ್ನು ಮರೆತು ಪರಸ್ಪರ ಒಬ್ಬರನ್ನೊಬ್ಬರು ಅಭಿನಂದಿಸುವಿರಿ. ಈ ಕಾರಣಗಳಿಂದಾಗಿ ದಂಪತಿಗಳ ನಡುವೆ ಪ್ರೀತಿ ವಿಶ್ವಾಸಕ್ಕೆ ಕೊರತೆ ಇರುವುದಿಲ್ಲ. ಸದಾಕಾಲ ನಗುನಗುತ್ತಾ ಬಾಳುವ ತೀರ್ಮಾನಕ್ಕೆ ಬರುತ್ತಾರೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ