ಹಣದ ಸಮಸ್ಯೆ ಕಾಡ್ತಿದ್ರೆ, ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಲಕ್ಷ್ಮೀದೇವಿ ಅನುಗ್ರಹ ಹೊಂದಲು ಅರಿಸಿನವನ್ನು ಹೀಗೆ ಬಳಸಿ
Jan 09, 2024 01:00 PM IST
ಅರಿಸಿನ
- ನೀವು ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದು ಇದರಿಂದ ಮುಕ್ತಿ ಹೊಂದಲು ಬಯಸಿದರೆ, ನಿಮ್ಮ ಆದಾಯ ಹೆಚ್ಚಬೇಕು ಎಂದುಕೊಂಡಿದ್ದರೆ ಅದಕ್ಕೆ ಅರಿಸಿನದಲ್ಲಿದೆ ಪರಿಹಾರ. ಅರಿಸಿನವನ್ನು ಹೀಗೆ ಬಳಸುವುದರಿಂದ ನಿಮಗೆ ಲಕ್ಷ್ಮೀದೇವಿ ಅನುಗ್ರಹ ಸಿಗುವುದು ಖಂಡಿತ.
ಅರಿಶಿನ, ಪ್ರತಿಯೊಂದ ಅಡುಗೆಮನೆಯಲ್ಲೂ ಸಿಗುವ ಸಾಮಾನ್ಯ ಪದಾರ್ಥಗಳಲ್ಲಿ ಒಂದು. ಇದು ಅಡುಗೆಯಿಂದ ಹಿಡಿದು ಪೂಜೆಯವರೆಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಅರಿಶಿನವು ಅನೇಕ ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಸಂಪತ್ತನ್ನು ಆಕರ್ಷಿಸಲು ಮತ್ತು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಕೂಡ ಇದನ್ನು ಬಳಸಲಾಗುತ್ತದೆ.
ತಾಜಾ ಫೋಟೊಗಳು
ವಿವಿಧ ಸಂಸ್ಕೃತಿಗಳಲ್ಲಿ ಅರಿಸಿನವನ್ನು ಶುದ್ಧತೆ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರ ಚಿನ್ನದ ಬಣ್ಣವು ಸೂರ್ಯನೊಂದಿಗೆ ಸಂಪರ್ಕ ಹೊಂದಿದೆ. ಜೀವನ ಮತ್ತು ಸಮೃದ್ಧಿಯ ಸಾರ್ವತ್ರಿಕ ಸಂಕೇತ ಇದಾಗಿದೆ. ಅರಿಶಿನವನ್ನು ಅಡುಗೆಯಲ್ಲಿ ಮಾತ್ರವಲ್ಲದೆ ಆಚರಣೆಗಳು, ಸಮಾರಂಭಗಳು ಮತ್ತು ಮನೆಮದ್ದುಗಳಲ್ಲಿ ಬಳಸಲಾಗುತ್ತದೆ.
ಅರಿಶಿನವು ಶುಂಠಿ ಕುಟುಂಬಕ್ಕೆ ಸೇರಿದ ಕರ್ಕುಮಾ ಲಾಂಗಾ ಸಸ್ಯದ ಮೂಲದಿಂದ ಹೊರತೆಗೆಯಲಾಗುತ್ತದೆ. ಪ್ರಪಂಚದಾದ್ಯಂತದ ಅನೇಕ ಸಂಸ್ಕೃತಿಗಳಲ್ಲಿ ಇದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಅರಿಶಿನದಿಂದ ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಸಂತೋಷ ಮತ್ತು ನೆಮ್ಮದಿ ಹೆಚ್ಚುತ್ತದೆ.
ಇದನ್ನೂ ಓದಿ: Temple Rules: ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ತಪ್ಪದೇ ಅನುಸರಿಸಬೇಕಾದ ಕ್ರಮಗಳಿವು
ಆರ್ಥಿಕ ಸಮೃದ್ಧಿಗಾಗಿ
ವಾಸ್ತುಶಾಸ್ತ್ರದ ಪ್ರಕಾರ ಹಳದಿ ಅಥವಾ ಕೆಂಪು ಬಟ್ಟೆಯಲ್ಲಿ ಅರಿಶಿನದ ಉಂಡೆಯನ್ನು ಕಟ್ಟಿ ಹಣದ ಲಾಕರ್‌ನಲ್ಲಿಟ್ಟರೆ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ.
ಹಣ ಉಳಿತಾಯಕ್ಕೆ ನೀವು ತೊಂದರೆ ಪಡುತ್ತಿದ್ದರೆ, ಅನಾವಶ್ಯಕ ಖರ್ಚು, ವೆಚ್ಚಗಳು ಪದೇ ಪದೇ ಎದುರಾದರೆ ಅದನ್ನು ಪರಿಹರಿಸಿಕೊಳ್ಳಲು ಈ ಮಾರ್ಗ ಅನುಸರಿಸುವುದು ಉತ್ತಮ. ರೋಮಾಂಚಕ ಹಳದಿ ಬಣ್ಣವು ಸಮೃದ್ಧಿಯನ್ನು ಸಂಕೇತಿಸುತ್ತದೆ. ಸಂಪತ್ತನ್ನು ಸಂಗ್ರಹಿಸಲು ಮತ್ತು ಹೊಸ ಆದಾಯದ ಮೂಲಗಳನ್ನು ತೆರೆಯಲು ಸಹಾಯ ಮಾಡುತ್ತದೆ.
ಲಕ್ಷ್ಮೀದೇವಿಯ ಕೃಪೆಗಾಗಿ
ಲಕ್ಷ್ಮೀದೇವಿಯು ಸಂಪತ್ತಿನ ಅಧಿಪತಿ. ಅಮ್ಮನ ಕೃಪೆ ಇದ್ದರೆ ಜೀವನದಲ್ಲಿ ಯಾವುದೇ ಕೊರತೆಯು ಎದುರಾಗುವುದಿಲ್ಲ. ಲಕ್ಷ್ಮೀದೇವಿಯ ದಿವ್ಯದೃಷ್ಟಿ ನಮ್ಮ ಮೇಲೆ ಬಿದ್ದರೆ ಸಂಪತ್ತು ವೃದ್ಧಿಯಾಗುತ್ತದೆ. ವಾಸ್ತು ಪ್ರಕಾರ ಅರಿಸಿನದಲ್ಲಿ ಪವಿತ್ರ ಸ್ವಸ್ತಿಕ್ ಚಿಹ್ನೆಯನ್ನು ರಚಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿಯನ್ನು ತರುವ ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ. ಹಳೆಯ ಮನೆಯಿಂದ ಹೊಸ ಮನೆಗೆ ಹೋಗುವಾಗ ಸ್ವಸ್ತಿಕ್ ಚಿಹ್ನೆಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಬೇಕು ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸಬೇಕು. ಆಗ ಆ ಮನೆಯಲ್ಲಿರುವ ವಾಸ್ತು ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: Makara Sankranti: ಮಕರ ಸಂಕ್ರಾಂತಿಯಂದು ಪುಣ್ಯಸ್ನಾನ, ಶಿವಪೂಜೆ ಮಾಡುವುದರಿಂದ ಸಕಲ ಕಷ್ಟಗಳೂ ಪರಿಹಾರ, ಹೀಗಿರಲಿ ಕ್ರಮ
ಧನಾತ್ಮಕ ಶಕ್ತಿಗಾಗಿ ಹಳದಿ ನೀರು
ಮುಖ್ಯ ದ್ವಾರದ ಸುತ್ತಲೂ ಅರಿಶಿನದ ನೀರನ್ನು ಚಿಮುಕಿಸುವುದರಿಂದ ಮನೆಯೊಳಗೆ ಯಾವುದೇ ರೀತಿಯ ಧನಾತ್ಮಕ ಶಕ್ತಿ ಪ್ರವೇಶವಾಗುವುದಿಲ್ಲ. ಇದು ಜನಪ್ರಿಯ ವಾಸ್ತು ಮಾರ್ಗವು ಹೌದು. ಇದನ್ನು ನಿಯಮಿತವಾಗಿ ಅನುಸರಿಸುವುದರಿಂದ ಆರ್ಥಿಕ ಸಮೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಯಾಗುತ್ತದೆ ಎಂದು ನಂಬಲಾಗಿದೆ. ಈ ಪರಿಹಾರದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಅರಿಶಿನದ ನೀರಿನಲ್ಲಿ ನಾಣ್ಯವನ್ನು ಅದ್ದಿ ದೇವರ ಕೋಣೆಯಲ್ಲಿ ಇರಿಸಿದರೆ ಹಣಕಾಸಿನ ಕೊರತೆ ಕಾಡುವುದಿಲ್ಲ. ಮನೆಯಲ್ಲಿ ಅರಿಶಿನ ನೀರನ್ನು ಚಿಮುಕಿಸುವುದರಿಂದ ಯಾವುದೇ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯನ್ನು ಸ್ವಚ್ಛಗೊಳಿಸುತ್ತದೆ. ಅದಕ್ಕಾಗಿಯೇ ಹಲವರು ಪೂಜೆ ಮಾಡುವ ಮೊದಲು ಮನೆಯಲ್ಲಿ ಅರಿಶಿನದ ನೀರನ್ನು ಸಿಂಪಡಿಸುತ್ತಾರೆ.
ಇದನ್ನೂ ಓದಿ: Saturn Sun Conjunction: ಸೂರ್ಯ ಶನಿ ಸಂಯೋಗ; ಇನ್ನು ಕೆಲವೇ ದಿನಗಳಲ್ಲಿ ಈ 3 ರಾಶಿಯವರ ಮನೆ ಬಾಗಿಲು ತಟ್ಟಲಿದೆ ಅದೃಷ್ಟ
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)