logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri 2024: ಶಿವನಿಗೆ ಪ್ರಿಯವಾದ ಸಿಹಿ ಇದು; ಹುರಿದ ಅಕ್ಕಿ ತಂಬಿಟ್ಟು ತಯಾರಿಸುವುದು ಹೇಗೆ? ರೆಸಿಪಿ ಇಲ್ಲಿದೆ

Maha Shivaratri 2024: ಶಿವನಿಗೆ ಪ್ರಿಯವಾದ ಸಿಹಿ ಇದು; ಹುರಿದ ಅಕ್ಕಿ ತಂಬಿಟ್ಟು ತಯಾರಿಸುವುದು ಹೇಗೆ? ರೆಸಿಪಿ ಇಲ್ಲಿದೆ

Rakshitha Sowmya HT Kannada

Mar 06, 2024 03:47 PM IST

google News

ಶಿವನಿಗೆ ಪ್ರಿಯವಾದ ತಂಬಿಟ್ಟು ರೆಸಿಪಿ

  • Tambittu Recipe: ಸಾಂಪ್ರದಾಯಿಕ ಸಿಹಿ ತಿಂಡಿ ತಂಬಿಟ್ಟನ್ನು ಗ್ರಾಮ ದೇವತೆ ಹಬ್ಬ, ನವರಾತ್ರಿಯಂದು ಮಾತ್ರವಲ್ಲದೆ ಶಿವರಾತ್ರಿಯಂದು ಕೂಡಾ ತಯಾರಿಸುತ್ತಾರೆ. ಶಿವನಿಗೆ ತಂಬಿಟ್ಟನ್ನು ನೈವೇದ್ಯವನ್ನಾಗಿ ಇಟ್ಟು, ತಂಬಿಟ್ಟಿನ ಆರತಿ ಕೂಡಾ ತಯಾರಿಸುತ್ತಾರೆ. ರುಚಿಯಾದ ತಂಬಿಟ್ಟು ರೆಸಿಪಿ ಇಲ್ಲಿದೆ. 

ಶಿವನಿಗೆ ಪ್ರಿಯವಾದ ತಂಬಿಟ್ಟು ರೆಸಿಪಿ
ಶಿವನಿಗೆ ಪ್ರಿಯವಾದ ತಂಬಿಟ್ಟು ರೆಸಿಪಿ (PC: @Putani_Papa)

ತಂಬಿಟ್ಟು ರೆಸಿಪಿ: ಗ್ರಾಮ ದೇವತೆ ಹಬ್ಬ ಎಂದರೆ ನಮಗೆ ನೆನಪಾಗುವುದು ತಂಬಿಟ್ಟು ಆರತಿ. ಆ ದಿನ ಹುರಿದ ಅಕ್ಕಿಯಿಂದ ತಂಬಿಟ್ಟು ಮಾಡಿ ಹೆಂಗಳೆಯರು ದೇವಿಗೆ ತಂಬಿಟ್ಟು ಆರತಿ ಮಾಡುತ್ತಾರೆ. ಆದರೆ ಊರಹಬ್ಬ ಮಾತ್ರವಲ್ಲದೆ ಶಿವರಾತ್ರಿಯಂದು ಕೂಡಾ ತಂಬಿಟ್ಟು ತಯಾರಿಸಲಾಗುತ್ತದೆ. ಪರಮೇಶ್ವರನಿಗೆ ತಂಬಿಟ್ಟು ಆರತಿ ಬೆಳಗುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಉರಿದ ಅಕ್ಕಿಯಿಂದ ತಯಾರಿಸುವ ತಂಬಿಟ್ಟು ಬಹಳ ರುಚಿಯಾಗಿರುತ್ತದೆ. ಶೇಂಗಾ, ಬಿಳಿ ಎಳ್ಳು, ಕೊಬ್ಬರಿ, ಬೆಲ್ಲ ಬಳಸಿ ತಯಾರಿಸಲಾಗುವ ತಂಬಿಟ್ಟು ಹಬ್ಬದ ವೇಳೆ ಉಪವಾಸ ಮಾಡುವವರಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೆ ಇದು ಶಿವನಿಗೆ ಬಹಳ ಪ್ರಿಯವಾದದ್ದು. ಕೆಲವೆಡೆ ಮಹಾ ಶಿವರಾತ್ರಿಯಂದು ತಂಬಿಟ್ಟನ್ನು ಶಿವನಿಗೆ ನೈವೇದ್ಯವನ್ನಾಗಿ ಇಟ್ಟು, ಆರತಿ ಮಾಡುತ್ತಾರೆ. ತಂಬಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿ ಹಾಗೂ ವಿಧಾನ ಹೀಗಿದೆ.

ತಂಬಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು

ಅಕ್ಕಿ - 1 ಕಪ್‌

ಬೆಲ್ಲ - 1 ಕಪ್‌

ನೀರು - 1/2 ಕಪ್‌

ಹುರಿ ಕಡಲೆ - 1/2 ಕಪ್‌

ಶೇಂಗಾ - 1 ಕಪ್‌

ಒಣ ಕೊಬ್ಬರಿ ತುರಿ- 1 ಕಪ್‌

ಬಿಳಿ ಎಳ್ಳು - 1 ಕಪ್‌

ತಂಬಿಟ್ಟು ತಯಾರಿಸುವ ವಿಧಾನ

  • ದಪ್ಪ ತಳ ಪಾತ್ರೆಯನ್ನು ಸ್ಟೌ ಮೇಲಿಟ್ಟು ಅಕ್ಕಿ ಕೆಂಪಗಾಗುವರೆಗೂ ಹುರಿದು ಪಕ್ಕಕ್ಕೆ ತೆಗೆದಿಡಿ.
  • ಅದೇ ಪಾತ್ರೆಗೆ ಎಳ್ಳು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ.
  • ಶೇಂಗಾ ಬೀಜ ಹುರಿದು ಸಿಪ್ಪೆ ತೆಗೆದಿಟ್ಟು ಸ್ಪ್ಲಿಟ್‌ ಮಾಡಿಕೊಳ್ಳಿ
  • ಹುರಿದ ಅಕ್ಕಿ ತಣ್ಣಗಾದ ನಂತರ ಜಾರ್‌ಗೆ ವರ್ಗಾಯಿಸಿ, ಅದರೊಂದಿಗೆ ಕಡ್ಲೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ ( ಹೆಚ್ಚಿನ ಪ್ರಮಾಣದಲ್ಲಿದ್ದರೆ ಫ್ಲೋರ್‌ ಮಿಲ್‌ನಲ್ಲಿ ಪುಡಿ ಮಾಡಿಸಿ)
  • ಅಕ್ಕಿ ಪುಡಿಯೊಂದಿಗೆ ಶೇಂಗಾ , ಕೊಬ್ಬರಿ ತುರಿ, ಬಿಳಿ ಎಳ್ಳು ಸೇರಿಸಿ ಮಿಕ್ಸ್‌ ಮಾಡಿ.
  • ಪಾತ್ರೆಗೆ ಬೆಲ್ಲ, 1/2 ಕಪ್‌ ನೀರು ಸೇರಿಸಿ ಬಿಡಿಯಾಗಲು ಬಿಡಿ
  • ಬೆಲ್ಲವನ್ನು ಪಾಕ ಮಾಡಿಕೊಳ್ಳುವುದು ಬೇಡ, ಬೆಲ್ಲ ಕರಗಿ ಒಂದು ಕುದಿ ಬರುತ್ತಿದ್ದಂತೆ ಸ್ಟೌವ್‌ ಆಫ್‌ ಮಾಡಿ.
  • ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಶೋಧಿಸಿದ ಬೆಲ್ಲದ ಪಾಕವನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಮಿಕ್ಸ್‌ ಮಾಡಿ
  • ಬೇಕಿದ್ದರೆ ಕೈಗೆ ಸ್ವಲ್ಪವೇ ಸ್ವಲ್ಪ ತುಪ್ಪ ಸವರಿಕೊಂಡು ಉಂಡೆಗಳನ್ನಾಗಿ ಮಾಡಿಕೊಂಡರೆ ತಂಬಿಟ್ಟು ರೆಡಿ.

ಇದನ್ನೂ ಓದಿ: ಅಕ್ಕಿ ರೊಟ್ಟಿಯನ್ನು ಈ ರೀತಿ ಮಾಡಿ ತಿಂದ್ರೆ ಸಖತ್‌ ಆಗಿರುತ್ತೆ; ಇದು ಟೇಸ್ಟ್‌ಗಷ್ಟೇ ಅಲ್ಲ, ಆರೋಗ್ಯಕ್ಕೂ ಬೆಸ್ಟ್‌

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ