logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Love Horoscope: ಮುನಿಸು, ವಾದ ವಿವಾದ, ಅನುರಾಗ; 2024ರಲ್ಲಿ ಸಿಂಹ, ಕನ್ಯಾ ರಾಶಿಯವರ ದಾಂಪತ್ಯ ಜೀವನ ಹೇಗಿರಲಿದೆ

Love Horoscope: ಮುನಿಸು, ವಾದ ವಿವಾದ, ಅನುರಾಗ; 2024ರಲ್ಲಿ ಸಿಂಹ, ಕನ್ಯಾ ರಾಶಿಯವರ ದಾಂಪತ್ಯ ಜೀವನ ಹೇಗಿರಲಿದೆ

HT Kannada Desk HT Kannada

Jan 04, 2024 06:36 AM IST

google News

ಸಿಂಹ , ಕನ್ಯಾ ರಾಶಿಯವರ ಪ್ರೇಮ ದಾಂಪತ್ಯ ಭವಿಷ್ಯ

  • Love Astrology: ಎಲ್ಲಾ ಪತಿ ಪತ್ನಿ ನಡುವೆ ಕಲಹ ಇದ್ದೇ ಇರುತ್ತದೆ. ಆದರೆ ಅದು ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇಬ್ಬರಲ್ಲಿ ಒಬ್ಬರು ಸೋತರೆ ಅಥವಾ ಇಬ್ಬರೂ ಅನುಸರಿಕೊಂಡು ಹೋದರೆ ಜೀವನ ಹಾಲು ಜೇನಿನಂತೆ ಇರುತ್ತದೆ. ಹೊಸ ವರ್ಷದಲ್ಲಿ ಯಾವ ಯಾವ ರಾಶಿಯವರ ದಾಂಪತ್ಯ ಜೀವನ ಹೇಗಿರಲಿದೆ ನೋಡೋಣ.

ಸಿಂಹ , ಕನ್ಯಾ ರಾಶಿಯವರ ಪ್ರೇಮ ದಾಂಪತ್ಯ ಭವಿಷ್ಯ
ಸಿಂಹ , ಕನ್ಯಾ ರಾಶಿಯವರ ಪ್ರೇಮ ದಾಂಪತ್ಯ ಭವಿಷ್ಯ

Love Astrology 2024: ಹೊಸ ವರ್ಷಕ್ಕೆ ಅಡಿ ಇಟ್ಟಿದ್ದೇವೆ. ಈ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಲು ಎಲ್ಲರೂ ಕಾತರರಾಗಿರುತ್ತಾರೆ. ಹಾಗಾದರೆ ಇಂದಿನ ಲೇಖನದಲ್ಲಿ ಸಿಂಹ ಹಾಗೂ ಕನ್ಯಾ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಸಿಂಹ ರಾಶಿ

ಮಾತಿನ ಮೇಲೆ ಹತೋಟಿ ಇರುವುದಿಲ್ಲ. ಈ ಕಾರಣದಿಂದಾಗಿ ದಂಪತಿಗಳ ನಡುವೆ ಅನಾವಶ್ಯಕ ವಾದ ವಿವಾದಗಳು ತಲೆದೋರುತ್ತದೆ. ಒಮ್ಮೆ ತೆಗೆದುಕೊಂಡ ನೀಲುವನ್ನು ಎಂದಿಗೂ ಬದಲಾಯಿಸಲಾಗುವುದಿಲ್ಲ. ಸಂಗಾತಿ ಕೂಡಾ ನನ್ನ ಕೆಲಸವೇ ಸರಿ, ತನ್ನ ಮಾತೇ ಸರಿ ಎಂಬ ಮನಸ್ಥಿತಿಯಲ್ಲಿ ಇರುತ್ತಾರೆ. ಇದರಿಂದ ಪತಿ-ಪತ್ನಿಯರಲ್ಲಿ ಒಮ್ಮತ ಇರುವುದಿಲ್ಲ. ಆದರೆ ಪರಸ್ಪರ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾರಣ ಕ್ರಮೇಣ ಮನಸ್ತಾಪ ದೂರವಾಗುತ್ತದೆ.

ಏಪ್ರಿಲ್ ಮುಗಿಯುವವರೆಗೂ ಉತ್ತಮ ಅನ್ಯೋನ್ಯತೆ ಬೆಳೆಯುತ್ತದೆ. ಇದರಲ್ಲಿ ನಿಮ್ಮ ಪಾತ್ರವೇ ಮುಖ್ಯವಾಗುತ್ತದೆ. ನಿಮ್ಮ ಮಾತನ್ನು ಸಂಗಾತಿ ಒಪ್ಪಲೇ ಬೇಕಾಗುತ್ತದೆ. ಇದರಿಂದ ಕುಟುಂಬದಲ್ಲಿ ಬಿಗುವಿನ ವಾತಾವರಣವಿದ್ದರೂ ದಂಪತಿ ನಡುವೆ ಅನುರಾಗವಿರುತ್ತದೆ. ಸಾಧ್ಯವಾದಷ್ಟು ಶಾಂತಿ ಸಂಯಮದಿಂದ ವರ್ತಿಸಲು ಪ್ರಯತ್ನಿಸಿ. ಮೇ ತಿಂಗಳ ನಂತರ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ. ಸಂಗಾತಿಯ ಮನಸ್ಸಿಗೆ ನೋವು ಉಂಟಾಗಬಹುದು. ಆದರೆ ಪರಿಸ್ಥಿತಿಯ ಒತ್ತಡಕ್ಕೆ ಅನುಸಾರ ಬಾಳಲು ಪ್ರಯತ್ನಿಸುವಿರಿ. ಇದರಿಂದಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ದಂಪತಿ ಒಂದೇ ರೀತಿಯ ತೀರ್ಮಾನಕ್ಕೆ ಬರಲಿದ್ದೀರಿ.

ಆಗಸ್ಟ್‌ ನಂತರ ಪರಸ್ಪರ ಪ್ರೀತಿ ವಿಶ್ವಾಸ

ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಪರಸ್ಪರ ವಿಶ್ವಾಸ ಹೆಚ್ಚುತ್ತದೆ. ಈ ಕಾರಣದಿಂದಾಗಿ ದಾಂಪತ್ಯ ಜೀವನದಲ್ಲಿ ಸುಖ ಸಂತೋಷಗಳ ಮಿಳಿತವಿರುತ್ತದೆ. ಕುಟುಂಬದ ಸಾಮಾನ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವ ಮೂಲಕ ಒತ್ತಡದಿಂದ ಹೊರ ಬರುವಿರಿ. ಇದರಿಂದ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಬೇಸರ ಕಳೆಯಲೆಂದು ದಂಪತಿಗಳು ಪ್ರವಾಸಕ್ಕೆ ತೆರಳುವಿರಿ. ವಿಶೇಷವೆಂದರೆ ಮನೆಯ ಹಿರಿಯರ ಸಂಪೂರ್ಣ ಸಹಕಾರ ನಿಮಗೆ ದೊರೆಯುತ್ತದೆ. ಅಕ್ಟೋಬರ್ ಮತ್ತು ನವೆಂಬರ್‌ ತಿಂಗಳಲ್ಲಿ ಸಂಗಾತಿಗೆ ಅನಾರೋಗ್ಯ ಕಾಡುತ್ತದೆ. ಆತಂಕವಿದ್ದರೂ ತ್ವರಿತವಾಗಿ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಆತ್ಮವಿಶ್ವಾಸದಿಂದ ಜೀವನದಲ್ಲಿ ಮುಂದುವರೆಯುವಿರಿ. ಮನೆಯ ಹಿರಿಯರನ್ನು ಕಡೆಗಣಿಸದೆ ದಾಂಪತ್ಯ ಜೀವನದ ಸವಿಯನ್ನು ಅನುಭವಿಸುವಿರಿ. ತಾಳ್ಮೆಯಿಂದ ಸಂಗಾತಿಯ ಮನಸ್ಸನ್ನು ಗೆಲ್ಲಲು ಸಾಧ್ಯವಾಗುತ್ತದೆ.

ಕನ್ಯಾ ರಾಶಿ

ವಿಚಾರಗಳು ಮುಖ್ಯವೋ ಅಲ್ಲವೋ ಮನದಲ್ಲಿ ಶಾಶ್ವತವಾಗಿ ಇರುವುದಿಲ್ಲ. ಸಮಯಕ್ಕೆ ತಕ್ಕಂತೆ ವರ್ತಿಸುವ ಮನಸ್ಥಿತಿ ಕಂಡು ಬರುತ್ತದೆ. ಈ ಕಾರಣದಿಂದಾಗಿ ದಂಪತಿ ನಡುವೆ ಬಿಗುವಿನ ವಾತಾವರಣ ಇರುತ್ತದೆ. ಯಾವುದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಕಾರಣ ದಾಂಪತ್ಯ ಜೀವನದಲ್ಲಿ ದೊಡ್ಡಮಟ್ಟದ ಬದಲಾವಣೆಯನ್ನು ಕಂಡು ಬರುವುದಿಲ್ಲ. ಮನದಲ್ಲಿ ಉಂಟಾಗುವ ಆಸೆ ಆಕಾಂಕ್ಷೆಗಳು ಸುಲಭವಾಗಿ ಈಡೇರುವುದಿಲ್ಲ. ಆದರೆ ಪ್ರೀತಿ ವಿಶ್ವಾಸದಲ್ಲಿ ಕೊರತೆ ಕಂಡುಬರುವುದಿಲ್ಲ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ. ಇದರಿಂದ ಸಂಗಾತಿಯ ಮನಸ್ಸಿಗೆ ಬೇಸರ ಉಂಟಾಗಬಹುದು. ಕೇತುವಿನ ಪ್ರಭಾವದಿಂದ ಮನಸ್ಸಿನ ಭಾವನೆಗಳನ್ನು ಸುಲಭವಾಗಿ ಹೇಳುವುದಿಲ್ಲ. ಇದರಿಂದ ದಂಪತಿಗಳ ನಡುವಿನ ಅಂತರವು ಹೆಚ್ಚಬಹುದು.

ಏಪ್ರಿಲ್ ತಿಂಗಳವರೆಗೂ ಮನಸ್ಸಿನ ಭಾವನೆಗಳನ್ನು ಸಂಗಾತಿಯೊಡನೆ ಹಂಚಿಕೊಳ್ಳದೆ ಹೋದಲ್ಲಿ ತೊಂದರೆ ಉಂಟಾಗಬಹುದು. ಈ ಅವಧಿಯಲ್ಲಿ ಪ್ರತಿ ವಿಚಾರಕ್ಕೂ ಸಂಗಾತಿಯ ಸಹಕಾರ ದೊರೆಯುತ್ತದೆ. ಇದರಿಂದ ನಿಮ್ಮ ಮನದ ಭಾವನೆಗಳನ್ನು ಅರಿತುಕೊಳ್ಳಬಹುದು. ಸಂಗಾತಿಯ ಕೆಲಸ ಕಾರ್ಯಗಳಲ್ಲಿ ತಪ್ಪು ಕಂಡು ಹಿಡಿಯುವುದನ್ನು ಕಡಿಮೆ ಮಾಡುವುದು ಶ್ರೇಯಸ್ಕರ. ಆಗ ಮಾತ್ರ ಸಂಗಾತಿಯ ಮನಸ್ಸನ್ನು ಗೆಲ್ಲಲು ಸಾಧ್ಯವಾಗುತ್ತದೆ.

ಏಪ್ರಿಲ್‌ ತಿಂಗಳ ನಂತರ ಭಾರೀ ಬದಲಾವಣೆ

ಏಪ್ರಿಲ್ ತಿಂಗಳ ನಂತರ ದಾಂಪತ್ಯ ಜೀವನದಲ್ಲಿ ಹೊಸ ಆಯಾಮವೇ ಉಂಟಾಗುತ್ತದೆ. ಮನಸ್ಸಿನಲ್ಲಿರುವ ತಪ್ಪು ಭಾವನೆ ಮರೆಯಾಗುತ್ತದೆ. ಸುಲಭವಾಗಿ ಸಂಗಾತಿಯ ಪ್ರಭಾವಕ್ಕೆ ಒಳಗಾಗುವಿರಿ. ಒಬ್ಬರಿಗೊಬ್ಬರು ತಪ್ಪನ್ನು ಮನ್ನಿಸಿದರೆ ದಂಪತಿಗಳಲ್ಲಿ ಪ್ರೀತಿ ವಿಶ್ವಾಸವು ಹೆಚ್ಚುತ್ತದೆ. ಈ ಕಾರಣದಿಂದಾಗಿ ವೈವಾಹಿಕ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಮುಖ್ಯವಾಗಿ ಯಾರ ಮಾತನ್ನೂ ಅಥವಾ ಸಲಹೆಯನ್ನು ಕೇಳದೆ ಸಂಗಾತಿಯೊಂದಿಗೆ ಸಮಾನ ಪರಿಸ್ಥಿತಿಯಿಂದ ಮುಂದುವರೆಯಬೇಕು. ನಂತರವಷ್ಟೇ ದಾಂಪತ್ಯ ಜೀವನ ಸುಖದಿಂದ ಇರುತ್ತದೆ.

ಅಕ್ಟೋಬರ್ ತಿಂಗಳಲ್ಲಿ ಅನಾವಶ್ಯಕ ವಾದ ವಿವಾದವೊಂದು ಎದುರಾಗಬಹುದು. ಈ ಕಾರಣ ಸಂಗಾತಿಯೊಂದಿಗೆ ವಾದ ವಿವಾದ ಉಂಟಾಗಲಿವೆ. ಆದ್ದರಿಂದ ಮುಖ್ಯವಾಗಿ ಅಕ್ಟೋಬರ್ ದ್ವಿತೀಯ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು. ಕ್ರಮೇಣವಾಗಿ ಇಬ್ಬರ ಮನಸ್ಸು ಬದಲಾಗಿ ದಾಂಪತ್ಯದಲ್ಲಿ ನಂಬಿಕೆ ಮತ್ತು ಅನುರಾಗ ಮರುಕಳಿಸುತ್ತದೆ. ಒಟ್ಟಾರೆ ಈ ವರ್ಷದಲ್ಲಿ ಸಣ್ಣಪುಟ್ಟ ವಿಚಾರಗಳನ್ನು ಹೊರತುಪಡಿಸಿದಲ್ಲಿ ಯಾವುದೇ ವಿವಾದ ಎದುರಾಗುವುದಿಲ್ಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ