logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜ್ಞಾನಾರ್ಜನೆ ಜೊತೆಗೆ ಇಷ್ಟಾರ್ಥಗಳು ಈಡೇರುತ್ತವೆ; ಶೃಂಗೇರಿ ಶಾರದಾ ಪೀಠದ ಇತಿಹಾಸ, ಗುರು ಪರಂಪರೆಯ ಬಗ್ಗೆ ಇಲ್ಲಿದೆ ಮಾಹಿತಿ

ಜ್ಞಾನಾರ್ಜನೆ ಜೊತೆಗೆ ಇಷ್ಟಾರ್ಥಗಳು ಈಡೇರುತ್ತವೆ; ಶೃಂಗೇರಿ ಶಾರದಾ ಪೀಠದ ಇತಿಹಾಸ, ಗುರು ಪರಂಪರೆಯ ಬಗ್ಗೆ ಇಲ್ಲಿದೆ ಮಾಹಿತಿ

Suma Gaonkar HT Kannada

Aug 26, 2024 02:54 PM IST

google News

ಶೃಂಗೇರಿ

    • ದಕ್ಷಿಣ ಭಾರತದ ಮೊಟ್ಟಮೊದಲ ಪೀಠವೆಂದರೆ ಶೃಂಗೇರಿ ಶಾರದ ಪೀಠ. ಶ್ರೀ ಶಾರದಾ ಪೀಠವು ಶ್ರೀ ಶಂಕರಭಗವತ್ಪಾದರು ಸ್ಥಾಪಿಸಿದ ಮೊದಲ ಮತ್ತು ಅತ್ಯಂತ ಪ್ರಸಿದ್ಧವಾದ ಪೀಠದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಗಮನಿಸಿ. 
ಶೃಂಗೇರಿ
ಶೃಂಗೇರಿ (ವಿಕಿಪಿಡಿಯಾ)

ಕಲಿಯುಗದಲ್ಲಿ ಸನಾತನ ಧರ್ಮದ ಪ್ರಚಾರಕ್ಕಾಗಿ ಭಗವಾನ್ ಶಂಕರರು ಈ ಭೂಮಿಯಲ್ಲಿ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದ್ದರು ಎಂದು ಖ್ಯಾತ ಅಧ್ಯಾತ್ಮಿಕ, ಪಂಚಾಂಗ ಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ಹೇಳಿದ್ದಾರೆ. ಶಂಕರಾಚಾರ್ಯರು ವೇದಗಳು ವೇದಾಂಗಗಳು ಶಾಸ್ತ್ರಗಳನ್ನು ಮುಗಿಸಿ, ತಪಸ್ಸನ್ನಾಚರಿಸಿ ಅದ್ವೈತ ಸಿದ್ಧಾಂತವನ್ನು ಸ್ಥಾಪಿಸಿದರು. ಅದ್ವೈತ ಸಿದ್ಧಾಂತವನ್ನು ಸ್ಥಾಪಿಸುವ ಸಲುವಾಗಿ ನಾಲ್ಕು ಪ್ರದೇಶಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದರು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ದಕ್ಷಿಣ ಭಾರತದ ಮೊಟ್ಟಮೊದಲ ಪೀಠ

ದಕ್ಷಿಣ ಭಾರತದ ಮೊಟ್ಟಮೊದಲ ಪೀಠವೆಂದರೆ ಶೃಂಗೇರಿ ಶಾರದ ಪೀಠ. ಶ್ರೀ ಶಾರದಾ ಪೀಠವು ಶ್ರೀ ಶಂಕರಭಗವತ್ಪಾದರು ಸ್ಥಾಪಿಸಿದ ಮೊದಲ ಮತ್ತು ಅತ್ಯಂತ ಪ್ರಸಿದ್ಧವಾದ ಪೀಠ. ಶ್ರೀಸುರೇಶ್ವರಾಚಾರ್ಯರಿಂದ ಇಲ್ಲಿಯವರೆಗೆ ಅಖಂಡ ಗುರುಗಳ ಸಾಲಿನಿಂದ ಈ ಪೀಠ ಕಂಗೊಳಿಸುತ್ತಿದೆ. ಈ ಪೀಠಕ್ಕೆ ಬಂದ ಯತಿವರೇಣ್ಯರೆಲ್ಲರೂ ಶ್ರೀ ಶಂಕರಭಗವತ್ಪಾದರು ಹೇಳಿದ ಮಾರ್ಗವನ್ನು ಅನುಸರಿಸಿ ಜಗತ್ತಿಗೆ ಸನ್ಮಾರ್ಗವನ್ನು ಬೋಧಿಸುವುದಲ್ಲದೆ ತಾವೇ ಸದಾ ಧರ್ಮನಿಷ್ಠರಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.

ಗುರು ಪರಂಪರೆ

ಈ ಪೀಠದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಶ್ರೀ ಸುರೇಶ್ವರಾಚಾರ್ಯರು, ಶ್ರೀವಿದ್ಯಾತೀರ್ಥ ಮಹಾಸ್ವಾಮಿಗಳು, ಶ್ರೀ ಭಾರತೀ ತೀರ್ಥಮಹಾಸ್ವಾಮಿಗಳು, ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳು, ಶ್ರೀ ನೃಸಿಂಹ ಭಾರತಿ.ಮಹಾಸ್ವಾಮಿಗಳು, ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳು, ಶ್ರೀಚಂದ್ರಶೇಖರಭಾರತೀ ಮಹಾಸ್ವಾಮಿಗಳು ಮತ್ತು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಹೀಗೆ ಎಲ್ಲ ಯತಿಶ್ರೇಷ್ಠರು ಎಂದೆಂದಿಗೂ ಪೂಜ್ಯರು.

ಪ್ರಸ್ತುತ ಶ್ರೀ ಶಾರದಾ ಪೀಠದಲ್ಲಿ ಆಸೀನರಾಗಿರುವ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಅಖಂಡ ಗುರುಗಳ ಪರಂಪರೆಯನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ತತ್ಕಾರಕ ಕಮಲದ ವಂಶಸ್ಥರು. ಶ್ರೀ ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳು ಸರ್ವರಿಗೂ ಪರಮಪೂಜ್ಯರು. ಇಂತಹ ಗುರುಪರಂಪರೆಯಲ್ಲಿ ಬಂದ ಎಲ್ಲ ಗುರುಗಳನ್ನು ಸ್ತುತಿಸುತ್ತ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಆಧ್ಯಾತ್ಮ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳಿದರು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ 94949 81000

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ