logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Pitru Paksha Mela; ಪಿತೃಗಳಿಗೆ ತರ್ಪಣ ಬಿಡೋದಕ್ಕೆ ಗಯಾ, ಬೋಧ ಗಯಾ ಹೋಗುತ್ತೀರಾದರೆ, ಇಲ್ಲಿದೆ ಬಿಹಾರ ಸರ್ಕಾರದ ಪ್ರಯಾಣ ಪ್ಯಾಕೇಜ್‌ಗಳ ವಿವರ

Pitru Paksha Mela; ಪಿತೃಗಳಿಗೆ ತರ್ಪಣ ಬಿಡೋದಕ್ಕೆ ಗಯಾ, ಬೋಧ ಗಯಾ ಹೋಗುತ್ತೀರಾದರೆ, ಇಲ್ಲಿದೆ ಬಿಹಾರ ಸರ್ಕಾರದ ಪ್ರಯಾಣ ಪ್ಯಾಕೇಜ್‌ಗಳ ವಿವರ

Umesh Kumar S HT Kannada

Sep 10, 2024 05:59 PM IST

google News

ಪಿತೃಗಳಿಗೆ ತರ್ಪಣ ಬಿಡೋದಕ್ಕೆ ಗಯಾ, ಬೋಧ ಗಯಾ ಹೋಗುತ್ತೀರಾದರೆ, ಇಲ್ಲಿದೆ ಬಿಹಾರ ಸರ್ಕಾರದ ಪ್ರಯಾಣ ಪ್ಯಾಕೇಜ್‌ಗಳ ವಿವರ (ಸಾಂಕೇತಿಕ ಚಿತ್ರ)

  • Pitripaksha Mela 2024; ಈ ಸಲದ ಪಿತೃ ಪಕ್ಷದ ಅವಧಿಯಲ್ಲಿ ಪಿತೃಗಳಿಗೆ ತರ್ಪಣ ಬಿಡೋದಕ್ಕೆ ಗಯಾ, ಬೋಧ ಗಯಾ ಹೋಗುವ ಯೋಜನೆ ಇದ್ದರೆ, ಹೇಗೆ ಎಂದು ಚಿಂತಿಸಬೇಡಿ. ಬಿಹಾರ ಸರ್ಕಾರದ ಪ್ರಯಾಣ ಪ್ಯಾಕೇಜ್‌ಗಳ ವಿವರ ಇಲ್ಲಿದೆ ಗಮನಿಸಿ.

ಪಿತೃಗಳಿಗೆ ತರ್ಪಣ ಬಿಡೋದಕ್ಕೆ ಗಯಾ, ಬೋಧ ಗಯಾ ಹೋಗುತ್ತೀರಾದರೆ, ಇಲ್ಲಿದೆ ಬಿಹಾರ ಸರ್ಕಾರದ ಪ್ರಯಾಣ ಪ್ಯಾಕೇಜ್‌ಗಳ ವಿವರ (ಸಾಂಕೇತಿಕ ಚಿತ್ರ)
ಪಿತೃಗಳಿಗೆ ತರ್ಪಣ ಬಿಡೋದಕ್ಕೆ ಗಯಾ, ಬೋಧ ಗಯಾ ಹೋಗುತ್ತೀರಾದರೆ, ಇಲ್ಲಿದೆ ಬಿಹಾರ ಸರ್ಕಾರದ ಪ್ರಯಾಣ ಪ್ಯಾಕೇಜ್‌ಗಳ ವಿವರ (ಸಾಂಕೇತಿಕ ಚಿತ್ರ) (Bihar Tourism)

ಪಿತೃ ಪಕ್ಷ ಇನ್ನೇನು ಬಂದೇ ಬಿಡ್ತು. ಸಾಮಾನ್ಯವಾಗಿ ಪಿತೃ ಪಕ್ಷದಲ್ಲಿ ಹಿಂದುಗಳು ಪಿತೃಗಳಿಗೆ ಪಿಂಡದಾನ ಮಾಡಲು, ತರ್ಪಣ ಬಿಡಲು ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡುವುದು ವಾಡಿಕೆ. ಕರ್ನಾಟಕದಲ್ಲಿ ಗೋಕರ್ಣ, ಉತ್ತರಕ್ಕೆ ಹೋಗುವುದಾದರೆ ವಾರಾಣಸಿ (ಕಾಶಿ), ಗಯಾ, ಬೋಧ ಗಯಾದಲ್ಲಿ ಪಿಂಡ ಪ್ರದಾನ ಮಾಡಿದರೆ ಬಹಳ ವಿಶೇಷ. ಅನೇಕರು ಈಗಾಗಲೇ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಅಂದ ಹಾಗೆ, ಪಿತೃ ಪಕ್ಷ ಸೆಪ್ಟೆಂಬರ್ 17ಕ್ಕೆ ಶುರುವಾಗುತ್ತಿದ್ದು, ಅಕ್ಟೋಬರ್ 2 ರ ತನಕ ಇದೆ. ಈ ಅವಧಿಯಲ್ಲಿ ಶ್ರಾದ್ಧ ಕಾರ್ಯಗಳು, ಪಿತೃ ಕಾರ್ಯಗಳು ನಡೆಯುತ್ತವೆ. ಪಿತೃ ದೋಷ ನಿವಾರಣೆಗೆ ಬೇಕಾದ ಅಪರಕರ್ಮಗಳನ್ನು ದೋಷಹೊಂದಿರುವ ಕುಟುಂಬಸ್ಥರು ಮಾಡುತ್ತಾರೆ. ಈ ಬಾರಿ ಬೋಧ ಗಯಾಕ್ಕೆ ಹೋಗುವ ಆಲೋಚನೆ ಇದ್ದರೆ, ಬಿಹಾರದ ಪ್ರವಾಸೋದ್ಯಮ ಇಲಾಖೆಯ ಪ್ಯಾಕೇಜ್‌ ಪ್ರವಾಸವನ್ನು ಪರಿಗಣಿಸಬಹುದು.

ಪಿತೃಪಕ್ಷ ಆಚರಣೆ ಮತ್ತು ಸಂಪ್ರದಾಯಗಳು

ಪಿತೃ ಪಕ್ಷದಲ್ಲಿ, ವ್ಯಕ್ತಿಗಳು ತಮ್ಮ ಪಿತೃ ಆತ್ಮಗಳಿಗೆ ಶಾಂತಿ ಮತ್ತು ವಿಮೋಚನೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಅಪರಕರ್ಮ ವಿಧಿಗಳನ್ನು ಮಾಡುತ್ತಾರೆ. ಪ್ರಮುಖ ಆಚರಣೆಗಳಲ್ಲಿ ಶ್ರಾದ್ಧ, ತರ್ಪಣ ಮತ್ತು ಪಿಂಡ ದಾನ ಮುಂತದವು ಸೇರಿವೆ. ಈ ಆಚರಣೆಗಳನ್ನು ಗಯಾದಲ್ಲಿನ ಫಾಲ್ಗು ನದಿಯಂತಹ ಪವಿತ್ರ ಸ್ಥಳಗಳಲ್ಲಿ ನಡೆಸಲಾಗುತ್ತದೆ, ನಂತರ ಗಯಾದ ವಿಷ್ಣುಪಾದ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಆಚರಣೆಗಳು ಪೂರ್ವಜರಿಗೆ ಜನ್ಮ, ಜೀವನ ಮತ್ತು ಮರಣದ ಚಕ್ರದಿಂದ ವಿಮೋಚನೆಯನ್ನು ಪಡೆಯಲು ಅಂದರೆ ಮೋಕ್ಷ ಪಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಈ ಅವಧಿಯ ನಿರ್ಣಾಯಕ ಅಂಶವೆಂದರೆ ನಿರ್ದಿಷ್ಟ ಆಹಾರ ನಿರ್ಬಂಧಗಳು ಇವೆ. ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ, ಕಪ್ಪು ಉಪ್ಪು, ಕಪ್ಪು ಸಾಸಿವೆ, ಸೌತೆಕಾಯಿಗಳು, ಬದನೆಕಾಯಿ ಮತ್ತು ಮಸೂರ್ ದಾಲ್ ಮತ್ತು ಕಪ್ಪು ಉದ್ದಿನ ಬೇಳೆ ಸೇರಿದಂತೆ ಕೆಲವು ಪದಾರ್ಥಗಳ ಆಹಾರದಲ್ಲಿ ಬಳಸುವಂತೆ ಇಲ್ಲ. ಈ ಆಹಾರದ ಶಿಸ್ತು ಪಿತೃಗಳಿಗೆ ಸಲ್ಲಿಸುವ ಗೌರವದ ಸಂಕೇತ ಮತ್ತು ಆಚರಣೆಯ ಸಮಯದಲ್ಲಿ ಆಧ್ಯಾತ್ಮಿಕ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಸಾಧನವೆಂದು ಭಾವಿಸಲಾಗಿದೆ. ಸಾಮಾನ್ಯವಾಗಿ ಅವುಗಳನ್ನು ತಾಮಸ ಆಹಾರಗಳೆಂದು ಪರಿಗಣಿಸುತ್ತಾರೆ.

ಪಿತೃಪಕ್ಷ ಮೇಳ 2024; ವಿವಿಧ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ ಬಿಹಾರ ಪ್ರವಾಸೋದ್ಯಮ ಇಲಾಖೆ

ಪಿತೃಪಕ್ಷ ಮೇಳ 2024 (Pitra Paksha Mela 2024) ಬಿಹಾರ ಸರ್ಕಾರ ಆಯೋಜಿಸಿದ್ದು, ಅದರ ಪ್ರಮುಖ ಆಚರಣೆಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ವಿವಿಧ ಪ್ರಯಾಣ ಪ್ಯಾಕೇಜ್‌ಗಳನ್ನು ಬಿಹಾರ ಪ್ರವಾಸೋದ್ಯಮ ಇಲಾಖೆ ಪರಿಚಯಿಸಿದೆ,

ಈ ಪ್ಯಾಕೇಜ್‌ಗಳು ವಿಭಿನ್ನ ಆದ್ಯತೆಗಳನ್ನು ಪೂರೈಸುತ್ತವೆ. ವಿವಿಧ ಅವಧಿಗಳ ಪ್ಯಾಕೇಜ್‌ಗಳು ಬೇರೆ ಬೇರೆ ಮಾರ್ಗಗಳಲ್ಲಿ ಸಾಗುತ್ತದೆ. ಪ್ರಯಾಣ ಪ್ಯಾಕೇಜ್ ವಿವರ ಹೀಗಿದೆ

ಪ್ಯಾಕೇಜ್‌ ಎ (ಒಂದು ದಿನ) ; ಪಾಟ್ನಾ - ಪನ್‌ಪನ್‌- ಗಯಾ- ಪಾಟ್ನಾ

ಪ್ಯಾಕೇಜ್‌ ಬಿ (ಒಂದು ರಾತ್ರಿ ಎರಡು ಹಗಲು); ಪಾಟ್ನಾ - ಪನ್‌ಪನ್‌- ಗಯಾ- ಬೋಧ ಗಯಾ- ನಲಂದಾ - ರಾಯ್‌ಗರ್‌- ಪಾಟ್ನಾ

ಪ್ಯಾಕೇಜ್ ಸಿ ( ಒಂದು ದಿನ) ; ಗಯಾ - ಗಯಾ

ಪ್ಯಾಕೇಜ್ ಡಿ (ಒಂದು ರಾತ್ರಿ ಎರಡು ಹಗಲು): ಗಯಾದಿಂದ ತಡ ರಾತ್ರಿ, ಬೆಳಗ್ಗೆ ಮತ್ತು ಸಂಜೆ

ಪ್ಯಾಕೇಜ್‌ ಇ (ಒಂದು ರಾತ್ರಿ ಎರಡು ಹಗಲು): ಗಯಾ- ಬೋಧ ಗಯಾ- ರಾಯ್‌ಗರ್‌ - ನಲಂದಾ - ಗಯಾ

ಆನ್‌ಲೈನ್ ಪಿಂಡದಾನಕ್ಕೂ ಇದೆ ಅವಕಾಶ:

ಬಿಹಾರದ ವಿಷ್ಣು ಪಾದ ಮಂದಿರ, ಅಕ್ಷಯ ವಟ ಮತ್ತು ಫಲ್ಗು ನದಿಯಲ್ಲಿನ ಆಚರಣೆಗಳನ್ನು ಒಳಗೊಂಡಿರುವ ಆನ್‌ಲೈನ್ ಇ-ಪಿಂಡದಾನ ಪ್ಯಾಕೇಜ್ ಅನ್ನು ಆಯ್ಕೆ ಮಾಡುವವರಿಗೆ, ಒಟ್ಟು ವೆಚ್ಚ 23,000 ರೂಪಾಯಿ ಆಗಲಿದೆ. ಇದು ಪಂಡಿತರ ನೆರವು, ಪೂಜನ ಸಾಮಾಗ್ರಿ ಮತ್ತು ಆಚರಣೆಗಳ ವಿಡಿಯೊ ರೆಕಾರ್ಡಿಂಗ್ ಸೇರಿ ಎಲ್ಲಾ ಅಗತ್ಯ ಸೇವೆಗಳನ್ನು ಒಳಗೊಂಡಿದೆ ಎಂದು ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್ ಮಾಹಿತಿ ವಿವರಿಸಿದೆ.

ಹೆಚ್ಚಿನ ಮಾಹಿತಿ ಮತ್ತು ಬುಕ್ಕಿಂಗ್‌ಗೆ - https://tourism.bihar.gov.in/en/experiences/festivals-and-fairs/festivals/pitrapaksha

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ