logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಣಕಾಸು ಭವಿಷ್ಯ ಆಗಸ್ಟ್ 28: ಮೇಷ ರಾಶಿಯವರಿಗೆ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಲಾಭ; 12 ರಾಶಿಗಳ ಆರ್ಥಿಕ ಭವಿಷ್ಯ ಹೀಗಿದೆ

ಹಣಕಾಸು ಭವಿಷ್ಯ ಆಗಸ್ಟ್ 28: ಮೇಷ ರಾಶಿಯವರಿಗೆ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಲಾಭ; 12 ರಾಶಿಗಳ ಆರ್ಥಿಕ ಭವಿಷ್ಯ ಹೀಗಿದೆ

Reshma HT Kannada

Aug 28, 2024 07:59 AM IST

google News

ಹಣಕಾಸು ಭವಿಷ್ಯ ಆಗಸ್ಟ್ 28

    • Money Astrological Predictions August 28, 2024: ಹಣಕಾಸು ಭವಿಷ್ಯ ಆಗಸ್ಟ್ 28ರ ಪ್ರಕಾರ, ಮೇಷ ರಾಶಿಯವರಿಗೆ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಲಾಭ. ಉಳಿದ ರಾಶಿಯವರಿಗೆ ಏನಿದೆ ಫಲ, 12 ರಾಶಿಗಳ ಆರ್ಥಿಕ ಭವಿಷ್ಯ ಏನು ಎಂಬಿತ್ಯಾದಿ ವಿವರಗಳು ಇಲ್ಲಿವೆ.
ಹಣಕಾಸು ಭವಿಷ್ಯ ಆಗಸ್ಟ್ 28
ಹಣಕಾಸು ಭವಿಷ್ಯ ಆಗಸ್ಟ್ 28

ಹಣಕಾಸು ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲದಲ್ಲಿದೆ. ನೀವು ಅದನ್ನು ಓದಬಹುದು.‌

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮೇಷ ರಾಶಿಯ ಹಣಕಾಸು ಭವಿಷ್ಯ (Aries Money Horoscope)

ಇಂದು ಯಾವುದೇ ರೀತಿ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಹಣಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಲು ಇಂದು ಶುಭ ದಿನ. ಕೆಲವರು ವಾಹನಗಳನ್ನೂ ಖರೀದಿಸಬಹುದು. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬಹುದು

ವೃಷಭ ರಾಶಿಯ ಹಣಕಾಸು ಭವಿಷ್ಯ (Taurus Money Horoscope)

ಹಣಕಾಸಿನ ವಿಚಾರದಲ್ಲಿ ಯೋಜನೆ ರೂಪಿಸಲು ಇಂದು ಸೂಕ್ತದಿನ. ನಿಮ್ಮ ಸಂಬಳವನ್ನು ಹೆಚ್ಚಿಸಲು ಅಥವಾ ನಿಮ್ಮ ಖರ್ಚುಗಳನ್ನು ನಿರ್ವಹಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ನಿಮ್ಮ ಬಜೆಟ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಇದು ಉತ್ತಮ ಸಮಯ. ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ ಮತ್ತು ದೀರ್ಘಾವಧಿಯಲ್ಲಿ ಹಣವನ್ನು ಹೇಗೆ ಉಳಿಸುವುದು ಎಂಬುದರ ಮೇಲೆ ಕೇಂದ್ರೀಕರಿಸಿ. ನಿಮ್ಮ ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಚಿಂತನಶೀಲ ಕ್ರಮಗಳನ್ನು ತೆಗೆದುಕೊಳ್ಳಿ.

ಮಿಥುನ ರಾಶಿಯವರ ಹಣಕಾಸು ಭವಿಷ್ಯ (Gemini Money Horoscope)

ಇಂದು ನೀವು ಹಣಕಾಸಿನ ವಿಷಯಗಳಲ್ಲಿ ಅದೃಷ್ಟಶಾಲಿಯಾಗುತ್ತೀರಿ. ಆರ್ಥಿಕ ಲಾಭವಿರುತ್ತದೆ. ಹಳೆಯ ಹೂಡಿಕೆಯಿಂದ ಹಣ ಗಳಿಸುವಿರಿ. ಆಪ್ತ ಸ್ನೇಹಿತನಿಗೆ ಆರ್ಥಿಕ ಸಹಾಯ ಮಾಡಬೇಕಾಗಬಹುದು. ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮುನ್ನ ಎಚ್ಚರ ವಹಿಸಿ.

ಕಟಕ ರಾಶಿಯವರ ಹಣಕಾಸು ಭವಿಷ್ಯ (Cancer Money Horoscope)

ಖರ್ಚುಗಳನ್ನ ನಿಯಂತ್ರಿಸುವ ಅಭ್ಯಾಸ ಮಾಡಿ. ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಲು ಹಣ ಉಳಿತಾಯ ಮಾಡಿ. ಇಂದು ಇದ್ದಕ್ಕಿದ್ದಂತೆ ವೈದ್ಯಕೀಯ ತುರ್ತು ಪರಿಸ್ಥಿತಿ ಉಂಟಾಗಬಹುದು. ಇದರಿಂದ ಖರ್ಚು ಹೆಚ್ಚಬಹುದು. ಕೆಲವರು ಸಹೋದರರೊಂದಿಗೆ ನಡೆಯುತ್ತಿರುವ ಹಣಕಾಸಿನ ವಿವಾದಗಳನ್ನು ಪರಿಹರಿಸಬಹುದು.

ಸಿಂಹ ರಾಶಿ ಹಣಕಾಸು ಭವಿಷ್ಯ (Leo Money Horoscope)

ಇಂದು ಯಾವುದೇ ಪ್ರಮುಖ ಹಣಕಾಸಿನ ಸಮಸ್ಯೆ ಇರುವುದಿಲ್ಲ. ಹಿಂದಿನ ಹೂಡಿಕೆಯಿಂದ ಲಾಭವಾಗಲಿದೆ. ಆಸ್ತಿ ಖರೀದಿಸಲಾಗಿದೆ. ನೀವು ಅಗತ್ಯವಿರುವ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಸಹಾಯ ಮಾಡಬಹುದು. ಸಿಂಹ ರಾಶಿಯವರು ಇಂದು ಕಾನೂನು ವಿಚಾರಗಳಿಗಾಗಿ ಹಣ ಖರ್ಚು ಮಾಡಬೇಕಾಗಬಬುದು.

ಕನ್ಯಾ ರಾಶಿ ಹಣಕಾಸು ಭವಿಷ್ಯ (Virgo Money Horoscope)

ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಬಹುದಿನಗಳ ಆಸೆಯೊಂದ ನೆರವೇರಲಿದೆ. ನೀವು ಐಷಾರಾಮಿ ವಸ್ತುಗಳ ಮೇಲೆ ಹಣ ಖರ್ಚು ಮಾಡುತ್ತೀರಿ. ಚಾರಿಟಿಗೆ ಹಣ ನೀಡುತ್ತೀರಿ. ಕಚೇರಿ ಅಥವಾ ಕುಟುಂಬದೊಳಗೆ ಏನಾದರೂ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲು ಹಣ ವಿನಿಯೋಗ ಮಾಡುತ್ತೀರಾ.

ತುಲಾ ರಾಶಿಯ ಹಣಕಾಸು ಭವಿಷ್ಯ (Libra Money Horoscope)

ಹಿಂದಿನ ಹೂಡಿಕೆಗಳು ಉತ್ತಮ ಆದಾಯವನ್ನು ತರುತ್ತವೆ, ಇದು ಇಂದು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಗ್ಯಾಜೆಟ್‌ಗಳನ್ನು ಖರೀದಿಸಲು ನಿಮಗೆ ಸಹಾಯ ಮಾಡುತ್ತದೆ. ಇಂದು ಎಲ್ಲಾ ಬಾಕಿ ಇರುವ ಬಿಲ್‌ಗಳು ಇತ್ಯರ್ಥವಾಗುತ್ತವೆ, ತುಲಾ ರಾಶಿಯವರು ಮನೆಯಲ್ಲಿ ಆಸ್ತಿ ಸಂಬಂಧಿತ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿದ್ದಾರೆ. ಹಣವನ್ನು ದಾನ ಮಾಡಲು ಇಂದು ಉತ್ತಮ ದಿನವಾಗಿದೆ.

ವೃಶ್ಚಿಕ ರಾಶಿ ಹಣಕಾಸು ಭವಿಷ್ಯ (Scorpio money horoscope)

ಹಿಂದಿನ ಹೂಡಿಕೆಗಳ ಮೂಲಕ ಲಾಭ ಬರಲಿದೆ. ನೀವು ಆಸ್ತಿ ಮಾರಾಟ ಮಾಡಬಹುದು. ದಿನದ ಮೊದಲ ಭಾಗವು ಮನೆಯನ್ನು ನವೀಕರಿಸಲು ಅಥವಾ ದ್ವಿಚಕ್ರ ವಾಹನವನ್ನು ಖರೀದಿಸಲು ಉತ್ತಮ. ಕೆಲವು ವೃಶ್ಚಿಕ ರಾಶಿಯವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಪರಿಗಣಿಸುತ್ತಾರೆ. ಹಿರಿಯರು ಮಕ್ಕಳಿಗೆ ಸಂಪತ್ತನ್ನು ಹಂಚುವುದನ್ನು ಪರಿಗಣಿಸಬಹುದು.

ಧನು ರಾಶಿ ಹಣಕಾಸು ಭವಿಷ್ಯ (Sagittarius Money Horoscope)

ಹಣಕಾಸಿನ ಪರಿಸ್ಥಿತಿ ನಿರೀಕ್ಷೆಯಂತೆ ಇರುವುದಿ‌ಲ್ಲ. ಸಾಲ ಮರುಪಾವತಿ ಸಮಸ್ಯೆ ಎದುರಾಗಬಹುದು. ಕೆಲವು ಮಹಿಳೆಯರಿಗೆ ಮನೆ ನವೀಕರಿಸಲು ಹಣದ ಅಗತ್ಯವಿರುತ್ತದೆ. ದಿನದ ಅಂತ್ಯದ ಮೊದಲು ಹಣಕಾಸಿನ ವಿವಾದವನ್ನು ಇತ್ಯರ್ಥಪಡಿಸಲು ಸಹ ನೀವು ಪ್ರಯತ್ನಿಸುವಿರಿ.

ಮಕರ ರಾಶಿ ಹಣಕಾಸು ಭವಿಷ್ಯ (Capricorn Money Horoscope)

ಇಂದು ಸಣ್ಣ ಪುಟ್ಟ ಹಣಕಾಸಿನ ಸಮಸ್ಯೆಗಳಿರುತ್ತದೆ. ಆದರೆ ಇದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ. ಇಂದು ಹಣದ ವಿಷಯದಲ್ಲಿ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ. ಷೇರುಪೇಟೆ, ಚಿನ್ನದ ಮೇಲೆ ಇಂದು ಹೂಡಿಕೆ ಮಾಡಿ. ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಲು ಸಂಜೆ ಸಮಯ ಒಳ್ಳೆಯದು.

ಕುಂಭ ರಾಶಿ ಹಣಕಾಸು ಭವಿಷ್ಯ (Aquarius Money Horoscope)

ಇಂದು ಸಂಪತ್ತು ಹರಿದು ಬರಲಿದೆ. ಸ್ವತಂತ್ರ ಉದ್ಯೋಗವು ಉತ್ತಮ ಹಣವನ್ನು ತರುತ್ತದೆ. ನೀವು ಸ್ಟಾಕ್, ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೂಡಿಕೆ ಮಾಡುವುದನ್ನು ಸಹ ಪರಿಗಣಿಸಬಹುದು.  ಉದ್ಯಮಿಗಳು ಹೊಸ ಪಾಲುದಾರರೊಂದಿಗೆ ಹಣಕಾಸು ನಿರ್ವಹಿಸುವಾಗ ಜಾಗರೂಕರಾಗಿರಬೇಕು. ಇಂದು ವ್ಯಾಪಾರದಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ.

ಮೀನ ರಾಶಿ ಹಣಕಾಸು ಭವಿಷ್ಯ (Pisces Money Horoscope)

ದೊಡ್ಡ ಮೊತ್ತವನ್ನು ಸಾಲವಾಗಿ ನೀಡಬೇಡಿ, ಅದನ್ನ ಮರಳಿ ಪಡೆಯೋದು ಕಷ್ಟವಾಗುತ್ತದೆ. ಮೀನ ರಾಶಿಯ ಹೆಣ್ಣು ಮಕ್ಕಳು ಇಂದು ಅನವಶ್ಯಕ ಖರ್ಚು ಮಾಡುತ್ತಾರೆ. ಕೆಲವು ಉದ್ಯಮಿಗಳು ಪಾಲುದಾರಿಕೆಯಲ್ಲಿ ತೊಂದರೆಗಳನ್ನು ಅನುಭವಿಸುತ್ತಾರೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ