logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ayodhya Ram Mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಕರ್ನಾಟಕ ಕಲಾವಿದ ಅರುಣ್‌ ಕೆತ್ತಿದ ರಾಮನ ವಿಗ್ರಹ ಆಯ್ಕೆ: ಯಾರು ಈ ಅರುಣ್‌ ಯೋಗಿರಾಜ್‌

Ayodhya Ram mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಕರ್ನಾಟಕ ಕಲಾವಿದ ಅರುಣ್‌ ಕೆತ್ತಿದ ರಾಮನ ವಿಗ್ರಹ ಆಯ್ಕೆ: ಯಾರು ಈ ಅರುಣ್‌ ಯೋಗಿರಾಜ್‌

Umesha Bhatta P H HT Kannada

Jan 17, 2024 09:48 PM IST

google News

ರಾಮನಮೂರ್ತಿಯೊಂದಿಗೆ ಮೈಸೂರಿನ ಕಲಾವಿದ ಶಿಲ್ಪಿಅರುಣ್‌ ಯೋಗಿರಾಜ್‌

    • ayodhya Ramamandir idol ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮನ ವಿಗ್ರಹ ಮೈಸೂರಿನಲ್ಲಿ ಕೆತ್ತನೆಯಾಗಿದ್ದು. ಇಲ್ಲಿನ ಸಿದ್ದಾಂತಿ ಅರುಣ್‌ ಯೋಗಿರಾಜ್‌ ಅವರು ಇದನ್ನು ನಿರ್ಮಿಸಿದ್ದಾರೆ.
ರಾಮನಮೂರ್ತಿಯೊಂದಿಗೆ ಮೈಸೂರಿನ ಕಲಾವಿದ  ಶಿಲ್ಪಿಅರುಣ್‌ ಯೋಗಿರಾಜ್‌
ರಾಮನಮೂರ್ತಿಯೊಂದಿಗೆ ಮೈಸೂರಿನ ಕಲಾವಿದ ಶಿಲ್ಪಿಅರುಣ್‌ ಯೋಗಿರಾಜ್‌

ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿರುವ ನಡುವೆ ಕರ್ನಾಟಕದ ಕಲಾವಿದರೊಬ್ಬರು ಕೆತ್ತಿದ ರಾಮಲಲ್ಲಾ ಮೂರ್ತಿಯೇ ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲು ಆಯ್ಕೆಯಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮೈಸೂರಿನ ಹಿರಿಯ ಶಿಲ್ಪ ಕಲಾವಿದರ ಕುಟುಂಬದ ಐದನೇ ತಲೆಮಾರಿನ ಕುಡಿಯಾಗಿರುವ ಅರುಣ್‌ ಯೋಗಿರಾಜ್‌ ಅವರು ಕೆತ್ತಿರುವ ರಾಮ ಲಲ್ಲಾನ ವಿಗ್ರಹವನ್ನು ಅಯೋಧ್ಯೆ ರಾಮಮಂದಿರ ಸಮಿತಿಯು ಆಯ್ಕೆ ಮಾಡಿದೆ. ಈ ಮೂಲಕ ಕರ್ನಾಟಕಕ್ಕೂ ಹೆಮ್ಮೆಪಡುವ ಕ್ಷಣ ಬಂದಿದೆ.

ಹೊಸ ವರ್ಷದ ದಿನವೇ ಆಯೋಧ್ಯೆ ರಾಮಮಂದಿರ ಸಮಿತಿಯು ಖುದ್ದು ಅರುಣ್‌ ಯೋಗಿರಾಜ್‌ ಅವರಿಗೆ ಕರೆ ಮಾಡಿ ನೀವು ರೂಪಿಸಿದ ವಿಗ್ರಹವನ್ನೇ ಆಯ್ಕೆ ಮಾಡಲಾಗಿದೆ ಎನ್ನುವ ಸಂದೇಶವನ್ನು ರವಾನಿಸಿದೆ. ಇದನ್ನು ಖುದ್ದು ಅರುಣ್‌ ಯೋಗಿರಾಜ್‌ ಅವರೇ ಖಚಿತಪಡಿಸಿದ್ದಾರೆ.

ಮೂವರಲ್ಲಿ ಒಬ್ಬರದ್ದು ಅಂತಿಮ

ಕಳೆದ ವರ್ಷವೇ ರಾಮ ಲಲ್ಲಾನ ವಿಗ್ರಹ ತಯಾರಿಸಲು ದೇಶದ ಹಲವಾರು ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು.

ಇವರು ಕಳುಹಿಸಿದ ಮಾದರಿಗಳನ್ನು ಗುರುತಿಸಿ ಕೊನೆಗೆ ಕರ್ನಾಟಕದ ಇಬ್ಬರು ಹಾಗೂ ರಾಜಸ್ಥಾನದ ಒಬ್ಬರು ಕಲಾವಿದರ ಹೆಸರು ಅಂತಿಮಗೊಳಿಸಲಾಗಿತ್ತು.

ಇದರಲ್ಲಿ ಅರುಣ್‌ ಯೋಗಿರಾಜ್‌, ಜಿ.ಎಸ್.‌ಭಟ್‌ ಕರ್ನಾಟಕದವರಾದರೇ. ಸಂಜಯ್‌ ಪಾಂಡೆ ಎನ್ನುವ ಕಲಾವಿದರು ರಾಜಸ್ಥಾನದವರು.

ಈ ಮೂವರು ತಾವು ಕೆತ್ತಿದ್ದ ಮೂರ್ತಿಗಳನ್ನು ತೆಗೆದುಕೊಂಡು ಹೋಗಿದ್ದರು. ಇದರಲ್ಲಿ ಅತ್ಯುತ್ತಮ ಎನ್ನುವ ರೀತಿಯಲ್ಲಿರುವ ಅರುಣ್‌ ರೂಪಿಸಿದ ಸುಮಾರು 5 ಅಡಿ ಎತ್ತರದ ವಿಗ್ರಹವನ್ನು ಅಂತಿಮಗೊಳಿಸಲಾಗಿದೆ.

ಈಗಾಗಲೇ ಅರುಣ್‌ ಯೋಗಿ ರಾಜ್‌ ಅವರು ಕೆಲ ದಿನಗಳ ಹಿಂದೆ ರೂಪಿಸಿದ್ದ ಎರಡು ಪ್ರಮುಖ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ.

ಉತ್ತರಾಖಂಡದ ಕೇದಾರನಾಥಕ್ಕೆ 12 ಅಡಿ ಆದಿ ಶಂಕರಾಚಾರ್ಯರ ವಿಗ್ರಹ ಹಾಗೂ ಭಾರತ ಸರ್ಕಾರ ದೆಹಲಿ ಇಂಡಿಯಾ ಗೇಟ್ ನಲ್ಲಿ ಸ್ಥಾಪಿಸಿರುವ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಏಕಶಿಲೆಯ ಕಪ್ಪು ಗ್ರಾನೈಟ್ ಕಲ್ಲಿನ ಶಿಲ್ಪ ಕೂಡ ಅರುಣ್‌ ಯೋಗಿರಾಜ್‌ ನಿರ್ಮಿಸಿದ್ದೇ.

ಯಾರು ಈ ಯೋಗಿರಾಜ್‌

ಮೈಸೂರಿನ ಐದು ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕೌಟುಂಬಿಕ ಹಿನ್ನೆಲೆ ಹೊಂದಿರುವ ಅರುಣ್ ಯೋಗಿರಾಜ್ ಪ್ರಸ್ತುತ ದೇಶದ ಬಹುಬೇಡಿಕೆಯ ಶಿಲ್ಪಿ.

ಅರುಣ್ ಅವರ ಕೈಚಳಕದಿಂದ ಸಾಧಕರ ಪ್ರತಿಮೆಗಳು ತಲೆ ಎತ್ತಬೇಕು ಎಂಬ ಬೇಡಿಕೆಯಿಂದಾಗಿ ದೇಶದ ವಿವಿಧ ರಾಜ್ಯಗಳು ಅರುಣ್ ಅವರನ್ನು ಹುಡುಕಿಕೊಂಡು ಬರುತ್ತಿವೆ. ತನಗೆ ಸಿಕ್ಕ ಅವಕಾಶಗಳ ಸಮರ್ಥ ಬಳಕೆಗೆ ಬಂದಾಗ ಅರುಣ್ ಉದ್ಯಮಶೀಲ. ಹೀಗಾಗಿಯೇ ದೇಶದ ನಾನಾ ರಾಜ್ಯಗಳಲ್ಲಿ ಇವರ ಕಲೆಗೆ ಬೇಡಿಕೆ ಸೃಷ್ಟಿಯಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅರುಣ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

ಅರುಣ್ ತಂದೆ ಯೋಗಿರಾಜ್ ಕೂಡ ನುರಿತ ಶಿಲ್ಪಿ. ಕೆಲ ದಿನಗಳ ಹಿಂದೆಯಷ್ಟೇ ಅವರು ಕಾಲವಾಗಿದ್ದಾರೆ.

ಅವರ ಅಜ್ಜ ಬಸವಣ್ಣ ಶಿಲ್ಪಿ ಮೈಸೂರು ರಾಜರಿಂದ ಪೋಷಕರಾಗಿದ್ದರು. ಈ ತಲೆಮಾರಿನವರಾದ ಅರುಣ್ ಯೋಗಿರಾಜ್ ಅವರು ಬಾಲ್ಯದಿಂದಲೂ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು.

ಎಂಬಿಎ ಮುಗಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಆದರೆ ಉದ್ದಕ್ಕೂ ಅವನಲ್ಲಿ ಸಹಜವಾಗಿಯೇ ಇದ್ದ ಶಿಲ್ಪಕಲೆ ವೃತ್ತಿಯ ಕೌಶಲದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಹೀಗಾಗಿ 2008ರಿಂದ ಕೆತ್ತನೆ ವೃತ್ತಿ ಮುಂದುವರಿಸಿ ಹದಿನೈದು ವರ್ಷದಲ್ಲಿ ಹೆಮ್ಮೆಯ ಸಾಧನೆ ಮಾಡಿದ್ದಾರೆ.

ಕೈಯಿಂದ ಕೆತ್ತಿದ ಮಂಟಪಗಳು, ವಿವಿಧ ಕಲ್ಲಿನ ಕಂಬದ ಕೆಲಸಗಳು ಮತ್ತು ಇನ್ನೂ ಅನೇಕ ಶಿಲ್ಪಗಳನ್ನು ಅರುಣ್‌ ಯೋಗಿರಾಜ್‌ ರೂಪಿಸಿ ಸಣ್ಣ ವಯಸ್ಸಿನಲ್ಲೇ ಗಮನ ಸೆಳೆದಿದ್ದಾರೆ.

ಹಲವಾರು ಕೆತ್ತನೆಗಳು

  • ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಚುಂಚುನಕಟ್ಟೆಯಲ್ಲಿ ಹೊಯ್ಸಳ ಶೈಲಿ 21 ಅಡಿ ಏಕಶಿಲೆಯ ಕಲ್ಲಿನ ಹನುಮಾನ್ ಶಿಲ್ಪ
  • ಮೈಸೂರಿನ ಪುರಭವನ ಎದುರು 15 ಅಡಿ ಏಕಶಿಲೆಯ ಬಿಳಿ ಅಮೃತಶಿಲೆಯ ಡಾ.ಬಿ.ಆರ್.ಅಂಬೇಡ್ಕರ್ ಅವರ ಪೀಠದೊಂದಿಗೆ ಶಿಲ್ಪ.
  • ಮೈಸೂರಿನಲ್ಲಿ ಭಾರತದ ಅತಿ ದೊಡ್ಡ 10 ಅಡಿ ಏಕಶಿಲೆಯ ಬಿಳಿ ಅಮೃತಶಿಲೆಯ ಶ್ರೀ ರಾಮಕೃಷ್ಣ ಪರಮಹಂಸರ ಶಿಲ್ಪ,
  • ಮೈಸೂರಿನಲ್ಲಿ 15 ಅಡಿ ಏಕಶಿಲೆಯ ಬಿಳಿ ಅಮೃತಶಿಲೆಯ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಪೀಠದೊಂದಿಗೆ ಶಿಲ್ಪ.
  • ಮೈಸೂರು ವಿಶ್ವವಿದ್ಯಾನಿಲಯದಲ್ಲಿ "ಕ್ರಿಯೇಶನ್ ಆಫ್ ಕ್ರಿಯೇಶನ್" ಪರಿಕಲ್ಪನೆಯಲ್ಲಿ 11 ಅಡಿ ಏಕಶಿಲೆಯ ಆಧುನಿಕ ಕಲಾ ಕಲ್ಲಿನ ಶಿಲ್ಪ ರಚನೆ
  • ಬೆಂಗಳೂರಿನ ಇಸ್ರೋದಲ್ಲಿ ಯು ಆರ್ ರಾವ್ ಅವರ ಕಂಚಿನ ಪ್ರತಿಮೆ.
  • ಮೈಸೂರಿನಲ್ಲಿ 5 ಅಡಿಯ ಗರುಡ ದೇವರ ವಿಗ್ರಹ.
  • ಕೆಆರ್ ನಗರದಲ್ಲಿ 7 ಅಡಿ ಎತ್ತರದ ಯೋಗಾನರಸಿಂಹ ಸ್ವಾಮಿ ದೇವರ ವಿಗ್ರಹ.
  • ಸರ್ ಎಂ.ವಿಶ್ವೇಶ್ವರಯ್ಯನವರ ಅಸಂಖ್ಯಾತ ಪ್ರತಿಮೆಗಳು.
  • ಪಂಚಮುಖಿ ಗಣಪತಿ, ಭಗವಾನ್ ಮಹಾವಿಷ್ಣು, ದೇವರು ಬುದ್ಧ, ನಂದಿ, ಸ್ವಾಮಿ ಶಿವಬಾಲ ಯೋಗಿ, ಸ್ವಾಮಿ ಶಿವಕುಮಾರ ಮತ್ತು ಬನಶಂಕರಿ ದೇವಿಯ ವಿವಿಧ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಗಿದೆ.

ಅಶೋಕ್‌ ಟ್ವೀಟ್‌

ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು, ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ ಎಂದು ವಿಧಾನಸಭೆ ಪ್ರತಿ ಪಕ್ಷನಾಯಕ ಆರ್‌.ಅಶೋಕ್‌ ಅಭಿನಂದಿಸಿದ್ದಾರೆ.

ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಭವವಿದೆ. ಶ್ರೀರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

==========

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ