logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭರಣಿ, ಕೃತಿಕಾ ನಕ್ಷತ್ರ ಭವಿಷ್ಯ 2025: ಭರಣಿ ನಕ್ಷತ್ರದವರಿಗೆ ವಿದೇಶ ಪ್ರಯಾಣ ಯೋಗ, ಕೃತಿಕಾ ನಕ್ಷತ್ರದವರಿಗೆ ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ

ಭರಣಿ, ಕೃತಿಕಾ ನಕ್ಷತ್ರ ಭವಿಷ್ಯ 2025: ಭರಣಿ ನಕ್ಷತ್ರದವರಿಗೆ ವಿದೇಶ ಪ್ರಯಾಣ ಯೋಗ, ಕೃತಿಕಾ ನಕ್ಷತ್ರದವರಿಗೆ ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ

Umesh Kumar S HT Kannada

Nov 29, 2024 06:42 PM IST

google News

ಭರಣಿ, ಕೃತಿಕಾ ನಕ್ಷತ್ರ ಭವಿಷ್ಯ 2025: ಭರಣಿ ನಕ್ಷತ್ರದವರಿಗೆ ವಿದೇಶ ಪ್ರಯಾಣ ಯೋಗ ಇದೆ. ಕೃತಿಕಾ ನಕ್ಷತ್ರದವರಿಗೆ ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ ಇದ್ದು, ಹಣಕಾಸಿನ ವಿಚಾರದಲ್ಲಿ ಎಚ್ಚರ ಎಂದಿದೆ ವರ್ಷ ಭವಿಷ್ಯ.

  • Nakshatra Horoscope: ಭರಣಿ, ಕೃತಿಕಾ ನಕ್ಷತ್ರ ಭವಿಷ್ಯ 2025ರ ಪ್ರಕಾರ, ಭರಣಿ ನಕ್ಷತ್ರದವರಿಗೆ ವಿದೇಶ ಪ್ರಯಾಣ ಯೋಗ ಇದೆ. ಕೃತಿಕಾ ನಕ್ಷತ್ರದವರಿಗೆ ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ ಇದ್ದು, ಎರಡೂ ನಕ್ಷತ್ರದಲ್ಲಿ ಜನಿಸಿದವರು ಹಣಕಾಸಿನ ವಿಚಾರದಲ್ಲಿ ಹಾಸಿಗೆ ಇದ್ದಷ್ಟೇ ಕಾಲುಚಾಚ ಬೇಕು ಎಂಬ ಆಡುನುಡಿಯನ್ನು ಮರೆಯಬಾರದು ಎನ್ನುತ್ತಿದೆ ನಕ್ಷತ್ರ ಭವಿಷ್ಯ.

ಭರಣಿ, ಕೃತಿಕಾ ನಕ್ಷತ್ರ ಭವಿಷ್ಯ 2025: ಭರಣಿ ನಕ್ಷತ್ರದವರಿಗೆ ವಿದೇಶ ಪ್ರಯಾಣ ಯೋಗ ಇದೆ. ಕೃತಿಕಾ ನಕ್ಷತ್ರದವರಿಗೆ ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ ಇದ್ದು, ಹಣಕಾಸಿನ ವಿಚಾರದಲ್ಲಿ ಎಚ್ಚರ ಎಂದಿದೆ ವರ್ಷ ಭವಿಷ್ಯ.
ಭರಣಿ, ಕೃತಿಕಾ ನಕ್ಷತ್ರ ಭವಿಷ್ಯ 2025: ಭರಣಿ ನಕ್ಷತ್ರದವರಿಗೆ ವಿದೇಶ ಪ್ರಯಾಣ ಯೋಗ ಇದೆ. ಕೃತಿಕಾ ನಕ್ಷತ್ರದವರಿಗೆ ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ ಇದ್ದು, ಹಣಕಾಸಿನ ವಿಚಾರದಲ್ಲಿ ಎಚ್ಚರ ಎಂದಿದೆ ವರ್ಷ ಭವಿಷ್ಯ.

Nakshatra Horoscope: ಹೊಸ ವರ್ಷ ಸನಿಹದಲ್ಲಿದೆ. 2024ರ ಕ್ಯಾಲೆಂಡರ್ ವರ್ಷ ಮುಗಿದು ಇನ್ನೇನು 2025 ಕ್ಯಾಲೆಂಡರ್ ವರ್ಷ ಶುರುವಾಗಲು ದಿನಗಣನೆ ಶುರುವಾಗಿದೆ. ಈ ಹೊತ್ತಿನಲ್ಲಿ ಬಹುತೇಕರು ಹಳೆಯ ಸಂಕಷ್ಟಗಳನ್ನು ಮರೆತು ಹೊಸ ವರ್ಷವಾದರೂ ಒಳಿತಾಗಲಿ, ಶುಭವಾಗಲಿ ಎಂದು ಬಯಸುತ್ತಿರುತ್ತಾರೆ. ಹಾಗೆ, ಹೊಸ ವರ್ಷದ ರಾಶಿ ಭವಿಷ್ಯಗಳನ್ನು ಗಮನಿಸುತ್ತಿರುತ್ತಾರೆ. ಅದಲ್ಲದೆ, ಜನ್ಮ ನಕ್ಷತ್ರ ಆಧಾರಿತ ಭವಿಷ್ಯಗಳನ್ನೂ ಓದುತ್ತಾರೆ. ಇವೆಲ್ಲವೂ ನಿಖರ ಎಂದೇನೂ ಅಲ್ಲ. ಮನಸ್ಸಿನಗೊಂದು ಸಮಾಧಾನ. ಮುಂದಿನಗಳನ್ನು ಎದುರಿಸುವುದಕ್ಕೆ ಮಾನಸಿಕವಾಗಿ ಸಿದ್ಧರಾಗುವುದಕ್ಕೆ ಟಿಪ್ಸ್ ಅಂತಾನೂ ತಿಳಿದುಕೊಳ್ಳುವವರಿದ್ದಾರೆ. ಇರಲಿ. 2025ರಲ್ಲಿ ಭರಣಿ ಮತ್ತು ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರ ಭವಿಷ್ಯ ಗಮನಿಸೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭರಣಿ ನಕ್ಷತ್ರ ಭವಿಷ್ಯ 2025; ಭರಣಿ ನಕ್ಷತ್ರದವರ ಗುಣ ಲಕ್ಷಣ ಮತ್ತು ವರ್ಷ ಭವಿಷ್ಯ

ಭರಣಿ ನಕ್ಷತ್ರವು ರಾಶಿಚಕ್ರದ ಎರಡನೇ ನಕ್ಷತ್ರ. ಮೇಷ ರಾಶಿಯ ವ್ಯಾಪ್ತಿಯಲ್ಲಿದೆ. ಇದರ ಚಿಹ್ನೆ ಆನೆ ಅಥವಾ ಯೋನಿಯನ್ನು ಹೋಲುತ್ತದೆ. ಈ ನಕ್ಷತ್ರದ ಅಧಿಪತಿ ಯಮ. ಹಿಂದೂ ಧರ್ಮದ ಪ್ರಕಾರ ಧರ್ಮ ಪಾಲನೆ ಮಾಡುವ ಮೃತ್ಯು ದೇವತೆ. ಈ ನಕ್ಷತ್ರದ ಆಡಳಿತ ನಡೆಸುವುದು ಶುಕ್ರ. ಈ ನಕ್ಷತ್ರದವರು ಭಾವುಕರು ಮತ್ತು ಸೃಜನಶೀಲರು. ಪರೋಪಕಾರಿ, ದಯೆ ಮತ್ತು ದತ್ತಿ ಕಾರ್ಯಗಳಲ್ಲಿ ಆಸಕ್ತರು. ಜ್ಯೋತಿಷ್ಯ, ರೇಖಿ ಮತ್ತು ಸ್ಫಟಿಕ ಚಿಕಿತ್ಸೆ ಮುಂತಾದ ನಿಗೂಢ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರಬಹುದು. ಕಲೆ, ಸಂಗೀತ, ನೃತ್ಯ, ಫ್ಯಾಷನ್, ಸಿನಿಮಾ ಅಥವಾ ಒಳಾಂಗಣ ಅಲಂಕಾರ ವೃತ್ತಿಯಲ್ಲಿ ಪರಿಣತರಾಗಬಲ್ಲವರು.

ನಕ್ಷತ್ರ ಜಾತಕ 2025ರ ಪ್ರಕಾರ, ವರ್ಷಾರಂಭದಲ್ಲಿ ನಿಮ್ಮ ಗಮನವನ್ನು ಆಧ್ಯಾತ್ಮಿಕ ಜಾಗೃತಿಯತ್ತ ಬದಲಾಯಿಸುವುದರಿಂದ ನೀವು ಪಾರ್ಟಿ ಮಾಡುವುದು, ಸಾಮಾಜಿಕತೆ ಮತ್ತು ಭೌತಿಕ ಬಯಕೆಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ನೀವು ಧ್ಯಾನ, ಯೋಗವನ್ನು ಅಭ್ಯಾಸ ಮಾಡಲು ಮತ್ತು ಏಕಾಂತದ ಕಡೆಗೆ ಒಲವು ತೋರುತ್ತೀರಿ. ಆದಾಗ್ಯೂ, ನಿಮ್ಮ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಮತ್ತು ನೀವು ಪ್ರತಿಕೂಲ ದಶೆಯನ್ನು ಅನುಭವಿಸುತ್ತಿದ್ದರೆ, ಮೇ ವರೆಗೆ ಅನಾರೋಗ್ಯ ಕಾಡುವ ಸಾಧ್ಯತೆ ಇದೆ.

ಒಳಿತನ್ನು ಗಮನಿಸುವುದಾದರೆ, ವಿದೇಶಿ ಪ್ರಯಾಣದ ಅವಕಾಶವಿದೆ. ಐಷಾರಾಮಿ ಪ್ರವಾಸವನ್ನು ಯೋಜಿಸಬಹುದಾದರೂ ಖರ್ಚು ವೆಚ್ಚ ಕೈ ಮೀರಬಹುದು. ಸಾಲದ ಹೊರೆ ಹೆಚ್ಚಾಗಬಹುದು. ಮೇ ನಂತರ, ಪರಿಸ್ಥಿತಿ ಸುಧಾರಣೆಯಾಗಲಿದ್ದು, ಜೂನ್, ಜುಲೈ, ಆಗಸ್ಟ್, ಮತ್ತು ಸೆಪ್ಟೆಂಬರ್ ಮಧ್ಯದವರೆಗೆ, ನಿಮ್ಮ ಗಮನವು ಸ್ವತಃ ನಿಮ್ಮ ಮೇಲೆ, ಕುಟುಂಬ, ಉಳಿತಾಯ ಮತ್ತು ಮನೆಯ ಜೀವನದ ಮೇಲೆ ಇರುತ್ತದೆ. ನಿಮ್ಮ ಮನೆಗೆ ಉನ್ನತ ಮಟ್ಟದ ಆಟೋಮೊಬೈಲ್ ಅಥವಾ ಇತರ ಐಷಾರಾಮಿ ವಸ್ತುಗಳನ್ನೂ ಖರೀದಿಸಬಹುದು.

ಅಕ್ಟೋಬರ್ ತಿಂಗಳಲ್ಲಿ ಭರಣಿ ನಕ್ಷತ್ರದವರು ತಮ್ಮ ಸಂಗಾತಿಗಳೊಂದಿಗೆ ಅಹಂ ಭಾವದ ಘರ್ಷಣೆಗೆ ಇಳಿದು ಭಿನ್ನಾಭಿಪ್ರಾಯಕ್ಕೆ, ಮುನಿಸಿಗೆ ಕಾರಣವಾಗಬಹುದು. ಆದಾಗ್ಯೂ ಕೊನೆಯಲ್ಲಿ ಪರಸ್ಪರರ ಭಾವನೆಗಳು ಬಲಗೊಂಡು, ಮದುವೆಯಾಗಬೇಕು ಎಂದು ನವೆಂಬರ್‌ನಲ್ಲಿ ತೀರ್ಮಾನಿಸಬಹುದು. ಒಂಟಿಯಾಗಿರುವವರು ತಮ್ಮ ಬಾಳಸಂಗಾತಿಗಾಗಿ ನಿರೀಕ್ಷಿಸಬಹುದು. ಆದರೆ ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಪ್ರೀತಿ, ಸಾಮರಸ್ಯ ಹೊಂದಿ ಆನಂದ ಕಾಣಬಹುದು. ವರ್ಷದ ಕೊನೆಗೆ, ಸನ್ನಿವೇಶಗಳು ಸಾಮಾನ್ಯ ಅನುಕೂಲಕರ. ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುವುದನ್ನು ಮುಂದುವರಿಸಬೇಕು.

ಕೃತಿಕಾ ನಕ್ಷತ್ರ ಭವಿಷ್ಯ 2025; ಕೃತ್ತಿಕಾ ನಕ್ಷತ್ರದವರ ಗುಣ ಲಕ್ಷಣ ಮತ್ತು ವರ್ಷ ಭವಿಷ್ಯ

ರಾಶಿ ನಕ್ಷತ್ರ ವ್ಯವಸ್ಥೆಯಲ್ಲಿ ಕೃತಿಕಾ ನಕ್ಷತ್ರ ಮೂರನೇಯದ್ದು. ಇದು ವೃಷಭ ರಾಶಿಯ ವ್ಯಾಪ್ತಿಯಲ್ಲಿದೆ. ಕೊಡಲಿ, ಚಾಕು ಅಥವಾ ಜ್ವಾಲೆ ಈ ನಕ್ಷತ್ರದ ಸಂಕೇತವಾಗಿದ್ದು, ಅಗ್ನಿ ದೇವತೆ ಅಧಿಪತಿಯೂ ಆಗಿದ್ದಾನೆ. ಆಡಳಿತ ನಡೆಸೋದು ಸೂರ್ಯ. ಧನಾತ್ಮಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿರುವ ಈ ನಕ್ಷತ್ರದವರು ಧೈರ್ಯಶಾಲಿಗಳು, ಚೇತರಿಸಿಕೊಳ್ಳುವ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಸಿದ್ಧತೆ ಉಳ್ಳವರು.

ಈ ವರ್ಷ ವೃತ್ತಿ ಜೀವನದ ಮೇಲೆ ಪೂರ್ಣ ಗಮನವಿರಲಿದೆ. ಗರಿಷ್ಠ ಕಾರ್ಯಕ್ಷಮತೆ ಮತ್ತು ಸಂಭಾವ್ಯ ಅವಕಾಶಗಳ ಗುರುತಿಸುವುದು ಮತ್ತು ಬಳಸುವುದಕ್ಕೆ ಇರುವಂತಹ ಸಮಯ. ಇದು ವಿಶೇಷವಾಗಿ ಪರಿಣತ ವಲಯಗಳಲ್ಲಿ ಕೆಲಸ ಮಾಡುವವರಿಗೆ ಅನ್ವಯ. ಪ್ರಚಾರಕ್ಕೆ ಸಂಬಂಧಿಸಿದ, ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ ಅವಕಾಶ ಎದುರಾಗಬಹುದು. ನಿಮ್ಮ ಕೌಶಲಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತು ನಿಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗಿನ ಸಕಾರಾತ್ಮಕ ಸಂಬಂಧಗಳು ವೃತ್ತಿ ಬೆಳವಣಿಗೆ ಮತ್ತು ಗುರಿ ಸಾಧನೆಯನ್ನು ಉತ್ತೇಜಿಸುವ ಒಂದು ಸಹಾಯಕ ಕೆಲಸದ ವಾತಾವರಣವನ್ನು ಒದಗಿಸಿಕೊಡುತ್ತವೆ. ಮುಂದೆ ಮಾರ್ಚ್‌ನಲ್ಲಿ ಖರ್ಚು ವೆಚ್ಚಗಳು ಹೆಚ್ಚಾಗುವುದನ್ನು ಗಮನಿಸಬಹುದು. ಕೃತಿಕಾದವರು ಹಣಕಾಸಿನ ಸ್ಥಿರತೆ ಕಾಪಾಡುವುದಕ್ಕಾಗಿ ಬಜೆಟ್ ಮತ್ತು ಹಣಕಾಸು ನಿರ್ವಹಣೆ ಕುರಿತು ಗಮನಕೊಡುವುದು ಮುಖ್ಯ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಹತ್ವಾಕಾಂಕ್ಷೆ, ಸ್ವಯಂ ಭರವಸೆ ಮತ್ತು ದೃಢತೆ, ಜೀವನದ ಮಹತ್ವದ ಹೆಜ್ಜೆ ಇರಿಸುವುದಕ್ಕೆ ನೆರವಾಗಲಿದೆ. ಅಂತಹ ಉತ್ತಮ ಸಮಯ ಎದುರಾಗಲಿದೆ. ಗುರಿಗಳನ್ನು ಅನುಸರಿಸುವುದಕ್ಕೆ ಮತ್ತು ಪ್ರಗತಿಗೆ ಪೂರಕ ಅವಕಾಶ ಬಳಸಿಕೊಳ್ಳುವುದಕ್ಕೆ ಅಗತ್ಯ ಪೂರ್ವ ಸಿದ್ಧತೆ ಬೇಕು.

ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಕೃತಿಕಾ ನಕ್ಷತ್ರದವರು ಸ್ವಂತ ಜೀವನದ ಕಡೆಗೆ ಗಮನಹರಿಸುತ್ತಾರೆ. ಅಂದರೆ ಜೀವನ ಮಟ್ಟ ಸುಧಾರಣೆ, ಉಳಿತಾಯ ಹೆಚ್ಚಳ, ಮನೆ ನಿರ್ಮಾಣ, ಕುಟುಂಬ ಬಂಧಗಳನ್ನು ಬಲಪಡಿಸುವುದು ಒಳಗೊಂಡಿದೆ. ಸರ್ಕಾರಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ಅನುಕೂಲಕರ ತಿಂಗಳು. ವರ್ಷದ ಅಂತ್ಯಕ್ಕೆ ವಿವಾಹಿತರಿಗೆ ಸಂಬಂಧದಲ್ಲಿ ಸಾಮರಸ್ಯದ ಸವಾಲು, ಸಮನ್ವಯದ ತೊಂದರೆ ಎದುರಾಗಬಹುದು. ಒಟ್ಟಾರೆಯಾಗಿ ಎಚ್ಚರದ ನಡವಳಿಕೆ ಅಗತ್ಯ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ