logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri 2024:ಶಿವನ ತಲೆಯ ಮೇಲೆ ಚಂದ್ರ ಇರುವುದೇಕೆ, ಚಂದ್ರಶೇಖರ ಎಂದು ಹೆಸರು ಬಂದಿದ್ದು ಹೇಗೆ?ದಕ್ಷನು ಚಂದ್ರನಿಗೆ ಶಪಿಸಿದ ಕಥೆ ಕೇಳಿ

Maha Shivaratri 2024:ಶಿವನ ತಲೆಯ ಮೇಲೆ ಚಂದ್ರ ಇರುವುದೇಕೆ, ಚಂದ್ರಶೇಖರ ಎಂದು ಹೆಸರು ಬಂದಿದ್ದು ಹೇಗೆ?ದಕ್ಷನು ಚಂದ್ರನಿಗೆ ಶಪಿಸಿದ ಕಥೆ ಕೇಳಿ

Rakshitha Sowmya HT Kannada

Mar 07, 2024 07:00 AM IST

google News

ಶಿವನು ತಲೆಯ ಮೇಲೆ ಚಂದ್ರನನ್ನು ಇರಿಸಿಕೊಂಡಿರುವುದರ ಹಿಂದಿದೆ ಎರಡು ಕಥೆಗಳು

  • Maha Shivaratri 2024: ಜಟಾಧರ ಶಿವನು ತನ್ನ ಜಡೆಯಲ್ಲಿ ಚಂದ್ರನನ್ನು ಇರಿಸಿಕೊಂಡಿರುವುದರಿಂದ ಅವನಿಗೆ ಚಂದ್ರಶೇಖರ ಎಂಬ ಹೆಸರು ಬಂದಿದೆ. ಚಂದ್ರನನ್ನು ಶಿವನು ತನ್ನ ತಲೆಯ ಮೇಲೆ ಇರಿಸಿಕೊಂಡಿರುವುದರ ಹಿಂದೆ 2 ಕಥೆಗಳಿವೆ. ಅವುಗಳಲ್ಲಿ ದಕ್ಷನು ಚಂದ್ರನಿಗೆ ಶಾಪ ನೀಡಿದ ಕಥೆಯೂ ಒಂದು. 

ಶಿವನು ತಲೆಯ ಮೇಲೆ ಚಂದ್ರನನ್ನು ಇರಿಸಿಕೊಂಡಿರುವುದರ ಹಿಂದಿದೆ ಎರಡು ಕಥೆಗಳು
ಶಿವನು ತಲೆಯ ಮೇಲೆ ಚಂದ್ರನನ್ನು ಇರಿಸಿಕೊಂಡಿರುವುದರ ಹಿಂದಿದೆ ಎರಡು ಕಥೆಗಳು (PC: Pixabay)

ಮಹಾ ಶಿವರಾತ್ರಿ 2024: ಬಹುತೇಕ ಹಿಂದೂ ದೇವತೆಗಳು ವಿವಿಧ ಆಭರಣಗಳು, ಆಯುಧಗಳನ್ನು ಹಿಡಿದಿದ್ದಾರೆ. ಆದರೆ ಶಿವ ಮಾತ್ರ ಯಾವುದೇ ಆಭರಣ ಧರಿಸದೆ ಕೊರಳಲ್ಲಿ ಹಾವು, ತಲೆಯ ಮೇಲೆ ಚಂದ್ರ ಹಾಗೂ ದೇಹವನ್ನು ಮುಚ್ಚಲು ಹುಲಿಯ ಚರ್ಮ ಹೊದ್ದಿದ್ದಾನೆ. ಜೊತೆಗೆ ಬೂದಿ ತುಂಬಿರುವಂತೆ ಕಾಣುತ್ತಾನೆ. ಶಿವನು ಧರಿಸುವ ಪ್ರತಿಯೊಂದು ವಸ್ತುವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಆದರೆ ಶಿವನು ತನ್ನ ತಲೆಯ ಮೇಲೆ ಚಂದ್ರನನ್ನು ಏಕೆ ಧರಿಸಿದ್ದಾನೆ ಎಂಬುದರ ಕುರಿತು ಎರಡು ಕಥೆಗಳಿವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ವಿಷದ ಪರಿಣಾಮವನ್ನು ಕಡಿಮೆ ಮಾಡಲು

ಕ್ಷೀರ ಸಮುದ್ರ ಮಥನ ಮಾಡುವಾಗ ವಿಷವೂ ಹೊರಬಿತ್ತು. ಅದನ್ನು ತೆಗೆದುಕೊಳ್ಳಲು ದೇವತೆಗಳೂ ಅಸುರರೂ ಹೆದರುತ್ತಿದ್ದರು. ಆ ವಿಷಕ್ಕೆ ಸೃಷ್ಟಿಯನ್ನೂ ನಾಶ ಮಾಡುವ ಶಕ್ತಿ ಇತ್ತು. ಈ ಸಮಸ್ಯೆಯಿಂದ ತಮ್ಮನ್ನು ರಕ್ಷಿಸುವಂತೆ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ತನ್ನನ್ನು ನಂಬಿ ಬಂದ ದೇವತೆಗಳನ್ನು ರಕ್ಷಿಸಲು ಶಿವನು ವಿಷವನ್ನು ನುಂಗಿ ತನ್ನ ಕಂಠದಲ್ಲಿ ಇಟ್ಟುಕೊಂಡನು. ಅದಕ್ಕೇ ಅವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿತು. ಇದೇ ಕಾರಣದಿಂದ ಶಿವನನ್ನು ನೀಲಕಂಠ ಎಂದು ಕರೆಯುತ್ತಾರೆ. ವಿಷದ ಪ್ರಭಾವದಿಂದ ಶಿವನ ದೇಹ ಬಿಸಿಯಾಗುತ್ತಿದ್ದಂತೆ ದೇವತೆಗಳೆಲ್ಲ ದಿಗ್ಭ್ರಮೆಗೊಂಡರು. ವಿಷದ ಪರಿಣಾಮ ಕಡಿಮೆ ಮಾಡಲು ತನ್ನನ್ನು ತಲೆಯ ಮೇಲೆ ಇರಿಸಿಕೊಳ್ಳುವಂತೆ ಚಂದ್ರ ಬೇಡಿಕೊಂಡನು. ಮೊದಲು ಶಿವ ಅದಕ್ಕೆ ಒಪ್ಪಲಿಲ್ಲವಾದರೂ ದೇವತೆಗಳ ಮನವಿಗೆ ಒಪ್ಪಿ ಚಂದ್ರನನ್ನು ತಲೆಯ ಮೇಲೆ ಇರಿಸಿಕೊಂಡನು. ನಂತರ ಚಂದ್ರನ ಪ್ರಭಾವದಿಂದ ಶಿವನ ದೇಹದಲ್ಲಿನ ವಿಷದ ಪ್ರಭಾವ ಕಡಿಮೆ ಆಯ್ತು.

ದಕ್ಷನು ಚಂದ್ರನಿಗೆ ಶಪಿಸಿದ ಕಥೆ

ಪುರಾಣಗಳ ಪ್ರಕಾರ, ದಕ್ಷನಿಗೆ 27 ಹೆಣ್ಣು ಮಕ್ಕಳಿದ್ದರು. ಅವರೆಲ್ಲರನ್ನೂ ಅನಸೂಯಾ ದೇವಿಯ ಮಗನಾದ ಚಂದ್ರನಿಗೆ ಮದುವೆ ಮಾಡಲಾಯಿತು. ಚಂದ್ರನು ತನ್ನ 27 ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡಿಕೊಳ್ಳುತ್ತಾನೆ ಎಂದು ದಕ್ಷ ಭಾವಿಸಿದನು. ಆದರೆ ತನಗೆ 27 ಜನ ಹೆಂಡತಿಯರು ಇದ್ದರೂ ಅವರಲ್ಲಿ ರೋಹಿಣಿಗೆ ಮಾತ್ರ ಹೆಚ್ಚು ಪ್ರೀತಿ ತೋರಿಸಿ ಉಳಿದವರ ಬಗ್ಗೆ ಪ್ರೀತಿ ತೋರದೆ ಬಿಟ್ಟಿದ್ದ. ಇದರೊಂದಿಗೆ 26 ಹೆಣ್ಣು ಮಕ್ಕಳು ತಂದೆ ದಕ್ಷನ ಬಳಿ ಹೋಗಿ ತಮ್ಮ ನೋವು ತೋಡಿಕೊಂಡರು.

ದಕ್ಷನು, ಚಂದ್ರನಿಗೆ ಎಲ್ಲರನ್ನು ಸಮಾನವಾಗಿ ಕಾಣುವಂತೆ ಎಚ್ಚರಿಸಿದ, ಆದರೆ ಮತ್ತೆ ಚಂದ್ರ, ಉಳಿದ ಪತ್ನಿಯರನ್ನು ನಿರ್ಲಕ್ಷಿಸುತ್ತಾನೆ. ಇದರಿಂದ ಕುಪಿತನಾದ ದಕ್ಷನು ದಿನೇ ದಿನೇ ನಿನ್ನ ಬೆಳಕು ಕಡಿಮೆಯಾಗುತ್ತಾ ಕೊನೆಗೆ ಒಂದು ದಿನ ಅದು ಸಂಪೂರ್ಣವಾಗಿ ನಶಿಸಲಿ ಎಂದು ಚಂದ್ರನಿಗೆ ಶಾಪವಿಡುತ್ತಾನೆ. ಇದರಿಂದ ಹೆದರಿದ ಚಂದ್ರ, ಶಾಪ ವಿಮೋಚನೆ ಮಾಡುವಂತೆ ಬ್ರಹ್ಮ ಮತ್ತು ವಿಷ್ಣುವನ್ನು ಬೇಡಿಕೊಳ್ಳುತ್ತಾನೆ. ಆದರೆ ಅವರಿಬ್ಬರು ಶಿವನನ್ನು ಕುರಿತು ತಪಸ್ಸು ಮಾಡುವಂತೆ ಸಲಹೆ ನೀಡುತ್ತಾರೆ.

ಚಂದ್ರನು ಶಿವನ ಕೃಪೆಗಾಗಿ ತಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿದ ಶಿವನು ಕಾಣಿಸಿಕೊಂಡು ಚಂದ್ರನ ಶಾಪದ ಬಗ್ಗೆ ತಿಳಿದುಕೊಳ್ಳುತ್ತಾನೆ. ಶಾಪವು ಈಗಾಗಲೇ ಜಾರಿಯಲ್ಲಿರುವ ಕಾರಣ, ಶಿವನು 15 ದಿನಗಳವರೆಗೆ ಮಂಕಾಗಲಿ ಮತ್ತು ಲೋಕ ಕಲ್ಯಾಣಕ್ಕಾಗಿ ಮತ್ತೆ 15 ದಿನಗಳವರೆಗೆ ಪ್ರಕಾಶಮಾನವಾಗಿರಲಿ ಎಂದು ಆಶೀರ್ವದಿಸುತ್ತಾನೆ. ಅದೇ ಕಾರಣದಿಂದ ತಿಂಗಳಲ್ಲಿ 15 ದಿನಗಳಿಗೊಮ್ಮೆ ಅಮಾವಾಸ್ಯೆ, ಹುಣ್ಣಿಮೆ ಬರುತ್ತದೆ. ಜೊತೆಗೆ ಚಂದ್ರನ ಭಕ್ತಿಗೆ ಮೆಚ್ಚಿ ಶಂಕರನು ಚಂದ್ರನಿಗೆ ತಲೆಯ ಮೇಲೆ ಸ್ಥಾನ ನೀಡಿದನೆಂದು ಹೇಳಲಾಗುತ್ತದೆ. ಶಿವನು ತನ್ನ ತಲೆಯ ಮೇಲೆ ಚಂದ್ರನಿರುವುದರಿಂದ ಅವನಿಗೆ ಚಂದ್ರಶೇಖರ ಎಂದೂ ಕರೆಯಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ