logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri: 300 ವರ್ಷಗಳ ನಂತರ ಮಹಾ ಶಿವರಾತ್ರಿಯಂದು ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ; 4 ರಾಶಿಯವರಿಗೆ ದೊರೆಯಲಿದೆ ಶಿವನ ಅನುಗ್ರಹ

Maha Shivaratri: 300 ವರ್ಷಗಳ ನಂತರ ಮಹಾ ಶಿವರಾತ್ರಿಯಂದು ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ; 4 ರಾಶಿಯವರಿಗೆ ದೊರೆಯಲಿದೆ ಶಿವನ ಅನುಗ್ರಹ

HT Kannada Desk HT Kannada

Mar 06, 2024 01:14 PM IST

google News

ಮಹಾ ಶಿವರಾತ್ರಿಯಂದು ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ

  • Maha Shivaratri 2024: ಮಾರ್ಚ್‌ 8, ಶುಕ್ರವಾರ ಮಹಾ ಶಿವರಾತ್ರಿಯಂದು ತ್ರಿಗ್ರಾಹಿ ಯೋಗ ರೂಪಗೊಳ್ಳಲಿದೆ. 300 ವರ್ಷಗಳ ನಂತರ ರೂಪುಗೊಳ್ಳುತ್ತಿರುವ ಈ ಯೋಗದಿಂದ 4 ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. 

 ಮಹಾ ಶಿವರಾತ್ರಿಯಂದು ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ
ಮಹಾ ಶಿವರಾತ್ರಿಯಂದು ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ

Maha Shivaratri 2024: ಶಿವರಾತ್ರಿ ಆಚರಣೆಗೆ ಇನ್ನು 2 ದಿನಗಳಷ್ಟೇ ಬಾಕಿ ಇದೆ. ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷ ಚತುರ್ದಶಿಯ ದಿನದಂದು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಶಿವನ ಆರಾಧನೆಗೆ ಎಲ್ಲವೂ ಸಜ್ಜಾಗುತ್ತಿದೆ. ದೇವಸ್ಥಾನಕ್ಕೆ ಹೋಗಿ ಶಿವರಾತ್ರಿ ಆಚರಿಸಲು ಸಾಧ್ಯವಾಗದೆ ಇರುವವರು ಮನೆಯಲ್ಲೇ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಹಾಗೇ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸಂಚಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಶಿವರಾತ್ರಿಯಂದು ಕೂಡಾ ಗ್ರಹಗಳು ಇತರ ರಾಶಿಗೆ ಸಂಚರಿಸುವುದರಿಂದ ಕೆಲವೊಂದು ಬದಲಾವಣೆಗಳಾಗಲಿವೆ. ಈ ಬಾರಿ ಶಿವರಾತ್ರಿಯಂದು ಕುಂಭ ರಾಶಿಯಲ್ಲಿರುವ ಸೂರ್ಯ, ಶುಕ್ರ, ಶನಿಗಳ ಸಂಯೋಗದಿಂದ ಅಪರೂಪದ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಈ ಯೋಗದಿಂದ 4 ರಾಶಿಚಕ್ರದವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ. ತ್ರಿಗಾಹಿ ಯೋಗದಿಂದ ಯಾವೆಲ್ಲಾ ರಾಶಿಯವರ ಜೀವನ ಬದಲಾಗುತ್ತದೆ. ಆ ರಾಶಿಯವರಿಗೆ ಶಿವನ ಅನುಗ್ರಹ ಹೇಗಿರಲಿದೆ ನೋಡೋಣ.

ಮೇಷ ರಾಶಿ

ಶಿವರಾತ್ರಿಯಂದು ರೂಪಗೊಳ್ಳುತ್ತಿರುವ ತ್ರಿಗಾಹಿ ಯೋಗ, ಮೇಷ ರಾಶಿಯವರಿಗೆ ವಿಶೇಷ ಅನುಕೂಲತೆಗಳನ್ನು ನೀಡಲಿದೆ. ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಆರ್ಥಿಕವಾಗಿ ಸುಧಾರಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳು ಯಶಸ್ವಿಯಾಗುತ್ತಾರೆ. ವೈವಾಹಿಕ ಜೀವನ ಬಹಳ ಸಂತೋಷದಿಂದ ಕೂಡಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಹೆಚ್ಚು ಆದ್ಯತೆ ನೀಡುವಿರಿ. ವ್ಯಾಪಾರ ಮತ್ತು ಕೆಲಸದ ನಿಮಿತ್ತ ದೂರ ಪ್ರಯಾಣಗಳಿದ್ದರೂ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ.

ವೃಷಭ ರಾಶಿ

ತ್ರಿಗಾಹಿ ಯೋಗದಿಂದ ವೃಷಭ ರಾಶಿಯವರ ವೈವಾಹಿಕ ಜೀವನ ಸುಧಾರಿಸಲಿದೆ. ಇವರು ಸಂತೋಷದಿಂದ ಜೀವನ ಕಳೆಯುತ್ತಾರೆ. ಆದಾಯ ಹೆಚ್ಚಾಗುತ್ತದೆ. ಕಠಿಣ ಪರಿಶ್ರಮ ಪ್ರತಿಫಲ ಕೊಡುತ್ತದೆ. ಆರ್ಥಿಕ ಲಾಭವಿದೆ. ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ದೊರೆಯುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿರುವವರಿಗೆ ಸಂತಾನ ಲಾಭವಿದೆ. ಹೆಚ್ಚಿನ ಪರಿಶ್ರಮದಿಂದ ನೀವು ಅಂದುಕೊಂಡ ಕಾರ್ಯವನ್ನು ಸಾಧಿಸಲು ಇದ್ದ ಎಲ್ಲಾ ಅಡೆತಡೆಗಳು ದೂರಾಗುತ್ತದೆ.

ತುಲಾ ರಾಶಿ

ಈ ರಾಶಿಯವರು ಎಲ್ಲಾ ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ನಿಮಗೆ ಬರಬೇಕಿದ್ದ ಹಣ ವಾಪಸ್ ಬರಲಿದೆ. ವ್ಯವಹಾರದಲ್ಲಿ ಒಪ್ಪಂದ ಮಾಡಿಕೊಳ್ಳಲಿದ್ದೀರಿ. ಕುಟುಂಬ ಸದಸ್ಯರ ನಡುವೆ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ.

ಮಕರ ರಾಶಿ

ತ್ರಿಗಾಯಿ ಯೋಗವು ಮಕರ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಈ ರಾಶಿಯವರ ಜೀವನ ಯಶಸ್ವಿಯಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಇದುವರೆಗೂ ಪರಿಹಾರವಾಗದೆ ಉಳಿದಿದ್ದ ಸಮಸ್ಯೆಗಳು ದೂರವಾಗುತ್ತವೆ. ಒಳ್ಳೆಯ ಸುದ್ದಿ ಕೇಳಲಿದ್ದೀರಿ. ಕೆಲಸ ಮಾಡುವವರಿಗೆ ಬಡ್ತಿ ದೊರೆಯಲಿದೆ. ಬಹಳ ದಿನಗಳ ಹಿಂದೆ ಆರಂಭವಾಗಿ ಇನ್ನೂ ಪೂರ್ಣವಾಗದೆ ಉಳಿದಿರುವ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ.

300 ವರ್ಷಗಳ ನಂತರ ರೂಪುಗೊಳ್ಳುತ್ತಿರುವ ಯೋಗ

ಈ ಮಹಾ ಶಿವರಾತ್ರಿಯ ದಿನದಂದು ರೂಪುಗೊಳ್ಳುತ್ತಿರುವ ತ್ರಿಗಾಹಿ ಯೋಗವು 300 ವರ್ಷಗಳ ನಂತರ ಬರುತ್ತಿದೆ. ಈ ಅಪರೂಪದ ಮತ್ತು ಮಂಗಳಕರ ಸಂದರ್ಭದಲ್ಲಿ ಶಿವನನ್ನು ಪೂಜಿಸುವುದರಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಈ ದಿನ ಜೇನುತುಪ್ಪದಿಂದ ಪರಮೇಶ್ವರನಿಗೆ ಅಭಿಷೇಕವನ್ನು ಮಾಡಿದರೆ ಶುಭವಾಗುತ್ತದೆ.ಮಹಾ ಶಿವರಾತ್ರಿಯ ದಿನ ಮಕರ ರಾಶಿಯಲ್ಲಿ ಮಂಗಳ ಮತ್ತು ಚಂದ್ರರ ಸಂಯೋಗದಿಂದ ಚಂದ್ರ ಮಂಗಲ ಯೋಗವು ರೂಪುಗೊಳ್ಳುತ್ತಿದೆ. ಇದರೊಂದಿಗೆ ಕುಂಭ ರಾಶಿಯಲ್ಲಿ ಶುಕ್ರ, ಶನಿ, ಸೂರ್ಯನ ಸಂಯೋಗ ಹಾಗೂ ಮೀನ ರಾಶಿಯಲ್ಲಿ ರಾಹು, ಬುಧ ಸಂಯೋಗ ಆಗುವುದರಿಂದ ತ್ರಿಗ್ರಾಹಿ ಯೋಗ ಉಂಟಾಗುತ್ತಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ