logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರೇಮ ಭವಿಷ್ಯ ಆಗಸ್ಟ್‌ 28: ಸಂಗಾತಿಯ ಭಾವನೆಗಳಿಗೆ ಧಕ್ಕೆ ತರುವ ವಿಚಾರಗಳನ್ನು ಚರ್ಚಿಸಬೇಡಿ, ಕೋಪ ನಿಯಂತ್ರಣದಲ್ಲಿದ್ದರೆ ಒಳ್ಳೆಯದು

ಪ್ರೇಮ ಭವಿಷ್ಯ ಆಗಸ್ಟ್‌ 28: ಸಂಗಾತಿಯ ಭಾವನೆಗಳಿಗೆ ಧಕ್ಕೆ ತರುವ ವಿಚಾರಗಳನ್ನು ಚರ್ಚಿಸಬೇಡಿ, ಕೋಪ ನಿಯಂತ್ರಣದಲ್ಲಿದ್ದರೆ ಒಳ್ಳೆಯದು

Rakshitha Sowmya HT Kannada

Aug 28, 2024 08:15 AM IST

google News

ಪ್ರೇಮ ಭವಿಷ್ಯ ಆಗಸ್ಟ್‌ 28: ಸಂಗಾತಿಯ ಭಾವನೆಗಳಿಗೆ ಧಕ್ಕೆ ತರುವ ವಿಚಾರಗಳನ್ನು ಚರ್ಚಿಸಬೇಡಿ, ಕೋಪ ನಿಯಂತ್ರಣದಲ್ಲಿದ್ದರೆ ಒಳ್ಳೆಯದು

  • Love and Relationship Horoscope 28 August 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಆಗಸ್ಟ್‌ 28 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.

ಪ್ರೇಮ ಭವಿಷ್ಯ ಆಗಸ್ಟ್‌ 28: ಸಂಗಾತಿಯ ಭಾವನೆಗಳಿಗೆ ಧಕ್ಕೆ ತರುವ ವಿಚಾರಗಳನ್ನು ಚರ್ಚಿಸಬೇಡಿ, ಕೋಪ ನಿಯಂತ್ರಣದಲ್ಲಿದ್ದರೆ ಒಳ್ಳೆಯದು
ಪ್ರೇಮ ಭವಿಷ್ಯ ಆಗಸ್ಟ್‌ 28: ಸಂಗಾತಿಯ ಭಾವನೆಗಳಿಗೆ ಧಕ್ಕೆ ತರುವ ವಿಚಾರಗಳನ್ನು ಚರ್ಚಿಸಬೇಡಿ, ಕೋಪ ನಿಯಂತ್ರಣದಲ್ಲಿದ್ದರೆ ಒಳ್ಳೆಯದು

ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್‌ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಆಗಸ್ಟ್‌ 28) ಲವ್‌ ಲೈಫ್‌ ಹೇಗಿದೆ ಎಂದು ಗಮನಿಸೋಣ.  ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮೇಷ ರಾಶಿ

ಪ್ರೀತಿಯ ಜೀವನದಲ್ಲಿ ಹೊಸ ಪ್ರಣಯ ಕ್ಷಣಗಳನ್ನು ಅನುಭವಿಸಲು ಸಿದ್ಧರಾಗಿರಿ. ಸಂಬಂಧದಲ್ಲಿ ವಿವಾದಗಳನ್ನು ತಪ್ಪಿಸಿ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ ಮತ್ತು ಅವರ ಭಾವನೆಗಳ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿರಿ. ನಿಮ್ಮ ಸಂಗಾತಿಗೆ ಅವರ ಸ್ಪೇಸ್‌ ನೀಡಿ. ನಿಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರಬೇಡಿ. ಇಂದು, ಮೇಷ ರಾಶಿಯ ಒಬ್ಬಂಟಿ ಸ್ತ್ರೀಯರಿಗೆ ಪ್ರಪೋಸಲ್‌ ಬರಬಹುದು. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಇಂದು ಕೆಲವರ ಜೀವನದಲ್ಲಿ ಮಾಜಿ ಪ್ರೇಮಿ ವಾಪಸ್‌ ಬರಬಹುದು. ಆದರೆ ವಿವಾಹಿತರು ಹಳೆಯ ಸಂಬಂಧಗಳಿಂದ ದೂರ ಇರಬೇಕು. ಇದು ವೈವಾಹಿಕ ಜೀವನದಲ್ಲಿ ಸಮಸ್ಯೆ ಸೃಷ್ಟಿಸಬಹುದು.

ವೃಷಭ ರಾಶಿ

ಒಬ್ಬಂಟಿ ವೃಷಭ ರಾಶಿಯವರು ಉತ್ತಮ ಸಂಪರ್ಕವನ್ನು ಹೊಂದಿರುವ ಆಸಕ್ತಿದಾಯಕ ವ್ಯಕ್ತಿಯನ್ನು ಇಂದು ನೀವು ಭೇಟಿ ಮಾಡಬಹುದು. ಸಂಬಂಧದಲ್ಲಿರುವವರಿಗೆ, ತಮ್ಮ ಬಾಂಧವ್ಯವನ್ನು ಗಾಢವಾಗಿಸಲು ಇದು ಉತ್ತಮ ದಿನವಾಗಿದೆ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ವ್ಯಕ್ತಪಡಿಸಿ ಮತ್ತು ಪ್ರೇಮಿಯೊಂದಿಗೆ ರೊಮ್ಯಾಂಟಿಕ್‌ ಅಗಿರಿ. ನಿಮ್ಮ ಸಂಗಾತಿ ಮತ್ತು ನಿಮ್ಮ ಸಂಬಂಧದ ಬಲದಲ್ಲಿ ನಂಬಿಕೆ ಇಡಿ. ಸಕಾರಾತ್ಮಕ ಬದಲಾವಣೆಗಳು ಸಂಭವಿಸಬಹುದು ಮತ್ತು ನೀವು ಮುಕ್ತ ಮನಸ್ಸಿನಿಂದ ಮುನ್ನಡೆದರೆ, ನಿಮ್ಮ ಪ್ರೀತಿಯ ಜೀವನ ಇನ್ನಷ್ಟು ಚೆನ್ನಾಗಿರುತ್ತದೆ.

ಮಿಥುನ ರಾಶಿ

ಪ್ರೇಮ ಜೀವನದಲ್ಲಿ ವಾಸ್ತವಿಕವಾಗಿರಿ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ನಿಮ್ಮ ಬಿಡುವಿಲ್ಲದ ಕಚೇರಿಯ ವೇಳಾಪಟ್ಟಿಯಲ್ಲಿಯೂ ಸಹ ನಿಮ್ಮ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ. ಹಿಂದಿನ ವಿಷಯಗಳನ್ನು ಹೆಚ್ಚು ಚರ್ಚಿಸಬೇಡಿ. ಇಂದು, ಕೆಲವು ಜನರ ಪ್ರೇಮ ಪ್ರಕರಣಗಳಲ್ಲಿ ಸಮಸ್ಯೆ ಉದ್ಭವಿಸಬಹುದು. ಇತ್ತೀಚೆಗೆ ಬ್ರೇಕಪ್‌ ಆದ ಯುವತಿಯರ ಜೀವನದಲ್ಲಿ, ಆಸಕ್ತಿಕರ ವ್ಯಕ್ತಿ ಪ್ರವೇಶಿಸಬಹುದು. ದೂರದ ಸಂಬಂಧದಲ್ಲಿರುವವರು ತಮ್ಮ ಭಾವನೆಗಳನ್ನು ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಬಹುದು.

ಕಟಕ ರಾಶಿ

ಇಂದು ನಿಮ್ಮ ಸಂಗಾತಿಗೆ ಅವನ/ಅವಳ ಭಾವನೆಗಳಿಗೆ ಧಕ್ಕೆ ತರುವಂಥ ಯಾವುದೇ ವಿಚಾರಗಳನ್ನು ಹೇಳಬೇಡಿ. ಇಲ್ಲದಿದರೆ ಅವರಿಗೆ ದುಃಖವುಂಟಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ ಮತ್ತು ನಿಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಇಂದು ಒಬ್ಬಂಟಿ ಜನರು ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ಪ್ರಸ್ತಾಪಕ್ಕೆ ನೀವು ಸಕಾರಾತ್ಮಕ ಪ್ರತಿಕ್ರಿಯೆ ಸಹ ಪಡೆಯಬಹುದು. ಇಂದು, ಕರ್ಕ ರಾಶಿಯೊಂದಿಗಿನ ವಿವಾಹಿತರು ತಮ್ಮ ಮಾಜಿ ಪ್ರೇಮಿಯನ್ನು ಭೇಟಿಯಾಗಬಹುದು, ಅದು ಅವರ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು.

ಸಿಂಹ ರಾಶಿ

ಹಳೆಯ ವಿವಾದಗಳನ್ನು ಇಂದೇ ಬಗೆಹರಿಸಿಕೊಳ್ಳಿ. ಕೆಲವು ಹೆಣ್ಣುಮಕ್ಕಳು ಮಾಜಿ ಪ್ರೇಮಿಯ ಬಳಿಗೆ ಹಿಂತಿರುಗುತ್ತಾರೆ, ಅದು ಸಂತೋಷವನ್ನು ಮರಳಿ ತರುತ್ತದೆ. ವಿವಾಹಿತ ಸಿಂಹ ರಾಶಿಯವರು ಕುಟುಂಬ ಜೀವನವನ್ನು ಅಪಾಯಕ್ಕೆ ತಳ್ಳುವ ಎಲ್ಲ ಸಾಧ್ಯತೆಗಳನ್ನು ತಪ್ಪಿಸಬೇಕು. ವಿವಾಹಿತ ಮಹಿಳೆಯರಿಗೆ ಇಂದು ಗರ್ಭ ಧರಿಸುವ ಸಾಧ್ಯತೆಗಳು ಹೆಚ್ಚಿರುವುದರಿಂದ, ದಂಪತಿಗಳು ಹೊಸ ಕುಟುಂಬವನ್ನು ಪ್ರಾರಂಭಿಸಲು ಯೋಜಿಸಬಹುದು. ವೈಯಕ್ತಿಕ ವಿಚಾರದಲ್ಲಿ ಸಂಬಂಧಿಕರ ಹಸ್ತಕ್ಷೇಪವನ್ನು ತಪ್ಪಿಸಿ.

ಕನ್ಯಾ ರಾಶಿ

ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯಿರಿ. ಕೆಲವು ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಬಹುದು. ನೀವು ನಿಮ್ಮ ಭಾವನೆಯನ್ನು ವ್ಯಕ್ತಪಡಿಸಲು ಹೋಗಿ ಅದು ಇನ್ನೇನೋ ಆಗುವ ಸಾಧ್ಯತೆ ಹೆಚ್ಚಿದೆ. ಭಿನ್ನಾಭಿಪ್ರಾಯಗಳಿರುವಾಗ ಜಾಗರೂಕರಾಗಿರಿ ಮತ್ತು ನಿಮ್ಮ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳಿ. ನೀವು ಪ್ರೀತಿಯ ಸಂಬಂಧವನ್ನು ಗೌರವಿಸಬೇಕು. ಅದೇ ರೀತಿ ಇಬ್ಬರನ್ನೂ ಇಬ್ಬರೂ ಗೌರವಿಸಬೇಕು.

ತುಲಾ ರಾಶಿ

ಇಂದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಉತ್ತಮ ಸಮಯ. ಪ್ರೀತಿಯಲ್ಲಿರುವವರು ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಹಳೆಯ ವಿಚಾರಗಳನ್ನು ಕೆದಕದಿರಿ, ಸಂಬಂಧದಲ್ಲಿ ಯಾವುದೇ 3ನೇ ವ್ಯಕ್ತಿಯ ಹಸ್ತಕ್ಷೇಪದಿಂದ ನೀವು ಸಂತೋಷವಾಗಿರುವುದಿಲ್ಲ. ಭವಿಷ್ಯದ ಸಮಸ್ಯೆಗಳನ್ನು ತಪ್ಪಿಸಲು, ಇಂದು ನಿಮ್ಮ ಪ್ರೇಮಿಯೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿ. ಒಬ್ಬಂಟಿ ತುಲಾ ರಾಶಿಯವರು ಅಥವಾ ಇತ್ತೀಚಿಗೆ ಬ್ರೇಕಪ್‌ ಆದವರು ಹೊಸ ವ್ಯಕ್ತಿಗಳನ್ನು ಭೇಟಿ ಮಾಡಬಹುದು. ಇಂದು, ವಿವಾಹಿತ ಮಹಿಳೆಯರು ಕೌಟುಂಬಿಕೆ ಸಮಸ್ಯೆಗಳನ್ನು ಎದುರಿಸಬಹುದು, ಆದರೆ ಅದು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಲು ಬಿಡಬೇಡಿ.

ವೃಶ್ಚಿಕ ರಾಶಿ

ಪ್ರೇಮಿಗಾಗಿ ಹೆಚ್ಚು ಸಮಯವನ್ನು ವಿನಿಯೋಗಿಸಿ ಮತ್ತು ಅಹಿತಕರ ಸಂಭಾಷಣೆಗಳನ್ನು ತಪ್ಪಿಸಿ. ಯಾವುದೇ ಮೂರನೇ ವ್ಯಕ್ತಿ ಸಂಬಂಧದಲ್ಲಿ ಹಸ್ತಕ್ಷೇಪ ಮಾಡಬಾರದು ಮತ್ತು ನಿಮ್ಮ ನಿರ್ಧಾರಗಳು ವೈಯಕ್ತಿಕ ಅನುಭವದ ಫಲಿತಾಂಶವಾಗಿರಬೇಕು. ಸರ್ಪ್ರೈಸ್‌ಗಳ ಮೂಲಕ ಸಂಬಂಧವನ್ನು ಪುನರುಜ್ಜೀವನಗೊಳಿಸಬಹುದು. ಪ್ರೇಮಿಯನ್ನ ಕುಟುಂಬಕ್ಕೆ ಪರಿಚಯಿಸಲು ಇಂದು ಸೂಕ್ತ ದಿನ, ಇಂದು ಮದುವೆಯ ವಿಚಾರವು ಸದ್ದು ಮಾಡಲಿದೆ. ಒಂಟಿ ಇರುವವರು ಮನ ಮೆಚ್ಚಿದವರಿಗೆ ಪ್ರಪೋಸ್ ಮಾಡುವ ಸಾಧ್ಯತೆ ಇದೆ.

ಧನಸ್ಸು ರಾಶಿ

ವೈಯಕ್ತಿಕ ಮತ್ತು ವೃತ್ತಿಪರ ಪ್ರಯತ್ನಗಳಲ್ಲಿ ನೀವಿಬ್ಬರೂ ಪರಸ್ಪರ ಬೆಂಬಲಿಸಬೇಕು. ಎಂದಿಗೂ ಜಗಳ ಮಾಡಬೇಡಿ. ಇದು ನಿಮ್ಮ ಸಂಬಂಧವನ್ನು ಹಾಳು ಮಾಡುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ. ನಿಮಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳಬಲ್ಲ ಸಂಗಾತಿ ಸಿಗುತ್ತಾರೆ. ಅವರೊಂದಿಗೆ ಸುಂದರ ಸಂಬಂಧವನ್ನು ಬೆಸೆದುಕೊಳ್ಳುವುದು ನಿಮಗೆ ಬಿಟ್ಟದ್ದು. ಅವರು ಹೇಳಿದಂತೆ ನೀವು, ನೀವು ಹೇಳಿದಂತೆ ಅವರು ನಡೆದುಕೊಂಡರೆ ಎಲ್ಲವೂ ಸುಖಮಯ.

ಮಕರ ರಾಶಿ

ಪ್ರಣಯ ಸಂಬಂಧಗಳಲ್ಲಿ ವಿಷಯಗಳು ಸ್ವಲ್ಪ ಏರು ಪೇರಾಗಬಹುದು. ಆದರೆ ನಿಜವಾದ ಪ್ರೀತಿ ಇದ್ದಲ್ಲಿ ತ್ಯಾಗ ಇರಬೇಕು ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ನೀವು ಒಬ್ಬರಿಗೊಬ್ಬರು ಒಟ್ಟಿಗೆ ಕಾಲ ಕಳೆಯುವಾಗ, ಹಳೆಯ ಸಮಸ್ಯೆಗಳನ್ನು ನಿಮ್ಮ ಮಧ್ಯೆ ತರದಿರಲು ಪ್ರಯತ್ನಿಸಿ. ಪ್ರೀತಿಯ ಮಾತುಕತೆಯಿಂದ ನಿಮ್ಮ ಪ್ರೇಮಿಯ ಸ್ಥೈರ್ಯವನ್ನು ಹೆಚ್ಚಿಸಿ. ವಿವಾಹಿತರು ತಮ್ಮ ಸಂಗಾತಿಗೆ ವೈಯಕ್ತಿಕ ಜಾಗವನ್ನು ನೀಡಬೇಕು. ಅವರು ತಮ್ಮ ನಿರ್ಧಾರಗಳನ್ನು ತಮ್ಮ ಸಂಗಾತಿಯ ಮೇಲೆ ಹೇರಬಾರದು. ಒಬ್ಬಂಟಿ ಮಕರ ರಾಶಿಯವರು ಇಂದು ಹೊಸ ಪ್ರೀತಿಯನ್ನು ಕಾಣಬಹುದು.

ಕುಂಭ ರಾಶಿ

ಒಟ್ಟಿಗೆ ಹೆಚ್ಚು ಸಮಯ ಕಳೆಯಿರಿ. ಸಂಗಾತಿಯ ಜೊತೆ ಮುಕ್ತವಾಗಿ ಮಾತನಾಡಿ. ರೊಮ್ಯಾಂಟಿಕ್ ಡಿನ್ನರ್ ಆಯೋಜಿಸಬಹುದು. ಆಗ ನೀವು ಪ್ರೇಮಿಗೆ ವಿಶೇಷ ಉಡುಗೊರೆ ನೀಡಿ ಸರ್ಪ್ರೈಸ್‌ಗೊಳಿಸಬಹುದು. ಪ್ರೀತಿ ವಿಚಾರಕ್ಕೆ ಮನೆಯವರ ವಿರೋಧ ಎದುರಿಸಿದವರು ಇಂದು ಸಕರಾತ್ಮಕ ಬದಲಾವಣೆ ಕಾಣಲಿದ್ದಾರೆ. ಸಂಗಾತಿಯ ಮೇಲೆ ನಿಮ್ಮ ಆಲೋಚನೆಗಳನ್ನು ಹೇರಬೇಡಿ. ಕಚೇರಿ ಪ್ರಣಯವು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು.

ಮೀನ ರಾಶಿ

ನಿಮ್ಮ ಪ್ರೀತಿಯ ಜೀವನವು ಇಂದು ಉಲ್ಲಾಸಕರ ಬದಲಾವಣೆಗೆ ಸಿದ್ಧವಾಗಿದೆ. ನೀವು ಒಂಟಿಯಾಗಿರಲಿ ಅಥವಾ ಸಂಬಂಧದಲ್ಲಿರಲಿ. ಮುಕ್ತ ಸಂವಹನವು ಯಾವಾಗಲೂ ನಿಮ್ಮನ್ನು ಗೆಲ್ಲಿಸುತ್ತದೆ. ಇದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ನೀವು ನಿಮ್ಮ ಸಂಗಾತಿಯೊಂದಿಗೆ ಅನ್ಯೋನ್ಯವಾಗಿರಲು ಸಾಧ್ಯ. ದೀರ್ಘಾವಧಿ ಸಮಸ್ಯೆಗಳನ್ನು ಪರಿಹರಿಸಲು ದಂಪತಿಗಳು ಸುಲಭ ದಾರಿ ಕಂಡುಕೊಳ್ಳಲಿದ್ದಾರೆ. ಇದು ಹೆಚ್ಚಿನ ಸಾಮರಸ್ಯಕ್ಕೆ ಕಾರಣವಾಗುತ್ತದೆ. ಆದರೆ ನಂತರ ಎಲ್ಲವೂ ಸರಿ ಆಗುತ್ತದೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ