ಚೀನಾ ಪದ್ಧತಿ ವರ್ಷ ಭವಿಷ್ಯ: ಹಂದಿ ಚಿಹ್ನೆಯವರಿಗೆ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ, ಯಕೃತ್ತಿನ ಸಮಸ್ಯೆ ಉಂಟಾಗಬಹುದು, ಜಾಗ್ರತೆಯಿಂದಿರಿ
Dec 14, 2024 12:10 PM IST
ಚೀನಾ ಪದ್ಧತಿ ವರ್ಷ ಭವಿಷ್ಯ 2025: ಹಂದಿ ರಾಶಿಗೆ ಸೇರಿದವರ ಹೊಸ ವರ್ಷದ ರಾಶಿಫಲ
ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 10ನೇ ಚಿಹ್ನೆ ಹಂದಿ ಆಗಿರುತ್ತದೆ. 2025ರಲ್ಲಿ ಹಂದಿ ರಾಶಿಯವರ ಭವಿಷ್ಯ ಹೇಗಿರುತ್ತೆ ನೋಡೋಣ.
ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷ ಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ, ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ; ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರೆಲ್ಲಾ ‘ಹಂದಿ‘ಯನ್ನು ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.
ತಾಜಾ ಫೋಟೊಗಳು
ಹಂದಿ ರಾಶಿಯನ್ನು ಪ್ರತಿನಿಧಿಸುವವರು ಸ್ನೇಹಪರ ಮತ್ತು ಉದಾರರಾಗಿದ್ದಾರೆ, ಆದರೆ ಈ ವರ್ಷ ನಿಮ್ಮ ಕೆಲಸಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ. ಹಣಕಾಸಿನ ದೃಷ್ಟಿಕೋನದಿಂದ, 2025 ಸ್ಥಿರತೆಯ ವರ್ಷವಾಗಿರುತ್ತದೆ. ವೃತ್ತಿಗೆ ಸಂಬಂಧಿಸಿದಂತೆ ಅಷ್ಟೇನೂ ಅನುಕೂಲ ಇಲ್ಲದಿದ್ದರೂ ಸಮಸ್ಯೆ ಇರುವುದಿಲ್ಲ. ಕಠಿಣ ಶ್ರಮ ಹಾಗೂ ಮತ್ತು ಚುರುಕಾಗಿ ಕೆಲಸ ಮಾಡುವ ಮೂಲಕ ವ್ಯಾಪಾರವನ್ನು ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ಈ ವರ್ಷ ಬಹಳ ಉತ್ತಮವಾಗಿದೆ.
1959, 1971, 1983, 1995, 2007, 2019, 2031ನೇ ಇಸವಿಯಲ್ಲಿ ಹುಟ್ಟಿದವರು ಹಂದಿ ಚಿಹ್ನೆಯವರು.
ಉದ್ಯೋಗ-ವೃತ್ತಿ ಭವಿಷ್ಯ
ವೃತ್ತಿಜೀವನದಲ್ಲಿ ತಕ್ಕಮಟ್ಟಿಗೆ ಸುಧಾರಣೆ ಇರಲಿದೆ. ಆದರೂ ಈ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಈ ರಾಶಿಯವರು ತಮ್ಮ ಕೆಲಸದ ಸ್ಥಳದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸ್ವಭಾವದವರಾಗಿರಬೇಕು. ಹೊಸ ವಿಷಯಗಳನ್ನು ಪ್ರಯತ್ನಿಸುವುದು ಮತ್ತು ಜನರೊಂದಿಗೆ ಸಂಪರ್ಕದಲ್ಲಿರುವುದು ನಿಮ್ಮ ವೃತ್ತಿಗೆ ಸಹಾಯವಾಗಬಹುದು. ಉದ್ಯೋಗ ಹುಡುಕುವಾಗ ನೀವು ದೀರ್ಘಾವಧಿಯಲ್ಲಿ ಮಾಡಬಹುದಾದ ಯಾವ ಕೆಲಸ ನಿಮಗೆ ಹೊಂದಾಣಿಕೆ ಆಗಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. 2025 ರಲ್ಲಿ ನಿಮಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ, ಆದರೆ ಇದಕ್ಕೆ ಕೂಡಾ ನೀವು ಬಹಳ ಶ್ರಮ ವಹಿಸಬೇಕು. ಕೆಲಸದ ಕ್ಷೇತ್ರದಲ್ಲಿ ಕೆಲವು ಅಪಾಯಗಳಿದ್ದು ಅದನ್ನು ಯಾವ ರೀತಿಯಲ್ಲಿ ಪರಿಹರಿಸಬಹುದು ಎಂಬ ಕಡೆ ಗಮನ ಹರಿಸಿ. ಕೆಲಸದ ಸ್ಥಳದಲ್ಲಿ ಘರ್ಷಣೆಗಳು ಉಂಟಾಗುವ ಸಾಧ್ಯತೆ ಇದೆ, ಎಚ್ಚರದಿಂದ ಪರಿಸ್ಥಿತಿಯನ್ನು ನಿಭಾಯಿಸಿ.
ಹಣಕಾಸು ಭವಿಷ್ಯ
2025 ರಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ ಆದರೆ ಹೆಚ್ಚು ಶ್ರೀಮಂತವಾಗಿರುವುದಿಲ್ಲ, ಆದ್ದರಿಂದ ಕೆಲಸ, ಹೂಡಿಕೆಗಳು ಮತ್ತು ವೆಚ್ಚಗಳನ್ನು ಎಚ್ಚರಿಕೆಯಿಂದ ಯೋಜಿಸಬೇಕು. ನಿಮ್ಮ ಎಲ್ಲಾ ಉಳಿತಾಯವನ್ನು ಒಂದೇ ಕಡೆ ಹೂಡಿಕೆ ಮಾಡಬೇಡಿ. ಬದಲಾಗಿ, ನೀವು ಸ್ಟಾಕ್‌ಗಳು, ಬಾಂಡ್‌ಗಳು, ರಿಯಲ್ ಎಸ್ಟೇಟ್, ಮ್ಯೂಚುಯಲ್ ಫಂಡ್‌ಗಳು ಅಥವಾ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಬಹುದು. ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದು ನಿಮ್ಮ ಮುಂದಿನ ವರ್ಷದ ಗುರಿಯಾಗಿರಬೇಕು.
ಪ್ರೀತಿ-ಪ್ರೇಮ, ಮದುವೆ ಭವಿಷ್ಯ
ಚೀನೀ ರಾಶಿಚಕ್ರದ ಪ್ರಕಾರ ಹಂದಿ ರಾಶಿಯವರು ಈ ವರ್ಷ ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಭಾವನಾತ್ಮಕವಾಗಿರುತ್ತಾರೆ. ಕೆಲಸದ ಸ್ಥಳಗಳು ಅಥವಾ ಸಾಮಾನ್ಯ ಸ್ನೇಹಿತರ ಮೂಲಕ ಸುಲಭವಾಗಿ ಪ್ರೀತಿಯನ್ನು ಕಂಡುಕೊಳ್ಳಬಹುದು. ಡೇಟಿಂಗ್ ಪ್ರಾರಂಭಿಸುತ್ತಿರುವವರಿಗೆ, 2025 ನಂಬಿಕೆ ಮತ್ತು ಬಲವಾದ ಬಂಧದ ಮೇಲೆ ಕೇಂದ್ರೀಕರಿಸುವ ವರ್ಷವಾಗಿದೆ. ನಿಮಗೆ ಬೇಕಾದುದನ್ನು ಮತ್ತು ನೀವು ಪರಸ್ಪರ ಏನನ್ನು ನಿರೀಕ್ಷಿಸುತ್ತೀರಿ ಎಂಬುದರ ಕುರಿತು ಇಬ್ಬರಿಗೂ ಸ್ಪಷ್ಟತೆ ಇರಬೇಕು. ಸಂಘರ್ಷವನ್ನು ತಪ್ಪಿಸಲು ಪರಸ್ಪರ ಸಂವಹನ ಮಾಡುವಾಗ ಜಾಗರೂಕರಾಗಿರಬೇಕು. ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಮಾತನಾಡಲು ಹಿಂಜರಿಯಬೇಡಿ. ಸಣ್ಣ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಬದಲಾಗಲು ಬಿಡಬೇಡಿ. ನಿಮ್ಮ ಸಂಗಾತಿಯನ್ನು ಗೌರವಿಸಿ.
ಆರೋಗ್ಯ ಭವಿಷ್ಯ
2025 ರಲ್ಲಿ ಆರೋಗ್ಯ ಚೆನ್ನಾಗಿರುತ್ತದೆ, ಆದರೂ ಯಾವುದೇ ವಿಚಾರದ ಬಗ್ಗೆ ನೀವು ನಿರ್ಲಕ್ಷ್ಯ ವಹಿಸುವಂತಿಲ್ಲ. ಲಿವರ್ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಕರುಳಿನ ಸಮಸ್ಯೆ ಕೂಡಾ ಉಂಟಾಗಬಹುದು. ನಿಮ್ಮ ಆಹಾರ ಪದ್ಧತಿ ಉತ್ತಮವಾಗಿದ್ದರೆ ಆರೋಗ್ಯ ಕೂಡಾ ಚೆನ್ನಾಗಿರುತ್ತದೆ. ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸಲು ಕೊಬ್ಬಿನಾಂಶ ಇರುವ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿ. ಹೆಚ್ಚು ಫೈಬರ್ ಹೊಂದಿರುವ ಆಹಾರವನ್ನು ಸೇವಿಸಬೇಕು. ಚರ್ಮದ ಬಗ್ಗೆ ಕೂಡಾ ನೀವು ಎಚ್ಚರ ವಹಿಸಬೇಕು. ಹವಾಮಾನ ಬದಲಾದಂತೆ ಸೂಕ್ತ ಉತ್ಪನ್ನಗಳನ್ನು ಬಳಸಿ ಚರ್ಮದ ಆರೈಕೆ ಮಾಡಬೇಕು. ಆರೋಗ್ಯಕರ ಚರ್ಮ ನಿಮ್ಮದಾಗಲು ರಕ್ತಪರಿಚಲನೆಗೆ ಸಹಾಯ ಮಾಡುವ ವ್ಯಾಯಾಮಗಳನ್ನು ಮಾಡಬೇಕು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.