Money Saving: ಹಣ ಉಳಿತಾಯ ಮಾಡೋದ್ರಲ್ಲಿ ಈ ರಾಶಿಯವರು ಎತ್ತಿದ ಕೈ; ಯಾವೆಲ್ಲಾ ರಾಶಿಯವರಿಗೆ ದುಡ್ಡು ಉಳಿಸೋ ಯೋಗ ಇದೆ ನೋಡಿ
Dec 05, 2023 02:30 PM IST
ಸಾಂಕೇತಿಕ ಚಿತ್ರ
- ಹಣ ಉಳಿತಾಯ ಮಾಡ್ಬೇಕು ಅನ್ನೋ ಕನಸು ಎಲ್ಲರಿಗೂ ಇರುತ್ತೆ, ಆದ್ರೆ ಎಲ್ಲರ ಕೈಯಲ್ಲೂ ದುಡ್ಡು ನಿಲ್ಲೋಲ್ಲ. ಜ್ಯೋತಿಷ್ಯದ ಪ್ರಕಾರ ನೋಡಿದ್ರೆ ಈ ಕೆಲವು ರಾಶಿಯವರು ಹಣ ಉಳಿತಾಯ ಮಾಡೋದ್ರಲ್ಲಿ ನಿಸ್ಸೀಮರಂತೆ. ಹಾಗಾದ್ರೆ ಯಾವೆಲ್ಲಾ ರಾಶಿಯವರು ಹಣ ಉಳಿಸ್ತಾರೆ ನೋಡಿ.
ʼನಂಗೆ ದುಡ್ ಮಾಡ್ಬೇಕು ಅನ್ನೋದು ಆಸೆ, ಆದ್ರೆ ಕೈಯಲ್ಲಿ ದುಡ್ಡೇ ನಿಲ್ಲೋಲ್ಲ ಅಂತ ಗೋಳು ತೋಡಿಕೊಳ್ಳುವವರು ಹಲವರು. ಇನ್ನೂ ಕೆಲವರು ಸ್ವಲ್ಪ ಹಣದಲ್ಲೇ ಉಳಿತಾಯ ಮಾಡುವ ಮನೋಭಾವ ಇರಿಸಿಕೊಂಡಿರುತ್ತಾರೆ. ಹಣ ಉಳಿತಾಯ ಮಾಡೋದು ಎಲ್ಲರಿಂದಲೂ ಸಾಧ್ಯವಿಲ್ಲ. ಆದ್ರೆ ಹಣ ಉಳಿತಾಯಕ್ಕೂ ನಮ್ಮ ರಾಶಿಗೂ ಸಂಬಂಧ ಇದೆ ಅಂದ್ರೆ ನಂಬಲೇಬೇಕು. ಜ್ಯೋತಿಷ್ಯದ ಪ್ರಕಾರ ಈ ಕೆಲವು ರಾಶಿಯವರು ಹಣ ಉಳಿತಾಯ ಮಾಡೋದ್ರರಲ್ಲಿ ಪಂಟರಂತೆ. ಹಾಗಾದ್ರೆ ಯಾವೆಲ್ಲಾ ರಾಶಿಯವರು ಹಣ ಉಳಿಸ್ತಾರೆ ನೋಡಿ.
ತಾಜಾ ಫೋಟೊಗಳು
ಮಕರ: ಮಕರ ರಾಶಿಯವರು ತಮ್ಮಲ್ಲಿ ಹೆಚ್ಚು ಹೆಚ್ಚು ಹಣ ಸಂಗ್ರಹವಾಗಿರುವುದನ್ನು ನೋಡಿ ಸಂತಸ ಪಡುತ್ತಾರೆ. ಇವರು ಚಿಕ್ಕ ವಯಸ್ಸಿನಿಂದಲೂ ಉದ್ಯೋಗದ ಮೇಲೆ ಗಮನ ಹರಿಸುವ ಮನೋಭಾವದವರು. ಬಾಲ್ಯದಲ್ಲೇ ಬದಲಾದ ಕೆಲಸದ ನೀತಿಯೊಂದಿಗೆ ತಮ್ಮ ವೃತ್ತಿಜೀವನವನ್ನಿ ನಿರ್ಧರಿಸುತ್ತಾರೆ ಹಾಗೂ ಅದರ ಮೇಲೆ ಗಮನ ಹರಿಸುತ್ತಾರೆ. ಸಂಪತ್ತು ಕ್ರೋಢೀಕರಣ ಈ ರಾಶಿಯವರಿಗೆ ಸುಲಭವಾಗುತ್ತದೆ.
ಕುಂಭರಾಶಿ: ವಿಶಿಷ್ಟ ಗುಣಲಕ್ಷಣಗಳ ಹೊರತಾಗಿಯೂ ಈ ರಾಶಿಯವರು ಹಣವನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಇವರಲ್ಲಿ ಯಾವುದೇ ವಸ್ತು ಅಥವಾ ವಿಷಯವನ್ನು ಹಣಕ್ಕೆ ಪರಿವರ್ತಿಸುವ ಸಾಮರ್ಥ್ಯವಿದೆ. ಇದು ಸುರಕ್ಷಿತ ಆರ್ಥಿಕ ಕ್ರಮಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ.
ಕನ್ಯಾರಾಶಿ: ಈ ರಾಶಿಯವರು ಕ್ರಮಬದ್ಧ ಜೀವನದಿಂದ ಹೆಸರು ಗಳಿಸಿದ್ದಾರೆ. ಇದು ನಿಖರವಾಗಿ ಹಾಗೂ ಪ್ರಾಯೋಗಿಕವಾಗಿದ್ದಾರೆ. ಇವರು ತಮ್ಮ ಕೆಲಸಗಳನ್ನು ಎಚ್ಚರಿಕೆಯಿಂದ ಪರಿಗಣಿಸುತ್ತಾರೆ. ವೈಯಕ್ತಿಕ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಇವರು ಸದಾ ಹಣ ಉಳಿಸುವ ಮಾರ್ಗಗಳ ಬಗ್ಗೆ ಗಮನ ಹರಿಸುತ್ತಾರೆ.
ವೃಷಭ ರಾಶಿ: ಈ ರಾಶಿಯವರಿಗೆ ಸ್ಥಿರತೆ ಅತ್ಯುನ್ನತವಾಗಿದೆ. ಇವರು ಜೀವನದಲ್ಲಿ ಉತ್ತಮವಾದ ವಿಚಾರಗಳನ್ನು ಮೆಚ್ಚುತ್ತಾರೆ. ಇವರು ಆರ್ಥಿಕವಾಗಿ ಸುರಕ್ಷಿತ ಹಾಗೂ ಸದೃಢರಾಗಿದ್ದಾಗ ಮಾತ್ರ ಖರ್ಚು ಮಾಡುತ್ತಾರೆ. ಖರ್ಚು ಮಾಡುವ ಮೊದಲು ಯೋಚಿಸುತ್ತಾರೆ. ಈ ರಾಶಿಯವರು ಹಣ ಉಳಿಸಲು ಹೂಡಿಕೆ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.
ತುಲಾ: ಈ ರಾಶಿಯವರು ಐಷಾರಾಮಿ ಬದುಕನ್ನು ಇಷ್ಟಪಡುತ್ತಾರೆ. ಆದರೆ ಖರ್ಚಿನ ಮಿತಿಗೆ ಒಂದು ಗಡಿ ಹಾಕಿಕೊಂಡಿರುತ್ತಾರೆ. ವಿವೇಚನಾಶೀಲ ವೆಚ್ಚದ ಬಗ್ಗೆ ಮಾರ್ಗದರ್ಶನವನ್ನು ಬಯಸುತ್ತಾರೆ. ಆರ್ಥಿಕ ಸಮತೋಲನವನ್ನು ಕಾಪಾಡಿಕೊಂಡು ತಮ್ಮ ಖರ್ಚಿನ ಮಿತಿಯಲ್ಲಿ ಸಂತಸದ ಜೀವನದ ನಡೆಸುತ್ತಾರೆ.
ಇದನ್ನೂ ಓದಿ
19** ರಲ್ಲಿ ಜನಿಸಿದವರಿಗೆ 2024 ಅತ್ಯಂತ ಶುಭಪ್ರದ: ನೀವು ಜನಿಸಿದ ವರ್ಷಕ್ಕೆ 2024 ಹೇಗಿದೆ? ಜ್ಯೋತಿಷಿ ಸುರಭಿ ನೀಡುವ ಉತ್ತರ ಇದು
Love Horoscope: ನಿಮ್ದು ಈ ರಾಶಿನಾ, ಹಾಗಾದ್ರೆ ಖಂಡಿತ ನಿಮ್ಗೆ ಹಳೇಪ್ರೇಮಿ ಜೊತೆ ಲವ್ ಆಗುತ್ತೆ, ಅದಕ್ಕೆ ಕಾರಣ ಇಲ್ಲಿದೆ
Astrology: ಈ ರಾಶಿಯವರಿಗೆ ಟ್ರಾವೆಲ್ ಮಾಡೋದು ಅಂದ್ರೇನೇ ಅಲರ್ಜಿಯಂತೆ; ಇದ್ರಲ್ಲಿ ನಿಮ್ಮ ರಾಶಿನೂ ಇದ್ಯಾ ನೋಡಿ