logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mangalore News: ಮಂಗಳೂರಿನಲ್ಲಿ ಬಲು ಜೋರು ದಸರಾ ದರ್ಬಾರು; ಇಂದಿನಿಂದ ಆರಂಭ ಮಾರ್ನೇಮಿ ಸಂಭ್ರಮ

Mangalore News: ಮಂಗಳೂರಿನಲ್ಲಿ ಬಲು ಜೋರು ದಸರಾ ದರ್ಬಾರು; ಇಂದಿನಿಂದ ಆರಂಭ ಮಾರ್ನೇಮಿ ಸಂಭ್ರಮ

Reshma HT Kannada

Oct 15, 2023 07:30 AM IST

google News

ಸಾಂದರ್ಭಿಕ ಚಿತ್ರ

    • ಕರ್ನಾಟಕದಲ್ಲಿ ಮೈಸೂರಿನಷ್ಟೇ ಸಂಭ್ರಮದಿಂದ ಇನ್ನೊಂದು ಕಡೆ ದಸರಾವನ್ನು ಆಚರಿಸಲಾಗುತ್ತದೆ. ಅದುವೇ ಮಂಗಳೂರು ದಸರಾ. ಮಂಗಳೂರಿನ ದಸರಾವನ್ನು ಮಾರ್ನೇಮಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇಲ್ಲಿ ನವರಾತ್ರಿಗೆ ಶಾರದಾದೇವಿಯನ್ನು ಪ್ರತಿಷ್ಠಾಪಿಸುವುದು ವಿಶೇಷ. ಮಂಗಳೂರು ದಸರಾ ಕುರಿತ ಲೇಖನ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಸರಾ ಎಂದಾಕ್ಷಣ ನೆನಪಾಗುವುದು ಮೈಸೂರು. ಮೈಸೂರು ದಸರಾ ಜಗತ್‌ಪ್ರಸಿದ್ಧ. ಇಲ್ಲಿನ ದಸರಾಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಆದರೆ ಕರ್ನಾಟಕದಲ್ಲಿ ಮೈಸೂರಿನಷ್ಟೇ ಸಂಭ್ರಮದಿಂದ ಇನ್ನೊಂದು ಕಡೆ ದಸರಾವನ್ನು ಆಚರಿಸಲಾಗುತ್ತದೆ. ಅದುವೇ ಮಂಗಳೂರು ದಸರಾ. ಕರ್ನಾಟಕ ಹಾಗೂ ಭಾರತ ದೇಶದಾದ್ಯಂತ ಮಂಗಳೂರು ದಸರಾವು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಈ ವರ್ಷ ಮಂಗಳೂರಿನಲ್ಲಿ 34ನೇ ವರ್ಷದ ದಸರ ಮಹೋತ್ಸವ ನಡೆಯುತ್ತಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕಡಲತಡಿಯ ಊರಿನಲ್ಲಿ ದಸರಾ ಸಂಭ್ರಮವನ್ನು ಕಂಡೇ ಸವಿಯಬೇಕು. ಇಂದಿನಿಂದ (ಅ.15) ಕುಡ್ಲದಲ್ಲಿ ಹತ್ತು ದಿನಗಳ ಕಾಲ ದಸರಾ ಉತ್ಸವ ನಡೆಯಲಿದೆ. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ವತಿಯಿಂದ ಮಂಗಳೂರು ದಸರಾ ಆಚರಣೆ ನಡೆಯುತ್ತದೆ. ಕಳೆದ 33 ವರ್ಷಗಳಿಂದ ಮಂಗಳೂರಿನಲ್ಲಿ ದಸರಾ ದರ್ಬಾರು ಬಲು ಜೋರು.

ಮಾರ್ನೇಮಿ

ಮಂಗಳೂರಿನ ದಸರಾವನ್ನು ಮಾರ್ನೇಮಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಬಿ.ಆರ್‌. ಕರ್ಕೇ ಅವರು ಮಾರ್ನೇಮಿ ಆಚರಣೆಗೆ ಕಾರಣೀಕರ್ತರು. ಇವರೇ ಮಂಗಳೂರು ದಸರಾ ಆಚರಣೆಯ ರೂವಾರಿ. ಮಾರ್ನೇಮಿಯಲ್ಲಿ ವಿಶೇಷ ಪೂಜೆ, ಪುನಸ್ಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕರಾವಳಿಯ ಜಾನಪದ ಕಲೆಗಳು ಸಡಗರವನ್ನು ಹೆಚ್ಚಿಸುತ್ತವೆ. ಹುಲಿವೇಷ, ಕರಡಿ ವೇಷದ ಕುಣಿತಗಳನ್ನು ನೋಡಲು ಕಣ್ಣಿಗೆ ಹಬ್ಬ. ದಸರಾ ಸಮಯದಲ್ಲಿ ಇಲ್ಲಿನ ಬೀದಿಗಳು ಬಣ್ಣದ ಬೆಳಕಿನ ಅಲಂಕಾರದಲ್ಲಿ ಕಂಗೊಳಿಸುತ್ತವೆ. ನವರಾತ್ರಿ ಸಮಯದಲ್ಲಿ ಇಡೀ ಮಂಗಳೂರಿಗೆ ಮಂಗಳೂರೇ ದೀಪದ ಅಲಂಕಾರದಲ್ಲಿ ಮಿನುಗುವುದನ್ನು ಕಾಣಬಹುದು.

ಶಾರದಾದೇವಿ ಇಲ್ಲಿನ ವಿಶೇಷ

ಮೈಸೂರಿನಲ್ಲಿ ಜಂಬೂಸವಾರಿ‌ ಸವಾರಿ ನಡೆದರೆ ಮಂಗಳೂರಿನಲ್ಲಿ ಶಾರದಾದೇವಿ ಮೆರವಣಿಗೆ ಮಾಡಲಾಗುತ್ತದೆ. ಇಲ್ಲಿ ನವರಾತ್ರಿಗೆ ಶಾರದಾದೇವಿಯನ್ನು ಪ್ರತಿಷ್ಠಾಪಿಸುವುದು ವಿಶೇಷ.

ಹುಲಿವೇಷ ಕುಣಿತದ ಆಕರ್ಷಣೆ

ಮಂಗಳೂರು ದಸರಾದಲ್ಲಿ ಕರಾವಳಿ ಭಾಗದ ಸಾಂಸ್ಕೃತಿಕ ಕುಣಿತಗಳು ಸಂಭ್ರಮವನ್ನು ಹೆಚ್ಚಿಸುತ್ತವೆ. ಹುಲಿವೇಷ ಕುಣಿತ ಇಲ್ಲಿನ ಪ್ರಮುಖ ಆಕರ್ಷಣೆ. ಹುಲಿವೇಷ ಧರಿಸಿ ನೃತ್ಯ ಮಾಡುವ ಮೂಲಕ ಶಾರದಾ ದೇವಿಗೆ ಗೌರವ ಸಲ್ಲಿಸಲಾಗುತ್ತದೆ.

ಶಾರದಾ ದೇವಿ ವಿಗ್ರಹದೊಂದಿಗೆ ಗಣಪತಿ ಹಾಗೂ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕುಶ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಮಂಗಳೂರು ದಸರಾದ ವಿಶೇಷ. ನವರಾತ್ರಿಯ ಸಲುವಾಗಿ ಕುದ್ರೋಳಿ ದೇವಸ್ಥಾನದ ಟ್ರಸ್ಟಿಯವರು 9 ದಿನಗಳ ಕಾಲ 'ಗಂಗಾವತರಣ'ವನ್ನು ಆಯೋಜಿಸುತ್ತಾರೆ. ಈ ಚಿತ್ರಣದಲ್ಲಿ 13 ಅಡಿ ಎತ್ತರದ ಶಿವನ 4 ವರ್ಣರಂಜಿತ ವಿಗ್ರಹಗಳು ಇರುತ್ತದೆ.

ಮೆರವಣಿಗೆಯೇ ಇಲ್ಲಿ ಆಕರ್ಷಣೆ

ಮಂಗಳೂರು ದಸರಾವು ತನ್ನ ಭವ್ಯ ಮೆರವಣಿಗೆಯ ಮೂಲಕ ಹೆಚ್ಚು ಖ್ಯಾತಿ ಪಡೆದಿದೆ. ಇಲ್ಲಿನ ಶಾರದಾ ದೇವಿ ವಿರ್ಸಜನಾ ಮೆರವಣಿಗೆಯ ಸಂಭ್ರಮವನ್ನು ವಿವರಿಸಲು ಪದಗಳೇ ಸಾಲುವುದಿಲ್ಲ. ವಿಜಯದಶಮಿಯಂದು ಸಂಜೆ ಗೋಕರ್ಣನಾಥೇಶ್ವರ ದೇವಾಲಯದಿಂದ ಆರಂಭವಾಗುವ ಮೆರವಣಿಗೆ ಮರುದಿನ ಮುಂಜಾನೆ ದೇವಸ್ಥಾನದ ಆವರಣದಲ್ಲಿ ಇರುವ ಪುಷ್ಕರಿಣಿ ಕೊಳದಲ್ಲಿ ಪ್ರತಿಷ್ಠಾಪಿಸಲಾದ ವಿಗ್ರಹಗಳ ವಿರ್ಸಜನೆಯಿಂದ ಅಂತ್ಯಗೊಳುತ್ತದೆ. ನವದುರ್ಗೆಯರು, ಮಹಾಗಣಪತಿ ಹಾಗೂ ಶಾರದಾ ದೇವಿಯ ವಿಗ್ರಹಗಳನ್ನು ಹೊತ್ತು ಮೆರವಣಿಗೆ ಸಾಗುತ್ತದೆ. ಈ ಮೆರವಣಿಗೆಯಲ್ಲಿ ಡೋಲು, ಚಂಡೆ, ಜಾನಪದ ನೃತ್ಯ ತಂಡಗಳ ಕುಣಿತ, ಯಕ್ಷಗಾನ ಪಾತ್ರಗಳು, ಹುಲಿವೇಷಗಳು, ಕರಡಿ, ಜಿಂಕೆ ವೇಷ, ಡೊಳ್ಳು ಕುಣಿತ ಹೀಗೆ ಮೆರವಣಿಗೆ ಸಂಭ್ರಮವನ್ನು ಇನ್ನಷ್ಟು ಹೆಚ್ಚುಸುತ್ತವೆ.

ನಿಮಗೂ ಮಂಗಳೂರು ದಸರಾ ನೋಡಬೇಕು ಎನ್ನುವ ಆಸೆ ಇದ್ದರೆ ವಿಜಯದಶಮಿ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡುವುದು ಉತ್ತಮ. ಮಂಗಳೂರಿಗೆ ಬಸ್‌, ರೈಲು ಹಾಗೂ ವಿಮಾನ ಸೌಲಭ್ಯವಿದೆ. ಇಲ್ಲಿ ಉಳಿದುಕೊಳ್ಳಲು ಸಾಕಷ್ಟು ಹೋಟೆಲ್‌ಗಳು ಲಭ್ಯವಿವೆ. ವಸತಿ ಗೃಹಗಳು ಇವೆ. ಇಲ್ಲಿಗೆ ಭೇಟಿ ನೀಡಿದರೆ ಸುತ್ತಲಿನ ಹಲವು ದೇವಾಲಯಗಳು ಬೀಚ್‌ಗಳ ಸೌಂದರ್ಯವನ್ನೂ ಸವಿಯಬಹುದು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ