logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Pitru Paksha 2023: ಪಿತೃ ಪಕ್ಷದ ಆಚರಣೆ ಹೇಗಿರುತ್ತದೆ; ಶ್ರಾದ್ಧ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು; ಮಾಹಿತಿ

Pitru Paksha 2023: ಪಿತೃ ಪಕ್ಷದ ಆಚರಣೆ ಹೇಗಿರುತ್ತದೆ; ಶ್ರಾದ್ಧ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು; ಮಾಹಿತಿ

HT Kannada Desk HT Kannada

Sep 28, 2023 02:50 PM IST

google News

ಪಿತೃ ಪಕ್ಷ

    • How To Celebrate Pitru Paksha: ಪಿತೃಪಕ್ಷದಲ್ಲಿ ಪ್ರತಿದಿನವೂ ಪೂರ್ವಜರಿಗೆ ತರ್ಪಣ ನೀಡಿ ರಾತ್ರಿ ವೇಳೆ ಉಪವಾಸ ಮಾಡಬೇಕಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಸಂಜೆಯ ವೇಳೆ ಲಘು ಫಲಹಾರವನ್ನು ಸ್ವೀಕರಿಸಬಹುದು. ಬೆಳಿಗ್ಗೆ 7.30ರ ಒಳಗೆ ತರ್ಪಣ ನೀಡಿದರೆ ಅಮೃತದಿಂದ ನೀಡಿದಂತೆ ಎಂಬ ಉಲ್ಲೇಖ ಕೆಲವು ಗ್ರಂಥಗಳಲ್ಲಿ ಇವೆ ಎನ್ನುತ್ತಾರೆ ಜ್ಯೋತಿಷಿ ಎಚ್‌. ಸತೀಶ್‌.
ಪಿತೃ ಪಕ್ಷ
ಪಿತೃ ಪಕ್ಷ

ಮಂತ್ರಭಾಗದಲ್ಲಿ ಎರಡು ವಿಧಗಳಿವೆ. ವೇದೋಕ್ತ ಮತ್ತು ಪುರಾಣೋಕ್ತ. ವೇದೋಕ್ತ ಎಂಬ ವಿಚಾರಕ್ಕೆ ಬಂದಲ್ಲಿ ಪೂರ್ಣವಾಗಿ ವೇದಮಂತ್ರಗಳು ತುಂಬಿರುತ್ತವೆ. ಪುರಾಣೋಕ್ತದಲ್ಲಿ ವೇದ ಮಂತ್ರಗಳಿರುವುದಿಲ್ಲ. ಆದರೆ ಆಚರಣೆ ಮತ್ತು ದೊರೆವ ಫಲಿತಾಂಶಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕೆಲವು ಗ್ರಂಥಗಳ ಪ್ರಕಾರ ಪೂರ್ವಜರ ಹಿಂದಿನ ಪೀಳಿಗೆಯ ಮೂರು ಆತ್ಮಗಳಾದ ತಂದೆ, ತಾತ, ಮುತ್ತಾತ ಹಾಗೂ ತಾಯಿ, ಅಜ್ಜಿ, ಮುತ್ತಜ್ಜಿ ಇವರು ಪಿತೃಲೋಕ, ಭೂಮಿ ಮತ್ತು ಸ್ವರ್ಗದ ನಡುವೆ ವಾಸಿಸುತ್ತಾರೆ. ಭೂಮಿಯಿಂದ ಪಿತೃಲೋಕ ಒಂದು ಸಾಯುವ ವ್ಯಕ್ತಿಯ ಆತ್ಮ ತೆಗೆದುಕೊಳ್ಳುತ್ತದೆ. ಇದಕ್ಕೆ ಯಮ ಕಾರಣನಾಗುತ್ತಾನೆ. ಅದೇ ವಂಶದ ಮತ್ತೊಬ್ಬ ಮರಣಿಸಿದಾಗ, ಮೊದಲ ತಲೆಮಾರಿನ ವ್ಯಕ್ತಿ ಸ್ವರ್ಗ ಸೇರುತ್ತಾನೆ. ಈ ಕಾರಣದಿಂದಾಗಿ ದಾನ ನೀಡಲಾಗುತ್ತದೆ.

ಈ ಕಾರಣದಿಂದಾಗಿ ಪಿತೃಪಕ್ಷದಲ್ಲಿ ಅಸುನೀಗಿದ ಯಾವುದೇ ವ್ಯಕ್ತಿಗೆ ಅನ್ನದಾನ ಮಾಡುತ್ತಾರೆ. ಕೆಲವರು ಆ ದಿನದಂದು ಶ್ರಾದ್ಧವನ್ನು ಆಚರಿಸುತ್ತಾರೆ. ಇದರಿಂದ ಅಸುನೀಗಿದವರಿಗೆ ಸ್ವರ್ಗ ಪ್ರಾಪ್ತಿ ಆಗುತ್ತದೆ ಎಂದು ಹೇಳಲಾಗಿದೆ. ಕೆಲವರು ಸಂಪೂರ್ಣ 15 ದಿನಗಳು ತರ್ಪಣವನ್ನು ನೀಡಿ ರಾತ್ರಿಯ ವೇಳೆ ಉಪವಾಸವನ್ನು ಆಚರಿಸುತ್ತಾರೆ. ಈ ದಿನಗಳಲ್ಲಿ ತರ್ಪಣ, ಶ್ರಾದ್ಧಗಳು ಮತ್ತು ಪಿಂಡ ದಾನವು ತಿಳಿದವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತದೆ.

ಸರ್ವ ಪಿತೃ ಅಮಾವಾಸ್ಯೆ

ಮಹಾಲಯ ಅಮಾವಾಸ್ಯೆ ಅಥವಾ ಸರ್ವ ಪಿತೃ ಅಮಾವಾಸ್ಯೆ ಕೊನೆಯ ದಿನ. ಆ ದಿನವನ್ನು ಅತ್ಯಂತ ಪ್ರಮುಖ ಮತ್ತು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಪಿತೃ ಪಕ್ಷ ಸಮಯದಲ್ಲಿ ಶ್ರಾದ್ದವನ್ನು ಮಾಡಿದಲ್ಲಿ ಪೂರ್ವಜರ ಆತ್ಮ ಸ್ವರ್ಗಕ್ಕೆ ಹೋಗುತ್ತದೆ ಎಂದು ತಿಳಿದು ನಂಬಲಾಗಿದೆ.

ಪೂರ್ವಜರ ಶ್ರಾದ್ದವನ್ನು ಪಿತೃ ಪಕ್ಷ ಸಂದರ್ಭದಲ್ಲಿ ನಿರ್ದಿಷ್ಟ ದಿನದಂದು ನಡೆಸಲಾಗುತ್ತದೆ. ಭರಣಿ ನಕ್ಷತ್ರ, ಪಂಚಮಿಯಂದು ಯಾವುದೇ ಪ್ರತಿಬಂಧವಿರುವುದಿಲ್ಲ.

ಸರ್ವಪಿತೃ ಅಮಾವಾಸ್ಯೆಯ ದಿನದಂದು ತಿಥಿಯನ್ನು ಮಾಡಲಾಗದೆ ಹೋದವರು ಶ್ರಾದ್ಧವನ್ನು ಮಾಡಬಹುದು ಎಂದು ಧರ್ಮಗ್ರಂಥಗಳಲ್ಲಿ ತಿಳಿಸಿದೆ. ಗಯಾದಂತಹ, ಪವಿತ್ರ ನಗರದಲ್ಲಿ ನಡೆಸಿದ ಶ್ರಾದ್ಧದಿಂದ ವಿಶೇಷ ಫಲ ದೊರೆಯುವುದೆಂದು ಹೇಳಲಾಗಿದೆ. ನದಿ ಅಥವಾ ಸರೋವರದ ತೀರದಲ್ಲಿ ಅಥವಾ ಕರ್ತೃವಿನ ಮನೆಯಲ್ಲಿ, ಮಧ್ಯಾಹ್ನದ ವೇಳೆ ಮಾಡುವುದು ಸೂಕ್ತ ಎಂದು ನಂಬಲಾಗಿದೆ.

ಶ್ರಾದ್ಧ ಮಾಡಲು ಅನುಸರಿಸಬೇಕಾದ ನಿಯಮಗಳು

ಶ್ರಾದ್ಧ ನಿರ್ವಹಿಸಲು ಕೆಲವು ನಿಯಮಗಳಿವೆ. ಕರ್ತೃವು ಬೆಳಗಿನ ವೇಳೆ ಸ್ನಾನ ಮಾಡಿದ್ದರೂ ಮಧ್ಯಾಹ್ನದಲ್ಲಿ ಸ್ನಾನ ಮಾಡಿ ಕಚ್ಚೆ ಧರಿಸಬೇಕೆಂದು ಹೇಳಲಾಗಿದೆ. ಧರ್ಬೆಯಿಂದ ತಯಾರಿಸಿದ ಪವಿತ್ರವನ್ನು ಧರಿಸಬೇಕು. ಪಿಂಡವನ್ನು ಸಾಮಾನ್ಯವಾಗಿ ಹರಿವ ನೀರಿಗೆ ಬಿಡುತ್ತಾರೆ. ಇಲ್ಲವಾದರೆ ಹಸುವಿಗೆ ನೀಡಬಹುದು. ಕೆಲವರು ಭೂಮಿಯಲ್ಲಿ ಹುದುಗಿಡುತ್ತಾರೆ. ಅಂದು ಕಾಗೆಗೆ ಆಹಾರ ನೀಡುವ ಸಂಪ್ರದಾಯವಿದೆ. ಹಿರಿಯರು ಪಕ್ಷಿಯ ರೂಪದಲ್ಲಿ ಬರುತ್ತಾರೆ ಎಂಬ ನಂಬಿಕೆ ಇದೆ. ಶ್ರಾದ್ಧಕರ್ಮವನ್ನು ಆಚರಿಸುವವನು ಶ್ರಾದ್ಧದ ಹಿಂದಿನ ದಿನ ಮಡಿಯಲ್ಲಿ ಒಂದು ಹೊತ್ತು ಭೋಜನ ಮಾಡಬೇಕು. ಬ್ರಹ್ಮಚರ್ಯವನ್ನು ಪಾಲಿಸಬೇಕು. ರಾತ್ರಿಯಲ್ಲಿ ಹಾಸಿಗೆಯಲ್ಲಿ ಮಲಗದೆ ನೆಲದ ಮೇಲೆ ಮಲಗಬೇಕು. ತಾಂಬೂಲ ಹಾಕುವಂತಿಲ್ಲ ಮತ್ತು ಅಭ್ಯಂಗಸ್ನಾನ ಮಾಡಬಾರದು. ಮುಖಕ್ಷೌರ ಮಾಡಿಕೊಳ್ಳಬಾರದು.

ಪಿತೃಪಕ್ಷದಲ್ಲಿ ಪ್ರತಿದಿನವೂ ಪೂರ್ವಜರಿಗೆ ತರ್ಪಣ ನೀಡಿ ರಾತ್ರಿಯ ವೇಳೆ ಉಪವಾಸ ಮಾಡಬೇಕಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಸಂಜೆಯ ವೇಳೆ ಲಘು ಫಲಹಾರವನ್ನು ಸ್ವೀಕರಿಸಬಹುದು. ಬೆಳಿಗ್ಗೆ 7.30ರ ಒಳಗೆ ತರ್ಪಣ ನೀಡಿದರೆ ಅಮೃತದಿಂದ ನೀಡಿದಂತೆ ಎಂಬ ಉಲ್ಲೇಖ ಕೆಲವು ಗ್ರಂಥಗಳಲ್ಲಿ ಇವೆ. ಆ ನಂತರ 9.00ರ ವರೆಗು ಹಾಲಿನಲ್ಲಿ ತರ್ಪಣ ನೀಡಿದಂತಾಗುತ್ತದೆ. 9.00ರ ನಂತರ ತರ್ಪಣ ನೀಡಿದಲ್ಲಿ ಕೇವಲ ನೀರಿನಿಂದ ನೀಡಿದಂತೆ ಎನ್ನಲಾಗಿದೆ. ಆದರೆ ಶ್ರಾದ್ದದ ಅಂತ್ಯದಲ್ಲಿ ಬಿಡುವ ತರ್ಪಣಕ್ಕೆ ಇದು ಅನ್ವಯವಾಗದು. ಕೆಲವರು ತರ್ಪಣವನ್ನು ಬಿಡುವುದಿಲ್ಲ. ಅಂದು ಕೇವಲ ದ್ವಾದಶ ಪಿತೃಗಳಿಗೆ ಮಾತ್ರ ತರ್ಪಣ ಬಿಡಬೇಕಾಗುತ್ತದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ