logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mandala Pooja: ಅಯ್ಯಪ್ಪ ಸ್ವಾಮಿಗೆ ಬಲು ವಿಶೇಷ ಮಂಡಲ ಪೂಜೆ; ಈ ವಿಶೇಷ ಧಾರ್ಮಿಕ ಆಚರಣೆಯ ಮಹತ್ವ, ಪೂಜಾಕ್ರಮದ ವಿವರ ಇಲ್ಲಿದೆ

Mandala Pooja: ಅಯ್ಯಪ್ಪ ಸ್ವಾಮಿಗೆ ಬಲು ವಿಶೇಷ ಮಂಡಲ ಪೂಜೆ; ಈ ವಿಶೇಷ ಧಾರ್ಮಿಕ ಆಚರಣೆಯ ಮಹತ್ವ, ಪೂಜಾಕ್ರಮದ ವಿವರ ಇಲ್ಲಿದೆ

Reshma HT Kannada

Dec 04, 2023 07:47 AM IST

google News

ಸಾಂಕೇತಿಕ ಚಿತ್ರ

    • ಕೇರಳದ ಶಬರಿಮಲೆ ದೇಗುಲದಲ್ಲಿ ವಿಶೇಷವಾಗಿ ಮಂಡಲಪೂಜೆಯನ್ನು ನೆರವೇರಿಸಲಾಗುತ್ತದೆ. ಇದು ಅಯ್ಯಪ್ಪ ಭಕ್ತರು ಆಚರಿಸುವ ಮಂಡಲ ಕಲಾಂ ಎಂದು ಕರೆಯಲ್ಪಡುವ 41 ದಿನಗಳ ಕಠಿಣ ವ್ರತದ ಅಂತ್ಯವನ್ನು ಸೂಚಿಸುತ್ತದೆ. ಮಾಲಾಧಾರಿಗಳು 41 ದಿನಗಳ ಕಠಿಣ ವ್ರತ ಮಾಡಿ, ಕೊನೆಯ ದಿನ ಮಂಡಲಪೂಜೆ ಮಾಡುತ್ತಾರೆ. ಇದರ ಮಹತ್ವ, ಪೂಜಾಕ್ರಮಗಳ ವಿವರ ಇಲ್ಲಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (TOI)

ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿ ಅಯ್ಯಪ್ಪ ಭಕ್ತರು ಮಾಲಾಧಾರಣೆ ಮಾಡುವ ಮೂಲಕ ವ್ರತ ಆಚರಿಸಿ ಅಯ್ಯಪ್ಪ ಸನ್ನಿಧಾನ ಶಬರಿಮಲೆಗೆ ತೆರಳಿ ದೇವರ ಕೃಪೆಗೆ ಪಾತ್ರರಾಗುವುದು ಸಹಜ. ದೇಶದಾದ್ಯಂತ ಭಕ್ತರು ಈ ಸಮಯದಲ್ಲಿ ಮಾಲೆ ಧರಿಸುತ್ತಾರೆ. ನೇಮ, ನಿಷ್ಠೆಯನ್ನು ಪಾಲಿಸುವ ಮೂಲಕ ವ್ರತ ಆಚರಿಸುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕೇರಳದ ಶಬರಿಮಲೆಯಲ್ಲಿ ಪ್ರತಿವರ್ಷ ಮಂಡಲ ಪೂಜಾ ನೆರವೇರುತ್ತದೆ. ಅಯ್ಯಪ್ಪ ಭಕ್ತರು ಇದನ್ನು ಮಂಡಲ ಕಲಂ ಎಂದು ಕರೆಯುತ್ತಾರೆ. ಇದು 41 ದಿನಗಳ ಕಠಿಣ ವ್ರತದ ಅಂತ್ಯವನ್ನು ಸೂಚಿಸುತ್ತದೆ.

ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುವ ಎರಡು ಪ್ರಮುಖ ಕಾರ್ಯಕ್ರಮಗಳಾದ ʼಮಕರ ವಿಳಕ್ಕುʼ ಹಾಗೂ ಮಂಡಳ ಪೂಜೆಯು ಕೇರಳ ಹಾಗೂ ನೆರೆಹೊರೆಯ ರಾಜ್ಯದ ಜನರನ್ನು ಸೆಳೆಯುತ್ತದೆ. ಈ ಸಮಯದಲ್ಲಿ ಹಲವು ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ.

2023ರಲ್ಲಿ ಮಂಡಲ ಪೂಜೆ ಯಾವಾಗ

ಈ ವರ್ಷ ನವೆಂಬರ್‌ 17ರ ಶುಕ್ರವಾರದಿಂದ ಮಂಡಲ ಕಲಂ ಆರಂಭವಾಗಿದೆ. ಡಿಸೆಂಬರ್‌ 27 ರಂದು ಮಂಡಲ ಪೂಜೆ ಮುಕ್ತಾಯವಾಗುತ್ತದೆ. ಮಲೆಯಾಳಂನ ವೃಶ್ಚಿಕ ಮಾಸದಲ್ಲಿ ಆರಂಭವಾಗುವ ಮಂಡಲ ಕಲಂ ಧನು ಮಾಸದಲ್ಲಿ ಅಂತ್ಯವಾಗುತ್ತದೆ. ಸಂಪ್ರದಾಯದಂತೆ ಮಂಡಲ ಪೂಜೆಯ ಸಮಯದಲ್ಲಿ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಗುರುವಾಯೂರು ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ಈ ಸಮಯದಲ್ಲಿ ಗುರುವಾಯೂರು ದೇವಾಲಯದಲ್ಲಿ ವಿಶೇಷ ಅಭಿಷೇಕ ಪೂಜೆ ನೆರವೇರುತ್ತದೆ.

ಮಂಡಲ ಪೂಜಾ ಮಹತ್ವ

ಮಂಡಲ ಪೂಜೆ ಮತ್ತು ಮಕರ ವಿಳಕ್ಕು ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುವ ಎರಡು ಅತ್ಯಂತ ಪ್ರಸಿದ್ಧ ಪೂಜಾ ಕಾರ್ಯಕ್ರಮಗಳಾಗಿವೆ. ಮಂಡಲ ಪೂಜೆಯ ಮಹತ್ವವನ್ನು ಹಲವಾರು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮಂಡಲ ಪೂಜೆಯನ್ನು ಮಾಡುವುದರಿಂದ ವ್ಯಕ್ತಿಯ ಜೀವನವು ಸಂಪೂರ್ಣ ಬದಲಾಗುತ್ತದೆ ಎಂದು ನಂಬಲಾಗುತ್ತದೆ. ಮಂಡಲ ಪೂಜೆಯನ್ನು ವಯಸ್ಸು ಹಾಗೂ ಲಿಂಗವನ್ನು ಲೆಕ್ಕಿಸದೇ ಯಾವುದೇ ವ್ಯಕ್ತಿ ಕೂಡ ಮಾಡಬಹುದು. ಈ ಪೂಜೆಯನ್ನು ಅತ್ಯಂತ ಶ್ರದ್ಧೆ ಹಾಗೂ ಸಮರ್ಪಣ ಭಾವದಿಂದ ಮಾಡುವವರಿಗೆ ಅಯ್ಯಪ್ಪ ಇಷ್ಟಾರ್ಥ ಸಿದ್ಧಿಸುತ್ತಾನೆ ಎಂಬುದು ನಂಬಿಕೆ.

ಯಾರು ಮಂಡಲ ಪೂಜೆಯನ್ನು ಪೂರ್ಣಗೊಳಿಸುತ್ತಾನೋ ಅವನು ಬಯಸಿದ ಎಲ್ಲವನ್ನೂ ಪಡೆಯಲು ಸಾಧ್ಯ, ದೇವರು ಅವರನ್ನು ಅನುಗ್ರಹಿಸುತ್ತಾರೆ ಎಂದು ನಂಬಲಾಗಿದೆ. ಮಂಡಳ ಪೂಜೆಯು ಮೊದಲೇ ಹೇಳಿದರೆ 41 ದಿನಗಳ ಕಠಿಣ ವ್ರತವನ್ನು ಆಚರಿಸುವ ದಿನಗಳಾಗಿದೆ. ಈ ಪೂಜೆಯ ಸಮಯದಲ್ಲಿ ಭಕ್ತರು ಕಟ್ಟುನಿಟ್ಟಿನ ಉಪವಾಸವನ್ನು ಆಚರಿಸಬೇಕಾಗುತ್ತದೆ. ಈ ಉಪವಾಸವು ಆತ್ಮ, ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಪೂಜಾ ವಿಧಾನ

* ಉಪವಾಸವು ಮಂಡಲ ಪೂಜೆಯ ಪ್ರಮುಖ ಭಾಗವಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಜನರು ಪೂರ್ಣ ಸಮರ್ಪಣೆ ಮತ್ತು ಕಟ್ಟುನಿಟ್ಟಾಗಿ ಆ ವತ್ರವನ್ನು ಆಚರಿಸುತ್ತಾರೆ.

* ಅಯ್ಯಪ್ಪ ಭಕ್ತರು ಕಠಿಣ ಕ್ರಮವನ್ನು ಅನುಸರಿಸುವುದು ಮುಖ್ಯವಾಗಿದೆ ಮತ್ತು ಶಬರಿಮಲೆ ದೇಗುಲಕ್ಕೆ ತೀರ್ಥಯಾತ್ರೆ ಮಾಡುವುದು ಕಡ್ಡಾಯವಾಗಿದೆ.

* ಮಂಡಲ ಪೂಜೆಯ ಸಮಯದಲ್ಲಿ ಭಕ್ತರು ಶ್ರದ್ಧಾ ಭಕ್ತಿಯ ಜೊತೆಗೆ ಸರಳ ಜೀವನ ನಡೆಸಲು ಸಲಹೆ ನೀಡಲಾಗುತ್ತದೆ.

* ಮಾಲೆ ಧರಿಸಿದ ಅಯ್ಯಪ್ಪ ಭಕ್ತರು ರುದ್ರಾಕ್ಷಿ ಹಾಗೂ ತುಳಸಿ ಮಾಲೆಯೊಂದಿಗೆ ಅಯ್ಯಪ್ಪನ ಪೋಟೊ ಇರುವ ಪದಕವನ್ನು ಧರಿಸುತ್ತಾರೆ. ಮಾಲಾಧಾರಣೆ ಮಾಡಿದ ಭಕ್ತರನ್ನು ಸ್ವಾಮಿ ಅಥವಾ ಅಯ್ಯಪ್ಪನ್‌ ಎಂದು ಕರೆಯಲಾಗುತ್ತದೆ.

* ಈ ದಿನಗಳಲ್ಲಿ ವ್ರತ ಆಚರಿಸುವ ಜನರು ತಮ್ಮ ದೇಹ ಮತ್ತು ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

* 41 ದಿನಗಳ ಕಾಲ ಭಕ್ತರು ಲೌಕಿಕ ಭೋಗದಿಂದ ದೂರವಿರಬೇಕು.

* ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿರಬೇಕು.

* ದಿನದಲ್ಲಿ ಎರಡು ಬಾರಿ ಪ್ರಾರ್ಥನೆ ಮಾಡುವುದು ಮುಖ್ಯ. ಈ ಸಮಯದಲ್ಲಿ ಯಾವುದೇ ರೀತಿ ಲೈಂಗಿಕ ಚಟುವಟಿಕೆಯು ಸಲ್ಲ. ಶಾಂತವಾಗಿರಬೇಕು. ಸಾಧ್ಯವಾದಷ್ಟು ಕೋಪವನ್ನು ತಗ್ಗಿಸಬೇಕು.

* ಮಾಲಾಧಾರಣೆ ಮಾಡಿದ ವ್ಯಕ್ತಿಗಳು ಕಪ್ಪು ಬಟ್ಟೆಯನ್ನೇ ಧರಿಸಬೇಕು. ಇರುಮುಡಿ ಅಥವಾ ಕೇತುನಿರಾವನ್ನು ತಲೆಯ ಮೇಲೆ ಹೊತ್ತು ಅಯ್ಯಪ್ಪನ ಸನ್ನಿಧಾನ ತಲುಪಬೇಕು. ಇರುಮುಡಿಯಲ್ಲಿ ಅಕ್ಕಿ ಮತ್ತು ತುಪ್ಪ ತುಂಬಿದ ಪವಿತ್ರ ತೆಂಗಿನಕಾಯಿ ಇರುತ್ತದೆ. ಶಬರಿಮಲೆ ತಲುಪಿ ಇರುಮುಡಿಯನ್ನು ಅಯ್ಯಪ್ಪನಿಗೆ ಅರ್ಪಿಸಲಾಗುತ್ತದೆ.

* ಕೆಲವರು ನೆಲದ ಮೇಲೆ ಮಲಗುವ ಪ್ರತಿಜ್ಞೆ ತೆಗೆದುಕೊಳ್ಳುತ್ತಾರೆ. ಹಾಸಿಗೆಯ ಮೇಲೆ ಮಲಗುವುದನ್ನು ತಪ್ಪಿಸುತ್ತಾರೆ ಹಾಗೂ ಬರಿಗಾಲಿನಲ್ಲಿ ದೇವಸ್ಥಾನದವರೆಗೆ ನಡೆದುಹೋಗುತ್ತಾರೆ.

* ಮಕರ ಸಂಕ್ರಾಂತಿ ದಿನವನ್ನು ಮಕರವಿಳಕ್ಕು ಎಂದೂ ಕರೆಯಲ್ಪಡುವ ಮಂಡಲ ಪೂಜೆಯ ಸಮಯದಲ್ಲಿ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. 1 ರಿಂದ 9 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಂಡಲ ಪೂಜೆ ನೆರವೇರಿಸಬಹುದು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ